For Quick Alerts
ALLOW NOTIFICATIONS  
For Daily Alerts

ಟೂತ್ ಬ್ರಷ್ ನ ಬಗ್ಗೆ ತಿಳಿದಿರಲೇಬೇಕಾದ ಅಂಶಗಳು

By Viswanath S
|

ಬೆಳಗ್ಗೆ ಎದ್ದ ಕೂಡಲೇ ಹಲ್ಲುಜ್ಜುವುದು ದೈನಂದಿನ ಒಂದು ಪ್ರಮುಖ ಕಾರ್ಯ. ಹಲ್ಲುಜ್ಜುವುದು ವೈಯುಕ್ತಿಕ ಬಾಯಿಯ ನೈರ್ಮಲ್ಯ ಮತ್ತು ಪರಿಣಾಮಕಾರಿಯಾಗಿ ಹಲ್ಲುಗಳ ಮೇಲಿನ ಲೋಳೆಯನ್ನು ತೆಗೆಯುವ ಕಾರ್ಯಕ್ರಮ. ಹಾಗೆಯೇ ಟೂತ್ ಬ್ರಷ್ ನ ಆರೈಕೆ ಮತ್ತು ನಿರ್ವಹಣೆಯೂ ಕೂಡ ಮೌಖಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ದಂತವೈದ್ಯರ ಸಲಹೆಯಂತೆ ಒಂದು ಬ್ರಷ್ ಅನ್ನು ಪ್ರತಿ 3 - 4 ತಿಂಗಳಿಗೆ ಬದಲಾಯಿಸಬೇಕೆಂದು ಶಿಫಾರಸು ಮಾಡುತ್ತಾರೆ.

ಟೂತ್ ಬ್ರಷ್ ಅನ್ನು ಉಪಯೋಗಿಸಿದ ಮೇಲೆ ಮುಚ್ಚಿಡದಿದ್ದರೆ 100 ದಶ ಲಕ್ಷಕ್ಕಿಂತಾ ಹೆಚ್ಚು ಬ್ಯಾಕ್ಟೀರಿಯಾ ಅಲ್ಲದೆ ಅತಿಸಾರ ಮಾಡಬಲ್ಲ ಬ್ಯಾಕ್ಟೀರಿಯಾಗಳು ಮತ್ತು ಚರ್ಮಕ್ಕೆ ಸೋಂಕು ಉಂಟುಮಾಡುವ ಸ್ಟ್ಯಾಫಿಲೊಕೊಸ್ಸಿ(staphylococci) ("ಸ್ಟ್ಯಾಫ್") ಬ್ಯಾಕ್ಟೀರಿಯಾಕ್ಕೆ ಆಶ್ರಯಕೊಟ್ಟಂತೆ.

The Dirty Secret Of Our Toothbrush

* ನಿಮ್ಮ ಟೂತ್ ಬ್ರಷ್ ನ ಬಿರುಸುಗಳ ಮಧ್ಯೆ ಏನು ಅವಿತುಕೊಳ್ಳುತ್ತದೆಯೆಂದು ನಿಮಗೆ ಗೊತ್ತಿದೆಯೇ?

ನಿಮ್ಮ ಬಾಯಿಯೊಳಗೆ ಇರುವ ಬ್ಯಾಕ್ಟೀರಿಯ.

ನಿಮ್ಮ ಬಾಯಿಯೊಳಗೆ ನೂರಾರು ಸೂಕ್ಷ್ಮಜೀವಿಗಳು ದಿನವಿಡೀ ಇರುತ್ತವೆ. ಇದೇನೂ ಹೆಚ್ಚಲ್ಲ. ಸೂಕ್ಷ್ಮಜೀವಿಗಳು ಯಾವಾಗಲೂ ಇದ್ದೇ ಇರುತ್ತವೆಯಾದರೂ ಅವುಗಳ ಒಂದು ಅನಾರೋಗ್ಯಕರ ಸಮತೋಲನ ಉಂಟಾದಾಗ ಮಾತ್ರ ಸಮಸ್ಯೆಗಳು ಪ್ರಾರಂಭವಾಗುತ್ತದೆ. ನೀವು ಹಲ್ಲುಜ್ಜುವಾಗ ಹಲ್ಲಿನ ಮೇಲಿನ ಲೋಳೆಯನ್ನು ತೆಗೆಯುತ್ತೀರಿ. ಅದೂ ಕೂಡ ಒಂದು ರೀತಿಯ ಬ್ಯಾಕ್ಟೀರಿಯಾ. ಆದ್ದರಿಂದ ನೀವು ಪ್ರತಿ ಬಾರಿ ಬ್ರಷ್ ಮಾಡುವಾಗ ಬ್ರಷ್ ನಲ್ಲಿರುವ ಬ್ಯಾಕ್ಟೀರಿಯಾವನ್ನು ಮತ್ತೆ ಹಲ್ಲುಗಳ ಮೇಲೆ ಹಾಕುತ್ತೀರಿ.

ನೀವು ಬ್ರಷ್ ಮಾಡಿದಾಗ ನಿಮಗೆ ಬಾಯಿಯೊಳಗೆ ಏನಾಗುತ್ತದೆ?

ನಿಮ್ಮ ಹಲ್ಲುಜ್ಜುವ ಕ್ರಿಯೆಯಲ್ಲಿ, ವಿಶೇಷವಾಗಿ ಎಲೆಕ್ಟ್ರಿಕ್ ಬ್ರಷ್ ಉಪಯೋಗಿಸುವಾಗ, ಹಲ್ಲುಗಳ ಮೇಲಿರುವ ಜೀವಿಗಳನ್ನು ಕೆಳಗಿರುವ ಚರ್ಮದ ಕಡೆಗೆ ತಳ್ಳುತ್ತದೆ. ನಿಮ್ಮ ಬ್ರಷ್ ನಲ್ಲಿ ಸೂಕ್ಷ್ಮಾಣುಗಳು ಮುಂಚೆಯೇ ಇರುವುದರಿಂದ ಹೊಸ ರೋಗ ಬರುವುದಿಲ್ಲವಾದರೂ ಈ ಹಿಂದೆ ಬಂದಿರಬಹುದಾದ ರೋಗವು ಮರುಕಳಿಸುವ ಸಾಧ್ಯತೆಯಿರುತ್ತದೆ. ಆದರೆ ನೀವು ಉಪಯೋಗಿಸುವ ಬ್ರಷ್ ನ್ನು ಇತರರು ಉಪಯೋಗಿಸಿದ್ದರೆ ಮಾತ್ರ ನಿಮಗೆ ಹೊಸರೋಗ ಬರುವ ಸಾಧ್ಯತೆಯಿರುತ್ತದೆ.

ನಿಮ್ಮ ಟೂತ್‌ಬ್ರಷ್ ನಿಂದ ನಿಮಗೆ ಸೋಂಕು ಬರಬಹುದೆಂದೆನಿಸುತ್ತಿದೆಯೇ?

ಬಹುಶಃ ಸಾಧ್ಯವಿಲ್ಲ. ನಿಮ್ಮ ಬಾಯಿಯಲ್ಲಿ ಎಷ್ಟು ಬ್ಯಾಕ್ಟೀರಿಯ ಜೀವಿಸುತ್ತಿದ್ದರೂ ಅಥವಾ ನಿಮ್ಮ ಬ್ರಷ್ ನ ಮೂಲಕ ಸೇರಿದ್ದರೂ ನಿಮ್ಮ ದೇಹದಲ್ಲಿ ಸ್ವಾಭಾವಿಕ ರಕ್ಷಣೆ ಇರುವುದರಿಂದ ನೀವು ಕೇವಲ ಹಲ್ಲುಜ್ಜುವ ಮೂಲಕ ನಿಮ್ಮ ಬಾಯಿಯಲ್ಲಿ ಸೋಂಕು ಬೆಳವಣಿಗೆಯಾಗುವುದು ಅಸಂಭವ.

ನೀವು ಟಾಯ್ಲೆಟ್ ಪ್ಲಶ್ ಮಾಡುವ ಹತ್ತಿರದಲ್ಲಿ ಹಲ್ಲನ್ನು ಬ್ರಷ್ ಮಾಡಬೇಡಿ.

ಸಾಧಾರಣವಾಗಿ ಬಹಳಷ್ಟು ಸ್ನಾನದ ಮನೆಗಳು ಚಿಕ್ಕದಾಗಿರುತ್ತವೆ. ಇನ್ನು ಕೆಲವು ಮನೆಗಳಲ್ಲಿ, ಟಾಯ್ಲೆಟ್ ಕೂಡ ನೀವು ಬ್ರಷ್ ಮಾಡುವ ಸಿಂಕ್ ಹತ್ತಿರವೇ ಇರುತ್ತದೆ. ಹಾಗಿರುವಾಗ ಪ್ರತಿಸಲ ಪ್ಲಶ್ ಮಾಡಿದಾಗ ನೀರಿನ ತುಂತುರು ಹನಿಯಲ್ಲಿ ಬ್ಯಾಕ್ಟೀರಿಯಾ ಸೇರಿದ್ದು ಗಾಳಿಯಲ್ಲಿ ತೇಲಿಬಂದು ನಿಮ್ಮ ಟೂತ್ ಬ್ರಷ್ ಮೇಲೆ ಬೀಳುವ ಸಂಭವ ಇರುತ್ತದೆ. ಹಾಗಾಗಿ ನೀವು ನಿಮ್ಮ ಟೂತ್ ಬ್ರಷ್ ಅನ್ನು ಸಾಧ್ಯವಾದಷ್ಟು ದೂರವಿಡುವುದು ಒಳ್ಳೆಯದು.

ಟೂತ್ ಬ್ರಷ್ ಹೋಲ್ಡರ್.

ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಟಾಯ್ಲೆಟ್ ಗಳ ಹತ್ತಿರವೇ ಟೂತ್ ಬ್ರಷ್ ಹೋಲ್ಡರ್ ಇರುವುದರಿಂದ ಪ್ರತಿಸಲ ಟಾಯ್ಲೆಟ್ ಪ್ಲಶ್ ಮಾಡಿದಾಗ ನೀರಿನ ತುಂತುರು ಹನಿಗಳ ಜೊತೆಯಲ್ಲಿ ಬರುವ ಬ್ಯಾಕ್ಟೀರಿಯಾ ಬ್ರಷ್ ಗಳಿಗೆ ತಾಕುವ ಸಂಭವ ಹೆಚ್ಚು. ವಾಸ್ತವವಾಗಿ ಇದು ಮನೆಯಲ್ಲಿ ಅತ್ಯಂತ ಕೊಳಕಾದ ಮೂರನೇ ಸ್ಥಳ.

ಟೂತ್ ಬ್ರಷ್ ಇಡಲು ಸೂಕ್ತ ಸಲಹೆಗಳು:

* ಪ್ರತಿ ಬಾರಿ ಟೂತ್ ಬ್ರಷ್ ಉಪಯೋಗಿಸಿದನಂತರ ಹರಿಯುವ ನೆಲ್ಲಿನೀರಿನಿಂದ ಚೆನ್ನಾಗಿ ತೊಳೆಯಿರಿ.
* ತೇವಾಂಶದಲ್ಲಿ ಬ್ಯಾಕ್ಟೀರಿಯ ಬಹಳ ಬೇಗ ಹರಡುವುದರಿಂದ ಬ್ರಷ್ ನಲ್ಲಿರುವ ನೀರನ್ನು ಚೆನ್ನಾಗಿ ಕೊಡವಿ ತೇವಾಂಶವಿಲ್ಲದಂತೆ ರಕ್ಷಿಸಿ.
* ಬ್ರಷ್ ನ್ನು ನೆಟ್ಟಗೆ ನಿಲ್ಲಿಸಿ: ನಿಮ್ಮ ಟೂತ್ ಬ್ರಷ್ ಅನ್ನು ಅಡ್ಡಬಾಗಿ ಇಡದೆ ನೇರವಾಗಿ ಹೋಲ್ಡರಿನಲ್ಲಿ ಇಡಿ.
* ನಿಮ್ಮ ಬ್ರಷ್ ಶನ್ನು ನೀವೇ ಉಪಯೋಗಿಸಿ. ನಿಮ್ಮ ಸಹೋದರಿ, ಸಹೋದರ, ಸಂಗಾತಿ ಅಥವಾ ನಿಮ್ಮ ರೂಮ್ ಮೇಟ್ ಯಾರಾಗಿದ್ದರೂ ಸರಿ, ಅವರ ಬ್ರಷ್ ನ್ನು ನೀವು ಉಪಯೋಗಿಸಬೇಡಿ ಮತ್ತು ನಿಮ್ಮ ಬ್ರಷ್ ನ್ನು ಅವರಿಗೆ ಕೊಡಬೇಡಿ.
* ನಿಮ್ಮ ಬ್ರಷ್ ಶನ್ನು ಬೇರೆಯವರ ಬ್ರಷ್ ನ ಅಕ್ಕಪಕ್ಕದಲ್ಲಿ ಒಂದೇ ಲೋಟದಲ್ಲಿಡಬೇಡಿ.
* ಟೂತ್ ಬ್ರಷ್ ಗಳು ಒಂದಕ್ಕೊಂದು ತಾಕಿಸಿಕೊಂಡರೆ ಸೂಕ್ಷ್ಮ ಜೀವಾಣುಗಳು ಒಂದರಿಂದ ಇನ್ನೊಂದಕ್ಕೆ ವಿನಿಮಯವಾಗಬಹುದು.

ನಿಮ್ಮ ಟೂತ್ ಬ್ರಷ್ ಶನ್ನು ಯಾವಾಗ ಹೊಸದಕ್ಕೆ ಬದಲಾಯಿಸಬೇಕು?

ಪ್ರತಿ ಮೂರರಿಂದ ನಾಲ್ಕು ತಿಂಗಳೊಳಗಾಗಿ ನಿಮ್ಮ ಟೂತ್ ಬ್ರಷ್ ಅನ್ನು ಎಸೆದುಬಿಡಬೇಕು. ಅದರ ಬಿರುಗೂದಲುಗಳು ಕ್ಷೋಭೆಗೊಂಡಿದ್ದರೆ ನಿಮಗೆ ರೋಗ ನಿರೋಧಕ ವ್ಯವಸ್ಥೆಯು ಕಡಿಮೆಯಿದ್ದರೆ ಸಹಾ ಬ್ರಷ್ ಅನ್ನು ಬದಲಿಸಿ.

ನಿಮ್ಮ ಬಾಯಿಯೊಳಗೆ ಒಳ್ಳೆಯ ಆರೋಗ್ಯದ ಅಭ್ಯಾಸ ಮಾಡಿ.

ಬ್ಯಾಕ್ಟೀರಿಯದಿಂದ ಒಸಡು ರೋಗ, ಹಲ್ಲು ಕೊಳೆತ ಮತ್ತು ಉಸಿರಿನಲ್ಲಿ ದುರ್ವಾಸನೆ ಉಂಟಾಗುತ್ತವೆ. ನೀವು ಹಲ್ಲುಜ್ಜುವುದು ಮತ್ತು ಡೆಂಟಲ್ ಪ್ಲಾಸ್ಸಿನಿಂದ ಸಂದಿಗಳನ್ನು ಶುಚಿತ್ವಗೊಳಿಸುವುದು ನಿಯತವಾಗಿ ಕೆಟ್ಟ ಬ್ಯಾಕ್ಟೀರಿಯಾ ಸೇರದಂತೆ ಅಭ್ಯಾಸಮಾಡಿ. ಹಲ್ಲುಜ್ಜುವ ಮುನ್ನ ಆಂಟಿಬ್ಯಾಕ್ಟೀರಿಯ ಮೌತ್ ವಾಶ್ ಉಪಯೋಗಿಸಿದರೆ ಬ್ಯಾಕ್ಟೀರಿಯಾವು ನಿಮ್ಮ ಬ್ರಷ್ ಗೆ ಸೇರುವುದನ್ನು ತಡೆಯಬಹುದು.

English summary

The Dirty Secret Of Our Toothbrush

Toothbrushing plays an important everyday role for personal oral hygiene and effective plaque removal. Appropriate toothbrush care and maintenance are also important considerations for sound oral hygiene
X
Desktop Bottom Promotion