For Quick Alerts
ALLOW NOTIFICATIONS  
For Daily Alerts

ನಿಮಗೂ ಇಂತಹ ಹೊಟ್ಟೆಯ ಬೊಜ್ಜಿನ ಸಮಸ್ಯೆಗಳಿವೆಯೇ?

By Arshad
|

ಸ್ಥೂಲಕಾಯದವರ ಸಮಾನ ಚಿಂತೆ ಎಂದರೆ ಹೆಚ್ಚಾದ ಸೊಂಟದ ಸುತ್ತಳತೆ. ಎಷ್ಟೇ ಪ್ರಯತ್ನ ಪಟ್ಟರೂ ಇದು ಕಡಿಮೆಯಾಗುವ ಮಾತೇ ಎತ್ತುವುದಿಲ್ಲ. ಸಿಟ್ಟು ಬರುವ ವಿಷಯವೆಂದರೆ ನಮ್ಮ ತೂಕ ಇಳಿಸುವ ಶ್ರಮ ಹೆಚ್ಚಿದಷ್ಟೂ ಇದರ ಪೊಗರು ಇನ್ನಷ್ಟು ಹೆಚ್ಚುವುದು. ಆದರೆ ಇದರಲ್ಲಿ ತುಂಬಿಕೊಂಡಿರುವ ಕೊಬ್ಬು ಯಾವ ಬಗೆಯಲ್ಲಿ ತುಂಬಿಕೊಂಡಿದೆ ಎಂದು ಅರ್ಥೈಸಿಕೊಂಡರೆ ಇದನ್ನು ಕರಗಿಸಲು ಒಂದು ದಾರಿ ಸಿಗುತ್ತದೆ. ಈ ನಿಟ್ಟಿನಲ್ಲಿ ನಡೆಸುವ ಯಾವುದೇ ವ್ಯಾಯಮ ಅಥವಾ ದೈಹಿಕ ಕ್ರಿಯೆ ನಿಧಾನವಾಗಿ ಇದನ್ನು ಕರಗಿಸುತ್ತಾ ಬರುತ್ತದೆ. ಬರೀ 15 ದಿನಗಳಲ್ಲಿಯೇ ಬೊಜ್ಜು ಕರಗಿಸುವ 'ಅದ್ಭುತ ಜ್ಯೂಸ್'

ಸಾಮಾನ್ಯವಾಗಿ ಜನರು ತಿಂದು ಕೊಬ್ಬು ಬಂದಿದೆ ಎಂದು ತಿಳಿದಿದ್ದಾರೆ. ಆದರೆ ವಾಸ್ತವವಾಗಿ ಕೊಬ್ಬು ತಿಂದ ಮೂಲಕವೇ ಬಂದಿದ್ದರೂ ತಿನ್ನುವುದೇ ನಿಜವಾದ ಕಾರಣವಲ್ಲ. ನಮ್ಮ ಆಹಾರದಲ್ಲಿ ಒಂದು ಅಂಶವನ್ನು ನಾಳೆಗಾಗಿ ದೇಹ ಉಳಿಸಿಕೊಳ್ಳುವ ಕ್ರಮವೇ ಕೊಬ್ಬು ತುಂಬಿಕೊಳ್ಳುವುದು. ಇದು ಪ್ರತಿ ವ್ಯಕ್ತಿಯಲ್ಲಿ ಬೇರೆ ಬೇರೆ ರೀತಿಯದ್ದಾಗಿದ್ದು ಕೆಲವರು ಏನೂ ತಿನ್ನದಿದ್ದರೂ ದಪ್ಪನಾಗಿದ್ದರೂ ಇನ್ನೂ ಕೆಲವರು ಆನೆಯಂತೆ ತಿಂದರೂ ನರಿಯಂತಹ ಕೃಶ ಶರೀರ ಹೊಂದಿರುವುದಕ್ಕೆ ಇದೇ ಕಾರಣ. ಆದ್ದರಿಂದ ಮೊತ್ತ ಮೊದಲನೆಯದಾಗಿ ನಿಮ್ಮ ಸೊಂಟದ ಸುತ್ತಳತೆ ಹೆಚ್ಚಿಸಿರುವ ಕೊಬ್ಬು ಯಾವ ಬಗೆಯದು ಎಂದು ತಿಳಿದುಕೊಂಡರೆ ಅರ್ಧ ಕೆಲಸ ಮುಗಿದಂತೆ. ನಾಲ್ಕೇ ದಿನದಲ್ಲಿ ಕೊಬ್ಬು ಕರಗಿಸುವ ಪವರ್ ಈ ಜ್ಯೂಸ್‌ನಲ್ಲಿದೆ!

ಕೆಲವರ ಹೊಟ್ಟೆಯಲ್ಲಿ ಸಾಂದ್ರ ಕೊಬ್ಬಿಗಿಂತಲೂ ಜೀರ್ಣಾಂಗಗಳಲ್ಲಿ ವಾಯುತುಂಬಿಕೊಂಡ ಕಾರಣ ಹೊಟ್ಟೆಯುಬ್ಬಿದ್ದು ಇದು ಸುಲಭ ಚಿಕಿತ್ಸೆಯ ಮೂಲಕ ಬೇಗನೇ ಕಡಿಮೆಯಾಗುತ್ತದೆ. ಇನ್ನುಳಿದಂತೆ ಕೆಲವರಿಗೆ ಕೆಳಹೊಟ್ಟೆಯಲ್ಲಿ ಹೆಚ್ಚು ಸಂಗ್ರಹವಾಗಿದ್ದು ಒಂದು ಮಡಿಕೆಯ ಮೂಲಕ ಹೊರಭಾಗಕ್ಕೆ ಜೋತುಬಿದ್ದಿರುತ್ತದೆ. ದೂರದಿಂದ ನೋಡಿದರೆ ಟೈರಿನ ಟ್ಯೂಬೊಂದು ಸೂಜಿ ಚುಚ್ಚಿ ಗಾಳಿ ಕಳೆದುಕೊಂಡು ಜೋಲುಬಿದ್ದಂತಿರುತ್ತದೆ. ಇತರರಿಗೆ ಭಾರೀ ಒತ್ತಡದಿಂದ ಒಳಗಿನಿಂದ ಯಾರೋ ದೂಡುತ್ತಿದ್ದಾರೋ ಎಂಬಂತೆ ಊದಿಕೊಂಡಿದ್ದು ಎದೆಯ ಕೆಳಭಾಗದಿಂದ ತೊಡೆಯವರೆಗೂ ಉಬ್ಬಿರುತ್ತದೆ.

ಕೆಲವರಿಗೆ ಹೊಟ್ಟೆಯ ಮುಂಭಾಗದಲ್ಲಿ ಹೆಚ್ಚು ಉಬ್ಬಿರದಿದ್ದರೂ ಬದಿಗಳಲ್ಲಿ ಹೆಚ್ಚು ಉಬ್ಬಿದ್ದು ಒಳಗಿನಿಂದ ಎರಡೆರಡು ಇಡ್ಲಿಗಳನ್ನು ಶೇಖರಿಸಿಟ್ಟಂತೆ ಕಾಣುತ್ತದೆ. ಒಟ್ಟಾರೆ ನಿಮ್ಮ ಶರೀರದ ಕೊಬ್ಬು ಯಾವ ರೀತಿ ಸಂಗ್ರಹವಾಗಿದೆ ಎಂಬುದನ್ನು ಕಂಡುಕೊಳ್ಳುವುದು ಮೊದಲ ಕ್ರಮ. ಇದಕ್ಕೆ ಅನುಗುಣವಾಗಿ ಕೊಬ್ಬು ಕರಗಿಸಲು ಭಿನ್ನವಾದ ಕ್ರಮಗಳಿವೆ. ಇಂದು ಈ ವಿಧಾನಗಳಲ್ಲಿ ಪ್ರಮುಖವಾದ ಕೆಲವನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ, ಮುಂದೆ ಓದಿ...

ಹೊಟ್ಟೆಯ ಕೆಳಭಾಗದಲ್ಲಿ ಜೋಲುಬಿದ್ದಿರುವ ಕೊಬ್ಬು

ಹೊಟ್ಟೆಯ ಕೆಳಭಾಗದಲ್ಲಿ ಜೋಲುಬಿದ್ದಿರುವ ಕೊಬ್ಬು

ಈ ಬಗೆಯಲ್ಲಿ ಹೊಟ್ಟೆಯ ಕೆಳಭಾಗದಲ್ಲಿ ಕೊಬ್ಬು ಸಂಗ್ರಹವಾಗಿದ್ದು ತೂಕದ ಕಾರಣ ಜೋತು ಬಿದ್ದಿರುತ್ತದೆ. ಇದು ಅತಿ ಹೆಚ್ಚಿನ ಸಿದ್ಧ ಆಹಾರ ಸೇವನೆ ಮತ್ತು ವ್ಯಾಯಾಮವಿಲ್ಲದೇ ಇರುವ ಮೂಲಕ ಬಂದಿದ್ದಾಗಿದೆ.

ಇದನ್ನು ಸರಿಪಡಿಸುವುದು ಹೇಗೆ?

ಇದನ್ನು ಸರಿಪಡಿಸುವುದು ಹೇಗೆ?

ಇದನ್ನು ಸರಿಪಡಿಸಲು ಆಹಾರಕ್ರಮ ಉತ್ತಮಗೊಳಿಸುವುದು ಮತ್ತು ಇಡಿಯದಿನ ಚಲನಶೀಲರಾಗಿರುವುದೇ ಉತ್ತಮ ಉಪಾಯ. ಸಿದ್ಧ ಆಹಾರವನ್ನು ಮನಸ್ಸಿನಿಂದ ತೆಗೆದುಹಾಕಿ ತಟ್ಟೆಯಲ್ಲಿ ಹಣ್ಣುಗಳು, ಹಸಿಯಾಗಿ ತಿನ್ನಬಹುದಾದ ತರಕಾರಿಗಳು, ನಾರು ಹೆಚ್ಚಿರುವ ಅಹಾರಗಳು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇದನ್ನು ಸರಿಪಡಿಸುವುದು ಹೇಗೆ?

ಇದನ್ನು ಸರಿಪಡಿಸುವುದು ಹೇಗೆ?

ಉದಾಹರಣೆಗೆ ಇಡಿಯ ಗೋಧಿಯ ಹಿಟ್ಟಿನಿಂದ ಮಾಡಿದ ಚಪಾತಿ, ರಾಗಿ, ನವಣೆ ಮೊದಲಾದ ಆಹಾರಗಳನ್ನು ಹೆಚ್ಚು ತಿನ್ನಿ. ಹೊಟ್ಟೆ ಬಗ್ಗಿಸುವ ಯಾವುದೇ ಚಟುವಟಿಕೆಯನ್ನು ಮಾಡುತ್ತಾ ಇರಿ. ಸೈಕ್ಲಿಂಗ್ ಮತ್ತು ಕುಳಿತು ನಿಲ್ಲುವ ವ್ಯಾಯಾಮಗಳು ಹೆಚ್ಚು ಫಲಕಾರಿ.

ಉಬ್ಬಿನ ಹೊಟ್ಟೆಯ ಕೊಬ್ಬು

ಉಬ್ಬಿನ ಹೊಟ್ಟೆಯ ಕೊಬ್ಬು

ನಾಲಿಗೆಗೆ ರುಚಿ ಎಂದು ತಪ್ಪಾದ ಆಹಾರಸೇವನೆಯ ಮೂಲಕ ಈ ಕೊಬ್ಬು ಉಂಟಾಗುತ್ತದೆ. ಏಕೆಂದರೆ ಈ ಆಹಾರಗಳು ಪೂರ್ಣವಾಗಿ ಜೀರ್ಣವಾಗದೇ ಇದರ ಹೆಚ್ಚು ಕೊಬ್ಬು ರಕ್ತಸೇರಲು ಕಾರಣವಾಗುತ್ತವೆ. ಅಲ್ಲದೇ ಅಜೀರ್ಣದ ಕಾರಣ ಉತ್ಪತ್ತಿಯಾದ ಕೆಲವು ವಾಯುಗಳೂ ಈ ಕೊಬ್ಬನ್ನು ಮುಂದಕ್ಕೆ ದೂಡುತ್ತವೆ. ಅಷ್ಟೇ ಅಲ್ಲ, ಹಾಲು, ಮೊಟ್ಟೆ ಮೊದಲಾದ ಕೆಲವು ಆಹಾರಗಳಿಗೆ ಅಲರ್ಜಿ ಇದ್ದು ಇದನ್ನು ಅರಿಯದೇ ನಿತ್ಯವೂ ಸೇವಿಸುವ ಕಾರಣ ಹೊಟ್ಟೆ ಸರಿಸುಮಾರು ಯಾವಾಗಲೂ ವಾಯುವಿನಿಂದ ತುಂಬಿಯೇ ಇರುತ್ತದೆ.

ಇದನ್ನು ಸರಿಪಡಿಸುವುದು ಹೇಗೆ?

ಇದನ್ನು ಸರಿಪಡಿಸುವುದು ಹೇಗೆ?

ಇದನ್ನು ಸರಿಪಡಿಸಲು ನಿಮ್ಮ ಆಹಾರಕ್ರಮವನ್ನು ಬದಲಿಸುವುದು ಅಗತ್ಯ. ನಿಮ್ಮ ಹೊಟ್ಟೆಗೆ, ಅಂದರೆ ನಿಮಗೆ ಅಲರ್ಜಿಯಲ್ಲದ ಆಹಾರಗಳು ಯಾವುವು ಎಂಬುದನ್ನು ಕಂಡುಕೊಳ್ಳಬೇಕು. ಸಾಮಾನ್ಯವಾಗಿ ಕೋಸು, ಮೂಲಂಗಿ, ಬೇಳೆಗಳು, ಹಾಲು, ಮೊಟ್ಟೆಯ ಹಳದಿ ಭಾಗ ಮೊದಲಾದವು ಕೆಲವರಿಗೆ ಅಲರ್ಜಿಯಾಗಿರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇದನ್ನು ಸರಿಪಡಿಸುವುದು ಹೇಗೆ?

ಇದನ್ನು ಸರಿಪಡಿಸುವುದು ಹೇಗೆ?

ಆದ್ದರಿಂದ ಮೊತ್ತ ಮೊದಲು ನಿಮ್ಮ ಆಹಾರದಲ್ಲಿ ಬದಲಾವಣೆ ತನ್ನಿ, ಸಾಕಷ್ಟು ಹಣ್ಣು,

ಹಸಿತರಕಾರಿಗಳಿರಲಿ. ಜೀರ್ಣಗೊಳ್ಳಲು ಕಷ್ಟವಾಗುವ ಆಹಾರಗಳಿರಲಿ. ಸಾಧ್ಯವಾದರೆ ಕೊಂಚ ಬೆಳ್ಳುಳ್ಳಿ ಹಸಿಯಾಗಿ ತಿನ್ನಿ ಇದರಿಂದ ಅಜೀರ್ಣ ದೂರವಾಗುತ್ತದೆ. ಹೊಟ್ಟೆಗೆ ಸೂಕ್ತವಾದ ಆಹಾರ ಲಭ್ಯವಾದರೆ ಉಬ್ಬಿದ್ದ ಹೊಟ್ಟೆ ತನ್ನಿಂತಾನೇ ಕರಗುತ್ತದೆ. ನಿತ್ಯದ ಸಾಮಾನ್ಯ ವ್ಯಾಯಾಮಕ್ಕಿಂತ ಹೆಚ್ಚಿನ ವ್ಯಾಯಾಮದ ಅಗತ್ಯವಿಲ್ಲ.

ಮನಸ್ಸಿನ ಒತ್ತಡ ಕಾರಣ ಉಂಟಾದ ಕೊಬ್ಬು

ಮನಸ್ಸಿನ ಒತ್ತಡ ಕಾರಣ ಉಂಟಾದ ಕೊಬ್ಬು

ಸಾಮಾನ್ಯವಾಗಿ ಮಾನಸಿಕ ಒತ್ತಡದ ಕಾರಣ ಎದುರಾಗುವ ಅಡ್ಡಪರಿಣಾಮಗಳಲ್ಲಿ ಈ ಕೊಬ್ಬು ಸಹಾ ಒಂದು ಈ ವ್ಯಕ್ತಿಗಳು ಸಾಮಾನ್ಯ ಮೈಕಟ್ಟು ಹೊಂದಿದ್ದರೂ ಹೊಟ್ಟೆ ಮಾತ್ರ ಕೊಂಚ ಮುಂದೆ ಬಂದಿದ್ದು ಹಿಂದೆ ಬೆನ್ನು ಪ್ರಷ್ಠಭಾಗದ ಮೇಲೆ ಬಿಲ್ಲಿನಂತೆ ಮುಂದೆ ಬಾಗಿರುತ್ತದೆ. ಇದಕ್ಕೆ ಕಾರಣವೇನೆಂದರೆ ಮಾನಸಿಕ ಒತ್ತಡದ ಕಾರಣ ಮೆದುಳಿನಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನು ಬಿಡುಗಡೆಯಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮನಸ್ಸಿನ ಒತ್ತಡ ಕಾರಣ ಉಂಟಾದ ಕೊಬ್ಬು

ಮನಸ್ಸಿನ ಒತ್ತಡ ಕಾರಣ ಉಂಟಾದ ಕೊಬ್ಬು

ಈ ಹಾರ್ಮೋನು ಹೊಟ್ಟೆಯ ಮುಂಭಾಗದಲ್ಲಿ ಕೊಬ್ಬು ಸೇರಿಸಲು ಪ್ರೇರಣೆ ನೀಡುತ್ತದೆ. ಇಲ್ಲಿ ಮಾತ್ರ ಹೆಚ್ಚಿದ ತೂಕವನ್ನು ಸರಿಪಡಿಸಲು ಬೆನ್ನುಮೂಳೆಯನ್ನು ಕೊಂಚವೇ ಮುಂದೆ ಬಾಗಿಸಬೇಕಾಗುತ್ತದೆ ಕ್ರಮೇಣ ಬೆನ್ನುಮೂಳೆ ಬಿಲ್ಲಿನಂತೆ ಬಾಗಿ ಹೊಟ್ಟೆ ಆರು ತಿಂಗಳ ಗರ್ಭಿಣಿಯರಂತೆ ಕಾಣುತ್ತದೆ. ಕೆಲವರಿಗೆ ಹೊಟ್ಟೆಯ ತೊಂದರೆಯ ಮೂಲಕವೂ ಈ ಕೊಬ್ಬು ಬಂದಿರಬಹುದು.

ಇದನ್ನು ಸರಿಪಡಿಸುವುದು ಹೇಗೆ?

ಇದನ್ನು ಸರಿಪಡಿಸುವುದು ಹೇಗೆ?

ಇದಕ್ಕೆ ಸೂಕ್ತ ಮದ್ದು ಎಂದರೆ ಆಹಾರಕ್ರಮದಲ್ಲಿ ಭಾರೀ ಬದಲಾವಣೆ ಮತ್ತು ಬೆನ್ನು ನೆಟ್ಟಗಾಗಿಸುವ ವ್ಯಾಯಾಮಗಳು. ನಿತ್ಯದ ಮೂರು ಹೊತ್ತಿದ ಬದಲಿಗೆ ಇಡಿಯ ದಿನ ಪ್ರತಿ ಒಂದೂವರೆ ಅಥವಾ ಎರಡು ಗಂಟೆಗಳಿಗೊಮ್ಮೆ ಚಿಕ್ಕ ಪ್ರಮಾಣದಲ್ಲಿ ಆಹಾರ ಸೇವಿಸುತ್ತಾ ಇರುವುದು. ಇಡಿಯ ದಿನ ಸೇವಿಸಿದ ಒಟ್ಟು ಆಹಾರ ಹಿಂದೆ ಸೇವಿಸುತ್ತಿದ್ದ ಮೂರು ಹೊತ್ತಿನ ಪ್ರಮಾಣಕ್ಕಿಂತಲೂ ಕಡಿಮೆ ಇರುವುದು ಅವಶ್ಯಕ.

ಇದನ್ನು ಸರಿಪಡಿಸುವುದು ಹೇಗೆ?

ಇದನ್ನು ಸರಿಪಡಿಸುವುದು ಹೇಗೆ?

ಆಹಾರದಲ್ಲಿ ಸಮತೋಲನ ಇದ್ದು ಹೆಚ್ಚಿನ ನಾರು, ಕಾರ್ಬೋಹೈಡ್ರೇಟುಗಳಿರುವ ಹಣ್ಣು, ಹಸಿ ತರಕಾರಿ, ಪ್ರೋಟೀನುಗಳಿರಲಿ. ನೀರನ್ನು ಹೆಚ್ಚಾಗಿ ಕುಡಿಯಿರಿ. ಒತ್ತಡ ರಹಿತರಾಗಿರಲು ಯತ್ನಿಸಿ. ಸಾಧ್ಯವಾದರೆ ದಿನಕ್ಕೆ ಎರಡೂ ಹೊತ್ತು ಬೆನ್ನುಮೂಳೆ ನೆಟ್ಟಗಾಗಿಸುವ ವ್ಯಾಯಾಮ ಅಥವಾ ಯೋಗಾಬ್ಯಾಸವನ್ನು ಮಾಡಿ. ಹಿಂದಕ್ಕೆ ಬಾಗುವ ವ್ಯಾಯಾಮ ಹೆಚ್ಚು ಪರಿಣಾಮಕಾರಿ (ಉದಾ. ಧನುರಾಸನ)

ಪಂಕ್ಚರ್ ಆದ ಟ್ಯೂಬ್ ನಂತೆ ಕಾಣುವ ಕೊಬ್ಬು

ಪಂಕ್ಚರ್ ಆದ ಟ್ಯೂಬ್ ನಂತೆ ಕಾಣುವ ಕೊಬ್ಬು

ಸಾಮಾನ್ಯವಾಗಿ ಕುಳಿತೇ ಇರುವ ವ್ಯಕ್ತಿಗಳಲ್ಲಿ ಈ ಕೊಬ್ಬು ಕಾಣಿಸಿಕೊಳ್ಳುತ್ತದೆ. ಕಚೇರಿಯಲ್ಲಿ ಕುಳಿತು ಗಂಟೆಗಟ್ಟಲೇ ಅಲ್ಲಾಡದೇ ಕೆಲಸ ಮಾಡುವವರಲ್ಲಿ, ಇಡಿಯ ದಿನ ಗಲ್ಲಾಪೆಟ್ಟಿಗೆಯ ಬಳಿ ಕುಳಿತಿರುವ ವ್ಯಾಪಾರಿ ಅಥವಾ ಗುಮಾಸ್ತರಲ್ಲಿ ಈ ಪರಿ ಹೆಚ್ಚು. ಚಲನೆಯಿಲ್ಲದೇ ಕುಳಿತಿರುವ ಕಾರಣ ಹೊಟ್ಟೆಯ ಈ ಭಾಗ ಸಡಿಲವಾಗಿದ್ದು ಕೊಬ್ಬು ತುಂಬಿಕೊಳ್ಳಲು ಸುಲಭವಾಗುವ ಕಾರಣ ಈ ಬಗೆಯ ಕೊಬ್ಬು ಮೂಡಿರುತ್ತದೆ.

ಇದನ್ನು ಸರಿಪಡಿಸುವುದು ಹೇಗೆ?

ಇದನ್ನು ಸರಿಪಡಿಸುವುದು ಹೇಗೆ?

ಎಲ್ಲಾ ಸಿದ್ಧ ಆಹಾರ, ಲಘು ಪಾನೀಯಗಳಿಗೆ ತಿಲಾಂಜಲಿ ನೀಡಿ ಕಡ್ಡಾಯವಾಗಿ ಸಂಜೆ ಅರ್ಧಘಂಟೆಯಿಂದ ಎರಡು ಗಂಟೆಯಾದರೂ ನಡೆಯಿರಿ. ನಿತ್ಯದ ಆಹಾರದಲ್ಲಿ ಸಾಕಷ್ಟು ನಾರು ಇರುವ ಆಹಾರಗಳನ್ನೇ ಸೇವಿಸಿ. ಮನೆಯ ಆಹಾರವನ್ನು ಮಾತ್ರ ಸೇವಿಸಿ. ಹಸಿ ತರಕಾರಿ, ಹಣ್ಣುಗಳು ನಿಮ್ಮ ಆಹಾರದಲ್ಲಿ ಹೆಚ್ಚಿರಲಿ. ದಿನದಲ್ಲಿ ಕನಿಷ್ಠ ಅರ್ಧಗಂಟೆಯಾದರೂ ವ್ಯಾಯಾಮ ಮಾಡಿ.

English summary

How To Target Belly Fat Depending On Its Type

Belly fat is the most annoying and adamant fat that is hard to reduce. However, if you know the type of your belly fat and the right type of workout for it, it is the easiest fat to melt. Indeed, it will take just a month to get a flat belly, if you are aware of the things as mentioned in this article. Read on the article to know your belly fat type and how to melt it.
X
Desktop Bottom Promotion