For Quick Alerts
ALLOW NOTIFICATIONS  
For Daily Alerts

ಬ್ಲ್ಯಾಕ್ ಟೀ ಕುಡಿಯುವುದರ 10 ಅನುಕೂಲಗಳು

By Arpitha Rao
|

ಸಾಕಷ್ಟು ಜನರು ಅತಿ ಹೆಚ್ಚು ಸೇವಿಸುವ ಟೀ ಎಂದರೆ ಬ್ಲ್ಯಾಕ್ ಟೀ (ಕಪ್ಪು ಚಹಾ). ಕೆಮೆಲಿಯಾ ಸೈನೆನ್ಸಿಸ್ ಎಂಬ ಸಸ್ಯದಿಂದ ಹುಟ್ಟಿಕೊಳ್ಳುವ ಈ ಕಪ್ಪು ಚಹಾ ಹಸಿರು ಬಿಳಿ ಪ್ರಭೇದಗಳನ್ನು ಕೂಡ ಹೊಂದಿದೆ.ಉಳಿದ ಚಹಾಗಳಿಗಿಂತ ಇದು ಅತಿ ಹೆಚ್ಚು ಶಕ್ತಿಯುತ ಎನ್ನಲಾಗುತ್ತದೆ.

ಇದು ಕಪ್ಪು ಬಣ್ಣವನ್ನು ಹೊಂದಿರುವುದರಿಂದ ಈ ಟೀ ಗೆ ಬ್ಲ್ಯಾಕ್ ಟೀ ಎಂದು ಹೆಸರಿಸಲಾಗುತ್ತದೆ. ಆದರೆ ಇದನ್ನು ಸರಿಯಾಗಿ ಗಮನಿಸಿದರೆ ಸ್ವಲ್ಪ ಕೇಸರಿ ಮಿಶ್ರಿತ ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಚೀನೀಯರು ಇದನು ರೆಡ್ ಟೀ ಎಂದು ಕೂಡ ಕರೆಯುತ್ತಾರೆ. ಇದರಲ್ಲಿರುವ ಕೆಫೈನ್ ಇದರ ಮುಖ್ಯ ಗಮನಾರ್ಹ ಅಂಶ. ಒಂದು ಲೋಟ ಕಾಫಿಯಲ್ಲಿರುವ ಕೆಫೈನ್ ಗಿಂತ ಚಹಾದಲ್ಲಿ ಅರ್ಧದಷ್ಟು ಕಡಿಮೆ ಇರುತ್ತದೆ.

ದಿನನಿತ್ಯದ ಆರೋಗ್ಯಯುತ ಆಹಾರದೊಂದಿಗೆ ಬ್ಲ್ಯಾಕ್ ಟೀ ಯನ್ನು ಕುಡಿಯುವುದರಿಂದ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.ಈ ಟೀಯಲ್ಲಿರುವ ಆಕ್ಸಿಡೆಶನ್ ನ ಅಧಿಕ ಪ್ರಮಾಣ ಓದನು ಫ್ಲೇವರ್ ಅನ್ನು ಹೆಚ್ಚಿಸುತ್ತದೆ. ಇತರ ಟೀಗಳಿಗೆ ಹೋಲಿಸಿದರೆ ಬ್ಲ್ಯಾಕ್ ಟೀಯಲ್ಲಿರುವ ಫ್ಲೇವರ್ ಹೆಚ್ಚು ಸಮಯ ಉಳಿಯುತ್ತದೆ.ಬ್ಲ್ಯಾಕ್ ಟೀಯಿಂದಾಗುವ ಅನೇಕ ಆರೋಗ್ಯಯುತ ಅನುಕೂಲಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ.

ಬ್ಲ್ಯಾಕ್ ಟೀ ಗ್ರೀನ್ ಟೀಗಿಂತ ಆರೋಗ್ಯಕರವೇ?

ಹೃದಯಾರೋಗ್ಯದ ಅನುಕೂಲಗಳು

ಹೃದಯಾರೋಗ್ಯದ ಅನುಕೂಲಗಳು

ಬ್ಲ್ಯಾಕ್ ಟೀ ಸೇವನೆಯಿಂದ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯಬಹುದು ಎಂದು ಸಂಶೋಧನೆಗಳು ತಿಳಿಸಿವೆ. ಬ್ಲ್ಯಾಕ್ ಟೀಯಲ್ಲಿರುವ ಫ್ಲೇವನಾಯಿಡ್ಸ್ ಎಂಬ ಉತ್ಕರ್ಷಣ ಅಂಶ ಕೊಲೆಸ್ಟ್ರಾಲ್ ತಡೆಯಲು ಸಹಾಯಕ. ರಕ್ತ ಪ್ರವಾಹದಿಂದ ಅಪದಮನಿಗಳಿಗೆ ಹಾನಿಯಾಗುವುದನ್ನು ತಡೆದು,ಹೃದಯ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತನಾಳ ಕುಗ್ಗಿಸುವ ಅಥವಾ ಹಿಗ್ಗಿಸುವ ಎಂಡೊಥಿಲಿಯಲ್ ಸರಿಯಾಗಿ ಕೆಲಸ ಮಾಡದೆ ಸಂಭವಿಸುವ ಪರಿಧಮನಿ ಕಾಯಿಲೆಯನ್ನು ಕಪ್ಪು ಚಹಾ ಸೇವಿಸುವುದರಿಂದ ತಡೆಯಬಹುದು. ಇದರಲ್ಲಿರುವ ಫ಼್ಲೆಯನೋಯಿಡ್ಸ್ ಅಂಶ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ.ಮ್ಯಾಂಗನೀಸ್ ಮತ್ತು ಪೋಲಿಪೆನಾಲಗಳು ಸ್ನಾಯುಗಳನ್ನು ಆರೋಗ್ಯಯುತವಾಗಿ ಇರಿಸುವುದರ ಮೂಲಕ ಹೃದಯ ರೋಗಗಳು ಬರದಂತೆ ತಡೆಯುತ್ತವೆ.

ಕ್ಯಾನ್ಸರ್ ತಡೆಯುತ್ತದೆ

ಕ್ಯಾನ್ಸರ್ ತಡೆಯುತ್ತದೆ

ಬ್ಲ್ಯಾಕ್ ಟೀಯಲ್ಲಿ ಕಂಡುಬರುವ ಪೋಲಿಪೆನಾಲ್ ಎಂಬ ಉತ್ಕರ್ಷಣವು ಕೊಲೊರೆಕ್ಟಲ್, ಪ್ರಾಸ್ಟೇಟ್, ಅಂಡಾಶಯ, ಶ್ವಾಸಕೋಶ ಮತ್ತು ಮೂತ್ರಕೋಶದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.ಬ್ಲ್ಯಾಕ್ ಟೀ ಸ್ತನ ಮತ್ತು ಕರುಳು ಕ್ಯಾನ್ಸರ್ ಅನ್ನು ಕೂಡ ತಡೆಯಬಲ್ಲದು. ಟೀಯಲ್ಲಿ ಕಂಡು ಬರುವ ಟಿ ಎಫ್ 2 ಎಂಬ ಸಂಯುಕ್ತವು ಕ್ಯಾನ್ಸರ್ ಕಣಗಳನ್ನು ಕೊಳ್ಳುತ್ತದೆ. ಜೊತೆಗೆ ಸಿಗರೇಟ್ ಮತ್ತು ತಂಬಾಕನ್ನು ಬಳಸುವವರಿಗೆ ಸಂಭವಿಸುವ ಬಾಯಿ ಕ್ಯಾನ್ಸರ್ ಅನ್ನು ಕೂಡ ತಡೆಗಟ್ಟುತ್ತದೆ. ಬ್ಲ್ಯಾಕ್ ಟೀ ಕುಡಿಯುವದರಿಂದ ಗಡ್ಡೆಗಳಾಗುವುದನ್ನು ತಡೆಯಬಹುದು.

ರೇಡಿಕಲ್ಸ್ ಕಡಿಮೆ ಮಾಡುತ್ತದೆ

ರೇಡಿಕಲ್ಸ್ ಕಡಿಮೆ ಮಾಡುತ್ತದೆ

ರೆಡಿಕಲ್ಸ್ ದೇಹಕ್ಕೆ ಕ್ಯಾನ್ಸರ್,ಎಥೆರೋಜೆನಿಕ್,ರಕ್ತ ಹೆಪ್ಪುಗಟ್ಟುವಿಕೆ ಹೀಗೆ ಸಾಕಷ್ಟು ಸಮಸ್ಯೆ ತರುತ್ತದೆ. ಅನಾರೋಗ್ಯಕರ ಆಹಾರಗಳ ಸೇವನೆ ಹೆಚ್ಚಿದಾಗ ರಾಡಿಕಲ್ಸ್ ಕೂಡ ಹೆಚ್ಚುತ್ತದೆ. ಬ್ಲ್ಯಾಕ್ ಟೀ ಕುಡಿಯುವುದರಿಂದ ಇದನ್ನು ಸಂಪೂರ್ಣವಾಗಿ ತಡೆಯಬಹುದು. ಈ ರೀತಿಯ ರೋಗಗಳನ್ನು ತಡೆಯಲು ಬ್ಲ್ಯಾಕ್ ಟೀ ಉತ್ತಮವಾದುದು.

ಇಮ್ಯುನಿಟಿ ಹೆಚ್ಚಿಸುತ್ತದೆ

ಇಮ್ಯುನಿಟಿ ಹೆಚ್ಚಿಸುತ್ತದೆ

ವೈರಸ್ ಮತ್ತು ಬ್ಯಾಕ್ಟೀರಿಯದ ವಿರುದ್ಧ ಹೋರಾಡಲು ಇಮ್ಯೂನಿಟಿ ಹೆಚ್ಚಿಸಿಕೊಳ್ಳುವ ಅಗತ್ಯವಿರುತ್ತದೆ. ಬ್ಲ್ಯಾಕ್ ಟೀಯಲ್ಲಿರುವ ಟೆನಿನ್ ಅಂಶ ಹೆಪಟೈಸಿಸ್,ಫ್ಲೂ, ಕೋಲ್ಡ್ ಮತ್ತಿತರ ಬ್ಯಾಕ್ಟೀರಿಯ ಇರುದ್ಧ ಹೋರಾಡುವ ಗುಣವನ್ನು ಹೊಂದಿದೆ.ಗಡ್ಡೆಗಳನ್ನು ತಡೆಗಟ್ಟಲು ಬ್ಲ್ಯಾಕ್ ಟೀಯಲ್ಲಿರುವ ಕ್ಯಟೆಚಿನ್ ಎಂಬ ಟೆನಿನ್ ಅಂಶ ಸಹಾಯಕ.ಬ್ಲ್ಯಾಕ್ ಟೀಯಲ್ಲಿರುವ ಅಲ್ಕಿಲಾಮಿನ್ ಅಂಶವು ಇಮ್ಯೂನಿಟಿ ಹೆಚ್ಚಿಸುತ್ತದೆ.ಉರಿಯೂತ ಮತ್ತು ರೋಗಗಳನ್ನು ತಡೆಯಲು ದಿನದಲ್ಲಿ 3-4 ಲೋಟ ಬ್ಲ್ಯಾಕ್ ಟೀ ಸೇವಿಸಬೇಕು.

ಬಾಯಿ ಅರೋಗ್ಯ ಕಾಪಾಡುತ್ತದೆ

ಬಾಯಿ ಅರೋಗ್ಯ ಕಾಪಾಡುತ್ತದೆ

ಕ್ಯಾತೆಚಿನ್ ಅಂಶ ಓರಾಲ್ ಕ್ಯಾನ್ಸರ್ ಬರದಂತೆ ತಡೆಯುತ್ತದೆ. ದಂತ ಕ್ಷಯವನ್ನು ನೀಡುವ ಬ್ಯಾಕ್ಟೀರಿಯವನ್ನು ಬ್ಲ್ಯಾಕ್ ಟೀಯಲ್ಲಿರುವ ಟೆನಿನ್ ಮತ್ತು ಪೊಲಿಪೆನಾಲ್ಸ್ ತಡೆಯುತ್ತದೆ. ಜೊತೆಗೆ ಇದರಲ್ಲಿರುವ ಫ್ಲೋರೈಡ್ ಅಂಶ ಬಾಯಿಯ ದುರ್ಗಂಧ ಹೋಗಲಾಡಿಸುತ್ತದೆ.ಎಡರು ಲೋಟ ಬ್ಲ್ಯಾಕ್ ಟೀ ಸೇವನೆ ಬಾಯಿಯ ಆರೋಗ್ಯಕ್ಕೆ ಬೇಕಾಗುವ ಫ್ಲೋರೈಡ್ ಅನ್ನು ಒದಗಿಸುತ್ತದೆ.

ಮೆದುಳು ಮತ್ತು ಮೂಳೆಯನ್ನು ಆರೋಗ್ಯವಾಗಿರಿಸುತ್ತದೆ

ಮೆದುಳು ಮತ್ತು ಮೂಳೆಯನ್ನು ಆರೋಗ್ಯವಾಗಿರಿಸುತ್ತದೆ

ಟೀಯಲ್ಲಿರುವ ಕಡಿಮೆ ಪ್ರಮಾಣದ ಕೆಫಿನ್ ಅಂಶ ಮೆದುಳಿಗೆ ರಕ್ತ ಸಂಚಲನ ಸರಿಯಾಗಿ ಆಗಲು ಸಹಾಯಕ. ಜೊತೆಗೆ ಬ್ಲ್ಯಾಕ್ ಟೀಯಲ್ಲಿರುವ ಅಮೈನೊ ಆಕ್ಸೈಡ್ ಏಕಾಗ್ರತೆ ಹೆಚ್ಚಿಸಲು ಸಹಾಯಕವಾಗುತ್ತದೆ. ಪ್ರತಿದಿನ ನಾಲ್ಕು ಲೋಟದಂತೆ ಒಂದು ತಿಂಗಳು ಬ್ಲ್ಯಾಕ್ ಟೀ ಸೇವಿಸಿದರೆ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಕೆಫೈನ್ ನೆನಪಿನ ಶಕ್ತಿ ಹೆಚ್ಚಿಸಿ,ಮಾನಸಿಕ ತಳಮಳ ಕಡಿಮೆ ಮಾಡುತ್ತದೆ. ಜೊತೆಗೆ ಇದು ಪಾರ್ಕಿನ್ಸನ್ ರೋಗಗಳನ್ನು ಕೂಡ ತಡೆಯುತ್ತದೆ.

ಜೀರ್ಣಕ್ರಿಯೆಗೆ ಸಹಾಯಕ

ಜೀರ್ಣಕ್ರಿಯೆಗೆ ಸಹಾಯಕ

ಬ್ಲ್ಯಾಕ್ ಟೀಯಲ್ಲಿರುವ ಟೆನಿನ್ ಜೀರ್ಣಕ್ರಿಯೆಗೆ ಸಹಾಯಕ. ಗ್ಯಾಸ್ ಮುಂತಾದ ಸಣ್ಣ ಪುಟ್ಟ ತೊಂದರೆಗಳನ್ನು ಕೂಡ ನಿವಾರಿಸುವ ಅಂಶ ಇದರಲ್ಲಿದೆ. ದೇಹ ನಿರ್ಜಲೀಕರಣಗೊಳ್ಳುವುದನ್ನು ಕೂಡ ಇದು ತಡೆಯುವ ಗುಣ ಹೊಂದಿದೆ. ಹೊಟ್ಟೆ ತೊಳೆಸುವಂತೆ ಮಾಡುವ ಕರುಳಿನ ಉರಿಯೂತವನ್ನು ಕೂಡ ಬ್ಲ್ಯಾಕ್ ಟೀಯಲ್ಲಿರುವ ಪೋಲಿಪೆನಾಲ್ಸ್ ಅಂಶದಿಂದ ಕಡಿಮೆಮಾಡಿಕೊಳ್ಳಬಹುದು.

ಮೂಳೆ ಮತ್ತು ಅಂಗಾಂಶ ಅರೋಗ್ಯ

ಮೂಳೆ ಮತ್ತು ಅಂಗಾಂಶ ಅರೋಗ್ಯ

ಮೂಳೆಯನ್ನು ಬಲಯುತವಾಗಿರಿಸುವ ಸಸ್ಯಜನ್ಯ ಅಂಶ ಬ್ಲ್ಯಾಕ್ ಟೀಯಲ್ಲಿದೆ. ಬ್ಲ್ಯಾಕ್ ಟೀ ಸೇವಿಸುವವರು ಸದೃಢ ಮೂಳೆಯನ್ನು ಹೊಂದಿರುತ್ತಾರೆ.

ಅಧಿಕ ಶಕ್ತಿ

ಅಧಿಕ ಶಕ್ತಿ

ಬ್ಲ್ಯಾಕ್ ಟೀಯಲ್ಲಿ ಕ್ಯಾಲೋರಿ,ಕೊಬ್ಬು ಮತ್ತು ಸೋಡಿಯಂ ಅಂಶ ಕಡಿಮೆ ಇರುತ್ತದೆ. ಇದು ತೂಕ ಕಡಿಮೆ ಮಾಡಿಕೊಳ್ಳಲು ಇಚ್ಚಿಸುವವರಿಗೆ ಸಹಾಯಕ. ಇದು ದೇಹದಿಂದ ಅನಾರೋಗ್ಯಕರ ಕಾರ್ಬೋನೆಟ್ ಹೊರತೆಗೆಯುತ್ತದೆ. ಚಯಾಪಚಯ ಕ್ರಿಯೆ ಹೆಚ್ಚಿಸುವ ಮೂಲಕ ತೂಕವನ್ನು ಕಡಿಮೆ ಮಾಡುತ್ತದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ

ಟ್ರೈಗ್ಲಿಸೆರೈಡ್ ಅಂಶವನ್ನು ಕಡಿಮೆ ಮಾಡುವ ಗುಣ ಬ್ಲ್ಯಾಕ್ ಟೀಯಲ್ಲಿದೆ. ಹೃದಯ ರೋಗಗಳನ್ನು ನೀಡಬಹುದಾದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆಯುತ್ತದೆ. ಅಪಧಮನಿಗಳ ಕಾರ್ಯವನ್ನು ಕೂಡ ಸುಲಭವಾಗಿಸುತ್ತದೆ.

ಇತರ ಆರೋಗ್ಯಕರ ಅಂಶಗಳು

ಇತರ ಆರೋಗ್ಯಕರ ಅಂಶಗಳು

ಬ್ಲ್ಯಾಕ್ ಟೀಯಲ್ಲಿರುವ ಕಾಟೆಚಿನ್ ಅಂಶವು ರಕ್ತಕಣಗಳನ್ನು ಸುಧಾರಿಸುತ್ತದೆ ಮತ್ತು ಇದರಲ್ಲಿರುವ ಟೆನಿನ್ ಅಂಶ ದೇಹದಲ್ಲಿ ರೋಗ ನಿರೋಧಕ ಅಂಶವನ್ನು ಹೆಚ್ಚಿಸುತ್ತದೆ. ಗಡ್ಡೆಗಳು ಬೆಳೆಯುವುದನ್ನು ತಡೆಯುತ್ತದೆ,ಅಲರ್ಜಿ ಮತ್ತು ಮಧುಮೇಹವನ್ನು ಕೂಡ ತಡೆಯುತ್ತದೆ.


Read more about: ಟೀ ಆರೋಗ್ಯ tea health
English summary

Amazing Health Benefits of Black Tea

Black tea is a name given to it due to the dark color of the tea’s liquor. If one notices carefully, it is usually orange or dark amber in color. The flavor of black tea is retained for a longer time than in other forms of tea. The different health benefits of black tea are given below.
Story first published: Saturday, August 16, 2014, 17:25 [IST]
X
Desktop Bottom Promotion