For Quick Alerts
ALLOW NOTIFICATIONS  
For Daily Alerts

ಹೃದಯಾಘಾತಕ್ಕೆ ಕಾರಣವಾಗುವ ಕೊಲೆಸ್ಟ್ರಾಲ್ ಬಗ್ಗೆ ಎಚ್ಚರವಿರಲಿ!

By Arshad
|

ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಅಗತ್ಯಪ್ರಮಾಣದಲ್ಲಿ ನಮ್ಮ ಆರೋಗ್ಯಕ್ಕೆ ಉತ್ತಮ ಎಂದು ವೈದ್ಯರು ಕೂಡ ಹೇಳುತ್ತಾರೆ. ಕಾರಿನ ಚಕ್ರಕ್ಕೆ ಗ್ರೀಸ್‌ನ ನುಣುಪು ಸುಲಭವಾಗಿ ತಿರುಗಲು ನೆರವಾಗುವಂತೆ, ಕೊಲೆಸ್ಟ್ರಾಲ್ ಕೂಡ ರಕ್ತದ ಸಂಚಾರಕ್ಕೆ ನೆರವು ನೀಡುತ್ತದೆ. ಆದರೆ ನಮಗೆ ಅಗತ್ಯವಿರುವುದು ಉತ್ತಮ ಕೊಲೆಸ್ಟ್ರಾಲ್ (HDL-High density lipoprotein) ಹೊರತು ಕೆಟ್ಟ ಕೊಲೆಸ್ಟ್ರಾಲ್ ಅಲ್ಲ.

ಈ LDL ನಮ್ಮ ಆಹಾರದ ಮೂಲಕ ದೇಹ ಪ್ರವೇಶಿಸಿ ಹೆಚ್ಚೂ ಕಡಿಮೆ ಶಾಶ್ವತವಾಗಿ ಉಳಿದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದು ಹೇಗೆ ಅಂದರೆ ಈ ಕೊಲೆಸ್ಟ್ರಾಲ್ ಒಂದು ಜಿಡ್ಡು ಆಗಿದ್ದು ಸುಲಭವಾಗಿ ಅಂಟಿಕೊಳ್ಳುವ ಗುಣ ಹೊಂದಿದೆ. ಮಜ್ಜಿಗೆಯಲ್ಲಿ ತೇಲುತ್ತಿರುವ ಬೆಣ್ಣೆಯ ಹನಿಗಳು ಅದ್ದಿದ ಕೈಗೆ ಅಂಟಿಕೊಳ್ಳುವಂತೆ ಇವು ರಕ್ತ ಸಂಚರಿಸುವಲ್ಲೆಲ್ಲಾ ತಿರುಗಾಡಿ ಎಲ್ಲೆಲ್ಲಿ ರಕ್ತನಾಳ ಮತ್ತು ನರಗಳು ಕವಲಾಗುತ್ತವೆ ಮತ್ತು ತಿರುವು ಪಡೆಯುತ್ತವೆಯೋ, ಅಲ್ಲೆಲ್ಲಾ ಮೂಲೆಗಳಲ್ಲಿ ಅಂಟಿಬಿಡುತ್ತವೆ. ನಿಮ್ಮೊಳಗಿನ ಶತ್ರು ಕೊಲೆಸ್ಟ್ರಾಲ್‌ನ್ನು ನಿಯಂತ್ರಿಸುವುದು ಹೇಗೆ?

ಒಮ್ಮೆ ಅಂಟಿಕೊಂಡರೆ ಸಾಕು, ಮುಂದೆ ರಕ್ತದೊಂದಿಗೆ ಬರುವ ಇನ್ನಷ್ಟು ಪ್ರಮಾಣ ಅಂಟಿಕೊಳ್ಳುತ್ತಲೇ ಹೋಗುತ್ತದೆ. ಹೀಗೇ ವರ್ಷಗಟ್ಟಲೇ ಅಂಟಿಕೊಳ್ಳುತ್ತಾ ಹೋಗಿ ನರಗಳ ಒಳಭಾಗವನ್ನೆಲ್ಲಾ ಆವರಿಸಿ ರಕ್ತಸಂಚರಿಸಲು ತುಂಬಾ ಕಡಿಮೆ ಸ್ಥಳಾವಕಾಶ ಇರುತ್ತದೆ. ಕೊಲೆಸ್ಟ್ರಾಲ್ ನಿಯಂತ್ರಿಸಲು ಕೆಲವೊಂದು ಸಲಹೆಗಳು

ಈ ಇಕ್ಕಟ್ಟಿನ ಕೊಳವೆಯ ಮೂಲಕ ರಕ್ತ ಮುಂದೆ ಹೋಗಬೇಕಾದರೆ ಹಿಂದಿನಿಂದ ಒತ್ತಡ ಹೆಚ್ಚು ಬೇಕಾಗುತ್ತದೆ. ಈ ಒತ್ತಡ ನೀಡಲು ಹೃದಯ ಅನಿವಾರ್ಯವಾಗಿ ತನ್ನ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗುತ್ತದೆ. ಇದನ್ನೇ ಅಧಿಕ ರಕ್ತದೊತ್ತಡ ಎನ್ನುತ್ತೇವೆ. ಹೃದಯದ ಕೆಲಸಕ್ಕೂ ರಕ್ತ ಬೇಕು. ಈ ರಕ್ತ ಪೂರೈಸುವ ರಕ್ತನಾಳಗಳಲ್ಲಿಯೇ ಕೊಲೆಸ್ಟ್ರಾಲ್ ಇದ್ದರೆ?

ಆಗ ಹೃದಯಕ್ಕೆ ಲಭ್ಯವಾಗುವ ರಕ್ತವೇ ಕಡಿಮೆಯಾಗಿ ಸ್ತಂಭನವಾಗುತ್ತದೆ. ಇದನ್ನೇ ಹೃದಯಾಘಾತವೆನ್ನುತ್ತೇವೆ. ಗಾಬರಿಯಾಯಿತೇ? ಗಾಬರಿಪಟ್ಟುಕೊಳ್ಳಬೇಡಿ, ಕೊಲೆಸ್ಟ್ರಾಲ್ ತೊಲಗಿಸಲು ಸುಲಭ ಉಪಾಯಗಳಿವೆ. ಹೇಗೆ ಎಂಬುದನ್ನು ಮುಂದಿನ ಸ್ಲೈಡ್ ಗಳ ಮೂಲಕ ಓದಿ...

ಕಿತ್ತಳೆ ರಸ ಕುಡಿಯಿರಿ

ಕಿತ್ತಳೆ ರಸ ಕುಡಿಯಿರಿ

ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಕಿತ್ತಳೆ ರಸ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದು. ಬೆಳಿಗ್ಗೆ ಪ್ರಥಮವಾಗಿ ಕುಡಿಯುವುದರಿಂದ ಮತ್ತು ಬೇರೇನನ್ನೂ ಸೇವಿಸದಿರುವುದರಿಂದ ಹೊಟ್ಟೆಯ ಮೂಲಕ ವಿಟಮಿನ್ ಸಿ ಮತ್ತು ಇತರ ಪೋಷಕಾಂಶಗಳು ರಕ್ತಸೇರಿ ಅತಿವೇಗದಲ್ಲಿ ದೇಹದ ಇತರೆಡೆ ಹರಡುತ್ತವೆ. ಈ ಪೋಷಕಾಂಶಗಳು ತೀಕ್ಷ್ಣವಾಗಿರುವುದರಿಂದ ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಕೊಲೆಸ್ಟ್ರಾಲ್ ಕಣಗಳನ್ನು ಸಡಿಲ ಮಾಡುತ್ತಾ ಹೋಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕಿತ್ತಳೆ ರಸ ಕುಡಿಯಿರಿ

ಕಿತ್ತಳೆ ರಸ ಕುಡಿಯಿರಿ

ಹೀಗೇ ದಿನೇದಿನೇ ಕೊಂಚಕೊಂಚವಾಗಿ ಸಡಿಲಗೊಳ್ಳುವ ಕೊಲೆಸ್ಟ್ರಾಲ್ ರಕ್ತದ ಮೂಲಕ ಹರಿದು ಬಳಿಕ ವಿಸರ್ಜನೆಗೊಳ್ಳುತ್ತದೆ. ಆದ್ದರಿಂದ ಸತತವಾಗಿ ಒಂದೆರಡು ತಿಂಗಳಾದರೂ ಸೇವಿಸುವುದು ಉತ್ತಮ. ಇದಕ್ಕೆ ಸಿದ್ದರೂಪದ ಪ್ಯಾಕ್ ಗಿಂತಲೂ ಈಗತಾನೇ ಕಿತ್ತಳೆಹಣ್ಣುಗಳನ್ನು ಹಿಂಡಿ ತೆಗೆದ ರಸವನ್ನು ಸೇವಿಸುವುದು ಹೆಚ್ಚು ಪರಿಣಾಮಕಾರಿ.

ಕೆಂಪು ವೈನ್

ಕೆಂಪು ವೈನ್

ದ್ರಾಕ್ಷಾರಸವನ್ನು ಭಟ್ಟಿಯಿಳಿಸಿ ತಯಾರಿಸಿದ ವೈನ್ ಸಹಾ ಕೊಲೆಸ್ಟ್ರಾಲ್ ನಿಗ್ರಹಕ್ಕೆ ಉತ್ತಮವಾಗಿದೆ. ಅದರಲ್ಲೂ ಕೆಂಪು ವೈನ್ ಹೆಚ್ಚು ಪರಿಣಾಮಕಾರಿ. ಊಟದ ಬಳಿಕ ಕೊಂಚವೇ ಪ್ರಮಾಣವನ್ನು ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸುವುದು ಸಾಧ್ಯ. ಸಂಶೋಧನೆಗಳ ಪ್ರಕಾರ ಒಂದು ಗುಟುಕು ವೈನ್ ಅಥವಾ ಬಿಯರ್ ನಿಂದ HDL ಪ್ರಮಾಣ ಉತ್ತಮಗೊಳ್ಳುವುದು ಕಂಡುಬಂದಿದೆ. (ಆದರೆ ಆರೋಗ್ಯಕ್ಕೆ ಒಂದೇ ಗುಟುಕು ಎಂಬುದು ನೆನಪಿರಲಿ)

ಗೋಧಿಹಿಟ್ಟಿನ ಖಾದ್ಯಗಳು

ಗೋಧಿಹಿಟ್ಟಿನ ಖಾದ್ಯಗಳು

ಇಂದು ಸಿದ್ಧ ಆಹಾರಗಳೆಲ್ಲಾ ಮೈದಾ ಹಿಟ್ಟನ್ನು ಅವಲಂಬಿಸಿವೆ. ವಾಸ್ತವವಾಗಿ ಗೋಧಿಯ ಮೇಲ್ಕವಚ ಮತ್ತು ಮೊಳಕೆಯ ಭಾಗವನ್ನು ನಿವಾರಿಸಿ ಕೇವಲ ಒಳಗಿನ ತಿರುಳನ್ನು ಮಾತ್ರ ನೀಡುವ ಹಿಟ್ಟೇ ಮೈದಾ. ಇದರಲ್ಲಿ ನಾರಿನ ಅಂಶವೇ ಇಲ್ಲದಿರುವುದರಿಂದ ಇದು ಮಲಬದ್ಧತೆಗೆ ಪ್ರಮುಖ ಕಾರಣ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಗೋಧಿಹಿಟ್ಟಿನ ಖಾದ್ಯಗಳು

ಗೋಧಿಹಿಟ್ಟಿನ ಖಾದ್ಯಗಳು

ಇದರ ಬದಲಿಗೆ ಇಡಿಯ ಗೋಧಿಯ ಹಿಟ್ಟಿನಿಂದ ಮಾಡಿದ ಖಾದ್ಯ, ಚಪಾತಿ ಮೊದಲಾದ ಆಹಾರಗಳನ್ನು ಸೇವಿಸುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ನಿಗ್ರಹಿಸಬಹುದು. ಅಕ್ಕಿಯನ್ನು ಪಾಲಿಷ್ ಮಾಡದೇ ಅಥವಾ ಕಡಿಮೆ ಪಾಲಿಷ್ ಮಾಡಿದ 'ಕಂದು ಅಕ್ಕಿ' (brown rice) ಯನ್ನು ಉಪಯೋಗಿಸುವುದೂ ಉತ್ತಮ ಆಯ್ಕೆಯಾಗಿದೆ. ಇದರಿಂದ ರಕ್ತದಲ್ಲಿ ಉತ್ತಮ ಕೊಲೆಸ್ಟ್ರಾಲ್ ಮಟ್ಟಾ ಹೆಚ್ಚುತ್ತದೆ ಹಾಗೂ ರಕ್ತದಲ್ಲಿ triglyceride ಎಂಬ ಇನ್ನೊಂದು ರೀತಿಯ ಕೊಬ್ಬನ್ನೂ ಕಡಿಮೆಗೊಳಿಸುತ್ತದೆ.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಕೊಲೆಸ್ಟ್ರಾಲ್ ಇದೆ ಎಂದು ಗೊತ್ತಾದ ಬಳಿಕ ಅತಿಸುಲಭವಾಗಿ ಅನುಸರಿಸಬಹುದಾದ ವಿಧಾನವೆಂದರೆ ನಿಮ್ಮ ಅಡುಗೆ ಎಣ್ಣೆಯನ್ನು ಆಲಿವ್ ಎಣ್ಣೆಗೆ ಬದಲಿಸುವುದು. ಆಲಿವ್ ಎಣ್ಣೆ ಕೊಂಚ ದುಬಾರಿ ಮತ್ತು ರುಚಿಯಲ್ಲಿಯೂ ನಮ್ಮ ಇತರ ಎಣ್ಣೆಗಳಿಗಿಂತ ಭಿನ್ನವಾದುದರಿಂದ ನಿಮಗೆ ಹಿಡಿಸದೇ ಇದ್ದರೂ ಗಟ್ಟಿ ಮನಸ್ಸು ಮಾಡಿ ಬಳಕೆ ಪ್ರಾರಂಭಿಸಿ. ಏಕೆಂದರೆ ಆಲಿವ್ ಎಣ್ಣೆಯನ್ನು ಸೇವಿಸುವುದರಿಂದ (ಹುರಿಯುವ ಬದಲು ಚಪಾತಿ ರೊಟ್ಟಿಗಳಿಗೆ ಸವರಿ ಸೇವಿಸುವುದರಿಂದ) ಇದರಲ್ಲಿರುವ monounsaturated fat ಕೊಲೆಸ್ಟ್ರಾಲ್ ಕಣಗಳನ್ನು ಆಕರ್ಷಿಸಿ ತನ್ನೊಂದಿಗೆ ಕರೆದೊಯ್ದು ವಿಸರ್ಜಿಸಿಬಿಡುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಇದರಿಂದ ದೇಹದ ಕೆಟ್ಟ ಕೊಲೆಸ್ಟ್ರಾಲ್ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ಯಾವುದೇ ಕಾರಣಕ್ಕೂ ವನಸ್ಪತಿ, ಪಾಮ್ ಆಯಿಲ್, ವೆಜಿಟೇಬಲ್ ಘೀ, ಮಾರ್ಜರಿನ್ ಮೊದಲಾದವುಗಳನ್ನು ಸೇವಿಸಲು ಹೋಗಬೇಡಿ, ಇವೆಲ್ಲಾ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತವೆ.

ನಾರು ಹೆಚ್ಚಿರುವ ಆಹಾರಗಳನ್ನೇ ಸೇವಿಸಿ

ನಾರು ಹೆಚ್ಚಿರುವ ಆಹಾರಗಳನ್ನೇ ಸೇವಿಸಿ

ನಿಮ್ಮ ಆಹಾರದಲ್ಲಿ ನಾರು ಹೆಚ್ಚಿದ್ದಷ್ಟೂ ಜೀರ್ಣಶಕ್ತಿ ಉತ್ತಮಗೊಳ್ಳುವುದು, ಮಲಬದ್ಧತೆಯಾಗದೇ ಇರುವುದು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳ್ಳುವುದು. ಕರಗುವ ನಾರು ಇರುವ ಆಹಾರಗಳನ್ನು ಸೇವಿಸುವುದರಿಂದ ಇದರಲ್ಲಿರುವ beta glucan ಎಂಬ ಪೋಷಕಾಂಶ ಕೆಟ್ಟ ಕೊಲೆಸ್ಟ್ರಾಲ್ ಅನ್ನು 12 ರಿಂದ 24 ಶೇಖಡಾ ಕಡಿಮೆಗೊಳಿಸಿರುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ವಿವಿಧ ಹಣ್ಣುಗಳು, ಹಸಿರು ಸೊಪ್ಪು, ಓಟ್ಸ್, ನವಣೆ, ರಾಗಿ ಮೊದಲಾದ ಆಹಾರಗಳಲ್ಲಿ ಕರಗುವ ನಾರು ಉತ್ತಮ ಪ್ರಮಾಣದಲ್ಲಿದ್ದು ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತವೆ.

English summary

Ways To Naturally Reduce Your Cholesterol

More than 80 percent people in the world die because of heart disease almost every day. The reason being high cholesterol! When you don't attend to high cholesterol it could be fatal. Low-density lipoprotein or LDL is a type of bad cholesterol which the being slowly and steadily.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more