Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಗ್ರೀನ್ ಆಪಲ್ ತಿನ್ನಿ, ಆರೋಗ್ಯವಾಗಿರಿ
ಆಂಗ್ಲ ಭಾಷೆಯಲ್ಲಿ ಒಂದು ನಾಣ್ಣುಡಿಯಿದೆ " ಅನ್ ಅಪಲ್ ಎ ಡೇ ಕೀಪ್ಸ್ ದ ಡಾಕ್ಟರ್ ಅವೇ" ಎಂದು. ನಿಜ ಈ ಮಾತು ಹಸಿರು ಸೇಬಿನ ವಿಚಾರದಲ್ಲಿ ನೂರಕ್ಕೆ ನೂರರಷ್ಟು ಸತ್ಯ. ಸೇಬು ಹಣ್ಣುಗಳು ನಮ್ಮ ಪಾಲಿಗೆ ಪ್ರಕೃತಿ ಮಾತೆ ಕೊಟ್ಟ ಶ್ರೇಷ್ಠ ವರವೆಂದೆ ಹೇಳಬಹುದು. ಇವುಗಳಲ್ಲಿ ಅತ್ಯುತ್ತಮವಾದ ಪೋಷಕಾಂಶಗಳು, ವಿಟಮಿನ್‍ಗಳು ಮತ್ತಿತರ ಅಂಶಗಳು ಸಮೃದ್ಧವಾಗಿರುತ್ತವೆ. ಇವುಗಳೆಲ್ಲದರ ಸಲುವಾಗಿ ಸೇಬು ನಮ್ಮ ಆಹಾರದಲ್ಲಿ ಮಾತ್ರವಲ್ಲದೆ ನಮ್ಮ ದಿನ ನಿತ್ಯದ ಅವಿಭಾಜ್ಯ ಅಂಗವಾಗಿದೆ.
ಸೇಬುಗಳಲ್ಲಿ ಹಲವಾರು ಬಗೆಗಳಿವೆ. ಕೆಂಪು ಸೇಬು ಎಲ್ಲೆಡೆ ಸಾಮಾನ್ಯವಾಗಿ ದೊರೆಯುತ್ತವೆ. ಜೊತೆಗೆ ಹಸಿರು ಸೇಬುಗಳು ಸ್ವಲ್ಪ ಹುಳಿ ಮತ್ತು ಸ್ವಲ್ಪ ಸಿಹಿಗಳಿಂದ ಕೂಡಿರುತ್ತದೆ. ಹಸಿರು ಸೇಬುಗಳು ಬಹಳ ಹಿಂದಿನಿಂದಲು ಆರೋಗ್ಯಕರವಾದ ಹಣ್ಣು ಎಂದು ಪರಿಗಣಿಸಲ್ಪಟ್ಟಿದೆ. ಇದರಲ್ಲಿ ಯಥೇಚ್ಛವಾಗಿರುವ ಪ್ರೋಟಿನ್‍ಗಳು, ವಿಟಮಿನ್‍ಗಳು, ಮಿನರಲ್‍ಗಳು, ಮತ್ತು ನಾರಿನಂಶ ( ಫೈಬರ್)ಗಳು ಇದನ್ನು ಆರೋಗ್ಯಕ್ಕಾಗಿ ತಿನ್ನುವ ಹಣ್ಣುಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ತಂದು ನೀಡಿದೆ. ಜೀರ್ಣ ಶಕ್ತಿಯ ಸಮಸ್ಯೆ, ರಕ್ತದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ರಕ್ತದೊತ್ತಡ ನಿವಾರಿಸಲು, ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಹತೋಟಿಯಲ್ಲಿಡಲು ಮತ್ತು ಪಚನ ಕ್ರಿಯೆಯನ್ನು ಸರಾಗಗೊಳಿಸಿ, ಹೊಟ್ಟೆ ಹಸಿಯುವಂತೆ ಮಾಡಲು ಹಸಿರು ಸೇಬುಗಳು ಅತ್ಯಂತ ಪ್ರಯೋಜನಕಾರಿ.
ಹಸಿರು ಸೇಬು ಸೇವಿಸುವುದರಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳು.

1. ಹೆಚ್ಚು ಪ್ರಮಾಣದ ನಾರಿನಂಶವನ್ನು ಹೊಂದಿರುತ್ತದೆ.
ಇದರಲ್ಲಿ ಹೆಚ್ಚು ಪ್ರಮಾಣದ ನಾರಿನಂಶವಿದ್ದು, ಇದು ನಮ್ಮ ದೇಹದಲ್ಲಿನ ಕಶ್ಮಲಗಳನ್ನು ತೊಳೆದು ಹಾಕುವುದಲ್ಲದೆ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ ಹಸಿರು ಸೇಬು ನಮ್ಮ ಪಚನ ಕ್ರಿಯೆ ಮತ್ತು ಹೃದಯದ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ. ಯಾವಾಗಲು ಹಸಿರು ಸೇಬನ್ನು ಅದರ ಸಿಪ್ಪೆಯ ಸಹಿತ ತಿನ್ನುವುದು ಒಳ್ಳೆಯದು. ಇದು ನಿಮ್ಮ ಕರುಳು ಮತ್ತು ಜೀರ್ಣಾಂಗದ ಎಲ್ಲಾ ಅಂಗಗಳನ್ನು ಪರಿಶುದ್ಧಗೊಳಿಸುತ್ತದೆ ಮತ್ತು ಆರೋಗ್ಯವಂತವನ್ನಾಗಿಸುತ್ತದೆ.

2. ಖನಿಜಾಂಶವನ್ನು ಹೊಂದಿದೆ
ಹಸಿರು ಸೇಬಿನಲ್ಲಿ ಕಬ್ಬಿಣ, ಸತು, ತಾಮ್ರ, ಮ್ಯಾಂಗನೀಸ್, ಪೊಟಾಶಿಯಂ ಇತ್ಯಾದಿ ಖನಿಜಗಳು ಯಥೇಚ್ಛವಾಗಿವೆ. ಈ ಎಲ್ಲ ಖನಿಜಗಳು ಮಾನವನ ದೇಹಕ್ಕೆ ಅತ್ಯಾವಶ್ಯಕವಾದವುಗಳಾಗಿದ್ದು, ಆರೋಗ್ಯವರ್ಧಕಗಳಾಗಿ ಕಾರ್ಯ ನಿರ್ವಹಿಸುತ್ತವೆ. ಈ ಸೇಬಿನಲ್ಲಿರುವ ಕಬ್ಬಿಣಾಂಶವು ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯ ಕೂಡ ಸುಧಾರಿಸುತ್ತದೆ.

3. ಕಡಿಮೆ ಕೊಬ್ಬಿನಂಶವನ್ನು ಹೊಂದಿದೆ.
ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ನಿಜಕ್ಕು ವರದಾನ. ಡಯಟ್ ಮಾಡುವವರಾಗಲಿ ಅಥವಾ ಪ್ರತಿದಿನ ಜಿಮ್‍ಗೆ ಹೋಗುವವರಾಗಲಿ ತಮ್ಮ ಆಹಾರ ಕ್ರಮದಲ್ಲಿ ಒಂದು ಹಸಿರು ಸೇಬನ್ನು ಸೇರಿಸುವುದು ಉತ್ತಮ. ಇದು ರಕ್ತ ನಾಳಗಳಲ್ಲಿರುವ ಕೊಬ್ಬನ್ನು ಹೀರಿಕೊಂಡು, ಹೃದಯಕ್ಕೆ ರಕ್ತ ಪರಿಚಲನೆ ಸರಾಗವಾಗುವಂತೆ ಮಾಡುತ್ತದೆ. ಇದರಿಂದ ಹೃದಯಾಘಾತದ ಸಾಧ್ಯತೆ ಕಡಿಮೆಯಾಗುತ್ತದೆ.

4. ಚರ್ಮದ ಕ್ಯಾನ್ಸರನ್ನು ತಡೆಯುತ್ತದೆ.
ಈ ಸೇಬಿನಲ್ಲಿ ವಿಟಮಿನ್ ಸಿ ಇದೆ. ಇದು ಫ್ರೀ ರಾಡಿಕಲ್ಸ್ ನಿಂದ ಚರ್ಮದ ಕೋಶಗಳ ಮೇಲೆ ಉಂಟಾಗುವ ಹಾನಿಯನ್ನು ತಡೆಗಟ್ಟುತ್ತದೆ. ಇದರಿಂದಾಗಿ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

5. ಸಮೃದ್ಧವಾದ ಅಂಟಿ ಆಕ್ಸಿಡೆಂಟ್‍ಗಳ ಆಗರ
ಈ ಸೇಬಿನಲ್ಲಿ ಜೀವಕೋಶಗಳ ಮರು ನಿರ್ಮಾಣಕ್ಕೆ ಮತ್ತು ಪುನಃಶ್ಚೇತನಕ್ಕೆ ಅತ್ಯಾವಶ್ಯಕವಾಗಿರುವ ಆಂಟಿ ಆಕ್ಸಿಡೆಂಟ್‍ಗಳು ಅಧಿಕ ಪ್ರಮಾಣದಲ್ಲಿ ಇದೆ. ಇದು ನಿಮ್ಮ ತ್ವಚೆಗೆ ಹೊಳಪನ್ನು ಮತ್ತು ಆರೋಗ್ಯವನ್ನು ನೀಡುತ್ತವೆ. ಈ ಆಂಟಿ ಆಕ್ಸಿಡೆಂಟ್‍ಗಳು ನಿಮ್ಮ ಯಕೃತ್ತಿನ ಕಾರ್ಯ ಕ್ಷಮತೆಯನ್ನು ಸಹ ಹೆಚ್ಚಿಸುತ್ತವೆ.

6. ಆರೋಗ್ಯಕರವಾದ ಸದೃಢವಾದ ಮೂಳೆಗಳು
ಹಸಿರು ಸೇಬು ಥೈರಾಯ್ಡ್ ಗ್ರಂಥಿಯ ಕಾರ್ಯ ಚಟುವಟಿಕೆಯಲ್ಲಿ ಸರಾಗತೆಯನ್ನುಂಟು ಮಾಡುತ್ತದೆ. ಇದರಿಂದ ಸಂಧಿವಾತ ಬರುವುದು ತಪ್ಪುತ್ತದೆ.

7. ಅಲ್ಜೀಮರ್ ಕಾಯಿಲೆಯನ್ನು ತಡೆಯುತ್ತದೆ.
ಪ್ರತಿ ದಿನ ಒಂದು ಹಸಿರು ಸೇಬು ಸೇವಿಸುವುದರಿಂದ ವೃದ್ಧಾಪ್ಯದಲ್ಲಿ ಬರುವ ಅಲ್ಜೀಮರ್ ಕಾಯಿಲೆಯನ್ನು ತಡೆಯಬಹುದು.

8. ಅಸ್ತಮಾ ರೋಗವನ್ನು ತಡೆಯುತ್ತದೆ.
ಪ್ರತಿದಿನ ಸೇಬಿನ ರಸವನ್ನು ಸೇವಿಸಿ. ಇದರಿಂದ ಅಸ್ತಮಾ ಮುಂತಾದ ಅಲರ್ಜಿ ಸಮಸ್ಯೆಗಳು ಬರುವುದನ್ನು ತಡೆಯಬಹುದು.

9. ಮಧುಮೇಹವನ್ನು ನಿಯಂತ್ರಿಸಬಹುದು.
ಸೇಬು ಮಧುಮೇಹ ರೋಗವನ್ನು ನಿಯಂತ್ರಿಸುತ್ತದೆ. ಮಧುಮೇಹಿಗಳು ತಪ್ಪದೆ ಇದನ್ನು ಸೇವಿಸಬೇಕು.

10. ವಿಟಮಿನ್ ಎ, ಬಿ ಮತ್ತು ಸಿ ಅಧಿಕ ಪ್ರಮಾಣದಲ್ಲಿರುತ್ತದೆ.
ಹಸಿರು ಸೇಬಿನಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಚರ್ಮದ ಮೇಲೆ ಫ್ರೀ ರಾಡಿಕಲ್ಸ್ ಗಳಿಂದ ಉಂಟಾಗುವ ಹಾನಿಯನ್ನು ತಪ್ಪಿಸುವುದರ ಜೊತೆಗೆ, ತ್ವಚೆಗೆ ಒಳಗಿನಿಂದ ಹೊಳಪನ್ನು ತಂದು ಕೊಡುತ್ತದೆ.ನಿಮಗೆ ಈ " ಹಸಿರು ಸೇಬಿನ ಪ್ರಯೋಜನಗಳು" ಅಂಕಣವು ಉಪಯೋಗಕಾರಿಯಾಗಿದೆಯೇ? ಹಾಗಾದರೆ ನಿಮ್ಮ ಸಲಹೆ ಸೂಚನೆಗಳನ್ನು ನಾವು ಕೇಳಲು ಕಾತರರಾಗಿದ್ದೀವಿ.
ಹಸಿರು ಸೇಬು; ತ್ವಚೆಗೆ ಇದರಿಂದಾಗುವ ಲಾಭಗಳು
ಹಸಿರು ಸೇಬು ಒಂದು ಅದ್ಭುತವಾದ ಸೌಂದರ್ಯವರ್ಧಕ. ಹಸಿರು ಸೇಬಿನಲ್ಲಿ ಚರ್ಮ ಮತ್ತು ಕೇಶಕ್ಕೆ ಪ್ರಯೋಜನವನ್ನುಂಟು ಮಾಡುವ ಹಲವಾರು ಅಂಶಗಳು ಇವೆ.

ಹಸಿರು ಸೇಬು; ತ್ವಚೆಗೆ ಇದರಿಂದಾಗುವ ಲಾಭಗಳು
ತ್ವಚೆಗೆ ಬರುವ ಅಕಾಲ ಮುಪ್ಪನ್ನು ತಡೆಯುವಲ್ಲಿ ಹಸಿರು ಸೇಬು ಒಂದು ಅದ್ಭುತವಾದ ಪದಾರ್ಥವಾಗಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‍ಗಳು ಮತ್ತು ನಾರಿನಂಶಗಳು ನಿಮ್ಮ ತ್ವಚೆಗೆ ಯೌವನವನ್ನು ಮತ್ತು ನಮ್ಯತೆಯನ್ನು ಒದಗಿಸುತ್ತವೆ. ಇದರಿಂದ ನಿಮ್ಮ ತ್ವಚೆ ವಯಸ್ಸಾದಂತೆ ಕಾಣುವುದಿಲ್ಲ.

ಹಸಿರು ಸೇಬು; ತ್ವಚೆಗೆ ಇದರಿಂದಾಗುವ ಲಾಭಗಳು
ಹಸಿರು ಸೇಬನ್ನು ಒಳಗೊಂಡಿರುವ ಫೇಸ್ ಮಾಸ್ಕ್ ನಿಮ್ಮ ತ್ವಚೆಗೆ ಆಳವಾಗಿ ಮೊಯಿಶ್ಚರೈಸ್ ಮಾಡುತ್ತದೆ. ಇದರಿಂದ ನಿಮ್ಮ ತ್ವಚೆಯಲ್ಲಿ ಸುಕ್ಕುಗಳು ನಿವಾರಣೆಯಾಗಿ, ತ್ವಚೆ ಕಾಂತಿಯಿಂದ ಕಂಗೊಳಿಸುತ್ತದೆ.

ಹಸಿರು ಸೇಬು ಒಂದು ಅದ್ಭುತವಾದ ಸೌಂದರ್ಯವರ್ಧಕ. ಹಸಿರು ಸೇಬಿನಲ್ಲಿ ಚರ್ಮ ಮತ್ತು ಕೇಶಕ್ಕೆ ಪ್ರಯೋಜನವನ್ನುಂಟು ಮಾಡುವ ಹಲವಾರು ಅಂಶಗಳು ಇವೆ.
ಹಸಿರು ಸೇಬಿನಲ್ಲಿರುವ ಸಮೃದ್ಧವಾದ ವಿಟಮಿನ್‍ಗಳು, ನಿಮ್ಮ ತ್ವಚೆಗೆ ಹೊಳಪನ್ನು ನೀಡುತ್ತದೆ. ಇದರ ಜೊತೆಗೆ ಒಟ್ಟಾರೆಯಾಗಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಹಸಿರು ಸೇಬು; ತ್ವಚೆಗೆ ಇದರಿಂದಾಗುವ ಲಾಭಗಳು
ಹಸಿರು ಸೇಬು ವಿಟಮಿನ್‍ಗಳ ಕೊರತೆಯಿಂದ ಉಂಟಾಗುವ ಹಲವಾರು ಚರ್ಮದ ಕಾಯಿಲೆಗಳನ್ನು ನಿವಾರಿಸಲು ನೆರವಾಗುತ್ತದೆ.

ಹಸಿರು ಸೇಬು; ತ್ವಚೆಗೆ ಇದರಿಂದಾಗುವ ಲಾಭಗಳು
ಹಸಿರು ಸೇಬು ಮೊಡವೆಗಳನ್ನು ನಿವಾರಿಸಲು ರಾಮ ಬಾಣವಾಗಿ ನೆರವಾಗುತ್ತದೆ. ಪ್ರತಿದಿನ ಹಸಿರು ಸೇಬು ಸೇವಿಸುವುದರಿಂದ ಮುಖದಲ್ಲಿ ಮೊಡವೆಗಳು ಉಂಟಾಗುವುದನ್ನು ತಡೆಯಬಹುದು.

ಹಸಿರು ಸೇಬು; ತ್ವಚೆಗೆ ಇದರಿಂದಾಗುವ ಲಾಭಗಳು
ಇದರ ಜೊತೆಗೆ ಇದು ಕಣ್ಣಿನ ಸುತ್ತ ಉಂಟಾಗುವ ಕಪ್ಪು ಕಲೆಗಳನ್ನು ನಿವಾರಿಸುತ್ತದೆ. ಜೊತೆಗೆ ನಿಮ್ಮ ಕಣ್ಣುಗಳಲ್ಲಿ ತಾಜಾತನವನ್ನು ಮತ್ತು ಲವಲವಿಕೆಯನ್ನು ಉಂಟುಮಾಡುತ್ತದೆ.

ಹಸಿರು ಸೇಬು ಕೇವಲ ತ್ವಚೆಗೆ ಮಾತ್ರ ಪ್ರಯೋಜನಕಾರಿಯಲ್ಲ, ಜೊತೆಗೆ ಕೂದಲಿನ ಮೇಲು ಸಹ ಇದರ ಪ್ರಭಾವ ಸಕಾರಾತ್ಮಕವಾಗಿರುತ್ತದೆ. ಇಲ್ಲಿ ನಾವು ನಿಮಗಾಗಿ ಕೆಲವೊಂದು ಪ್ರಯೋಜನಗಳ ಪಟ್ಟಿಯನ್ನು ನೀಡಿದ್ದೇವೆ ಓದಿ.
ಹಸಿರು ಸೇಬು ಮತ್ತು ಅದರ ಎಲೆಗಳಿಂದ ಮಾಡಿದ ಫೇಸ್ಟ್ ತಲೆ ಹೊಟ್ಟನ್ನು ನಿವಾರಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಈ ಫೇಸ್ಟ್ ಅನ್ನು ನೀವು ಶಾಂಪೂವಾಗಿ ಸಹ ಬಳಸಬಹುದು. ಹಸಿರು ಸೇಬಿನಿಂದ ಪ್ರತಿದಿನ ಕೂದಲಿಗೆ ಮಸಾಜ್ ಮಾಡುತ್ತಿದ್ದರೆ, ಒಡೆದ ಕೂದಲುಗಳು ಸಹ ನಿವಾರಣೆಯಾಗುತ್ತದೆ.

ಕೂದಲಿಗೆ ಸಂಬಂಧಿಸಿದಂತೆ ಹಸಿರು ಸೇಬಿನ ಉಪಯೋಗಗಳು
ನಿಮ್ಮ ಜಡೆಯು ಬಲಿಷ್ಠವಾಗಿರಬೇಕಾದರೆ ಹಸಿರು ಸೇಬನ್ನು ಸೇವಿಸಲು ಆರಂಭಿಸಿ. ಇದರಿಂದ ನಿಮ್ಮ ಕೂದಲು ಬೆಳವಣಿಗೆಯಾಗುತ್ತದೆ ಮತ್ತು ಕೂದಲು ಉದುರುವುದು ಸಹ ತಪ್ಪುತ್ತದೆ.
ನಿಮ್ಮ ಜಡೆಯು ಬಲಿಷ್ಠವಾಗಿರಬೇಕಾದರೆ ಹಸಿರು ಸೇಬನ್ನು ಸೇವಿಸಲು ಆರಂಭಿಸಿ. ಇದರಿಂದ ನಿಮ್ಮ ಕೂದಲು ಬೆಳವಣಿಗೆಯಾಗುತ್ತದೆ ಮತ್ತು ಕೂದಲು ಉದುರುವುದು ಸಹ ತಪ್ಪುತ್ತದೆ.



Click it and Unblock the Notifications











