For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಪಾನೀಯ ಎಳನೀರು: ಸರ್ವರೋಗಕ್ಕೂ ಇದು ಪನ್ನೀರು..!

By Super
|

ಸಮುದ್ರತೀರದ ಬೆಳೆಯಾದ ತೆಂಗಿನ ಮರವನ್ನು ಕಲ್ಪವೃಕ್ಷವೆಂದು ನಮ್ಮ ಹಿರಿಯರು ಪರಿಗಣಿಸಿ ಪ್ರತಿ ಮನೆಯಲ್ಲಿಯೂ ನೆಟ್ಟಿದ್ದರಿಂದ ಇಂದು ಇಡಿಯ ಭಾರತದಲ್ಲಿ ತೆಂಗಿನ ಮರಗಳು ಇಲ್ಲದ ಊರೇ ಇಲ್ಲವೆಂದು ಹೇಳಬಹುದು. ಎಳನೀರಿನಲ್ಲಿ ಎಷ್ಟೆಲ್ಲಾ ಪೋಷಕಾಂಶಗಳಿವೆ ಗೊತ್ತಾ?

ಗಾತ್ರದಲ್ಲಿ ಕೊಂಚ ಚಿಕ್ಕ ದೊಡ್ಡದಾಗಿರಬಹುದಷ್ಟೇ ಹೊರತು ಎಳನೀರು ಪ್ರತಿ ಊರಿನಲ್ಲಿಯೂ ಬಹುತೇಕ ಇಡಿಯ ವರ್ಷ ದೊರಕುತ್ತದೆ. ನವಿರಾದ ಸಿಹಿ, ನೀರಿನಷ್ಟೇ ಗಾಢವಾದ ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಪೋಷಕಾಂಶಗಳನ್ನು ಪಡೆದ ದೇಹ ಶೀಘ್ರ ತನ್ನ ಚಟುವಟಿಕೆಗಳನ್ನು ಪೂರ್ಣ ಕ್ಷಮತೆಯಲ್ಲಿ ನಿರ್ವಹಿಸಲು ಸಬಲಗೊಳ್ಳುತ್ತದೆ.

ಎಳನೀರಿನ ಉಪಯೋಗ ಕೇವಲ ಕುಡಿಯುವುದಕ್ಕಲ್ಲ, ಸರಿಯಾಗಿ ಬಳಸಿದರೆ ದೇಹದ ಹೊರಭಾಗಗಳಾದ ಚರ್ಮ ಮತ್ತು ಕೂದಲ ಆರೈಕೆಗೂ ಬಳಸಬಹುದು. ಆಶ್ಚರ್ಯವಾಯಿತೇ? ..... ಮುಂದೆ ಓದಿ.

ದೇಹದ ಬಹುತೇಕ ನೀರಿನ ಅಗತ್ಯತೆಗಳನ್ನು ಪೂರೈಸುತ್ತದೆ

ದೇಹದ ಬಹುತೇಕ ನೀರಿನ ಅಗತ್ಯತೆಗಳನ್ನು ಪೂರೈಸುತ್ತದೆ

ಎಳನೀರಿನಲ್ಲಿರುವ ವಿವಿಧ ಖನಿಜ, ಲವಣ ಮತ್ತು ಸಕ್ಕರೆಯ ಅಂಶ ದೇಹಕ್ಕೆ ಅಗತ್ಯವಾದ ಪ್ರಮಾಣದಲ್ಲಿ ಇರುವುದರಿಂದಲೇ ಇದೊಂದು ಅಮೃತಸಮಾನವಾದ ಪಾನೀಯವಾಗಿದೆ. ದೈಹಿಕ ಚಟುವಟಿಕೆಗಳಿಗೆ ಈ ನೀರು ಅತ್ಯಂತ ಸಮರ್ಪಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ನೀಡುವುದರಿಂದ ಶರೀರ ತನ್ನ ಚಟುವಟಿಕೆಗಳನ್ನು ಹೆಚ್ಚು ಸಮಯ ನಿರ್ವಹಿಸಬಹುದು. ಹೆಚ್ಚಿನ ದೈಹಿಕ ಶ್ರಮವುಳ್ಳ ಕೆಲಸಕ್ಕೆ ಪ್ರತಿದಿನ ಒಂದಾದರೂ ಎಳನೀರು ಕುಡಿಯುವುದು ಆರೋಗ್ಯಕ್ಕೆ ಉತ್ತಮವಾಗಿದೆ.

ವೃದ್ಧಾಪ್ಯವನ್ನು ಮುಂದೂಡುತ್ತದೆ

ವೃದ್ಧಾಪ್ಯವನ್ನು ಮುಂದೂಡುತ್ತದೆ

ಎಳನೀರಿನಲ್ಲಿ ಸೈಟೋಕೈನ್ ಮತ್ತು ಲಾರಿಕ್ ಆಮ್ಲ (cytokines, lauric acid) ಎಂಬ ಎರಡು ಪೋಷಕಾಂಶಗಳಿವೆ. ಇವು ಜೀವಕೋಶದ ಸಮರ್ಪಕ ಬೆಳವಣಿಗೆ ಮತ್ತು ನಿಯಂತ್ರಣಕ್ಕೆ ನೆರವಾಗುತ್ತವೆ. ಎಳನೀರು ಕ್ಯಾನ್ಸರು ಜನಕ ಕಣಗಳಿಗೆ ವಿರೋಧ ಒಡ್ಡುವುದರಿಂದ ದೇಹವನ್ನು ಕ್ಯಾನ್ಸರ್ ನಿಂದ ತಡೆಯುತ್ತದೆ. ಎಳನೀರಿನ ಇನ್ನೊಂದು ಉತ್ತಮ ಗುಣವೆಂದರೆ ದೇಹದೊಳಗಿನ ರಕ್ತ ಹೆಪ್ಪುಗಟ್ಟದಂತೆ ತಡೆಯುವುದು. ಕೆಲವೊಮ್ಮೆ ಆಂತರಿಕ ಸ್ರಾವದಿಂದ ನರದಲ್ಲಿ ಬಿರುಕುಂಟಾದರೆ ಒಳಗಡೆ ರಕ್ತಸ್ರಾವವಾದರೂ ಈ ಸ್ಥಳದಲ್ಲಿ ರಕ್ತ ನರದೊಳಗೆ ಹೆಪ್ಪುಗಟ್ಟಬಾರದು. ಒಂದು ವೇಳೆ ಹೀಗಾದರೆ (ಅದರಲ್ಲೂ ಮೆದುಳಿಗೆ ರಕ್ತ ಪೂರೈಸುವ ನರ) ಪ್ರಾಣಕ್ಕೇ ಅಪಾಯವಿದೆ. (ಇದನ್ನೇ brain hemorrhage ಎಂದು ಕರೆಯುತ್ತಾರೆ). ಜೊತೆಗೇ ಎಳನೀರಿನ ನಿರಂತರ ಸೇವೆಯಿಂದ ಚರ್ಮದ ಸೆಳೆತವೂ ಹೆಚ್ಚುತ್ತದೆ, ತನ್ಮೂಲಕ ನೆರಿಗೆ ಬೀಳುವುದನ್ನು ತಪ್ಪಿಸುತ್ತದೆ. ಎಳನೀರು ಅಪ್ಪಟ ನೀರಿನ ಪಿಎಚ್ ಸಂಖ್ಯೆ ಹೊಂದಿರುವುದರಿಂದ ಜಠರದಲ್ಲಿ ಆಮ್ಲೀಯತೆಯನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಜೀವರಸಾಯನಿಕ ಕ್ರಿಯೆಯನ್ನು ಉತ್ತೇಜಿಸುತ್ತದೆ

ಜೀವರಸಾಯನಿಕ ಕ್ರಿಯೆಯನ್ನು ಉತ್ತೇಜಿಸುತ್ತದೆ

ನಮ್ಮ ಆಹಾರದ ಮೂಲಕ ಲಭ್ಯವಾದ ಸಕ್ಕರೆ ಮತ್ತು ಇತರ ಪೋಷಕಾಂಶಗಳನ್ನು ಜೀವಕೋಶಗಳಿಗೆ ತಲುಪಿಸುವ ಜೀವರಸಾಯನಿಕ ಕ್ರಿಯೆಯನ್ನು ಎಳನೀರು ಉತ್ತೇಜಿಸುವ ಕಾರಣ ಹೀರಿಕೊಂಡ ಸಕ್ಕರೆ ಶೀಘ್ರವೇ ಕರಗಿ ದೇಹಕ್ಕೆ ಹೆಚ್ಚಿನ ಶಕ್ತಿ ದೊರಕುತ್ತದೆ.

ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ಕರಗಿಸುತ್ತದೆ

ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ಕರಗಿಸುತ್ತದೆ

ಒಂದು ವೇಳೆ ಯೂರಿಕ್ ಆಮ್ಲ ಅಥವಾ ಸಿಸ್ಟೈನ್ (uric acid or cystine)ಎಂಬ ಲವಣದಿಂದ ಮೂತ್ರದಲ್ಲಿ ಕಲ್ಲು ಉಂಟಾಗಿದ್ದರೆ ಅದಕ್ಕೆ ಎಳನೀರಿಗಿಂತ ಉತ್ತಮವದ ಆಹಾರ ಇನ್ನೊಂದಿಲ್ಲ. ಏಕೆಂದರೆ ಎಳನೀರಿನಲ್ಲಿರುವ ಪೊಟ್ಯಾಶಿಯಂ (ಪೊಟ್ಯಾಶಿಯಂ ಸಿಟ್ರೇಟ್ ರೂಪದಲ್ಲಿ) ಈ ಲವಣಗಳನ್ನು ಕರಗಿಸಿಕೊಂಡು ಮೂತ್ರಪಿಂಡಗಳನ್ನು ಕಲ್ಲುಗಳಿಂದ ಮುಕ್ತಿಗೊಳಿಸುತ್ತದೆ.

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ

ಎಳನೀರಿನಲ್ಲಿ ವಿವಿಧ ಕಿಣ್ವಗಳಿವೆ. ಫೋಲಿಕ್ ಆಮ್ಲ, ಫಾಸ್ಪೇಟೇಸ್, ಕ್ಯಾಟಲೇಸ್, ಡಿಹೈಡ್ರೋಜೀನೇಸ್, ಡೈಯಾಸ್ಟೇಸ್, ಪೆರಾಕ್ಸಿಡೇಸ್, ಆರ್.ಎನ್.ಎ ಪಾಲಿಮರೇಸಸ್ ಮೊದಲಾದ ಕಿಣ್ವಗಳು ವಿವಿಧ ರೀತಿಯ ಆಹಾರಗಳು ಸುಲಭವಾಗಿ ಜೀರ್ಣವಾಗಲು ನೆರವಾಗುತ್ತವೆ. ಪರಿಣಾಮವಾಗಿ ವಿವಿಧ ಆಹಾರಗಳ ಉತ್ತಮ ಅಂಶಗಳು ದೇಹಕ್ಕೆ ಸುಲಭವಾಗಿ ಲಭ್ಯವಾಗಿ ಆರೋಗ್ಯ ವೃದ್ಧಿಸುತ್ತದೆ. ಪರೋಕ್ಷವಾಗಿ ಅತ್ತ ಈ ಕಷ್ಟಕರವಾದ ಆಹಾರಗಳನ್ನು ಜೀರ್ಣಗೊಳಿಸಲು ಹೆಚ್ಚಿನ ಜಠರರಸ ಉತ್ಪತ್ತಿಯಾಗುವುದನ್ನು ತಡೆದಂತಾಗುತ್ತದೆ.

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ

ಊರೂರಿಗೆ ಸೈಕಲ್ ಮೇಲೆ ತಿರುಗುತ್ತಾ ಮೀನು ಮತ್ತಿತರ ಆಹಾರ ಅಥವಾ ಸಾಮಾಗ್ರಿಗಳನ್ನು ಮಾರುವವರಿಗೆ ಅಷ್ಟೊಂದು ಶಕ್ತಿ ಎಲ್ಲಿಂದ ಸಿಗುತ್ತದೆ ಎಂದು ಕೇಳಿದರೆ ಅವರು ನೀಡುವ ಉತ್ತರ-ಬೆಳಿಗ್ಗೆ ಕೆಲಸಕ್ಕೆ ಹೊರಡುವ ಮೊದಲು ಒಂದು ಎಳನೀರು ಕುಡಿದು ಹೊರಡುವುದು. ಏಕೆಂದರೆ ಎಳನೀರಿನಲ್ಲಿ ವಿವಿಧ ಪೌಷ್ಠಿಕ ಆಹಾರಗಳಿದ್ದು ದೇಹಕ್ಕೆ ಇಡಿಯ ದಿನಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ. ಇದರಲ್ಲಿ ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಮತ್ತು ಸೋಡಿಯಂ ಇದ್ದು ಹೆಚ್ಚಿನ ಪ್ರಮಾಣದಲ್ಲಿ ಪೊಟ್ಯಾಶಿಯಂ, ಕ್ಯಾಲ್ಸಿಯಂ ಮತ್ತು ಕ್ಲೋರೈಡ್ ಇವೆ.ಈ ಪ್ರಮಾಣದಲ್ಲಿರುವಾಗ ದೇಹಕ್ಕೆ ಶಕ್ತಿ ಒಮ್ಮೆಲೇ ಬಿಡುಗಡೆಯಾಗದೇ ನಿಧಾನಕ್ಕೆ ಶಕ್ತಿ ಉಡುಗಿದಂತೆ ಪೂರೈಸುತ್ತಾ ಹೋಗುತ್ತದೆ. ಇದೇ ಕಾರಣದಿಂದ ಇಡಿಯ ದಿನ ದೈಹಿಕ ಕೆಲಸವನ್ನು ಹೆಚ್ಚಿನ ಆಯಾಸವಿಲ್ಲದೇ ನಿರ್ವಹಿಸಲು ಸಾಧ್ಯವಾಗುತ್ತದೆ. ಮುಂದಿನ ಬಾರಿ ತುಂಬಾ ದೂರ ನಡೆಯುವ ಕೆಲಸವಿದ್ದರೆ ಒಂದು ಎಳನೀರು ಕುಡಿದು ಹೊರಡಿ.

ನಿರ್ಜಲೀಕರಣ ಸಮಸ್ಯೆ ತಡೆಯುತ್ತದೆ

ನಿರ್ಜಲೀಕರಣ ಸಮಸ್ಯೆ ತಡೆಯುತ್ತದೆ

ಅತಿಸಾರದಿಂದ ದೇಹ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಕಳೆದುಕೊಳ್ಳುತ್ತದೆ. ಪರಿಣಾಮವಾಗಿ ನೀರಿನ ಕೊರತೆಯಿಂದ ದೇಹ ಸೊರಗುತ್ತದೆ. ಕಾಲರಾ, ಬೇಧಿ, ಹೊಟ್ಟೆಯ ಫ್ಲೂ (stomach flu) ಮೊದಲಾದ ತೊಂದರೆಗಳ ಕಾರಣ ನೀರು ಕಳೆದುಕೊಂಡಿದ್ದರೂ ಎಳನೀರು ಈ ಕೊರತೆಯನ್ನು ಸಮರ್ಥವಾಗಿ ಪೂರೈಸುತ್ತದೆ. ಆಸ್ಪತ್ರೆಯ ರೋಗಿಗಳಿಗೆ ವೈದ್ಯರು ಎಳನೀರನ್ನೇ ಶಿಫಾರಸ್ಸು ಮಾಡುವುದು ಇದೇ ಕಾರಣಕ್ಕೆ.

ಸ್ನಾಯುಗಳ ಸೆಡೆತವನ್ನು ನಿವಾರಿಸುತ್ತದೆ

ಸ್ನಾಯುಗಳ ಸೆಡೆತವನ್ನು ನಿವಾರಿಸುತ್ತದೆ

ಸ್ನಾಯುಗಳನ್ನು ಸಾಮರ್ಥ್ಯಕ್ಕಿಂತ ಹೆಚ್ಚು ಕೆಲಸಕ್ಕೆ ಹಚ್ಚಿದರೆ ಅಥವಾ ನೀರಿಲ್ಲದೇ ತುಂಬಾ ಹೊತ್ತು ಇದ್ದರೆ ಸ್ನಾಯುಗಳು ಸೆಡೆತಕ್ಕೆ ಒಳಗಾಗುತ್ತವೆ.(ಸೆಡೆತವೆಂದರೆ ಮಡಚಿದ ಕಾಲನ್ನು ಪುನಃ ತೆರೆಯದಂತೆ ಸ್ನಾಯುಗಳು ಗಟ್ಟಿಯಾಗಿ ಹಿಡಿದುಕೊಳ್ಳುವುದು) ಸ್ನಾಯುಗಳಲ್ಲಿ ಪೊಟ್ಯಾಶಿಯಂ ಕೊರತೆ ಇದಕ್ಕೆ ಕಾರಣವಾಗಿದೆ. ಎಳನೀರಿನಲ್ಲಿರುವ ಪೊಟ್ಯಾಶಿಯಂ ಈ ಕೊರತೆಯನ್ನು ನಿವಾರಿಸಿ ಸೆಡೆತದಿಂದ ತಡೆಯುತ್ತದೆ.

ಮೂಳೆಗಳು ಗಟ್ಟಿಗೊಳ್ಳುತ್ತವೆ

ಮೂಳೆಗಳು ಗಟ್ಟಿಗೊಳ್ಳುತ್ತವೆ

ಹಾಲಿನ ಮೂಲಕ ಅತ್ಯಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ದೊರಕುತ್ತದೆ. ಆದರೆ ದೇಹಕ್ಕೆ ಸಮರ್ಪಕ ಪ್ರಮಾಣದಲ್ಲಿ (ಅಂದರೆ ಹೆಚ್ಚೂ ಅಲ್ಲ, ಕಡಿಮೆಯೂ ಅಲ್ಲ) ಕ್ಯಾಲ್ಸಿಯಂ ನೀಡುವ ಮೂಲಕ ಮೂಳೆಗಳು ದೃಢವಾಗುವ ಜೊತೆಗೇ ಸ್ನಾಯು ಮತ್ತು ಅಂಗಾಂಶಗಳೂ ಉತ್ತಮಗೊಳ್ಳುತ್ತವೆ.

ಹೊಟ್ಟೆ ಉಬ್ಬರಿಸುವುದನ್ನು ತಡೆಯುತ್ತದೆ

ಹೊಟ್ಟೆ ಉಬ್ಬರಿಸುವುದನ್ನು ತಡೆಯುತ್ತದೆ

ಜಠರದಲ್ಲಿ ಎಳನೀರು ಸೇರುವ ಮೂಲಕ ಅನಗತ್ಯ ವಾಯು ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಪರಿಣಾಮವಾಗಿ ಹುಳಿತೇಗು, ಹೊಟ್ಟೆಯುರಿ, ಹೊಟ್ಟೆಯುಬ್ಬರ, ವಾಯುಪ್ರಕೋಪ ಮೊದಲಾದ ತೊಂದರೆಗಳಿಂದ ಮುಕ್ತಿ ದೊರಕುತ್ತದೆ. ಊಟದ ಬಳಿಕ ಹೊಟ್ಟೆಯಲ್ಲಿ ಉರಿ ಉಂಟಾದರೆ ಎಳನೀರು ಕುಡಿಯುವುದರಿಂದ ತಕ್ಷಣ ಆರಾಮ ದೊರಕುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ಎಳನೀರಿನಲ್ಲಿ ಸಕ್ಕರೆ ಕಡಿಮೆ ಪ್ರಮಾಣದಲ್ಲಿರುವುದರಿಂದ ಮಧುಮೇಹಿಗಳೂ (ವೈದ್ಯರ ಸಲಹೆ ಮೇರೆಗೆ) ನಿಗದಿತ ಪ್ರಮಾಣದಲ್ಲಿ ಎಳನೀರು ಸೇವಿಸಬಹುದು. ಇದರಿಂದ ರಕ್ತಸಂಚಾರ ಉತ್ತಮಗೊಳ್ಳುವುದರಿಂದ ನಿಧಾನಕ್ಕೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.

ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ

ಕೆಲವೊಮ್ಮೆ ರಕ್ತದಲ್ಲಿರುವ ಎಲೆಕ್ಟ್ರೋಲೈಟ್ ಗಳೆಂಬ ಕಣಗಳು ರಕ್ತದ ಒತ್ತಡವನ್ನು ಹೆಚ್ಚಿಸುತ್ತವೆ. ಈ ಕಣಗಳ ತೀವ್ರತೆಯನ್ನು ಎಳನೀರು ಕಡಿಮೆಗೊಳಿಸುವುದರಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ.

ಚರ್ಮಕ್ಕೆ ತೇವಾಂಶ ನೀಡುತ್ತದೆ

ಚರ್ಮಕ್ಕೆ ತೇವಾಂಶ ನೀಡುತ್ತದೆ

ಬಿಸಿಲಿನಲ್ಲಿ ಚರ್ಮ ಹೆಚ್ಚಿನ ನೀರನ್ನು ಕಳೆದುಕೊಳ್ಳುವುದರಿಂದ ಒಣಗುತ್ತದೆ. ಚಳಿಗಾಲದಲ್ಲಿ ಗಾಳಿಯಲ್ಲಿಯೇ ತೇವಾಂಶ ಇಲ್ಲದಿರುವ ಕಾರಣ ಚರ್ಮ ಒಣಗುತ್ತದೆ. ಈ ಎರಡೂ ಪರಿಸ್ಥಿತಿಯಲ್ಲಿ ಎಳನೀರು ಚರ್ಮಕ್ಕೆ ಉತ್ತಮ ಆರೈಕೆ ನೀಡುತ್ತದೆ. ಎಳನೀರನ್ನು ಹತ್ತಿಯಲ್ಲಿ ಮುಳುಗಿಸಿ ಚರ್ಮಕ್ಕೆ ಹಚ್ಚುವುದರಿಂದ ಚರ್ಮ ಕಳೆದುಕೊಂಡಿದ್ದ ತೇವಾಂಶವನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತದೆ. ಎಳನೀರನ್ನು ಸುರಕ್ಷಿತವಾಗಿ ಇಡಿಯ ದೇಹಕ್ಕೆ ಹಚ್ಚಬಹುದು.

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ

ಚರ್ಮದ ಆರೈಕೆಗೆ ಒಳಗಿನಿಂದ ಹೆಚ್ಚಿನ ನೀರಿನ ಪೂರೈಕೆ ಆಗಬೇಕು. ಎಳನೀರಿನ ಸೇವನೆಯಿಂದ ಚರ್ಮಕ್ಕೆ ಅವಶ್ಯವಾದ ನೀರು ಲಭ್ಯವಾಗುವ ಮೂಲಕ ಚರ್ಮ ಒಳಗಿನಿಂದ ಪೋಷಣೆ ಪಡೆಯುತ್ತದೆ. ಪರಿಣಾಮವಾಗಿ ಚರ್ಮ ಕಾಂತಿಯುಕ್ತವಾಗುತ್ತದೆ. ಒಣಗಿದ ಮತ್ತು ಬಿಳಿಚಿದ ಚರ್ಮವೂ ನಿಧಾನಕ್ಕೆ ಸೆಳೆತ ಪಡೆದು ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಬಿಸಿಲಿಗೆ ಚರ್ಮ ಬಣ್ಣಗೆಡುವುದನ್ನು ತಪ್ಪಿಸುತ್ತದೆ

ಬಿಸಿಲಿಗೆ ಚರ್ಮ ಬಣ್ಣಗೆಡುವುದನ್ನು ತಪ್ಪಿಸುತ್ತದೆ

ಬಿಸಿಲಿಗೆ ಒಡ್ಡಿದ್ದ ಚರ್ಮದ ಭಾಗ ಹೆಚ್ಚು ಗಾಢವಾಗಿರಲು ಚರ್ಮದ ಮೆಲನಿನ್ ಕಾರಣವಾಗಿದೆ. ಎಳನೀರನ್ನು ಕುಡಿಯುತ್ತಾ ಬರುವುದರಿಂದ ಹಾಗೂ ಬಿಸಿಲಿಗೆ ಒಡ್ಡುವ ಚರ್ಮಕ್ಕೆ ಹಚ್ಚುವುದರಿಂದ ಈ ಬಣ್ಣ ಗಾಢವಾಗುವುದರಿಂದ ತಪ್ಪಿಸಬಹುದು.

ಎಣ್ಣೆ ಚರ್ಮದ ಆರೈಕೆಗೂ ಬಳಸಬಹುದು

ಎಣ್ಣೆ ಚರ್ಮದ ಆರೈಕೆಗೂ ಬಳಸಬಹುದು

ಎಣ್ಣೆಚರ್ಮಕ್ಕೆ ಚರ್ಮದ ಒಳಪದರದಿಂದ ಒಸರುವ ಜಿಡ್ಡು ಕಾರಣವಾಗಿದೆ. ಈ ಜಿಡ್ಡು ಚರ್ಮದ ಮೇಲ್ಮೈ ಮೇಲೆ ತೆಳುವಾಗಿ ಹರಡಿ ಅಂಟಿಕೊಂಡು ಧೂಳನ್ನು ಸೆಳೆಯುತ್ತದೆ. ಈ ಪಸೆಯನ್ನು ಎಳನೀರು ಅದ್ದಿದ ಹತ್ತಿಯಿಂದ ಒರೆಸಿಕೊಂಡರೆ ಎಣ್ಣೆ ನಿವಾರಣೆಯಾಗುತ್ತದೆ. ಜೊತೆಗೇ ಎಳನೀರಿನ ಸೇವನೆಯಿಂದ ಚರ್ಮದಡಿಯಲ್ಲಿ ಎಣ್ಣೆ ಉತ್ಪತ್ತಿಯಾಗುವುದು ಕಡಿಮೆಯಾಗಿ ಚರ್ಮ ಸಹಜ ವರ್ಣವನ್ನು ಪಡೆಯಲು ನೆರವಾಗುತ್ತದೆ.

ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲು ಉದುರುವುದನ್ನು ತಡೆಯುತ್ತದೆ

ಲೆಯ ಕೂದಲನ್ನು ಕೊಂಚ ಎಳನೀರಿನಿಂದ ಮಸಾಜ್ ಮಾಡುವುದರಿಂದ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಪರಿಣಾಮವಾಗಿ ಕೂದಲ ಬುಡ ಹೆಚ್ಚು ಶಕ್ತಿಯುತವಾಗುತ್ತವೆ ಮತ್ತು ಉತ್ತಮ ಗುಣಮಟ್ಟದ ಕೂದಲು ಬೆಳೆಯಲು ನೆರವಾಗುತ್ತದೆ. ಕೂದಲು ಉದುರುವುದು ಕಡಿಮೆಯಾಗಿ ಕೂದಲ ಹೊಳಪು ಹೆಚ್ಚುತ್ತದೆ.

ಕೂದಲ ಹೊಳಪನ್ನು ಹೆಚ್ಚಿಸುತ್ತದೆ

ಕೂದಲ ಹೊಳಪನ್ನು ಹೆಚ್ಚಿಸುತ್ತದೆ

ಎಳನೀರಿನಲ್ಲಿರುವ ವಿವಿಧ ವಿಟಮಿನ್ ಮತ್ತು ವಿಶೇಷವಾಗಿ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ. ಈ ಪೋಷಕಾಂಶಗಳು ಕೂದಲಿಗೆ ಹೊಳಪು ನೀಡುವಲ್ಲಿ ಮತ್ತು ಮೃದುವಾಗಿಸುವಲ್ಲಿ ನೆರವಾಗುತ್ತವೆ.

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಚರ್ಮದ ಕಾಂತಿ ಹೆಚ್ಚಿಸುತ್ತದೆ

ಮಕ್ಕಳಿಗೆ ಎಳನೀರಿನಲ್ಲಿ ಕೊಂಚ ಕೇಸರಿ ಮತ್ತು ಅರಿಶಿನ ಪುಡಿಯನ್ನು ಸೇರಿಸಿ ಕುಡಿಯಲು ನೀಡುವುದರಿಂದ ಚರ್ಮದಲ್ಲಿ ಕಾಂತಿ ಪಡೆಯಬಹುದು. ಈ ವಿಧಾನವನ್ನು ವೈದ್ಯರೂ ಶಿಫಾರಸ್ಸು ಮಾಡುತ್ತಾರೆ.

ಮಲಬದ್ಧತೆ

ಮಲಬದ್ಧತೆ

ಮಲಬದ್ಧತೆಯಂತಹ ತೊಂದರೆಗಳಿಗೂ ಪರಿಣಾಮಕಾರಿ ಪ್ರಭಾವವನ್ನು ಎಳನೀರು ಬೀರುತ್ತದೆ. ನಿಮ್ಮ ದೈನಂದಿನ ವ್ಯಾಯಾಮ ಚಟುವಟಿಕೆಯ ನಂತರ ಎಳನೀರನ್ನು ಸೇವಿಸುವುದು ದೇಹಕ್ಕೆ ಧನಾತ್ಮಕ ಶಕ್ತಿಯನ್ನು ಒದಗಿಸುತ್ತದೆ.

ಒತ್ತಡವನ್ನು ನಿವಾರಿಸುತ್ತದೆ

ಒತ್ತಡವನ್ನು ನಿವಾರಿಸುತ್ತದೆ

ಎಳನೀರಿನಲ್ಲಿ ವಿಟಮಿನ್ ಬಿ ಅಂಶವನ್ನು ಒಳಗೊಂಡಿರುವುದರಿಂದ ಇದು ಒತ್ತಡವನ್ನು ನಿವಾರಿಸಿ ನಿಮಗೆ ಸಮಾಧಾನವನ್ನು ತರಿಸುತ್ತದೆ.

ಮೂತ್ರದ ಸಮಸ್ಯೆಗಳು

ಮೂತ್ರದ ಸಮಸ್ಯೆಗಳು

ನಿಯಮಿತವಾಗಿ ಎಳನೀರನ್ನು ಸೇವಿಸುವುದು ಉರಿಮೂತ್ರದಂತಹ ಅಪಾಯಕಾರಿ ಅಂಶವನ್ನು ದೂರಮಾಡಿ ಸ್ವಾಸ್ಥ್ಯವನ್ನು ಒದಗಿಸುತ್ತದೆ.

ತೂಕ ಇಳಿಕೆ

ತೂಕ ಇಳಿಕೆ

ನಿಮ್ಮ ದೇಹದ ಹೆಚ್ಚುವರಿ ತೂಕವನ್ನು ಕಡಿಮೆ ಮಾಡಿ ದೇಹವನ್ನು ಸುಸ್ಥಿತಿಯಲ್ಲಿಡುತ್ತದೆ ಎಂಬ ಅಂಶ ಈಗ ಕೆಲವು ಸಂಶೋಧನೆಗಳಿಂದ ಸಾಬೀತಾಗಿದೆ. ಇದರ ಕುರಿತು ಸಂಶೋಧನೆಗಳನ್ನು ಕೂಡ ನಡೆಸಿದ್ದು ಇದು ಧನಾತ್ಮಕ ಫಲಿತಾಂಶವನ್ನು ನೀಡಿದೆ.

ಪೊಟ್ಯಾಷಿಯಂ ಮತ್ತು ಸೋಡಿಯಂ ಮಿಶ್ರಣ

ಪೊಟ್ಯಾಷಿಯಂ ಮತ್ತು ಸೋಡಿಯಂ ಮಿಶ್ರಣ

ಎಳನೀರಿನಲ್ಲಿ ಎಲೆಕ್ಟ್ರೋಲಟ್ ಪೊಟ್ಯಾಷಿಯಂನ ಉತ್ತಮ ಪ್ರಮಾಣವನ್ನು ಹೊಂದಿದೆ. ಎಳನೀರಿನ 100 ಮಿಲಿ ನೀರು 250 ಮಿಗ್ರಾಂ ಪೊಟ್ಯಾಷಿಯಂ ಮತ್ತು 105 ಮಿಗ್ರಾಂ ಸೋಡಿಯಂ ಅಂಶಗಳನ್ನು ಹೊಂದಿದೆ. ಇಂತಹ ಅಂಶಗಳು ಅತಿಸಾರದಂತಹ ಸಮಸ್ಯೆಯನ್ನು ತಡೆಯುತ್ತವೆ.

English summary

Benefits Of Coconut Water For Skin, Hair And Health

The temperature is increasing day by day, and now is the perfect time to sip our favourite summer drink, coconut water! Coconut water is a very popular drink and is consumed by people of all ages across the world.
X
Desktop Bottom Promotion