For Quick Alerts
ALLOW NOTIFICATIONS  
For Daily Alerts

ರೆಡ್ ವೈನ್‌‌ನ ಆರೋಗ್ಯಕಾರಿ ಲಾಭಗಳ ಬಗ್ಗೆ ತಿಳಿದಿದೆಯೇ?

|

ಒಬ್ಬ ವ್ಯಕ್ತಿ ಆಲ್ಕೋಹಾಲ್ ಅನ್ನು ತನ್ನ ಅತ್ಯುತ್ತಮ ಗೆಳೆಯನೆಂದು ಭಾವಿಸಿದ್ದರೆ ಅಂತವರಿಗೆ ಒಂದು ಒಳ್ಳೆಯ ಸುದ್ದಿಯಿದೆ. ಮಿತಿಯಾಗಿ ರೆಡ್ ವೈನ್ ಸೇವಿಸುವುದರಿಂದ ಮೆದುಳಿನ ಆರೋಗ್ಯ ಉತ್ತಮವಾಗಿರುತ್ತದೆ. ರೆಡ್ ವೈನ್ ನ ಆರೋಗ್ಯಕಾರಿ ಲಾಭಗಳ ಬಗ್ಗೆ ಹಲವಾರು ವರದಿಗಳು ಪ್ರಕಟವಾಗಿದೆ.

ಮೆದುಳಿನ ಆರೋಗ್ಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ನೀವು ಹುಟ್ಟುಹಬ್ಬದ ಪಾರ್ಟಿ ಅಥವಾ ಮದುವೆ ವಾರ್ಷಿಕೋತ್ಸವದ ಬಗ್ಗೆ ಚಿಂತಿಸುತ್ತಿದ್ದರೆ ಅತಿಥಿಗಳಿಗೆ ರೆಡ್ ವೈನ್ ನೀಡುವುದನ್ನು ಮರೆಯಬೇಡಿ. ಇತ್ತೀಚೆಗೆ ನಡೆಸಿದ ಅಧ್ಯಯನವೊಂದರ ಪ್ರಕಾರ ರೆಡ್ ವೈನ್ ಕೇವಲ ಹೃದಯದ ಆರೋಗ್ಯವನ್ನು ಸುಧಾರಿಸುವುದಲ್ಲವೆ ನಿಮ್ಮ ಮೆದುಳನ್ನು ಬಲಗೊಳಿಸುತ್ತದೆ.

Health benefits of Red wine

ರೆಡ್ ವೈನ್ ನ ಆರೋಗ್ಯಕಾರಿ ಲಾಭಗಳು ತುಂಬಾ ಇದೆ. ಇದು ನಿಮ್ಮ ಸೊಂಟದ ಬೊಜ್ಜು ಕರಗಿಸುತ್ತದೆ. ಇದರ ಆರೋಗ್ಯಕಾರಿ ಗುಣಗಳಿಂದ ರೆಡ್ ವೈನ್ ದಿನದಿಂದ ದಿನಕ್ಕೆ ಜನಪ್ರಿಯತೆ ಪಡೆಯುತ್ತಿದೆ. ರೆಡ್ ವೈನ್ ಕುಡಿಯುವುದರಿಂದ ನಿಮ್ಮ ಮೆದುಳು ಮಾತ್ರವಲ್ಲದೆ ಹೃದಯ ಕೂಡ ಆರೋಗ್ಯಕರವಾಗಿರುತ್ತದೆ. ನಿಮ್ಮ ಹೃದಯ ತುಂಬಾ ಅಮೂಲ್ಯ! ಮೆದುಳಿನ ಆರೋಗ್ಯಕ್ಕೆ ರೆಡ್ ವೈನ್ ನ ಕೆಲವೊಂದು ಆರೋಗ್ಯಕಾರಿ ಲಾಭಗಳು.

ವೈನ್ ನಿಂದ ತ್ವಚೆ ಫೈನ್ ; ಸುಕೋಮಲೆಯರಿಗೆ ಮಾತ್ರ

ಪಾರ್ಶ್ವವಾಯುಗೆ ಗುಡ್ ಬೈ ಹೇಳಿ
ವೈನ್ ನ ಪ್ರಮುಖ ಆರೋಗ್ಯಕರ ಗುಣವೆಂದರೆ ಅದು ಪಾರ್ಶ್ವವಾಯು ತಪ್ಪಿಸುತ್ತದೆ. ಮೆದುಳಿನ ಆರೋಗ್ಯದಲ್ಲಿ ರೆಡ್ ವೈನ್ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂದು ಇತ್ತೀಚಿನ ಅಧ್ಯಯನಗಳು ಹೇಳಿವೆ. ಸಂಯುಕ್ತ ರೆಸ್ವೆರಾಟ್ರೊಲ್ ಪಾರ್ಶ್ವವಾಯು ತಪ್ಪಿಸುವ ಸಾಮರ್ಥ್ಯ ಹೊಂದಿದೆ. ಈ ಸಂಯುಕ್ತವನ್ನು ಪ್ರಾಣಿಗಳಿಗೆ ನೀಡಲಾಯಿತು ಮತ್ತು ಈ ಸಂಯುಕ್ತ ನೀಡಿದ ಪ್ರಾಣಿಗಳು ಇತರ ಪ್ರಾಣಿಗಳಿಂತ ಮೆದುಳಿನ ಹಾನಿಗೊಳಗಾದದ್ದು ಕಡಿಮೆ ಎನ್ನುವುದನ್ನು ತೋರಿಸಿದೆ.

ಸಂಯುಕ್ತ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಕಡಿಮೆ ಮಾಡುತ್ತದೆ ಮತ್ತು ವೇಗವಾಗಿ ಚೇತರಿಸಲು ನೆರವಾಗುತ್ತದೆ. ಇದು ಕೆಂಪು ವೈನ್ ನಲ್ಲಿರುವ ಆರೋಗ್ಯಕಾರಿ ಲಾಭಗಳು. ದೀರ್ಘಾವಧಿ ತನಕ ಮೆದುಳಿನ ಹಾನಿಯನ್ನು ತಡೆಯುವಂತಹ ಸಾಮರ್ಥ್ಯ ರೆಡ್ ವೈನ್‌ನಲ್ಲಿದೆ. ರೆಡ್ ವೈನ್ ನಿಂದಾಗಿ ಶೇ. 40ರಷ್ಟು ಮೆದುಳಿನ ಹಾನಿಯನ್ನು ತಡೆಯಬಹುದು ಎಂದು ಸಂಶೋಧನೆಗಳು ಹೇಳಿವೆ.

ಆದಾಗ್ಯೂ ಇದರ ಬಗ್ಗೆ ಪ್ರಯೋಗ ಶಾಲೆಯಲ್ಲಿ ಯಾವುದೇ ಪ್ರಯೋಗವಾಗಿಲ್ಲ ಮತ್ತು ವೈನ್ ಅಥವಾ ಆಲ್ಕೋಹಾಲ್ ನ್ನು ಮಿತವಾಗಿ ಸೇವಿಸಬೇಕೆಂದು ಸಂಶೋಧನೆಗಳು ಹೇಳಿವೆ. ಅತಿಯಾದ ಸೇವನೆ ತೊಂದರೆಯನ್ನುಂಟು ಮಾಡಬಹುದು. ರೆಡ್ ವೈನ್ ನ್ನು ಮೆದುಳಿಗೆ ಆರೋಗ್ಯಕರವೆಂದು ಪರಿಗಣಿಸಲಾಗಿದೆ. ಇದರಿಂದ ಮಿತವಾಗಿ ಅದನ್ನು ಕುಡಿಯಿರಿ.

ಮತ್ತೊಮ್ಮೆ ಆಲ್ಝೈಮರ್ ಕುರಿತು ಭೀತಿ ಬೇಡ
ರೆಡ್ ವೈನ್ ನ ಮತ್ತೊಂದು ಆರೋಗ್ಯಕಾರಿ ಲಕ್ಷಣವೆಂದರೆ ಇದು ಆಲ್ಝೈಮರ್ ನ ಸಾಧ್ಯತೆ ಕಡಿಮೆ ಮಾಡುತ್ತದೆ. ಯಾವತ್ತೂ ಒಂದು ಹನಿ ಆಲ್ಕೋಹಾಲ್ ಸೇವನೆ ಮಾಡದಿರುವಂತಹ ವ್ಯಕ್ತಿಗಳು ಆಲ್ಝೈಮರ್ ನಿಂದ ಹೊರಗಿದ್ದೇವೆ ಎಂದು ಆತ್ಮವಿಶ್ವಾಸದಿಂದ ಇರುತ್ತಾರೆ. ರೆಡ್ ವೈನ್ ನ ಆರೋಗ್ಯಕಾರಿ ಗುಣಗಳು ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಫ್ರಾನ್ಸ್ ನ ಜನರು ಹೆಚ್ಚಿನ ಕ್ಯಾಲೋರಿ ಇರುವ ಆಹಾರ ಸೇವಿಸುತ್ತಾರೆ ಮತ್ತು ಅವರು ಹೃದಯದ ಸಮಸ್ಯೆಗೆ ಒಳಗಾಗುವುದು ಅತೀ ಕಡಿಮೆ. ಇದು ಯಾಕೆಂದರೆ ರೆಡ್ ವೈನ್ ಸೇವನೆಯಿಂದ.

ಆಲ್ಝೈಮರ್ ಗೆ ಬಂದರೆ ರೆಡ್ ವೈನ್ ನ ಆರೋಗ್ಯಕರ ಗುಣಗಳು ತುಂಬಾ ಅಚ್ಚರಿಯನ್ನುಂಟು ಮಾಡುತ್ತದೆ. ರೆಡ್ ವೈನ್ ನಲ್ಲಿರುವ ರೆಸ್ವೆರಾಟ್ರೊಲ್ ಗುಣಲಕ್ಷಣಗಳ ಬಗ್ಗೆ ಈಗಲೂ ಸಂಶೋಧನೆಗಳು ನಡೆಯುತ್ತಲೇ ಇದೆ. ಇದರ ಮೂಲ ಸ್ವಭಾವ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಇದುವರೆಗೆ ತಿಳಿದಿಲ್ಲ. ಆದಾಗ್ಯೂ ವಿಜ್ಞಾನಿಗಳು ನಂಬಿರುವ ಪ್ರಕಾರ ಇದರಲ್ಲಿರುವ ಸಂಯುಕ್ತವು ಒಂದು ವಂಶವಾಹಿಯನ್ನು ಜೀವಂತವಾಗಿರಿಸಿ ಮೆದುಳಿಗೆ ವಯಸ್ಸಾಗದಂತೆ ತಡೆಯುತ್ತದೆ. ರೆಡ್ ವೈನ್ ನಿಂದ ಮೆದುಳಿನ ಆರೋಗ್ಯಕ್ಕೆ ಯಾವುದೇ ಮಿತಿಯಿಲ್ಲ.

ಮೆದುಳಿನ ಜೀವಕೋಶದ ಹಾನಿ ತಡೆಯುತ್ತದೆ
ರೆಡ್ ವೈನ್ ನ ಆರೋಗ್ಯಕಾರಿ ಗುಣಗಳು ನಿಮ್ಮನ್ನು ವಿಸ್ಮಯಗೊಳಿಸಬಹುದು. ರೆಡ್ ವೈನ್ ಕುಡಿಯುವ ವ್ಯಕ್ತಿಯ ಮೆದುಳು ಯಾವಾಗಲೂ ಕ್ರಿಯಾಶೀಲವಾಗಿರುತ್ತದೆ. ಇದು ಯಾಕೆಂದರೆ ರೆಡ್ ವೈನ್ ನಲ್ಲಿ ಉತ್ಕರ್ಷಣ ನಿರೋಧಕಗಳಿರುತ್ತದೆ. ಈ ಉತ್ಕರ್ಷಣ ನಿರೋಧಕಗಳು ಫ್ರೀ ರ್‍ಯಾಡಿಕಲ್ ನ ದಾಳಿಯನ್ನು ತಡೆಯುತ್ತದೆ.

English summary

Health benefits of Red wine

Drinking of red wine not only keeps your brain healthy but also your heart, your heart is precious! Here are a few benefits of red wine on brain health.
Story first published: Monday, June 23, 2014, 10:17 [IST]
X
Desktop Bottom Promotion