For Quick Alerts
ALLOW NOTIFICATIONS  
For Daily Alerts

ಏಡ್ಸ್ ಬಗ್ಗೆ ಇರುವ ಸಾಮಾನ್ಯ ತಪ್ಪು ತಿಳುವಳಿಕೆಗಳು

By Hemanth P
|

ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೊಮ್ ಅಥವಾ ಸಾಮಾನ್ಯವಾಗಿ ಏಡ್ಸ್ ಎಂದು ಕರೆಯಲ್ಪಡುವ ಮಾರಕ ಕಾಯಿಲೆ ಇಂದು ವಿಶ್ವದೆಲ್ಲೆಡೆ 70 ದಶಲಕ್ಷ ಜನರು ಪೀಡಿತರಾಗಿದ್ದಾರೆ. 34 ದಶಲಕ್ಷ ಜನರು ಏಡ್ಸ್ ನೊಂದಿಗೆ ಜೀವಿಸುತ್ತಿದ್ದಾರೆ. ಈ ಭಯಾನಕ ಕಾಯಿಲೆಗೆ ಚಿಕಿತ್ಸೆ ಕಂಡುಹಿಡಿಯಲು ಆಗಿಲ್ಲ. ಏಡ್ಸ್ ಪೀಡಿತರು ಬದುಕಿಗಾಗಿ ಹೋರಾಟ ನಡೆಸುತ್ತಿರುತ್ತಾರೆ. ಏಡ್ಸ್ ಪೀಡಿತ ಜನರು ಸಾಮಾನ್ಯವಾಗಿ ಜನರಲ್ಲಿನ ತಪ್ಪು ತಿಳುವಳಿಕೆ ಮತ್ತು ಎಲ್ಲೆಡೆಗೂ ಹರಡಿರುವ ಕಾಲ್ಪನಿಕ ಕಥೆಗಳಿಗೆ ಬಲಿಪಶುವಾಗುತ್ತಾರೆ.

ಹುಟ್ಟಿನಿಂದ ಅಥವಾ ಆಕಸ್ಮಿಕ ರಕ್ತ ವರ್ಗಾವಣೆ ಮತ್ತು ಇತರ ಕೆಲವೊಂದು ಕಾರಣಗಳಿಂದ ಕೆಲವು ಮಂದಿ ಎಚ್ ಐವಿ ಅಥವಾ ಏಡ್ಸ್ ಪೀಡಿತರಾಗಬಹುದು. ಏಡ್ಸ್ ಪೀಡತರಾಗಿರುವರಿಂದ ಕೆಲವರು ಮುಜುಗರ ಪಟ್ಟು ದೂರ ಮಾಡುತ್ತಾರೆ. ಕೆಲವರಿಗೆ ಈ ರೋಗದ ಮೂಲ ಜ್ಞಾನವೇ ಇರುವುದಿಲ್ಲ ಮತ್ತು ಏಡ್ಸ್ ಇರುವ ವ್ಯಕ್ತಿಗಳೊಂದಿಗೆ ಯಾವ ರೀತಿ ವರ್ತಿಸಬೇಕೆಂದು ಗೊತ್ತಿರುವುದಿಲ್ಲ, ಅವರನ್ನು ಸಾಮಾಜಿಕವಾಗಿ ಕಡೆಗಣನೆ ಮಾಡುತ್ತಾರೆ.

ಏಡ್ಸ್ ರೋಗಿಗಳನ್ನು ಹೀಗೆ ನೋಡುವುದು ಸರಿಯೇ?

ಏಡ್ಸ್ ಬಗ್ಗೆ ಇರುವ ಕೆಲವೊಂದು ತಪ್ಪು ಕಲ್ಪನೆಯಿಂದಾಗಿ ಏಡ್ಸ್ ಪೀಡಿತ ವ್ಯಕ್ತಿಗಳೊಂದಿಗೆ ವ್ಯವಹರಿಸಲು ಭೀತಿಪಡುವಂತಾಗಿದೆ ಮತ್ತು ಇದರಿಂದ ಅವರ ಭಾವನೆಗಳಿಗೆ ಘಾಸಿಯಾಗುತ್ತದೆ. ಕೆಲವೊಮ್ಮೆ ತಿಳಿದೋ, ತಿಳಿಯಯದೆಯೋ ಅಥವಾ ರಕ್ತ ವರ್ಗಾವಣೆ ಮಾಡುವಾಗ ಏಡ್ಸ್ ಬಂದಿರಬಹುದು. ಎಲ್ಲಾ ಸಮಾಜಗಳಲ್ಲೂ ಎಚ್ ಐವಿ ಮತ್ತು ಏಡ್ಸ್ ಬಗ್ಗೆ ಕೆಲವೊಂದು ತಪ್ಪು ಕಲ್ಪನೆಗಳಿವೆ.

Common myths about AIDS

ಇಂದು ಪ್ರತಿಯೊಂದು ಮಾಹಿತಿಯೂ ಸಿಗುತ್ತದೆ ಮತ್ತು ಏಡ್ಸ್ ಬಗ್ಗೆ ಇರುವ ತಪ್ಪು ತಿಳುವಳಿಕೆ ತೊಡೆದುಹಾಕಬಹುದು ಮತ್ತು ಏಡ್ಸ್ ಪೀಡಿತ ಜನರ ಬಗ್ಗೆ ಇರುವ ಕೆಲವೊಂದು ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಬಹುದು. ಏಡ್ಸ್ ಪೀಡಿತ ವ್ಯಕ್ತಿಗೆ ದ್ವೇಷ ಮತ್ತು ಕಡೆಗಣನೆ ಬದಲಿಗೆ ಬೆಂಬಲ, ಕಾಳಜಿ ಮತ್ತು ಪ್ರೀತಿ ಬೇಕಾಗುತ್ತದೆ. ಕೆಲವೊಂದು ತಪ್ಪು ತಿಳುವಳಿಕೆ ಸಾಮಾನ್ಯ ಜನರನ್ನು ಕಾಡುತ್ತದೆ ಮತ್ತು ಇದರಿಂದ ಅವರು ಏಡ್ಸ್ ಸಂಪರ್ಕಿಸುವ ಅಪಾಯ ಹೆಚ್ಚಾಗಿರುತ್ತದೆ.

ಏಡ್ಸ್ ಬಗ್ಗೆ ಇರುವ ಕೆಲವೊಂದು ತಪ್ಪು ತಿಳುವಳಿಕೆಗಳು

1. ಕೇವಲ ಸಂಭೋಗ ಮೂಲಕ

ಏಡ್ಸ್ ಪೀಡಿತ ವ್ಯಕ್ತಿಯೊಂದಿಗೆ ಸಂಭೋಗ ನಡೆಸಿದಾಗ ಮಾತ್ರ ಏಡ್ಸ್ ಬರುತ್ತದೆ ಎನ್ನುವ ತಪ್ಪು ಗ್ರಹಿಕೆ ಬಹಳವಾಗಿದೆ. ಇದು ತಪ್ಪು, ಎಚ್ ಐವಿ ರಕ್ತ ವರ್ಗಾವಣೆ ವೇಳೆ ಅಥವಾ ಪೀಡಿತ ರಕ್ತ ವರ್ಗಾವಣೆಯಾದರೆ ಏಡ್ಸ್ ಬರುತ್ತದೆ.

2. ಏಡ್ಸ್ ಪೀಡಿತ ವ್ಯಕ್ತಿ ಸಾಮಿಪ್ಯದಿಂದ

ಏಡ್ಸ್ ಬಗ್ಗೆ ಇರುವ ಇನ್ನೊಂದು ತಪ್ಪು ತಿಳುವಳಿಕೆಯೆಂದರೆ ಏಡ್ಸ್ ಪೀಡಿತ ವ್ಯಕ್ತಿ ಸಮೀಪ ಇರುವುದರಿಂದ ರೋಗ ಹರಡುತ್ತದೆ ಎನ್ನುವುದು. ಸ್ಪರ್ಶ, ಕಣ್ಣೀರು, ಬೆವರು, ಲಾಲಾರಸದಿಂದ ಏಡ್ಸ್ ಹರಡುವುದಿಲ್ಲ. ಏಡ್ಸ್ ಪೀಡಿತ ವ್ಯಕ್ತಿಯನ್ನು ಆಲಂಗಿಸಲು ಭಯಪಡಬೇಡಿ.

3. ಸೊಳ್ಳೆಗಳಿಂದ

ಸೊಳ್ಳೆಗಳು ಎಚ್ಐವಿ ಅಥವಾ ಏಡ್ಸ್ ನ್ನು ಹರಡುವುದಿಲ್ಲ. ಸೊಳ್ಳೆಗಳಿಂದ ಏಡ್ಸ್ ಹರಡುತ್ತದೆ ಎನ್ನುವುದಕ್ಕೆ ಇದುವರೆಗೆ ಯಾವುದೇ ಪುರಾವೆಗಳು ಸಿಕ್ಕಿಲ್ಲ. ಅಧ್ಯಯನಗಳು ಕೂಡ ಇದನ್ನು ನಿರಾಕರಿಸಿವೆ. ಸೊಳ್ಳೆಯ ಒಳಗೆ ವೈರಸ್ ಗೆ ಹೆಚ್ಚಿನ ಜೀವವಿರುವುದಿಲ್ಲ.

4. ಏಡ್ಸ್ ನೊಂದಿಗೆ ಜೀವನ ಅಂತ್ಯ

ಏಡ್ಸ್ ಬಳಿಕವೂ ಜೀವನವಿದೆ. ಆತ್ಯಾಧುನಿಕ ವೈದ್ಯಕೀಯ ಸಂಶೋಧನೆಗಳಿಂದ ಆಂಟಿರೆಟ್ರೋವೈರಲ್ ಔಷಧಿ ಎಚ್ಐವಿ ಪಾಸಿಟಿವ್ ಮತ್ತು ಏಡ್ಸ್ ಪೀಡಿತ ವ್ಯಕ್ತಿ ದೀರ್ಘ ಕಾಲ ಮತ್ತು ಸುಖ ಜೀವನ ನಡೆಸಬಹುದು.

ಒಳ್ಳೆಯ ನಿದ್ರೆ ಆವರಿಸಲು ನೈಸರ್ಗಿಕ ವಿಧಾನ

5. ಮುಖ ಮೈಥುನದಿಂದ

ದೇಹದ ದ್ರವಗಳಿಗೆ ವಿನಿಮಯ ಇದ್ದಾಗ ಎಚ್ ಐವಿ ಹರಡುವಿಕೆ ಸಂಭವಿಸುತ್ತದೆ ಮತ್ತು ಮುಖ ಮೈಥುನ ವೇಳೆ ಗಾಯಗಳಿದ್ದರೆ ಇದು ಸಂಭವಿಸಬಹುದು. ಕಡಿತ, ಹುಣ್ಣುಗಳು ಅಥವಾ ತರಚುಗಾಯಗಳು ಬಾಯಿಯಲ್ಲಿ ಅಥವಾ ವಸಡುಗಳಲ್ಲಿ ಇದ್ದರೆ ಅಥವಾ ಬಾಯಿ ಮತ್ತು ಗಂಟಲಿನಲ್ಲಿರುವ ಸೋಂಕುನಿಂದ ಇದು ಹರಡುತ್ತದೆ.

6. ಟ್ಯಾಟೂಗಳು ಅಥವಾ ದೇಹದ ಚುಚ್ಚುವಿಕೆ ಸುರಕ್ಷಿತವೇ?

ಟ್ಯಾಟೂ ಹಾಕಿಸಿಕೊಳ್ಳುವುದರಿಂದ ಎಚ್ ಐವಿ ಹರಡಬಹುದು ಮತ್ತು ಚುಚ್ಚುವ ಉಪಕರಣವನ್ನು ಗ್ರಾಹಕರಿಗೆ ಬಳಸುವಾಗ ಸರಿಯಾಗಿ ಶುದ್ದೀಕರಿಸದಿದ್ದರೆ ಇದು ಬರುವ ಸಾಧ್ಯತೆ ಇದೆ. ದೇಹಕ್ಕೆ ಚುಚ್ಚುವ ಮತ್ತು ಚರ್ಮದ ಒಳಗೆ ಹೊಕ್ಕುವ ಉಪಕರಣವನ್ನು ಕೇವಲ ಒಂದು ಸಲ ಮಾತ್ರ ಬಳಸಬೇಕು. ಇದನ್ನು ಬಿಸಾಡಬೇಕು ಅಥವಾ ಶುದ್ದೀಕರಿಸಬೇಕು.

7. ಮಗುವಿನ ಜನನ

ಗರ್ಭಧಾರಣೆ ವೇಳೆ ಸರಿಯಾದ ಚಿಕಿತ್ಸೆ ಮತ್ತು ಆರೈಕೆಯಿಂದ ಎಚ್ ಐವಿ ಅಥವಾ ಏಡ್ಸ್ ಪೀಡಿತ ಮಹಿಳೆ ಏಡ್ಸ್ ಅಥವಾ ಎಚ್ ಐವಿ ಮುಕ್ತ ಮಗುವಿಗೆ ಜನ್ಮ ನೀಡಬಹುದು. ಜನನದ ಬಳಿಕ ಮಗುವಿಗೆ ತಾಯಿ ಎದೆ ಹಾಲುಣಿಸಬಾರದು.

8. ಏಡ್ಸ್ ಪೀಡಿತ ವ್ಯಕ್ತಿಗಳಿಬ್ಬರ ಅಸುರಕ್ಷಿತ ಲೈಂಗಿಕ ಕ್ರಿಯೆ

ಎಚ್ ಐವಿಯ ವಿವಿಧ ಬಗೆಗಳಿವೆ. ನೀವು ಎಚ್ ಐವಿ ಸೋಂಕಿಗೆ ಒಳಗಾಗಿದ್ದರೂ ನೀವು ಮತ್ತೊಂದು ಭಿನ್ನ ರೀತಿಯ ಸೋಂಕಿಗೆ ಈಡಾಗಬಹುದು. ಎಚ್ಐವಿ ಔಷಧಿ ನಿರೋಧಕ ತಳಿಗಳನ್ನು ಸೋಂಕಿಸುವ ಸಾಧ್ಯತೆಯಿದೆ.

9. ಎಚ್ ಐವಿ ಏಡ್ಸ್ ನಂತೆ

ಒಬ್ಬ ವ್ಯಕ್ತಿಯನ್ನು ಏಡ್ಸ್ ಪೀಡಿತನೆನ್ನಬೇಕಾದರೆ ಆತನ ಸಿಡಿ4 ಎಣಿಕೆ 200ಕ್ಕಿಂತ ಕೆಳಗಿಳಿಯಬೇಕು ಅಥವಾ ಆತ ಅಥವಾ ಆಕೆ ಕೆಲವೊಂದು ಸೋಂಕು ಅಥವಾ ಕ್ಯಾನ್ಸರ್ ಇರಬೇಕು. ಒಬ್ಬ ವ್ಯಕ್ತಿಗೆ ಎಚ್ ಐವಿ ಇದ್ದರೂ ಆತನಿಗೆ ಹಲವಾರು ವರ್ಷಗಳ ತನಕ ಏಡ್ಸ್ ಬರದಿರಬಹುದು. ಎಚ್ ಐವಿ ಇದ್ದ ಕೂಡಲೇ ಏಡ್ಸ್ ಇರಬೇಕೆಂದಿಲ್ಲ.

English summary

Common myths about AIDS

Acquired immunodeficiency syndrome or more commonly referred to as AIDS has affected more than 70 million people around the world. There are over 34 million estimated people living with AIDS.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more