Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ತೂಕ ಇಳಿಸಲು 7 ದಿನದ ಕ್ರ್ಯಾಶ್ ಡಯೆಟ್ ಯೋಜನೆ
ನೀವು ನಿಮ್ಮ ಹೆಚ್ಚುವರಿ ತೂಕವನ್ನು ಇಳಿಸುವ ಯೋಜನೆಗೆ ಬದ್ಧರಾಗಿದ್ದಲ್ಲಿ, ಕೆಲವೊಂದು ತ್ವರಿತ ಪರಿಣಾಮವನ್ನು ನೀಡುವ ಕ್ರ್ಯಾಶ್ ಡಯೆಟ್ ಅನ್ನು ನಿಮಗೆ ಪಾಲಿಸಬಹುದು. ಇಂದು ಬೋಲ್ಡ್ ಸ್ಕೈ ಏಳು ಜನಪ್ರಿಯ ಕ್ರ್ಯಾಶ್ ಡಯೆಟ್ ಯೋಜನೆಯನ್ನು ನಿಮ್ಮ ಮುಂದಿಡುತ್ತಿದೆ. ನಿಮಗೆ ಈ ಡೆಯೆಟ್ ಯೋಜನೆ ಉತ್ತಮ ಹಾಗೂ ತ್ವರಿತ ಫಲಿತಾಂಶವನ್ನು ನೀಡುವುದು ಖಂಡಿತ.
ಹೌದು, ಏಳು ದಿನಗಳಲ್ಲಿ ಅಥವಾ ಒಂದು ವಾರದಲ್ಲಿ, ನೀವು ಹೊಸ ಮತ್ತು ಸುಧಾರಿತ ವ್ಯಕ್ತಿಯಾಗುವುದು ಖಂಡಿತ. ಕ್ರ್ಯಾಶ್ ಡಯೆಟ್ ಅನ್ನು ನಂಬದವರು ಹಾಗೂ ಕೆಟ್ಟದ್ದೆಂದು ಪರಿಗಣಿಸಿದವರು ಈ ಲೇಖನವನ್ನು ಓದಿ
ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು. ಇವರು ಹೇಳುವಂತೆ ಇದು ದೇಹಕ್ಕೆ ಕೆಟ್ಟದ್ದನ್ನು ಉಂಟು ಮಾಡುವುದಿಲ್ಲ. ಕೆಲವೊಂದು ಕ್ರ್ಯಾಶ್ ಡಯೆಟ್ ಯೋಜನೆಗಳು ನ್ಯೂಟ್ರಿಶಿಯನ್ ಮತ್ತು ವಿಟಮಿನ್‌ಗಳ ಮೂಲವನ್ನು ಒಳಗೊಂಡು ಭರ್ತಿಯಾಗಿದೆ. ಇದು ನಿಮಗೆ ಶಕ್ತಿಯನ್ನು ನೀಡಿ ನಿಮ್ಮ ತೂಕವನ್ನು ವೇಗವಾಗಿ ಇಳಿಸುತ್ತದೆ.
ಈ ಏಳು ದಿನದ ಕ್ರ್ಯಾಶ್ ಡಯೆಟ್ ಯೋಜನೆ ಕೆಲವೊಂದು ಪ್ರಮುಖ ಸಾಮಾಗ್ರಿಗಳನ್ನು ಒಳಗೊಂಡಿದೆ. ಇಲ್ಲಿ ನಾವು ನೀಡಿರುವ ಆಹಾರವನ್ನು ನಿಯಮಿತವಾಗಿ ತೆಗೆದುಕೊಂಡರೆ, ಯೋಜನೆಗಳನ್ನು ಸರಿಯಾಗಿ ಪಾಲಿಸಿದರೆ ನಿಮ್ಮ ತೂಕ ಏಳು ದಿನದಲ್ಲಿ ಖಂಡಿತ ಕಡಿಮೆಯಾಗುತ್ತದೆ. ಹಾಗಿದ್ದರೆ ಅವುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ತೂಕ ಇಳಿಸಲು ಸಹಕಾರಿ ಈ ಎಂಟು ಬೆಳಗ್ಗಿನ ಸಲಹೆಗಳು

ದಿನ 1 - ಸೂಪ್ ಡಯೆಟ್:
ಮೊದಲ ದಿನವನ್ನು ಸೂಪ್‌ನಿಂದ ಪ್ರಾರಂಭಿಸಿ. ದಿನವಿಡೀ ವಿವಿಧ ಪ್ರಕಾರದ ಸೂಪ್‌ಗಳಿಂದ ಹೊಟ್ಟೆ ತುಂಬಿಸಿ. ಅದು ಸಸ್ಯಾಹಾರಿಯಾಗಿರಬಹುದು ಇಲ್ಲವೇ ಮಾಂಸಾಹಾರಿಯಾಗಿರಬಹುದು. ಆದರೆ ಮಾಂಸಾಹಾರಿ ಸೂಪ್ ಅನ್ನು ಸೇವಿಸುವಾಗ ಮಾಂಸದ ಪ್ರಮಾಣ ಕಡಿಮೆ ಇರುವಂತೆ ನೋಡಿಕೊಳ್ಳಿ. ಸೂಪ್‌ಗೆ ಉಪ್ಪನ್ನು ಸೇರಿಸದಿರಿ. ನೀವು ಸೇವಿಸುವ ಸೂಪ್ ಆದಷ್ಟು ಸರಳವಾಗಿರಲಿ.

ದಿನ 2 - ಕ್ಯಾಬೇಜ್ ಡಯೆಟ್:
ಒಂದು ಉತ್ತಮ ತರಕಾರಿಯಾಗಿರುವ ಕ್ಯಾಬೇಜ್ ತೂಕ ಇಳಿಸುವ ಅಂಶಗಳನ್ನು ಹೆಚ್ಚು ಹೊಂದಿದೆ. ಕ್ರ್ಯಾಶ್ ಡಯೆಟ್‌ನ 2 ನೇ ದಿನದಂದು ಕ್ಯಾಬೇಜ್ ಡಯೆಟ್ ಅನ್ನು ಸೇವಿಸಿ. ಅಧಿಕ ಪ್ರಮಾಣದ ಫೈಬರ್ ಅನ್ನು ಒಳಗೊಂಡಿರುವ ತರಕಾರಿಯಾಗಿರುವ ಕ್ಯಾಬೇಜ್ ನಿಮ್ಮ ದೇಹವನ್ನು ಸ್ವಚ್ಛಗೊಳಿಸುತ್ತದೆ.

ದಿನ 3 - ಗ್ರೇಪ್‌ಫ್ರುಟ್ ಡಯೆಟ್:
ತೂಕ ಇಳಿಕೆಗಾಗಿ ಏಳು ದಿನದ ಕ್ರ್ಯಾಶ್ ಡಯೆಟ್‌ನಲ್ಲಿ 3 ನೇ ದಿನ ಗ್ರೇಪ್‌ಫ್ರುಟ್ ನಿಮ್ಮ ಪ್ಲೇಟ್‌ನಲ್ಲಿ ಇರುವಂತೆ ನೋಡಿಕೊಳ್ಳಿ. ಗ್ರೇಪ್‌ಫ್ರುಟ್‌ನಲ್ಲಿ ಕೊಬ್ಬನ್ನು ಕರಗಿಸುವ ಎಂಜೀಮ್‌ಗಳು ಹೇರಳವಾಗಿದ್ದು ಇದು ವೇಗವಾಗಿ ದೇಹ ತೂಕವನ್ನು ಇಳಿಸಲು ಸಹಕಾರಿಯಾಗಿದೆ. ಆದ್ದರಿಂದ ಮೂರನೇ ದಿನದಂದು ಈ ಹಣ್ಣನ್ನು ಯಾವ ರೂಪದಲ್ಲಾದರೂ ಸೇವಿಸಿ.

ದಿನ 4 - ಜ್ಯೂಸ್ ಡಯೆಟ್:
ಹೌದು, ಹಣ್ಣುಗಳು ದೇಹದ ಅಧಿಕ ತೂಕವನ್ನು ಇಳಿಸಲು ಸಹಕಾರಿಯಾಗಿದೆ. ಕ್ರ್ಯಾಶ್ ಡಯೆಟ್ ಯೋಜನೆಯ ನಾಲ್ಕನೇ ದಿನದಂದು ಹಣ್ಣಿನ ರಸಗಳನ್ನು ಸೇವಿಸಿ. ಜ್ಯೂಸ್‌ನಲ್ಲಿರುವ ನೀರಿನಂಶ ನಿಮ್ಮ ಹೊಟ್ಟೆಯನ್ನು ತುಂಬಿಸಿ ನಿಮ್ಮ ಹಸಿವನ್ನು ನಿಯಂತ್ರಣದಲ್ಲಿಡುತ್ತವೆ.

ದಿನ 5 - ತರಕಾರಿ ಡಯೆಟ್:
ವಿಟಮಿನ್ ಮತ್ತು ನ್ಯೂಟ್ರೀನ್‌ಗಳ ಅತ್ಯಧಿಕ ಸಾರವನ್ನು ಒಳಗೊಂಡಿರುವ ತರಕಾರಿಗಳು ನಿಮ್ಮ ತೂಕ ಇಳಿಕೆಗೆ ಸಹಕಾರಿ. ಪಾಲಾಕ್, ಕ್ಯಾರೇಟ್, ಆಲೂಗಡ್ಡೆ ಹೀಗೆ ಬಗೆಬಗೆಯ ತರಕಾರಿಗಳನ್ನು ನಿಮ್ಮ ಡಯೆಟ್ ಯೋಜನೆಯ ಐದನೇ ದಿನದಂದು ಸೇವಿಸಿ.

ದಿನ 6 - ನೀರು ಡಯೆಟ್:
ಆರನೇ ದಿನಂದು, ನಿಮ್ಮ ದೇಹಕ್ಕೆ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯ ಮಾಡುವ ನೀರಿನ ಡಯೆಟ್ ಅನ್ನು ಪಾಲಿಸಿ. ಆರನೇ ದಿನಂದು 6 ರಿಂದ 8 ಲೀಟರ್‌ನಷ್ಟು ನೀರನ್ನು ಕುಡಿಯಿರಿ. ದೇಹದ ಕೊಬ್ಬನ್ನು ಕರಗಿಸಲು ನೀರು (ಬೆಚ್ಚಗಿನ ನೀರು) ಸಹಕಾರಿ.

ದಿನ 7 - ಹಾಲಿವುಡ್ ಡಯೆಟ್:
ಕ್ರ್ಯಾಶ್ ಡಯೆಟ್ ಯೋಜನೆಯ ಏಳನೇ ದಿನದಂದು, ನಿಮ್ಮ ದೇಹಕ್ಕೆ ಒಂದು ಉತ್ತಮ ಟ್ರೀಟ್ ಅನ್ನು ಕೊಡುವ ಸಮಯವಾಗಿದೆ. ಸ್ವಲ್ಪ ಕೋಕೋ ಮತ್ತು ನಿಮ್ಮ ಮೆಚ್ಚಿನ ಊಟದ ಸಣ್ಣ ಭಾಗದಷ್ಟನ್ನು ಸೇವಿಸಿ. ನೀವು ಹೆಚ್ಚು ತಿನ್ನುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.



Click it and Unblock the Notifications
