Latest Updates
-
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ!
ಬೆಳ್ಳುಳ್ಳಿಯಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳೇನು?
ಧಾವಂತದ ಬದುಕಿನ ಫಲಶೃತಿಯಾಗಿ ಅನಿಯಮಿತ ಆಹಾರ ಸೇವನೆ, ಊಟ ತಪ್ಪಿಸುವುದು, ನಿಗದಿತ ಕಾಲ ಮಿತಿಯ ಒತ್ತಡ, ನಿದ್ರಾಹೀನತೆ ಮುಂತಾದವುಗಳ ಭಾರ ಯಾರ ಮೇಲೆ ಬೀಳುತ್ತದೆ ಎಂದು ಎಂದಾದರೂ ಆಲೋಚಿಸಿರುವಿರಾ...? ನಿಸ್ಸಂದೇಹವಾಗಿ ಅದನ್ನು ಹೊರುವುದು ನಿಮ್ಮ ಹೃದಯ ಮತ್ತು ಜೀರ್ಣಾಂಗ ವ್ಯವಸ್ಥೆ.
ಆದರೆ ನಿಸರ್ಗದಲ್ಲಿ ನಮ್ಮ ಜೀವನ ಶೈಲಿ ಹಾಗೂ ಆರೋಗ್ಯ ಸಂರಕ್ಷಣೆಗಳ ನಡುವೆ ಸೇತುಬಂಧ ಒದಗಿಸಬಲ್ಲ ಹಲವಾರು ಪರಿಹಾರೋಪಾಯಗಳಿವೆ. ಆ ಪೈಕಿ ಅತ್ಯಂತ ವಿಶ್ವಾಸಾರ್ಹ ಹಾಗೂ ಅನಾದಿಕಾಲದಿಂದಿರುವುದು ಬೆಳ್ಳುಳ್ಳಿ.
ತನ್ನ ಔಷಧೀಯ ಗುಣಗಳಿಂದ ಅಮೂಲ್ಯವೆನಿಸಿರುವ ಬೆಳ್ಳುಳ್ಳಿ ಸಹಜವಾಗಿಯೇ ರಕ್ತದ ಒತ್ತಡ ತಗ್ಗಿಸಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯ ಕಾಪಾಡುತ್ತದೆ. ಸಾಕಷ್ಟು ಜನರು ಬೆಳ್ಳುಳ್ಳಿಯಿಂದ ದೂರವಿರುತ್ತಾರೆ, ಆದರೆ ಆರೋಗ್ಯದ ದೃಷ್ಟಿಯಿಂದ ಹಾಗೆ ಮಾಡುವುದು ಸರಿಯಲ್ಲ.
ಇದರಲ್ಲಿ ಸಾಕಷ್ಟು ಔಷಧಿಯ ಗುಣಗಳಿವೆ. ಬೆಳ್ಳುಳ್ಳಿ ಸೇವನೆಯಿಂದ ಮುಖದ ಮೇಲಿರುವ ಮೊಡವೆ, ಅದರ ಕಲೆಗಳು ದೂರವಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹತ್ತಿರ ಬರದು. ಅಸಿಡಿಟಿಗಳಂತಹ ಸಮಸ್ಯೆಗಳಿಗೆ ರಾಮಬಾಣ.
ಆದರೆ ತುಂಬಾ ಬೆವರುವ ಗುಣ ಉಳ್ಳವರು ಕಡಿಮೆ ಪ್ರಮಾಣದ ಬೆಳ್ಳುಳ್ಳಿ ಬಳಸಿದರೆ ಒಳ್ಳೆಯದು. ಅತಿಯಾದ ಸೇವನೆಯಿಂದ ಬೆವರು ದುರ್ಗ೦ಧಮಯವಾಗುತ್ತದೆ. ಬೆಳ್ಳುಳ್ಳಿಯ ವಿವರಣೆ ಅದರ ಔಷಧೀಯ ಗುಣಗಳ ಬಗ್ಗೆ ಹೇಳದಿದ್ದರೆ ಅಪೂರ್ಣವಾಗುತ್ತದೆ. ಈ ಪವಾಡ ಸದೃಶ ಗುಣವುಳ್ಳ ಬೆಳ್ಳುಳ್ಳಿಯನ್ನು ಬಹಳ ಹಿಂದಿನಿಂದಲೂ ಹಲವು ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಗುಣಪಡಿಸಲು ಬಳಸುತ್ತಿದ್ದಾರೆ.

ಬೆನ್ನು ನೋವಿಗೆ
ಬೆನ್ನು ನೋವಿಗೆ ಬೆಳ್ಳುಳ್ಳಿ ಉತ್ತಮ ಮನೆ ಔಷಧಿ. ಬೆಳ್ಳುಳ್ಳಿ ಎಣ್ಣೆಯಿಂದ ಬೆನ್ನು ನೋವಿರುವಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುವುದು.

ಅಸ್ತಮಾವನ್ನು ನಿಯಂತ್ರಿಸಲು ಸಹಾಯಕ
ಬೆಳ್ಳುಳ್ಳಿಯ ಹತ್ತು ಎಸಳುಗಳನ್ನು ಜಜ್ಜಿ ಒಂದು ಕಪ್ ಹಾಲಿನಲ್ಲಿ ಕುದಿಸಿ ನಿತ್ಯ ಬೆಳಿಗ್ಗೆ ಕುಡಿಯುವುದರಿಂದ ಆರಂಭಿಕ ಹಂತದ ಅಸ್ತಮಾವನ್ನು ನಿಯಂತ್ರಿಸಬಹುದು.

ಬಾಣಂತಿಯರಿಗೆ
ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಎ.ಬಿ ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳಿವೆ. ಮನೆ ಮದ್ದಿನಲ್ಲಿ ಬೆಳ್ಳುಳ್ಳಿಯ ಪಾತ್ರ ಹಿರಿದು. ಹಾಲಿನಲ್ಲಿ ಬೆಳ್ಳುಳ್ಳಿ ಹಾಕಿ ಕುದಿಸಿ ಬಾಣಂತಿಯರಿಗೆ ಕೊಟ್ಟರೆ ಮೊಲೆ ಹಾಲು ಹೆಚ್ಚಾಗುವುದು.

ಹಲ್ಲುನೋವು
ಬೆಳ್ಳುಳ್ಳಿಯಲ್ಲಿರುವ ಆ್ಯಂಟಿ ಬ್ಯಾಕ್ಟಿರಿಯಲ್ ಗುಣಗಳಿಂದಾಗಿ ಹಲ್ಲುನೋವಿಗೆ ಇದು ಪರಿಣಾಮಕಾರಿ. ಬೆಳ್ಳುಳ್ಳಿಯ ಎಸಳನ್ನು ಜಜ್ಜಿ ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುತ್ತದೆ. ಆದರೆ ಇದರಿಂದ ಒಸಡಿನಲ್ಲಿ ಉರಿಯುಂಟಾಗಬಹುದು.

ಶ್ವಾಸಕೋಶದ ತೊಂದರೆಗಳನ್ನು ನಿವಾರಿಸುತ್ತದೆ
ಬೆಳ್ಳುಳ್ಳಿಯನ್ನು ನಿತ್ಯವೂ ಬಳಸುವುದರಿಂದ ಹಲವು ಶೀತದ ಸಮಸ್ಯೆಗಳನ್ನು ಕಡಿಮೆಗೊಳಿಸಬಹುದು. ಇದರ ಆ್ಯಂಟಿಬ್ಯಾಕ್ಟಿರಿಯಲ್ ಗುಣವು ಗಂಟಲುರಿ ತಡೆಗಟ್ಟುತ್ತದೆ. ಇದರ ಉಪಯೋಗದಿಂದ ಶ್ವಾಸನಾಳಗಳ ತೊಂದರೆಗಳಾದ ಅಸ್ತಮ, ಉಸಿರಾಟದ ತೊಂದರೆ ಇತ್ಯಾದಿಗಳನ್ನು ನಿವಾರಿಸುತ್ತದೆ. ದೀರ್ಘಕಾಲದ ಕೆಮ್ಮನ್ನು ಇದು ನಿವಾರಿಸುತ್ತದೆ.

ಅಲರ್ಜಿಗಳನ್ನು ತಡೆಗಟ್ಟುತ್ತದೆ
ಬೆಳ್ಳುಳ್ಳಿಯು ಆ್ಯಂಟಿ-ಇನ್ಫ್ಲಾಮೆಂಟೊರಿ ಗುಣಕ್ಕಾಗಿ ಪ್ರಸಿದ್ಧವಾಗಿದೆ. ಇದು ದೇಹಕ್ಕೆ ಅಲರ್ಜಿಗಳ ವಿರುದ್ಧ ಹೋರಾಡುವ ಶಕ್ತಿ ನೀಡುತ್ತದೆ. ಬೆಳ್ಳುಳ್ಳಿಯಲ್ಲಿನ ಆ್ಯಂಟಿ-ಆರ್ಥೆಟಿಕ್ ಗುಣಕ್ಕೆ ಕಾರಣ ಡೈಲೈಲ್ ಸಲ್ಫೈಡ್ ಮತ್ತು ಥೈಕ್ರೆಮೊನೊನೆ. ಹಸಿ ಬೆಳ್ಳುಳ್ಳಿಯ ರಸವನ್ನು ಉರಿ ಮತ್ತು ಕೀಟದ ಕಡಿತಗಳಿಂದುಂಟಾಗುವ ನವೆಯನ್ನು ತಕ್ಷಣ ನಿಲ್ಲಿಸಲು ಬಳಸಬಹುದು.

ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
ಬೆಳ್ಳುಳ್ಳಿಯು ಹೃದಯವನ್ನು ಹೃದಯ ಸಂಬಂಧಿ ತೊಂದರೆಗಳಾದ ಹೃದಯಾಘಾತ ಮತ್ತು ಅಥೆರೊಸ್ಕಲೆರೊಸ್ (atherosclerosis)ನಿಂದ ರಕ್ಷಿಸುತ್ತದೆ. ಬೆಳ್ಳುಳ್ಳಿಯ ಈ ಹೃದಯವನ್ನು ಕಾಪಾಡುವ ಗುಣಗಳಿಗೆ ಹಲವು ಕಾರಣಗಳಿವೆ. ವಯಸ್ಸಿನ ಕಾರಣದಿಂದಾಗಿ ಅಪಧಮನಿಗಳಿಗೆ ಹಿಗ್ಗುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯು ಇದನ್ನು ಕಡಿಮೆಗೊಳಿಸುತ್ತದೆ ಮತ್ತು ಹೃದಯಕ್ಕೆ ಆಕ್ಸಿಜನ್ ಕಣಗಳಿಂದುಂಟಾಗುವ ತೊಂದರೆಯನ್ನು ತಪ್ಪಿಸುತ್ತದೆ.

ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ
ಬೆಳ್ಳುಳ್ಳಿಯು ಅಲ್ಲಿಸಿನ್ ಎನ್ನುವ ಚಟುವಟಿಕೆಯನ್ನು ನಿಯಂತ್ರಿಸುವ ಮೂಲಕ ರಕ್ತದೊತ್ತಡವನ್ನು ಕಡಿಮೆಮಾಡುತ್ತದೆ. ಬೆಳ್ಳುಳ್ಳಿಯಲ್ಲಿರುವ ಪಾಲೊಸಲ್ಫೈಡ್ಸ್ ಹೈಡ್ರೋಜಿನ್ ಸಲ್ಫೈಡ್ ಎನ್ನುವ ಅನಿಲವಾಗಿ ಕೆಂಪು ರಕ್ತ ಕಣಗಳಿಂದ ಪರಿವರ್ತಿತಗೊಳ್ಳುತ್ತದೆ. ಹೈಡ್ರೋಜಿನ್ ಸಲ್ಫೈಡ್ ರಕ್ತನಾಳಗಳನ್ನು ಸಡಿಲಗೊಳಿಸುವ ಮೂಲಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಸಕ್ಕರೆ ಕಾಯಿಲೆ
ಬೆಳ್ಳುಳ್ಳಿಯು ಇನ್ಸುಲಿನ್ ಬಿಡುಗಡೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ.



Click it and Unblock the Notifications