For Quick Alerts
ALLOW NOTIFICATIONS  
For Daily Alerts

ಹಾರ್ಮೋನುಗಳನ್ನು ಹೀಗೆ ಬ್ಯಾಲೆನ್ಸ್ ಮಾಡಿ

|

ಹಾರ್ಮೋನುಗಳಲ್ಲಿ ಅಸಮತೋಲನ ಉಂಟಾದರೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದು ನೀವು ಜೀವನದಲ್ಲಿ ಪ್ರೀತಿಸುವ ಹಲವು ಸಂಗತಿಗಳಿಂದ ನಿಮ್ಮನ್ನು ದೂರಮಾಡಿಬಿಡುತ್ತದೆ. ಹಾರ್ಮೋನುಗಳಲ್ಲಿ ಅಸಮತೋಲನವುಂಟಾದರೆ ನಿಮ್ಮ ಪ್ರೀತಿಯ ಆಹಾರದಿಂದ ಕೂಡ ನೀವು ದೂರವಾಗಬೇಕಾಗುತ್ತದೆ. ಆದ್ದರಿಂದ ಈ ರೀತಿಯ ತೊಂದರೆಯಿಂದ ದೂರವುಳಿಯಲು ನಾವಿಲ್ಲಿ ನಿಮಗೆ ಕೆಲವೊಂದು ಸರಳ ಸಲಹೆಗಳನ್ನು ಕೊಟ್ಟಿದ್ದೇವೆ.

ಹಾರ್ಮೋನು ತೊಂದರೆ ಬದುಕಿನ ಸಣ್ಣ ಸಣ್ಣ ಸಂಗತಿಗಳ ಮೇಲೂ ಗಾಢವಾದ ಪ್ರಭಾವ ಬೀರುತ್ತದೆ. ಹಾರ್ಮೋನುಗಳ ತೊಂದರೆಯಿಂದ ದೂರವುಳಿದು ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ.

ಈ ಕೆಳಗೆ ಕೊಟ್ಟಿರುವ ಸಲಹೆಗಳನ್ನು ಪಾಲಿಸಿ ನಿಮ್ಮ ತೊಂದರೆಯಿಂದ ದೂರವುಳಿಯಬಹುದು.

ಬಿಳಿ ಬಣ್ಣದ ಆಹಾರಕ್ಕೆ ಬಾಯ್ ಹೇಳಿ

ಬಿಳಿ ಬಣ್ಣದ ಆಹಾರಕ್ಕೆ ಬಾಯ್ ಹೇಳಿ

ಹಾರ್ಮೋನುಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಎಲ್ಲ ಬಗೆಯ ಬಿಳಿ ಬಣ್ಣದ ಆಹಾರಗಳಿಗೆ ಬಾಯ್ ಹೇಳಿ. ನೀವು ಹಾಗೆ ದೂರವಿಡಬೇಕಾದ ಕೆಲವು ಆಹಾರಗಳೆಂದರೆ ಸಕ್ಕರೆ, ಅಕ್ಕಿ, ಅಕ್ಕಿ ಹಿಟ್ಟು ಇತ್ಯಾದಿ. ಗೋಧಿಯನ್ನು ಹೆಚ್ಚಾಗಿ ಬಳಸಿ.

ಒಮೆಗ-3 ಫ್ಯಾಟಿ ಆಸಿಡ್ ಗಳು ನಿಮ್ಮ ಸ್ನೇಹಿತರು

ಒಮೆಗ-3 ಫ್ಯಾಟಿ ಆಸಿಡ್ ಗಳು ನಿಮ್ಮ ಸ್ನೇಹಿತರು

ನೀವು ಹೆಚ್ಚಾಗಿ ಒಮೆಗ-3 ಫ್ಯಾಟಿ ಆಸಿಡ್ ಗಳನ್ನು ಬಳಸುವುದು ಒಳ್ಳೆಯದು. ಇದರಿಂದ ನಿಮ್ಮ ದೇಹಕ್ಕೆ ಆಲ್ಫಾ-ಲಿನೊಲೆನಿಕ್ ಆಸಿಡ್ ದೊರೆಯುತ್ತದೆ. ಇದು ನಿಮ್ಮ ಹಾರ್ಮೊನುಗಳನ್ನು ಸಮತೋಲನದಲ್ಲಿರಿಸಿಕೊಳ್ಳಲು ನೆರವು ನೀಡುತ್ತದೆ. ಚಿಯಾ, ವಾಲ್ ನಟ್ ಗಳನ್ನು ಹೆಚ್ಚಾಗಿ ತಿನ್ನಿ.

ಕೆಫೀನ್ ಗೆ ಟಾ ಟಾ ಹೇಳಿ

ಕೆಫೀನ್ ಗೆ ಟಾ ಟಾ ಹೇಳಿ

ಕಾಫಿಯಿಂದ ದೂರವುಳಿಯುವುದು ಉತ್ತಮ. ಕಾಫಿಯಲ್ಲಿರುವ ಕೆಪೀನ್ ಅಂಶ ಆರೋಗ್ಯಕ್ಕೆ ಒಳ್ಳೆಯದಲ್ಲ. ನಿಮಗೆ ಕಾಫಿ ಮುಖ್ಯವೋ ಆರೋಗ್ಯವೋ ನೀವೆ ನಿರ್ಧರಿಸಿ.

ತೆಂಗಿನೆಣ್ಣೆ ಹೆಚ್ಚಾಗಿ ಬಳಸಿ

ತೆಂಗಿನೆಣ್ಣೆ ಹೆಚ್ಚಾಗಿ ಬಳಸಿ

ಅಡುಗೆಗೆ ತೆಂಗಿನೆಣ್ಣೆ ಬಳಸುವುದು ಉತ್ತಮ. ಕಡಲೆಕಾಯಿ ಅಥವ ಇನ್ನಿತರ ಎಣ್ಣೆಗಳಿಗಿಂತ ತೆಂಗಿನೆಣ್ಣೆ ಹೆಚ್ಚು ಉತ್ತಮ. ಇದರಲ್ಲಿ ಹಾರ್ಮೋನುಗಳ ಸಮತೋಲನವನ್ನು ಕಾಪಾಡುವಂತಹ ನೈಸರ್ಗಿಕ ಅಂಶಗಳಿರುತ್ತವೆ.

ಅವಕ್ಯಾಡೋಸ್

ಅವಕ್ಯಾಡೋಸ್

ಅವಕಾಡೋವಿನಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್ ಗಳು ಹೆಚ್ಚಾಗಿರುತ್ತದೆ. ಇದು ನಿಮ್ಮ ಹಾರ್ಮೋನುಗಳನ್ನು ಸಮತೋಲನದಲ್ಲಿರಿಸುತ್ತದೆ. 1 ಲೋಟ ಅವಕ್ಯಾಡೋ ಜ್ಯೂಸ್ ನಿಮ್ಮ ದೇಹವನ್ನು ಹೆಚ್ಚು ಆರೋಗ್ಯವಂತವಾಗಿ ಇಡುತ್ತದೆ. ಇದು ಫ್ಲೂನಂತಹ ರೋಗಗಳಿಂದ ಕೂಡ ನಿಮ್ಮನ್ನು ದೂರವಿರಿಸುತ್ತದೆ.

ವಿಟಮಿನ್ ಡಿ

ವಿಟಮಿನ್ ಡಿ

ಸೂರ್ಯ ವಿಟಮಿನ್ ಡಿ ಯನ್ನು ನೈಸರ್ಗಿಕವಾಗಿ ಒದಗಿಸುತ್ತಾನೆ. ನೀವು ಸರಿಯಾದ ಪ್ರಮಾಣದಲ್ಲಿ ಸೂರ್ಯರಶ್ಮಿಯನ್ನು ಪಡೆದಿರಾದರೆ ನಿಮ್ಮ ಹಾರ್ಮೋನುಗಳು ಸಮತೋಲನದಲ್ಲಿರುತ್ತದೆ. ಇದು ನಿಮ್ಮನ್ನು ಎಲ್ಲ ಬಗೆಯ ಅಲರ್ಜಿಗಳು, ಅಸ್ತಮಾ, ಕ್ಯಾನ್ಸರ್ ನಿಂದ ದೂರವಿಡುತ್ತದೆ.

ಫೈಬರ್ ಅಂಶ ಹೆಚ್ಚಾಗಿ ಸೇವಿಸಿ

ಫೈಬರ್ ಅಂಶ ಹೆಚ್ಚಾಗಿ ಸೇವಿಸಿ

ಫೈಬರ್ ಅಂಶವನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು ಉತ್ತಮ. ವೈಟ್ ಬ್ರೆಡ್, ಓಟ್ಸ್ ಮತ್ತು ಕೆಲವು ಹಣ್ಣುಗಳಾದ ಬಾಳೆಹಣ್ಣು ಮುಂತಾದವು ಇದನ್ನು ನಿಮಗೆ ಒದಗಿಸುತ್ತದೆ.

ವ್ಯಾಯಾಮ

ವ್ಯಾಯಾಮ

ದೇಹವನ್ನು ಆರೋಗ್ಯವಾಗಿಟ್ಟುಕೊಳ್ಳಲು ವ್ಯಾಯಾಮ ಅತ್ಯಗತ್ಯ. ಪ್ರತಿನಿತ್ಯ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ. ಈಜು, ನಡಿಗೆ, ಮೊದಲಾದ ರೀತಿಯ ವ್ಯಾಯಾಮಗಳು ನಿಮ್ಮ ದೇಹವನ್ನು ಗಟ್ಟಿಮುಟ್ಟಾಗಿಸುವುದರೊಂದಿಗೆ ಹಾರ್ಮೋನುಗಳ ಸಮತೋಲನ ನಿರ್ವಹಣೆಗೂ ನೆರವಾಗುತ್ತದೆ.

ಒತ್ತಡದಿಂದ ದೂರವಿರಿ

ಒತ್ತಡದಿಂದ ದೂರವಿರಿ

ಧ್ಯಾನ ಮತ್ತು ಯೋಗದ ಸಹಾಯದಿಂದ ಒತ್ತಡ ಮುಕ್ತ ಬದುಕನ್ನು ನಿಮ್ಮದಾಗಿಸಿಕೊಳ್ಳಬಹುದು. ಧ್ಯಾನವು ನಿಮ್ಮ ನರನಾಡಿಗಳನ್ನು ಶಾಂತಗೊಳಿಸುತ್ತದೆ. ಇದು ಸಹಜವಾಗಿ ಹಾರ್ಮೋನುಗಳ ಸಮತೋಲನಕ್ಕೆ ಕಾರಣವಾಗುತ್ತದೆ.

ಹೆಚ್ಚಾಗಿ ಮಾತ್ರೆಗಳನ್ನು ಸೇವಿಸಬೇಡಿ

ಹೆಚ್ಚಾಗಿ ಮಾತ್ರೆಗಳನ್ನು ಸೇವಿಸಬೇಡಿ

ತೂಕ ಕಳೆದುಕೊಳ್ಳಲು ಮತ್ತು ಗರ್ಭನಿಯಂತ್ರಣಕ್ಕೆ ಹೆಚ್ಚಾಗಿ ಮಾತ್ರೆಗಳನ್ನು ತೆಗೆದುಕೊಂಡರೆ ಇದು ನಿಮ್ಮ ಹಾರ್ಮೊನುಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಮಾತ್ರೆಗಳ ಸೇವನೆ ಮೇಲೆ ನಿಯಂತ್ರಣ ಅತ್ಯಗತ್ಯ.

English summary

Balance Your Hormones In A Natural Way

One of the main concerns is our hormone imbalance. When you have a hormone imbalance, life can be quite disturbing for those who are suffering from it. Hormone imbalance is one of those major problems in life where you are destined to stop doing the things you love.
Story first published: Monday, November 25, 2013, 22:31 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more