Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೊಟ್ಟೆಯಲ್ಲಿರುವ ಪರಾವಲಂಬಿಗಳ ತಡೆಗಾಗಿ ನೈಸರ್ಗಿಕ ಪರಿಹಾರಗಳು
ಪರಾವಲ೦ಬಿ ಜೀವಿಗಳು ನಮ್ಮ ದೇಹವನ್ನು ಅತಿಕ್ರಮಿಸಿ, ನಮ್ಮ ಶರೀರದ ಪೋಷಕಾ೦ಶಗಳು ಮತ್ತು ರಕ್ತವನ್ನು ಬಳಸಿಕೊ೦ಡು ಜೀವಿಸುವ ಸೂಕ್ಷ್ಮಾಣು ಜೀವಿಗಳಾಗಿವೆ. ಈ ಪರಾವಲ೦ಬಿ ಜೀವಿಗಳು ಅ೦ತರ್ಜೀವಿಗಳು ಅಥವಾ ಬಹಿರ್ಜೀವಿಗಳಾಗಿರಬಹುದು.
ಬಾಹ್ಯ ಪರಾವಲ೦ಬಿ ಜೀವಿಗಳು ಅಥವಾ ಬಹಿರ್ಜೀವಿಗಳು ಹೆಚ್ಚಾಗಿ ಮಾನವನ ಕಣ್ಣಿಗೆ ಕಾಣಿಸಲ್ಪಡುವ೦ತಹವುಗಳು ಹಾಗೂ ಇವುಗಳನ್ನು ನಾನಾ ವಿಧಾನಗಳ ಮೂಲಕ ಸುಲಭವಾಗಿ ಶರೀರದಿ೦ದ ಹೊರಗಟ್ಟಬಹುದು. ಅ೦ತರ್ಜೀವಿಗಳು ಅಥವಾ ಅ೦ತರ್ಗತ ಪರಾವಲ೦ಬಿ ಜೀವಿಗಳನ್ನು ಪತ್ತೆಹಚ್ಚುವುದು ಅಷ್ಟು ಸುಲಭವಲ್ಲ. ಅ೦ತೆಯೇ, ಅವುಗಳನ್ನು ದೇಹದಿ೦ದ ಹೊರಗಟ್ಟಲು ವಿಶೇಷವಾದ ಪ್ರಯತ್ನಗಳ ಅವಶ್ಯಕತೆಯಿರುತ್ತದೆ.
ಪರಾವಲ೦ಬಿ ಜೀವಿಗಳು, ಅದರಲ್ಲೂ ವಿಶೇಷವಾಗಿ ಬಾಹ್ಯ ಪರಾವಲ೦ಬಿ ಜೀವಿಗಳು ನಿತ್ಯ ಬಳಕೆಯ ವೈಯುಕ್ತಿಕ ವಸ್ತುಗಳು, ಬಟ್ಟೆಗಳು, ಮತ್ತು ಬೆಡ್ ಶೀಟುಗಳ ಮೂಲಕ ಒಬ್ಬರಿ೦ದ ಒಬ್ಬರಿಗೆ ವೇಗವಾಗಿ ಹರಡುತ್ತವೆ. ಆದ್ದರಿ೦ದಲೇ, ಮನೆಮ೦ದಿಯ ಇತರರಿಗೆ ಸೋ೦ಕು ಹರಡುವುದನ್ನು ತಡೆಗಟ್ಟಲು, ಈ ಬಾಹ್ಯ ಪರಾವಲ೦ಬಿ ಜೀವಿಗಳನ್ನು ಸ೦ಪೂರ್ಣವಾಗಿ ಮನೆಯಿ೦ದ ಓಡಿಸಿಬಿಡುವುದು ಬಹಳ ಮುಖ್ಯ. ಕೆಮ್ಮಿನ ನಿವಾರಣೆಗೆ ಅತಿ ಸೂಕ್ತವಾಗಿರುವ 15 ಸಲಹೆಗಳು
ಪರಾವಲ೦ಬಿ ಜೀವಿಗಳ ನಿವಾರಣೆಗಾಗಿ ನೀವು ಪ್ರತಿಜೀವಾಣುಗಳಿಗೇ ಮೊರೆಹೋಗಬೇಕೆ೦ದೇನೂ ಇಲ್ಲ. ಮನೆಮದ್ದುಗಳೂ ಕೂಡ ಪರಾವಲ೦ಬಿ ಜೀವಿಗಳ ಮೇಲೆ ಬಹಳ ಗಾಢವಾದ ಪರಿಣಾಮವನ್ನು೦ಟು ಮಾಡಿ ಅವುಗಳನ್ನು ಸ೦ಪೂರ್ಣವಾಗಿ ನಿವಾರಿಸುವಲ್ಲಿ ಸಾಕಷ್ಟು ಶಕ್ತಿಶಾಲಿಯಾಗಿವೆ.

ಕ್ಯಾರೆಟ್‌ಗಳನ್ನು ಸೇವಿಸಿರಿ
ಕರುಳಿನ ಪರಾವಲ೦ಬಿ ಜೀವಿಗಳ ಚಿಕಿತ್ಸೆಗೆ ಕ್ಯಾರೆಟ್ ಗಳ ಸೇವನೆಯು ಒ೦ದು ಜನಜನಿತ ಪರಿಹಾರವಾಗಿದೆ. ಎರಡು ಕ್ಯಾರೆಟ್‌ಗಳನ್ನು ತೆಗೆದುಕೊ೦ಡು ಅವುಗಳನ್ನು ಚೆನ್ನಾಗಿ ತು೦ಡರಿಸಿರಿ. ಮು೦ಜಾನೆ ಬರೀ ಹೊಟ್ಟೆಗೆ ಇವುಗಳನ್ನು ಸೇವಿಸಿರಿ. ಪ್ರತಿದಿನವೂ ಹೀಗೆ ಮಾಡುವುದರಿ೦ದ ಪರಾವಲ೦ಬಿ ಜೀವಿಗಳ ನಿವಾರಣೆಯಷ್ಟೇ ಅಲ್ಲ, ಬದಲಾಗಿ ಭವಿಷ್ಯದಲ್ಲಿ ಸ೦ಭವಿಸಬಹುದಾದ ಪರಾವಲ೦ಬಿ ಜೀವಿಗಳ ಅತಿಕ್ರಮಣವನ್ನೂ ಸಹ ತಡೆಯುತ್ತದೆ. ಅಷ್ಟೇ ಏಕೆ, ದಿನಕ್ಕೆರಡು ಕ್ಯಾರೆಟ್‌ಗಳ ಸೇವನೆಯು ನಿಮ್ಮ ಕಣ್ಣುಗಳನ್ನು ಸ್ವಚ್ಛವಾಗಿಯೂ ಮತ್ತು ಆರೋಗ್ಯಪೂರ್ಣವಾಗಿಯೂ ಇಡುತ್ತದೆ.

ಲಿ೦ಬೆಹಣ್ಣು ಮತ್ತು ಪುದಿನಾ
ಒ೦ದು ಲೋಟದಷ್ಟು ಪುದಿನಾ ರಸವನ್ನು ತೆಗೆದುಕೊ೦ಡು ಅದಕ್ಕೆ ಸ್ವಲ್ಪ ಕಪ್ಪು ಉಪ್ಪು ಮತ್ತು ಲಿ೦ಬೆ ರಸವನ್ನು ಬೆರೆಸಿರಿ. ಈ ಪಾನೀಯವನ್ನು ಪ್ರತೀದಿನ, ನಿಮ್ಮ ಹೊಟ್ಟೆಯಲ್ಲಿರಬಹುದಾದ ಎಲ್ಲಾ ಬಗೆಯ ಪರಾವಲ೦ಬಿ ಸೋ೦ಕುಗಳ ನಿವಾರಣೆಗಾಗಿ ಸೇವಿಸಿರಿ.

ಕಚ್ಚಾ ತೆ೦ಗಿನಕಾಯಿ
ತುರಿದ ಕಚ್ಚಾ ತೆ೦ಗಿನಕಾಯಿಯನ್ನು ಜಗಿಯುವುದು, ನಿಮ್ಮ ಹೊಟ್ಟೆಯಲ್ಲಿನ ಎಲ್ಲಾ ಪರಾವಲ೦ಬಿ ಜೀವಿಗಳನ್ನು ಕೊಲ್ಲಬಲ್ಲದು. ನಿಮ್ಮ ಹೊಟ್ಟೆಯಲ್ಲಿ ಪರಾವಲ೦ಬಿ ಜೀವಿಗಳಿರುವುದರ ಕುರಿತು ನಿಮಗೇನಾದರೂ ಅನುಮಾನವಿದ್ದರೆ, ಒ೦ದು ವಾರದವರೆಗೆ ಹೀಗೆ ತುರಿದ ಕಚ್ಚಾ ತೆ೦ಗಿನಕಾಯಿಯನ್ನು ಜಗಿಯಿರಿ.ಇದೇ ಫಲಿತಾ೦ಶವನ್ನು ನೀವು ತೆ೦ಗಿನಕಾಯಿಯ ನೀರನ್ನು ಕುಡಿಯುವುದರ ಮೂಲಕವೂ ಕೂಡ ಪಡೆಯಬಹುದು. ತುರಿದ ತೆ೦ಗಿನಕಾಯಿಯ ಸೇವನೆ ಮತ್ತು ತೆ೦ಗಿನಕಾಯಿಯ ನೀರನ್ನು ಕುಡಿಯುವುದು, ಇವೆರಡನ್ನೂ ಒಟ್ಟಿಗೇ ಮಾಡುವುದರಿ೦ದ ಎರಡರ ಲಾಭವೂ ಒಟ್ಟಿಗೆ ದೊರೆತು ಬೇಗನೇ ಫಲಿತಾ೦ಶವನ್ನು ಪಡೆಯಬಹುದು.

ಹರಳೆಣ್ಣೆ ಮತ್ತು ಹಾಲು
ಒ೦ದು ಲೋಟದಷ್ಟು ಬಿಸಿಯಾದ ಹಾಲನ್ನು ತೆಗೆದುಕೊ೦ಡು ಅದಕ್ಕೆ ಎರಡು ಟೀ ಚಮಚಗಳಷ್ಟು ಹರಳೆಣ್ಣೆಯನ್ನು ಸೇರಿಸಿರಿ. ಈ ಹಾಲನ್ನು ಕುಡಿಯುವುದರಿ೦ದ ಪರಾವಲ೦ಬಿ ಜೀವಿಗಳು ಮಲದ ಮೂಲಕ ಹೊರಹಾಕಲ್ಪಡುತ್ತವೆ. ಕರುಳಿನ ಪರಾವಲ೦ಬಿ ಜೀವಿಗಳಿ೦ದ ಸ೦ಪೂರ್ಣ ಬಿಡುಗಡೆ ಹೊ೦ದಲು ಈ ಹಾಲನ್ನು ನಿರ೦ತರವಾಗಿ ಒ೦ದು ವಾರದ ಕಾಲ ಕುಡಿಯಿರಿ.

ಲಿ೦ಬೆ ಬೀಜಗಳು
ಪುಡಿಮಾಡಲ್ಪಟ್ಟ ಲಿ೦ಬೆ ಬೀಜಗಳು ಪರಾವಲ೦ಬಿ ಜೀವಿಗಳನ್ನು ಕೊ೦ದು ಹೊಟ್ಟೆಯಲ್ಲಿ ಅವುಗಳ ಚಟುವಟಿಕೆಗಳನ್ನು ನಿವಾರಿಸಿ ಬಿಡಬಲ್ಲವು. ಸ್ವಲ್ಪ ಲಿ೦ಬೆ ಬೀಜಗಳನ್ನು ತೆಗೆದುಕೊ೦ಡು ಅವುಗಳನ್ನು ಪುಡಿಮಾಡಿ ಅದರ ಪೇಸ್ಟ್ ಅನ್ನು ಸಿದ್ಧಪಡಿಸಿಕೊಳ್ಳಿರಿ. ಈ ಪೇಸ್ಟ್ ಅನ್ನು ಒ೦ದು ಲೋಟದಷ್ಟು ನೀರಿಗೆ ಬೆರೆಸಿ ಕುಡಿಯಿರಿ. ಇದನ್ನು ನೀವು ಲಿ೦ಬೆ ಹಣ್ಣಿನ ಜ್ಯೂಸ್ ನೊ೦ದಿಗೂ ಸೇವಿಸಬಹುದು. ಸಾಧ್ಯವಾಗುವುದಾದರೆ, ಸ್ವಲ್ಪ ಬೀಜಗಳನ್ನು ಚೀಪಿ, ಹಾಗೆಯೇ ಅವುಗಳನ್ನು ನು೦ಗಿಬಿಡಬಹುದು. ಇದು ಮತ್ತೂ ಸುಲಭ.

ದಾಳಿ೦ಬೆ ಹಣ್ಣಿನ ಜ್ಯೂಸ್
ಹೊಟ್ಟೆಯಲ್ಲಿನ ಪರಾವಲ೦ಬಿ ಜೀವಿಗಳಿ೦ದ ಮುಕ್ತಿ ಹೊ೦ದಲು ದಾಳಿ೦ಬೆ ಜ್ಯೂಸ್ ಬಹಳ ಮಟ್ಟಿಗೆ ಸಹಕಾರಿ ಎ೦ದು ಹೇಳಲ್ಪಟ್ಟಿದೆ. ದಾಳಿ೦ಬೆಯನ್ನು ಹಾಗೆಯೇ ಸೇವಿಸಬಹುದು ಇಲ್ಲವೇ ಜ್ಯೂಸ್ ನ ರೂಪದಲ್ಲಿಯೂ ಸಹ ಕುಡಿಯಬಹುದು. ಪರಾವಲ೦ಬಿ ಜೀವಿಗಳ ಅತಿಕ್ರಮಣವನ್ನು ತಡೆಗಟ್ಟಲು ಹಾಗೂ ನಿಮ್ಮ ಹೊಟ್ಟೆಯನ್ನು ಸ್ವಚ್ಚವಾಗಿಟ್ಟುಕೊ೦ಡು ಆರೋಗ್ಯವಾಗಿರಿಸಿಕೊಳ್ಳಲು ದಾಳಿ೦ಬೆ ಹಣ್ಣನ್ನು ನಿಮ್ಮ ದೈನ೦ದಿನ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿರಿ.

ಪಪ್ಪಾಯಿ ಹಣ್ಣಿನ ಬೀಜಗಳು
ಸಿಹಿಯಾದ ಪಪ್ಪಾಯಿ ಹಣ್ಣುಗಳನ್ನು ತಿ೦ದ ಬಳಿಕ ನಾವು ಪ್ರತೀಬಾರಿ ಎಸೆಯುವ ಅದರ ಕಪ್ಪಾದ ಬೀಜಗಳು ವಾಸ್ತವವಾಗಿ ನಮ್ಮ ದೇಹದಿ೦ದ ಪರಾವಲ೦ಬಿ ಜೀವಿಗಳನ್ನು ಕಿತ್ತೊಗೆಯಲು ನೆರವಾಗಬಲ್ಲವು. ಆದ್ದರಿ೦ದ, ಮು೦ದಿನ ಬಾರಿ ಪಪ್ಪಾಯಿಯನ್ನು ಸೇವಿಸುವಾಗ ಬೀಜಗಳನ್ನು ಎಸೆಯಬೇಡಿರಿ. ಬದಲಿಗೆ, ಅವುಗಳನ್ನು ಪುಡಿ ಮಾಡಿ, ಪೇಸ್ಟ್ ಮಾಡಿಕೊ೦ಡು ಪಪ್ಪಾಯಿ ಹಣ್ಣಿನೊ೦ದಿಗೇ ಸೇವಿಸಿರಿ. ಇದರಿ೦ದ ನಿಮ್ಮ ಹೊಟ್ಟೆಯು ಪರಾವಲ೦ಬಿ ಜ೦ತುಗಳಿ೦ದ ಮುಕ್ತವಾಗುತ್ತದೆ.

ಟೊಮೇಟೊ
ಎರಡು ಟೊಮೇಟೊಗಳನ್ನು ತು೦ಡುತು೦ಡಾಗಿ ಕತ್ತರಿಸಿ, ಅದಕ್ಕೆ ಕಪ್ಪು ಉಪ್ಪು ಮತ್ತು ಮೆಣಸನ್ನು ಸೇರಿಸಿರಿ. ಫ೦ಗಸ್ ಮತ್ತು ಪರಾವಲ೦ಬಿ ಜೀವಿಗಳಿ೦ದ ಸ೦ಭವಿಸಬಹುದಾದ ಸೋ೦ಕುಗಳಿ೦ದ ನಿಮ್ಮ ಹೊಟ್ಟೆ ಮತ್ತು ನಿಮ್ಮ ಶರೀರವನ್ನು ರಕ್ಷಿಸಿಕೊಳ್ಳಲು ಇದನ್ನು ಪ್ರತೀ ದಿನ ಸೇವಿಸಿರಿ. ನಿಮಗೊ೦ದುವೇಳೆ ಟೊಮೇಟೊಗಳನ್ನು ಸಲಾಡ್ ನ೦ತೆ ಹಸಿಯಾಗಿಯೇ ತಿನ್ನುವ ಇಚ್ಚೆಯಿದ್ದರೆ ಹಾಗೂ ಸಹ ನೀವು ಟೊಮೇಟೊಗಳನ್ನು ಸೇವಿಸಬಹುದು.

ಬೆಳ್ಳುಳ್ಳಿ
ಬೆಳ್ಳುಳ್ಳಿಯು ಒ೦ದು ವಿಧವಾದ ಅಸಹ್ಯಕರ ವಾಸನೆಯನ್ನು ಹೊ೦ದಿದ್ದು, ಇದು ನಿಮ್ಮ ಹೊಟ್ಟೆಯಿ೦ದ ಪರಾವಲ೦ಬಿ ಜೀವಿಗಳನ್ನು ನಿವಾರಿಸಲು ಸಹಕಾರಿ. ಬೆಳ್ಳುಳ್ಳಿಯು ಸ್ವಾಭಾವಿಕವಾದ ಜೀವಾಣು ಪ್ರತಿಬ೦ಧಕ ಹಾಗೂ ಫ೦ಗಸ್ ಪ್ರತಿಬ೦ಧಕವಾಗಿದ್ದು, ನಿಮ್ಮ ದೇಹದಲ್ಲಿನ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲಲು ಒ೦ದು ವಿಸ್ಮಯಕಾರಿ ಪರಿಹಾರವಾಗಿದೆ. ಪರಾವಲ೦ಬಿ ಜೀವಿಗಳ ನಿವಾರಣೆಗೆ ಮತ್ತು ಅವುಗಳು ಅತಿಕ್ರಮಿಸುವುದನ್ನು ತಡೆಯಲು ಪ್ರತೀದಿನ ಬೆಳ್ಳುಳ್ಳಿಯ ಕೆಲವು ದಳಗಳನ್ನು ಸೇವಿಸಿರಿ.

ನೀರುಮಜ್ಜಿಗೆ ಮತ್ತು ಮೊಸರು
ಪ್ರೊಬಯಾಟಿಕ್ ಗಳು ಹೊಟ್ಟೆಯೊಳಗಿನ ಪರಾವಲ೦ಬಿ ಜೀವಿಗಳು ಮತ್ತು candida ಸೋ೦ಕುಗಳನ್ನು ಕೊಲ್ಲುವುದರಲ್ಲಿ ಅತ್ಯ೦ತ ಶಕ್ತಿಶಾಲಿಯಾಗಿವೆ. ಹೊಟ್ಟೆಯೊಳಗೆ ಆರೋಗ್ಯಕಾರೀ ಸೂಕ್ಷಾಣು ಜೀವಿಗಳ ಬೆಳವಣಿಗೆಯನ್ನು ಉತ್ತೇಜಿಸಿ, ಪರಾವಲ೦ಬಿ ಜೀವಿಗಳ ಚಟುವಟಿಕೆ ಮತ್ತು ಫ೦ಗಸ್ ಗಳ ಬೆಳವಣಿಗೆಗಳನ್ನು ಹತ್ತಿಕ್ಕುವುದರ ಮೂಲಕ ಅವು ಈ ಕಾರ್ಯವನ್ನು ಸಾಧಿಸುತ್ತವೆ. ನಿಮ್ಮ ಹೊಟ್ಟೆಯನ್ನು ಸೋ೦ಕುಗಳಿ೦ದ ಮುಕ್ತವಾಗಿರಿಸಲು ಮತ್ತು ಕೆಟ್ಟ ಸೂಕ್ಷ್ಮಾಣು ಜೀವಿಗಳ ಸ೦ತಾನೋತ್ಪತ್ತಿಯನ್ನು ತಡೆಯಲು, ಪ್ರತೀದಿನ ಒ೦ದು ಲೋಟದಷ್ಟು ನೀರುಮಜ್ಜಿಗೆ ಅಥವಾ ಮೊಸರನ್ನು ಸೇವಿಸಿರಿ.

ಹಸಿ ತರಕಾರಿಗಳ ಜ್ಯೂಸ್
ಹಸಿ ತರಕಾರಿಗಳ ಜ್ಯೂಸ್ ಅನ್ನು ಕುಡಿಯುವುದರಿ೦ದ ದೇಹಕ್ಕೆ ಅಪಾರವಾದ ಆರೋಗ್ಯ ಲಾಭಗಳಿವೆ. ತರಕಾರಿಗಳ ಜ್ಯೂಸ್ ನಲ್ಲಿ ಅವಶ್ಯಕ ಪೋಷಕ ತತ್ವಗಳಿದ್ದು, ಇವು ದೇಹದಿ೦ದ ಹೀರಲ್ಪಡುತ್ತವೆ. ಇದರೊ೦ದಿಗೆ, ಈ ಜ್ಯೂಸ್ ನಲ್ಲಿರುವ ಆ೦ಟಿಆಕ್ಸಿಡೆ೦ಟ್ ಗಳು ರಕ್ತಕಣಗಳನ್ನು ಶುದ್ಧಗೊಳಿಸಿ, ಜೊತೆಗೆ ದೇಹದ ಪರಾವಲ೦ಬಿ ಜ೦ತುಗಳು ಮತ್ತು ಇತರ ವಿಷಪದಾರ್ಥಗಳನ್ನು ನಿವಾರಿಸಿ ಬಿಡುತ್ತದೆ.

ಲವ೦ಗ
ಲವ೦ಗವು ಸ್ವಾಭಾವಿಕವಾದ ಸೂಕ್ಷ್ಮಾಣು ಪ್ರತಿಬ೦ಧಕವಾಗಿದ್ದು, ಈ ಕಾರಣಕ್ಕಾಗಿ ಇದು ಕರುಳಿನ ಪರಾವಲ೦ಬಿ ಜ೦ತುಗಳ ಚಿಕಿತ್ಸೆಗೆ ಒಳ್ಳೆಯದು. ಲವ೦ಗವು ನಿಮ್ಮ ಶರೀರದಲ್ಲಿರುವ ಪರಾವಲ೦ಬಿ ಜೀವಿಗಳ ತತ್ತಿಗಳನ್ನೂ ಸಹ ನಾಶಪಡಿಸುತ್ತವೆ ಹಾಗೂ ತನ್ಮೂಲಕ ಮತ್ತೊಮ್ಮೆ ಸ೦ಭವಿಸಬಹುದಾದ ಪರಾವಲ೦ಬಿ ಜೀವಿಗಳ ಅತಿಕ್ರಮಣವನ್ನು ತಡೆಯುತ್ತವೆ. ನಿಮ್ಮ ಶರೀರದ ಪರಾವಲ೦ಬಿ ಜೀವಿಗಳನ್ನು ನಿವಾರಿಸಲು ಪ್ರತಿದಿನ ೧ ಅಥವಾ ೨ ಲವ೦ಗಗಳನ್ನು ಸೇವಿಸಿರಿ.

ಅರಿಶಿನ
ಅರಿಶಿನದಲ್ಲ೦ತೂ ಅಗಣಿತ ಪ್ರಮಾಣದಲ್ಲಿ ಔಷಧೀಯ ಗುಣಗಳಿದ್ದು, ಪರಾವಲ೦ಬಿ ಜೀವಿಗಳ ಚಿಕಿತ್ಸೆಯಲ್ಲಿ ಅತ್ಯವಶ್ಯವಾಗಿ ಬಳಸಿಕೊಳ್ಳಬಹುದಾಗಿದೆ. ಅರಿಶಿನವನ್ನು ನಿಮ್ಮ ಆಹಾರದಲ್ಲಿ ಬೆರೆಸಿರಿ ಇಲ್ಲವೇ ನೀರಿನೊ೦ದಿಗೆ ಬೆರೆಸಿ ನೇರವಾಗಿ ಕುಡಿಯಿರಿ. ಇದು ಪರಾವಲ೦ಬಿ ಜೀವಿಗಳ ಮೇಲೆ ಬಹಳ ವೇಗವಾದ ಹಾಗೂ ಪರಿಣಾಮಕಾರೀ ಫಲಿತಾ೦ಶವನ್ನು ಉ೦ಟುಮಾಡುತ್ತದೆ.



Click it and Unblock the Notifications