For Quick Alerts
ALLOW NOTIFICATIONS  
For Daily Alerts

ಮೆದುಳನ್ನು ಚುರುಕಾಗಿಸುವ ಪ್ರಭಾವಶಾಲಿ ತಂತ್ರಗಳು

By Manu
|

ಈ ಜಗತ್ತಿನಲ್ಲಿ ಮನುಷ್ಯ ಯಾವುದೇ ಪ್ರಾಣಿಗಿಂತ ಹೆಚ್ಚು ಪ್ರಗತಿ ಹೊಂದಿರಲು ಕಾರಣ ಮೆದುಳನ್ನು ಬಳಸಿಕೊಳ್ಳುವ ಶಕ್ತಿ. ಹೊಸದನ್ನು ಕಲಿಯುವ, ಕಷ್ಟಗಳನ್ನು ಯುಕ್ತಿಯಿಂದ ಎದುರಿಸುವ ಬಗೆ, ಇವೆಲ್ಲವೂ ಮೆದುಳಿನ ಚಾಕಚಕ್ಯತೆಯಿಂದ ನಡೆಯುತ್ತದೆ.....

ಆದರೆ ಮೆದುಳಿನ ಕಾರ್ಯನಿರ್ವಹಣೆಯ ಬಗ್ಗೆ ಹೊರಗಿನಿಂದ ನೋಡಿದರೆ ವಿಚಿತ್ರವಾಗಿ ಕಾಣುತ್ತದೆ. ಮನವೆಂಬ ಮರ್ಕಟ ಎಂದು ಹಿರಿಯರು ಹೇಳಿದುದು ಇದೇ ಕಾರಣಕ್ಕೆ. ಈ ಮರ್ಕಟನನ್ನು ಅರಿಯಲು ವಿಜ್ಞಾನಿಗಳೇ ಪ್ರಯತ್ನಿಸಿ ಕೈಚೆಲ್ಲಿದ್ದಾರೆ.

ಹೌದು, ಮೆದುಳು ಒಂದು ಸೂಪರ್ ಕಂಪ್ಯೂಟರಿಗಿಂತ ಪ್ರಭಾವಶಾಲಿ. ಇದರಲ್ಲಿ ನಾವು ಹುಡುಕಿದಷ್ಟು ಮತ್ತು ಬಳಸಿಕೊಂಡಷ್ಟು ಹಲವಾರು ಹೊಸತನಗಳು ಕಾಣಿಸುತ್ತವೆ. ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಹಲವಾರು ತಂತ್ರಗಳು ಇವೆ. ಇವು ನಮ್ಮ ಪ್ರಸಕ್ತ ಮೆದುಳಿನ ಸಾಮರ್ಥ್ಯವನ್ನು ಹೆಚ್ಚಿಸಿ, ಮತ್ತಷ್ಟು ಸಾಮರ್ಥ್ಯವನ್ನು ಒದಗಿಸುತ್ತವೆ.

ಬನ್ನಿ ಈ ಲೇಖನದಲ್ಲಿ ನಿಮ್ಮ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಕೆಲವೊಂದು ತಂತ್ರಗಳನ್ನು ತಿಳಿಸಿಕೊಡಲಿದ್ದೇವೆ. ಈ ತಂತ್ರಗಳನ್ನು ಪ್ರತಿದಿನ ಚೆನ್ನಾಗಿ ಪಾಲಿಸಿದರೆ ನಿಮ್ಮ ಮೆದುಳಿನ ಶಕ್ತಿಯು ಹೆಚ್ಚುವುದರಲ್ಲಿ ಅನುಮಾನವೇ ಇಲ್ಲ. ಬನ್ನಿ ಆ ತಂತ್ರಗಳು ಯಾವುವು ಎಂದು ನಾವು ತಿಳಿದುಕೊಂಡು ಬರೋಣ. ಈ ತಂತ್ರಗಳನ್ನು ಪಾಲಿಸುವುದು ಕಷ್ಟವೇನಲ್ಲ ಎಂದು ನಿಮಗೂ ಸಹ ಮನದಟ್ಟಾಗುತ್ತದೆ...

ಹೊಸದಾಗಿ ಏನಾದರು ಮಾಡಿ

ಹೊಸದಾಗಿ ಏನಾದರು ಮಾಡಿ

ಯಾವಾಗ ನೀವು ಹೊಸದಾಗಿ ಏನಾದರು ಒಂದು ಕ್ರಿಯೆಯನ್ನು ಮಾಡುತ್ತೀರೋ, ಆಗ ಅದು ಮೆದುಳನ್ನು ಉತ್ತೇಜಿಸುತ್ತದೆ. ಯಾವಾಗಲು ಮಾಡಿದ್ದನ್ನೆ ಮಾಡದೆ ವಿಶೇಷವಾಗಿ ಏನಾದರೂ ಒಂದು ಕೆಲಸವನ್ನು ಮಾಡಿ, ಇದರಿಂದ ಮೆದುಳು ಸಹ ಉಲ್ಲಾಸದಿಂದ ವರ್ತಿಸುತ್ತದೆ. ಜಡವಾದ ಮನಃಸ್ಥಿತಿಯು ಮೆದುಳಿಗೆ ಒಳ್ಳೆಯದಲ್ಲ. ಅದನ್ನು ಬದಲಾಯಿಸಲು ಇರುವ ಏಕೈಕ ಮಾರ್ಗ ಹೊಸದಾಗಿ ಏನಾದರು ಮಾಡುವುದು. ಇದು ನಿಮ್ಮಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ ಮತ್ತು ಬುದ್ಧಿವಂತಿಕೆಯನ್ನು ಸಹ ಹೆಚ್ಚಿಸುತ್ತದೆ.

ಪ್ರತಿನಿತ್ಯ ವ್ಯಾಯಾಮ ಮಾಡಿ

ಪ್ರತಿನಿತ್ಯ ವ್ಯಾಯಾಮ ಮಾಡಿ

ವೈಜ್ಞಾನಿಕವಾಗಿ ಸಾಭೀತಾಗಿರುವ ವಿಚಾರವೇನೆಂದರೆ;- ನಾವು ಪ್ರತಿದಿನ ಮಾಡುವ ವ್ಯಾಯಾಮವು ನಮ್ಮ ನ್ಯೂರೋಜೆನಿಸಿಸ್‌ಗಳನ್ನು ವರ್ಧಿಸುತ್ತದೆ. ಇದರರ್ಥ ನಾವು ಪ್ರತಿದಿನ ವ್ಯಾಯಾಮ ಮಾಡಿದಾಗ ಹೊಸ ಮೆದುಳಿನ ಕೋಶಗಳು ಹುಟ್ಟಿಕೊಳ್ಳುತ್ತವೆ. ಹಾಗಾಗಿ ವ್ಯಾಯಾಮ ಮಾಡುವ ಮೂಲಕ ಹೊಸ ಮೆದುಳಿನ ಕೋಶಗಳನ್ನು ಉತ್ಪಾದಿಸಿಕೊಳ್ಳಿ, ಆಗ ನೋಡಿ ಮೆದುಳು ಮಿಂಚಿಗಿಂತ ವೇಗವಾಗಿ ಕೆಲಸ ಮಾಡುತ್ತದೆ.

ನಿಮ್ಮ ನೆನಪಿನ ಶಕ್ತಿಗೆ ತರಬೇತಿ ನೀಡಿ

ನಿಮ್ಮ ನೆನಪಿನ ಶಕ್ತಿಗೆ ತರಬೇತಿ ನೀಡಿ

ನಾವು ಬಹುಶಃ ಆಗಾಗ ಅಥವಾ ಯಾವಾಗಲು ನಮ್ಮ ಕೆಟ್ಟ ನೆನಪಿನ ಶಕ್ತಿಗಾಗಿ ನಮ್ಮನ್ನೆ ನಾವು ದೂಷಿಸಿಕೊಳ್ಳುತ್ತಾ ಇರುತ್ತೇವೆ. ಆದರೆ ಅದನ್ನು ಸರಿಪಡಿಸಿಕೊಳ್ಳುವ ಪ್ರಯತ್ನವನ್ನು ಮಾಡಿದ್ದೇವೆಯೇ? ಅದಕ್ಕಾಗಿ ಒಂದು ಸರಳ ಉಪಾಯವಿದೆ ಬನ್ನಿ. ಫೋನ್ ಸಂಖ್ಯೆಗಳನ್ನು ಮತ್ತು ಇನ್ನಿತರ ಮುಖ್ಯ ಕೆಲಸಗಳನ್ನು ನೆನಪಿಟ್ಟುಕೊಳ್ಳಲು ಪ್ರಯತ್ನಿಸಿ. ಇದರಿಂದ ನಿಮ್ಮ ನೆನಪಿನ ಶಕ್ತಿ ಸುಧಾರಿಸುತ್ತದೆ. ಇದು ನಿಮ್ಮ ಮೆದುಳಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಒಂದಾಗಿದೆ.

ಧನಾತ್ಮಕವಾಗಿ ಆಲೋಚಿಸಿ

ಧನಾತ್ಮಕವಾಗಿ ಆಲೋಚಿಸಿ

ಒತ್ತಡ ಮತ್ತು ಆತಂಕಗಳು ಮೆದುಳಿನ ಕೋಶಗಳನ್ನು ಹಾಳು ಮಾಡುತ್ತವೆ. ಹಾಗಾಗಿ ಇವು ಮೆದುಳಿನಲ್ಲಿ ನ್ಯೂರಾನ್‌ಗಳು ಬೆಳೆಯದಂತೆ ಮಾಡಿಬಿಡುತ್ತವೆ. ಅದರಿಂದ ಪಾರಾಗಲು ಇರುವ ಏಕೈಕ ಮಾರ್ಗ ಧನಾತ್ಮಕವಾಗಿ ಆಲೋಚಿಸುವುದು. ವಿಶೇಷವಾಗಿ ವರ್ತಮಾನ ಕಾಲದ ಕುರಿತಾಗಿ ಮಾತನಾಡುವಾಗ ಧನಾತ್ಮಕವಾಗಿ ಆಲೋಚಿಸಿ. ಇದು ನಿಮ್ಮ ಮೆದುಳಿನ ರಚನೆಯ ವೇಗವನ್ನು ಹೆಚ್ಚಿಸುತ್ತದೆ ಮತ್ತು ಒತ್ತಡ ಹಾಗು ಆತಂಕವನ್ನು ಕಡಿಮೆ ಮಾಡುತ್ತದೆ. ಆದಷ್ಟು ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಇದು ನಿಮ್ಮ ಇಡೀ ಆರೋಗ್ಯಕ್ಕೆ ಒಳ್ಳೆಯದು.

ಕ್ಯಾಲ್ಕ್ಯುಲೇಟರ್ ಬಳಸಬೇಡಿ

ಕ್ಯಾಲ್ಕ್ಯುಲೇಟರ್ ಬಳಸಬೇಡಿ

ಲೆಕ್ಕ ಮಾಡಲು ಟೆನ್ಶನ್ ಯಾಕೆ? ಶಾಲಾದಿನಗಳನ್ನು ಮರೆತು ಹೋದಿರಾ? ಸಣ್ಣ ಸಣ್ಣ ಲೆಕ್ಕಾಚಾರಕ್ಕು ಕ್ಯಾಲ್ಕ್ಯುಲೇಟರ್ ಬಳಸಬೇಡಿ. ಕೈಯಲ್ಲಿಯೇ ಮಾಡಿ, ಮೆದುಳು ನಿಮಗೆ ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಮೆದುಳಿನ ಕಾರ್ಯಕ್ಷಮತೆ ಇನ್ನೂ ಹೆಚ್ಚಾಗುತ್ತದೆ. ಈ ಎಲ್ಲಾ ತಂತ್ರಗಳನ್ನು ಪಾಲಿಸಿ ನೋಡಿ ಕೆಲವೇ ದಿನಗಳಲ್ಲಿ ನಿಮ್ಮ ಬುದ್ಧಿವಂತಿಕೆಗೆ ನೀವೇ ತಲೆದೂಗುತ್ತೀರಿ.

English summary

Techniques To Increase Mind Power

As we explore new dimensions of thinking, there are many techniques that can help in improving our existing mind powers. A research has revealed that mind power cannot be measured just like intelligence. This is because it has infinite dimensions. Some people have a great mental ability, but they may lack in a few other abilities. By constantly practicing a few techniques you can increase your mind power.
X
Desktop Bottom Promotion