ಟಾನ್ಸಿಲ್ ತೊಂದರೆಯನ್ನು ನಿವಾರಿಸಲು ಈರುಳ್ಳಿಯೇ ಸಾಕು

By manu
Subscribe to Boldsky

ನಮ್ಮ ಗಂಟಲ ಒಳಭಾಗದಲ್ಲಿ ನಾಲಿಗೆಯ ಹಿಂಬದಿಯಲ್ಲಿರುವ ಚಿಕ್ಕ ಗಂಟುಗಳಂತಿರುವ ಎರಡು ಗ್ರಂಥಿಗಳೇ ಟಾನ್ಸಿಲ್ ಅಥವಾ ಗಂಟಲಗ್ರಂಥಿ (ಗಲಗ್ರಂಥಿಯ ಉರಿಯೂತ) ಇವುಗಳ ಮುಖ್ಯ ಕೆಲಸವೆಂದರೆ ಬಾಯಿಯ ತೇವದಲ್ಲಿ ಅಂಟಿಕೊಂಡು ದೇಹ ಪ್ರವೇಶಿಸುವ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳಿಗೆ ಅಡ್ಡಿಪಡಿಸುವ ದ್ರವವನ್ನು ಒಸರುವುದು.

ಕೆಲವೊಮ್ಮೆ ವೈರಸ್ಸುಗಳಿಂದ ರಕ್ಷಿಸಬೇಕಾದ ಈ ಗ್ರಂಥಿಗಳಿಗೇ ಸೋಂಕು ತಗಲುವುದುಂಟು. ಇದಕ್ಕೆ ಟಾನ್ಸಿಲೈಟಿಸ್ (Tonsillitis, ಗಲೋದ್ರೇಕ) ಎಂದು ಕರೆಯುತ್ತಾರೆ. ಚಿಕ್ಕದಾಗಿ ಮೊದಲು ಪ್ರಾರಂಭವಾದರೂ ಮೂರು ನಾಲ್ಕು ದಿನಗಳಲ್ಲಿ ಇದು ಹಾಸಿಗೆ ಹಿಡಿಯುವಷ್ಟು ತೀವ್ರರೂಪ ತಾಳುತ್ತದೆ. ಸೂಕ್ತ ಆರೈಕೆ ತಕ್ಷಣವೇ ಸಿಗದಿದ್ದಲ್ಲಿ ಆಸ್ಪತ್ರೆಗೆ ಸೇರಬೇಕಾಗಬಹುದು ಮತ್ತು ಗುಣವಾಗಲು ಹೆಚ್ಚೇ ಹೊತ್ತು ಹಿಡಿಯಬಹುದು. ಮಳೆಗಾಲದಲ್ಲಿ ಟಾನ್ಸಿಲ್ ಸಮಸ್ಯೆ ಬಗ್ಗೆ ಎಚ್ಚರ

ಈ ಸೋಂಕು ತಗಲಲು ಇಂತಹದ್ದೇ ಎಂದು ಕಾರಣ ಬೇಕಾಗಿಲ್ಲ, ನಮ್ಮ ಆಹಾರ ಅಥವಾ ಪರಿಸರದಲ್ಲಿರುವ ಯಾವುದೋ ಒಂದು ವೈರಸ್ಸಿನ ಮೂಲಕವೂ ಹರಡಬಹುದು. ಸಾಮಾನ್ಯವಾಗಿ ಮಳೆಗಾಲ ಪ್ರಾರಂಭವಾಗುವಾಗ, ಚಳಿಗಾಲದ ಇಬ್ಬನಿ, ಮಳೆ ನಿಂತ ಹೋದ ಮೇಲೆ ಹಾಯುವ ಗಾಳಿ, ಯಾವುದೋ ಹೊಸ ಗಿಡವೊಂದರ ಹೂವಿನ ಪರಾಗ ಮೊದಲಾದವುಗಳಿಂದ ತೊಂದರೆ ಪ್ರಾರಂಭವಾಗುತ್ತದೆ.

Treat Tonsil With The Help Of Onion Juice
 

ಇದಕ್ಕೆ ಸೂಕ್ತ ಔಷಧಿಗಳು ಲಭ್ಯವಿದ್ದು ಆದಷ್ಟು ಬೇಗನೇ ಪಡೆದುಕೊಳ್ಳುವ ಮೂಲಕ ಈ ಸೋಂಕನ್ನು ಹತೋಟಿಗೆ ತರಬಹುದು. ಒಂದು ವೇಳೆ ಆಹಾರ ನುಂಗುವಾಗ ನಾಲಿಗೆಯ ಬುಡದ ಪಕ್ಕದಲ್ಲಿ ಚಿಕ್ಕದಾಗಿ ನೋವು ಕಾಣಿಸಿಕೊಂಡರೆ ಈ ತೊಂದರೆ ಪ್ರಾರಂಭವಾಗಿದೆ ಎಂದು ಅಂದಾಜಿಸಬಹುದು.

ಈ ತೊಂದರೆಗೆ ಕೆಲವು ನೈಸರ್ಗಿಕ ಔಷಧಿಗಳೂ ಲಭ್ಯವಿದ್ದು ಶೀಘ್ರಕಾಲದಲ್ಲಿ ಸೋಂಕನ್ನು ನಿವಾರಿಸಲು ನೆರವಾಗುತ್ತವೆ. ಇದರಲ್ಲಿ ಪ್ರಮುಖವಾದುದು ಈರುಳ್ಳಿಯ ರಸ. ಟಾನ್ಸಿಲೈಟಿಸ್ ಹೌದು ಎಂದು ಖಚಿತವಾದ ತಕ್ಷಣ ನೀರುಳ್ಳಿ ರಸದ ಆರೈಕೆ ನೀಡಿದರೆ ಅದ್ಭುತವಾದ ಪರಿಣಾಮವನ್ನು ಪಡೆಯಬಹುದು. ಈ ರಸದಲ್ಲಿರುವ ಉರಿಯೂತ ನಿವಾರಕ ಗುಣ ಈ ಸೋಂಕು ಮತ್ತು ಇದರಿಂದ ಉಂಟಾಗಿದ್ದ ಊತವನ್ನು ಅತಿ ಕಡಿಮೆ ಕಾಲದಲ್ಲಿ ಕಡಿಮೆಗೊಳಿಸುತ್ತದೆ.

ಅಲ್ಲದೇ, ಇದರ ಬ್ಯಾಕ್ಟೀರಿಯಾ ನಿವಾರಕ ಗುಣ ಈ ತೊಂದರೆಗೆ ಕಾರಣವಾದ ಬ್ಯಾಕ್ಟೀರಿಯಾಗಳನ್ನು ಕೊಂದು ಸೋಂಕನ್ನು ನಿಲ್ಲಿಸಿ ಜೀವ ನಿರೋಧಕ ವ್ಯವಸ್ಥೆ ಈ ತೊಂದರೆಯನ್ನು ಸರಿಪಡಿಸಲು ನೆರವಾಗುತ್ತದೆ. ಟಾನ್ಸಿಲ್ ಗೆ ಈರುಳ್ಳಿ ರಸವೇ ಸರಿಯಾದ ಮದ್ದು ಎಂದು ಆಯುರ್ವೇದವೂ ಅನುಮೋದಿಸಿದೆ. ಸೋಂಕು ನಿವಾರಿಸುವುದು ಮಾತ್ರವಲ್ಲ, ಮುಂದೆಯೂ ಬರದಂತೆ ಜೀವ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಬನ್ನಿ, ಈ ಅದ್ಭುತ ಔಷಧಿಯ ಬಗ್ಗೆ ಮಾಹಿತಿಯನ್ನು ನೋಡೋಣ:

Treat Tonsil With The Help Of Onion Juice
 

ಅಗತ್ಯವಿರುವ ಸಾಮಾಗ್ರಿಗಳು

*ಒಂದು ಈರುಳ್ಳಿ

*ಒಂದು ಕಪ್ ಉಗುರುಬೆಚ್ಚನೆಯ ನೀರು

ವಿಧಾನ

*ಮೊದಲು ಈರುಳ್ಳಿಯನ್ನು ಸುಲಿದು ಚಿಕ್ಕದಾಗಿ ಹೆಚ್ಚಿಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಅರೆಯಿರಿ.

*ಅರೆದ ಈ ಲೇಪನವನ್ನು ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ

*ಇನ್ನು ಈ ನೀರಿನಿಂದ ಬಾಯಿಯನ್ನು ಚೆನ್ನಾಗಿ ಮುಕ್ಕಳಿಸಿ. ವಿಶೇಷವಾಗಿ ಮುಖ ಮೇಲೆತ್ತಿ ಗಂಟಲಿಗೆ ಗಳಗಳ ಮಾಡಿ.

*ಈ ವಿಧಾನವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಅನುಸರಿಸಿ. ಈ ವಿಧಾನ ಎಲ್ಲರಿಗೂ ಏಕಸಮಾನವಾಗಿ ಕಾರ್ಯನಿರ್ವಹಿಸದು. ಕೆಲವರಿಗೆ ಒಂದೇ ಬಾರಿಯಲ್ಲಿ ನೋವು ಕಡಿಮೆಯಾಗಿಬಿಟ್ಟರೆ ಕೆಲವರಿಗೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು.

*ಅಂದರೆ ಸೋಂಕು ಎಷ್ಟು ಪ್ರಮಾಣದಲ್ಲಿ ಆವರಿಸಿದೆಯೋ ಅಷ್ಟು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

Treat Tonsil With The Help Of Onion Juice
 

ಆದ್ದರಿಂದ ಮೊದಲು ಕೊಂಚವೇ ಪ್ರಮಾಣದಲ್ಲಿ ಮುಕ್ಕಳಿಸಿ. ಇದರಿಂದ ಉರಿ ಹೆಚ್ಚಾಗಿದೆ ಅನ್ನಿಸಿದರೆ ಮುಂದುವರೆಸಬೇಡಿ. ಅಲ್ಲದೇ ಬೇರಾವುದೋ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಈ ವಿಧಾನವನ್ನು ಅನುಸರಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದೇ ಮುಂದುವರೆಯಿರಿ.

For Quick Alerts
ALLOW NOTIFICATIONS
For Daily Alerts

    English summary

    Treat Tonsil With The Help Of Onion Juice

    Tonsils is nothing but an infection in the Tonsillitis , which can cause a great deal of discomfort. It could either be acute or chronic in nature. In most cases, the discomfort and pain last for almost 3-4 days. But, if the infection is severe, then it might take a longer time for it to heal. Here are the ingredients and the method to know how you can use onion juice to treat tonsillitis.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more