Latest Updates
-
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು!
ಮುಟ್ಟು ಹತ್ತಿರವಾಗುತ್ತಿದ್ದಂತೆ ಕಂಡು ಬರುವ ಲಕ್ಷಣಗಳು
ಮಹಿಳೆಯರ ಆರೋಗ್ಯಕ್ಕೆ ನಿಯಮಿತ ಮುಟ್ಟು ಅವಶ್ಯಕ. ಅನಿಯಮಿತ ಮುಟ್ಟಿನ ಸಮಸ್ಯೆಯಿದ್ದರೆ ಅನೇಕ ಸಮಸ್ಯೆಗಳು ಕಂಡು ಬರುವುದು. ಅನಿನಿಯಮಿತ ಮುಟ್ಟು ಉಂಟಾಗುತ್ತಿದ್ದರೆ ಮಕ್ಕಳಾಗಲು ತೊಂದರೆ ಉಂಟಾಗಬಹುದು.
ಇನ್ನು ನಿಯಮಿತವಾಗಿ ಮುಟ್ಟು ಉಂಟಾಗುತ್ತಿರುವವರಲ್ಲಿ ಕೂಡ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು, ಬೆನ್ನು ನೋವು, ಖಿನ್ನತೆ ಈ ರೀತಿಯ ಸಮಸ್ಯೆಗಳು ಕಂಡು ಬರುವುದು. ಅದರಲ್ಲೂ ಈಗಷ್ಟೇ ಪ್ರಾಯಕ್ಕೆ ಬಂದ ಹೆಣ್ಣು ಮಕ್ಕಳಿಗೆ ತಮ್ಮ ಮುಟ್ಟಿನ ಸಮಯ ಸಮೀಪವಾಗುತ್ತಿದೆ ಎಂದು ತಿಳಿಯದೆ ಗೊಂದಲಕ್ಕೆ ಒಳಗಾಗುತ್ತಾರೆ. ಅವರಿಗೆ ಇದರ ಬಗ್ಗೆ ಮಾಹಿತಿ ನೀಡುವುದರಿಂದ ಅವರಲ್ಲಿರುವ ಗೊಂದಲವನ್ನು ಕಡಿಮೆಮಾಡಬಹುದು.
ಮುಟ್ಟಿನ ಸಮಯ ಹತ್ತಿರ ಬರುತ್ತಿದ್ದಂತೆ ಹೆಣ್ಣಿನ ದೇಹದಲ್ಲಿ ಈ ಕೆಳಗಿನ ಬದಲಾವಣೆಗಳು ಕಂಡು ಬರುತ್ತದೆ, ಇದರಿಂದ ಮುಟ್ಟು ಸಮೀಪವಾಗುತ್ತಿದೆ ಎಂದು ತಿಳಿಯಬಹುದು:

ಜನನೇಂದ್ರೀಯ ಒಣಗುವುದು
ಕೆಲವರಿಗೆ ಈ ಸಮಯದಲ್ಲಿ ಅಧಿಕ ಬಿಳುಪು ಹೋದರೆ ಮತ್ತೆ ಕೆಲವರಿಗೆ ಜನನೇಂದ್ರೀಯ ಒಣಗುವುದು. ಈ ರೀತಿ ಉಂಟಾದರೆ ನೋವು ಕಂಡು ಬರುವುದು.

ಹೊಟ್ಟೆಯ ಸ್ನಾಯುಗಳು ಬಿಗಿದುಕೊಳ್ಳುವುದು
ಕೆಲವರಿಗೆ ಮುಟ್ಟಿನ ಒಂದು ಅಥವಾ ಎರಡು ದಿನ ಮೊದಲು ಬಿಳುಪು ಬರುತ್ತದೆ ಹಾಗೂ ಹೊಟ್ಟೆಯ ಸ್ನಾಯುಗಳು ಎಲೆದುಕೊಂಡಂತೆ ಭಾಸವಾಗಿ, ಹೊಟ್ಟೆ ನೋವು ಕಂಡು ಬರುವುದು.

ಸ್ತನದಲ್ಲಿ ನೋವು
ಮುಟ್ಟಿನ ಸಮಯದಲ್ಲಿ ಸ್ತನದಲ್ಲಿ ನೋವು ಕಂಡು ಬರುವುದು ಸಾಮಾನ್ಯ. ಕೆಲವರಿಗೆ ತುಂಬಾ ನೋವು ಉಂಟಾಗುತ್ತದೆ. ಈ ರೀತಿ ಉಂಟಾದರೆ ಭಯ ಪಡಬೇಕಾಗಿಲ್ಲ, ಮುಟ್ಟಿನ ನಂತರ ಸರಿ ಹೋಗುವುದು.

ಸೊಂಟ ನೋವು
ಕೆಲವರಲ್ಲಿ ಹೊಟ್ಟೆ ನೋವು ಕಾಣಿಸಿದರೆ ಮತ್ತೆ ಕೆಲವರಲ್ಲಿ ಸೊಂಟ ನೋವು ಕಾಣಿಸುತ್ತದೆ. ಕೆಳ ಹೊಟ್ಟೆ ನೋವು ಕಂಡು ಬರುವುದು.

ತಲೆನೋವು
ಮುಟ್ಟಿನ ಮೊದಲು ತಲೆನೋವು, ಸೋಮಾರಿತನ ಇವೆಲ್ಲಾ ಕಂಡು ಬರುವುದು ಸಾಮಾನ್ಯ.

ಆಗಾಗ ಮೂತ್ರವಿಸರ್ಜನೆ ಹೋಗುವುದು
ಕೆಲವು ಮಹಿಳೆಯರಿಗೆ ಮುಟ್ಟಿನ ಕೆಲ ದಿನಗಳ ಮುಂಚೆ ಆಗಾಗ ಮೂತ್ರ ವಿಸರ್ಜನೆಗೆ ಹೋಗಬೇಕಾಗುತ್ತದೆ. ಈ ರೀತಿಯ ಸಮಸ್ಯೆ ಇರುವವರು ಈ ಸಮಯದಲ್ಲಿ ಹೆಚ್ಚಿನ ನೀರು ಕುಡಿಯುವುದು ಒಳ್ಳೆಯದು.

ಹೊಟ್ಟೆ ಹಸಿವು
ಮುಟ್ಟಿನ ಸಮಯ ಹತ್ತಿರವಾಗುತ್ತಿರುವಾಗ ಈ ರೀತಿಯ ಲಕ್ಷಣಗಳು ಹೆಚ್ಚಿನ ಮಹಿಳೆಯರಲ್ಲಿ ಕಂಡು ಬರುತ್ತದೆ. ವಿಪರೀತ ಹೊಟ್ಟೆ ಹಸಿವು ಉಂಟಾಗುತ್ತದೆ, ಆಗಾಗ ಏನಾದರೂ ತಿನ್ನಬೇಕೆನಿಸುತ್ತದೆ.

ಮೂಡ್ ಬದಲಾವಣೆ
ಈ ಸಮಯದಲ್ಲಿ ಮೂಡ್ ನಲ್ಲಿ ಬದಲಾವಣೆ ಉಂಟಾಗುತ್ತದೆ. ಕೆಲವರು ವಿನಾಕಾರಣ ಬೇಜಾರಿನಿಂದ ಇದ್ದರೆ, ಮತ್ತೆ ಕೆಲವರು ಈ ಸಮಯದಲ್ಲಿ ತುಂಬಾ ಖುಷಿಯಾಗಿರುತ್ತಾರೆ. ಮತ್ತೆ ಕೆಲವರು ವಿಪರೀತ ಕೋಪಗೊಳ್ಳುತ್ತಾರೆ.

ತಲೆ ಸುತ್ತು
ತಲೆ ಸುತ್ತು , ಸುಸ್ತು, ತುಂಬಾ ನಿದ್ದೆ ಈ ರೀತಿ ಕಂಡು ಬರುವುದು. ಈ ಲಕ್ಷಣಗಳು ಮುಟ್ಟಿನ ಸಮಯ ಹತ್ತಿರವಾಗುತ್ತಿದೆ ಎಂದು ಸಾರುವ ಲಕ್ಷಣಗಳಾಗಿವೆ.



Click it and Unblock the Notifications