For Quick Alerts
ALLOW NOTIFICATIONS  
For Daily Alerts

ಪೋಷಕರು ಖಿನ್ನತೆಗೆ ಒಳಗಾದಾಗ ಮಕ್ಕಳ ಶಿಕ್ಷಣವು ಕುಂಠಿತವಾಗುತ್ತದೆ!

By ಸಿ.ಶ್ರೀಧರ
|

ವಿಶ್ವಾದ್ಯಂತ ಅನಾರೋಗ್ಯ ಮತ್ತು ಅಸಾಮರ್ಥ್ಯಕ್ಕೆ ಖಿನ್ನತೆಯು ಒಂದು ಸಾಮಾನ್ಯ ಕಾರಣವಾಗಿದೆ. ಪೋಷಕರ ಖಿನ್ನತೆಯು ಮಗುವಿನ ಆರಂಭಿಕ ಜೀವನದಲ್ಲಿ ನರ ಬೆಳವಣಿಗೆ, ವರ್ತನೆ, ಭಾವನಾತ್ಮಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳು - ಇವುಗಳ ಮೇಲೆ ಪ್ರಭಾವವನ್ನು ಬೀರುತ್ತವೆ. ಪೋಷಕರ ಖಿನ್ನತೆ ಮತ್ತು ದೀರ್ಘಕಾಲದ ಮಗುವಿನ ಫಲಿತಾಂಶಗಳ ನಡುವೆ ಸಂಪರ್ಕವನ್ನು ಹುಡುಕಲು ಇನ್ನಷ್ಟು ಅಧ್ಯಯನದ ಅಗತ್ಯವಿದೆ.

ತಂದೆತಾಯಿಗಳು ಖಿನ್ನತೆಯಿಂದ ಬಳಲುತ್ತಿದ್ದರೆ, ಮಕ್ಕಳ ಮೇಲೆ ಒಂದು ಸಣ್ಣ ಅಲೆಯಂತೆ ಪರಿಣಾಮವನ್ನು ಬೀರುತ್ತದೆ. ಮಕ್ಕಳು ಸಹ ದುಃಖ ಪಡುತ್ತಾರೆ, ಆತಂಕದಿಂದಿರುತ್ತಾರೆ. ಅವರಲ್ಲಿ ವರ್ತನೆಯ ಸಮಸ್ಯೆಗಳು ತೋರಬರುತ್ತದೆ. ಅನಾರೋಗ್ಯದಿಂದ ಬಳಲುತ್ತಾರೆ.

ಸ್ವೀಡೆನ್‌ನಲ್ಲಿ ನಡೆದ ಅಧ್ಯಯನದಲ್ಲಿ - 1969 ರಿಂದ ಒಳರೋಗಿಗಳು ದಾಖಲೆಗಳು ನಂತರ, 2001 ಆರಂಭದಲ್ಲಿ ಹೊರರೋಗಿಗಳು ದಾಖಲೆಗಳು, ಮತ್ತು ಕಡ್ಡಾಯ ಶಿಕ್ಷಣಡಾ ಕೊನೆಯಲ್ಲಿ ಶಾಲಾ ಶ್ರೇಣಿಗಳನ್ನು1984 ರಿಂದ 1994 ರಲ್ಲಿ ಜನಿಸಿದ ಎಲ್ಲ ಮಕ್ಕಳ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ಮಕ್ಕಳ ಹಠಮಾರಿತನಕ್ಕೆ ಪೋಷಕರ ಖಿನ್ನತೆಯೇ ಕಾರಣ!

ಅಂತಿಮ ವಿಶ್ಲೇಷಣಾ ಮಾದರಿಯಲ್ಲಿ 1,124,162 ಮಕ್ಕಳು ಇದ್ದರು. ವಿವಿಧ ಅವಧಿಗಳಲ್ಲಿ ಪೋಷಕರ ಖಿನ್ನತೆಯ ಸಂಯೋಜನೆಯಿಂದ (ಜನನಕ್ಕೆ ಮೊದಲು, ಜನನದ ನಂತರ, ಮತ್ತು ಮಗುವಿನ ಯುಕ್ತ ವಯಸ್ಸಿನಲ್ಲಿ 1-5, 6-10, ಮತ್ತು 11-16 ವರ್ಷಗಳು ಜೊತೆಗೆ ಮಗುವಿನ ಅಂತಿಮ ವರ್ಷದ ಕಡ್ಡಾಯ ಶಿಕ್ಷಣದ ಮೊದಲು ಯಾವುದೇ ಸಮಯದಲ್ಲಿ,) ಅಂತಿಮ ಶಾಲಾ ಶ್ರೇಣಿಗಳೊಂದಿಗೆ ಪರೀಕ್ಷಿಸಿದರು.

ವಿಶ್ಲೇಷಣೆಯನ್ನು ಜನವರಿಯಿಂದ ನವೆಂಬರ್ 2015 ವರೆಗೆ ರೇಖಾತ್ಮಕ ಹಿಂಜರಿತ ಮಾದರಿಯಲ್ಲಿ (Linear regression models) ವಿವಿಧ ಮಕ್ಕಳು ಮತ್ತು ಅವರ ಪೋಷಕರ ಗುಣಲಕ್ಷಣಗಳನ್ನು ಸರಿಪಡಿಸಲಾಯಿತು. ಮಕ್ಕಳಲ್ಲಿ 48.9 % ಹೆಣ್ಣು ಮಕ್ಕಳಾಗಿದ್ದರು. ಅಂತಿಮ ಶಾಲಾದಿನಗಳಲ್ಲಿ, ತಾಯಿಯ ಮತ್ತು ತಂದೆಯ ಖಿನ್ನತೆಯಿಂದ ಮಕ್ಕಳ ಕಾರ್ಯಕ್ಷಮತೆಯು ಕಡಿಮೆಯಾಗಿತ್ತು. ಹೆಣ್ಣು ಮಕ್ಕಳಲ್ಲಿ ಅದರ ಪ್ರಭಾವವು ಹೆಚ್ಚಾಗಿತ್ತು. ನಿಮ್ಮ ಮಕ್ಕಳ ಖಿನ್ನತೆಗೆ ನೀವೇ ಕಾರಣರಾಗಬಹುದು

ಡ್ರೆಕ್ಸೆಲ್ ವಿಶ್ವವಿದ್ಯಾಲಯದಲ್ಲಿ ಫಿಲಾಡೆಲ್ಫಿಯಾದ ಡೋರ್ನ್ ಸೈಫ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನ ಸಂಶೋಧಕರು, ನಡೆಸಿದ ಅಧ್ಯಯನವನ್ನು ಸ್ವೀಡೆನ್ ನ ಅಧ್ಯಯನಕ್ಕೆ ಹೋಲಿಸಿ ನೋಡಿದರು. ಇದನ್ನು JAMA Psychiatry ಯ ಫೆಬ್ರವರಿ 2016 ರ ಸಂಚಿಕೆಯಲ್ಲಿ ಪ್ರಕಟಿಸಿದ್ದಾರೆ. ಅದರ ಪ್ರಕಾರ ತಂದೆ ತಾಯಿಯರು ಖಿನ್ನತೆಗೊಳಗಾಗದ ಮಕ್ಕಳಿಗಿಂತ ,16 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ತಾಯಿಯು ಖಿನ್ನತೆಗೊಳಗಾಗಿದ್ದರೆ, 4.5 % ಕಡಿಮೆ ಅಂಕವನ್ನು ಮತ್ತು 16 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ತಂದೆಯು ಖಿನ್ನತೆಗೊಳಗಾಗಿದ್ದರೆ, 4 % ಕಡಿಮೆ ಅಂಕವನ್ನು ಗಳಿಸಿದರು. 4% - 4.5% ಬಹಳ ಕಡಿಮೆಯಿಲ್ಲದಿದ್ದರೂ, ವಿದ್ಯಾರ್ಥಿಗಳಿಗೆ ಅದು ಅಪಾರ ಎಂದು ಅನ್ನುತ್ತಾರೆ ಡ್ರೆಕ್ಸೆಲ್ ನ ಎಪಿಡೆಮಿಯೋಲಾಜಿಸ್ಟ್ ಫೆಲಿಸ್ ಲೇ-ಷೇರ್ಬ್ಯಾನ್.

"ಗ್ರೇಡ್ ಎ ಅಥವಾ ಗ್ರೇಡ್ ಬಿ ಯಲ್ಲಿ ಅಷ್ಟೇನೂ ವ್ಯತ್ಯಾಸವಿರುವುದಿಲ್ಲ. ಆದರೆ ಗ್ರೇಡ್ ಸಿ ಅಥವಾ ಗ್ರೇಡ್ ಡಿ ಯಲ್ಲಿ ಬಹಳ ಇರುತ್ತದೆ. ಸ್ಕೂಲ್ ನಲ್ಲಿರಬೇಕೋ, ಬೇಡವೋ ಎಂಬ ಪ್ರಶ್ನೆ ಏಳುತ್ತದೆ. ಸ್ಕೂಲ್ ನಂತರದ ಶಿಕ್ಷಣದ ಪ್ರಮಾಣ ಮತ್ತು ಗುಣಮಟ್ಟವು ಸಹ ಪ್ರಭಾವವನ್ನು ಬೀರುತ್ತದೆ" ಎಂದು ಅನ್ನುವ ಲೇ-ಷೇರ್ಬ್ಯಾನ್, "ನಾವು ಮಾತ್ರ ಆರೋಗ್ಯ ಮತ್ತು ಆಯುಷ್ಯ ವನ್ನು ಪ್ರಬಲವಾಗಿ ಊಹಿಸುತ್ತೇವೆ" ಎನ್ನುತ್ತಾರೆ. ಒಳ್ಳೆಯ ಶಿಕ್ಷಣವನ್ನು ಪಡೆದವರು ದೂಮಪಾನ ಮಾಡುವುದು, ಆಲ್ಕೋಹಾಲ್ ಕುಡಿಯುವುದು ಅಥವಾ ಬೊಜ್ಜು ಬರಿಸಿಕೊಳ್ಳುವುದು ಕಡಿಮೆ. ಅವರಿಗೆ ಹೃದಯ ರೋಗಗಳು ಮತ್ತು ಮಧುಮೇಹ ಬರುವುದೂ ಸಹ ಕಡಿಮೆ.

ನ್ಯೂಯಾರ್ಕ್ ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾನಿಲಯದ ವೈದ್ಯಕೀಯ ಕೇಂದ್ರದ ಎಪಿಡೆಮಿಯೋಲಾಜಿಸ್ಟ್ ಮಿರ್ನ ವೆಯ್ಸ್ ಮನ್ ರವರು ಹೇಳುತ್ತಾರೆ ,"ಖಿನ್ನತೆಗೆ ಒಳಗಾದ ಪೋಷಕರು ತಮ್ಮ ಮಕ್ಕಳ ಪೋಷಣೆಯನ್ನು ಮಾಡಲು ಕಷ್ಟ ಪಡುವುದಕ್ಕೆ ಅನೇಕ ಕಾರಣಗಳಿವೆ. ಖಿನ್ನತೆಯ ಲಕ್ಷಣಗಳ ಬಗ್ಗೆ ಯೋಚಿಸಿ - ಹತಾಶೆಯ ಭಾವನೆಗಳು, ಅಸಹಾಯಕತೆ, ಶಕ್ತಿಯ ನಷ್ಟ, ಸಾಮಾನ್ಯವಾಗಿ ಸಂತೋಷ ನೀಡುವ ವಿಷಯಗಳಲ್ಲಿ ನಿರಾಸಕ್ತಿ - ಇವುಗಳೊಂದಿಗೆ ಮಕ್ಕಳ ಪಾಲನೆಯು ಕಷ್ಟ." ವೆಯ್ಸ್ ಮನ್ ಹೇಳುತ್ತಾರೆ.

"ಖಿನ್ನತೆಗೆ ಒಳಗಾದ ಪೋಷಕರು ಶಿಕ್ಷಕರೊಂದಿಗೆ ವೇಳೆಯನ್ನು ನಿಗದಿಪಡಿಸಲಾರರು, ಹೋಗಲು ಸಮಯವಿಲ್ಲದಿರುವುದು, ಮಕ್ಕಳ ಮಾತು ಕೇಳದಿರುವುದು, ಸದಾ ಇರುವ ತೊಂದರೆಗಳಿಗೆ ಪರಿಹಾರವನ್ನು ಕಾಣದಿರುವುದು ಹೀಗೆ ಅನೇಕ ಕಾರಣಗಳಿವೆ." ಆದರೂ ಆಶಾಕಿರಣವಿದೆ. ತಾಯಿಯ ಖಿನ್ನತೆಯು ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ?

ಖಿನ್ನತೆಯನ್ನು ಗುಣಪಡಿಸಬಹುದು" ಎನ್ನುವ ವೆಯ್ಸ್ ಮನ್ ರವರು ಅನೇಕ ಅಧ್ಯಯನಗಳನ್ನು ಮಾಡಿ, "ಖಿನ್ನತೆಗೊಳಗಾದ ತಾಯಿಯರಿಗೆ 3 ತಿಂಗಳುಗಳ ಕಾಲ ಚಿಕಿತ್ಸೆಯನ್ನು ಮಾಡಿ ತೋರಿಸಿಕೊಟ್ಟಿದ್ದೇವೆ. ತಾಯಿ ಆರೋಗ್ಯದಿಂದ ಇದ್ದರೆ ಮಕ್ಕಳೂ ಇರುತ್ತಾರೆ." ಎನ್ನುತ್ತಾರೆ.

ಅವರನ್ನುತ್ತಾರೆ, "ಸೈಕೋಥೆರಪಿ ಅಥವಾ ಔಷಧಿ ಮಾತ್ರ ಅಥವಾ ಎರಡರ ಸಂಯೋಜನೆಯಿಂದ ಪರಿಣಾಮಕಾರಿ ಚಿಕಿತ್ಸೆಯನ್ನು ಮಾಡಬಹುದು." "ವೈದ್ಯಕೀಯ ಖಿನ್ನತೆಯು ಬಹಳ ಸಾಮಾನ್ಯ. ಬಹಳಷ್ಟು ವಯಸ್ಕರು ಒಂದಲ್ಲಾ ಒಂದುಸಲ ಇದಕ್ಕೆ ಒಳಗಾಗುತ್ತಾರೆ. ಅದು ಗುರುತಿಸಲ್ಪಟ್ಟಾಗ, ತಕ್ಷಣ ಚಿಕಿತ್ಸೆ ಪಡೆದುಕೊಳ್ಳಿ" ಎನ್ನುತ್ತಾರೆ ವೆಯ್ಸ್ ಮನ್. ಮಹಿಳೆಯರು ಖಿನ್ನತೆ ರೋಗಕ್ಕೆ ಗುರಿಯಾಗಲು ಕಾರಣಗಳೇನು?

English summary

Parents' depression may affect kids' school performance

Children perform worse in school when their parents are diagnosed with depression, suggests a study from Sweden.The study found a significant negative link between parents' depression and kids' school performance, said health experts
Story first published: Thursday, June 30, 2016, 18:22 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X