For Quick Alerts
ALLOW NOTIFICATIONS  
For Daily Alerts

ಈ 9 ಕಾಯಿಲೆಯನ್ನು ತಡೆಗಟ್ಟುವ ಗುಣ ಪಾಲಾಕ್ ನಲ್ಲಿದೆ!

|

ನಾವು ತಿನ್ನುವ ನಾನಾ ಬಗೆಯ ಸೊಪ್ಪುಗಳಲ್ಲಿ ಪಾಲಾಕ್ ಸೊಪ್ಪಿನ ಖಾದ್ಯಗಳನ್ನು ಹೆಚ್ಚಾಗಿಯೇ ಮಾಡುತ್ತೇವೆ. ಈ ಸೊಪ್ಪಿನಿಂದ ಮಾಡಿದ ಖಾದ್ಯಗಳು ಫೈ ಸ್ಟಾರ್ ಹೋಟೆಲ್ ಗಳಲ್ಲೂ ದೊರೆಯುವುದರಿಂದ ಸೊಪ್ಪುಗಳಲ್ಲಿ ಇದು ಸ್ವಲ್ಪ ರಾಯಲ್ ಸೊಪ್ಪು ಎಂದೇ ಹೇಳಬಹುದು.

ಪಾಲಾಕ್ ನಿಂದ ಯಾವುದೇ ಬಗೆಯ ಆಹಾರ ತಯಾರಿಸಲಿ, ರುಚಿಯಾಗಿಯೇ ಇರುತ್ತದೆ. ಪಾಲಾಕ್ ರುಚಿಕರ ಮಾತ್ರವಲ್ಲ ಇದರಲ್ಲಿ ಕಬ್ಬಿಣದಂಶವಿದೆ, ವಿಟಮಿನ್ ಇದೆ ಎಂಬುವುದು ನಿಮಗೆಲ್ಲಾ ಗೊತ್ತು. ಆದರೆ ಕೆಲವೊಂದು ಕಾಯಿಲೆಗಳನ್ನು ಗುಣ ಪಡಿಸುವಲ್ಲಿ ಇದು ತುಂಬಾ ಸಹಾಯಕಾರಿ ಅನ್ನುವುದು ನಿಮಗೆ ಗೊತ್ತೇ? ಬನ್ನಿ ಪಾಲಾಕ್ ತಿಂದರೆ ಯಾವೆಲ್ಲಾ ಕಾಯಿಲೆಗಳನ್ನು ನಿಯಂತ್ರಣದಲ್ಲಿಡಬಹುದೆಂದು ನೋಡೋಣ ಬನ್ನಿ:

 ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ಇದರಲ್ಲಿರುವ ಫೋಲೆಟ್ ಅಂಶ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಹೃದಯದ ಆರೋಗ್ಯ ಕಾಪಾಡುವಲ್ಲಿ ತುಂಬಾ ಸಹಾಯಕಾರಿ.

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ

ಪಾಲಾಕ್ ನಲ್ಲಿರುವ ಕ್ಯಾರೋಟಿನೈಡ್ ಅಂಶ ನಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಪ್ರತೀದಿನ ಪಾಲಾಕ್ ತಿಂದರೆ ಕೊಲೆಸ್ಟ್ರಾಲ್ ಹೆಚ್ಚಾಗದಂತೆ ನೋಡಿಕೊಳ್ಳಬಹುದು.

ನಮ್ಮ ತ್ವಚೆಗೂ ಒಳ್ಳೆಯದು

ನಮ್ಮ ತ್ವಚೆಗೂ ಒಳ್ಳೆಯದು

ಪಾಲಾಕ್ ಮೊಡವೆ ಸಮಸ್ಯೆಯನ್ನು ಹೋಗಲಾಡಿಸುತ್ತದೆ, ಮುಖದಲ್ಲಿ ಬೇಗನೆ ನೆರಿಗೆ ಮೂಡದಂತೆ ಕಾಪಾಡುತ್ತದೆ.

ದೃಷ್ಟಿ ದೋಷ ಉಂಟಾಗದಂತೆ ತಡೆಯುತ್ತದೆ

ದೃಷ್ಟಿ ದೋಷ ಉಂಟಾಗದಂತೆ ತಡೆಯುತ್ತದೆ

ಪಾಲಾಕ್ ತಿನ್ನುವುದರಿಂದ ವಯಸ್ಸಾಗುತ್ತಿದ್ದಂತೆ ದೃಷ್ಟಿದೋಷ ಉಂಟಾಗುವುದನ್ನು ತಡೆಯಬಹುದು.

ನೆನಪಿನ ಶಕ್ತಿಗೂ ಒಳ್ಳೆಯದು

ನೆನಪಿನ ಶಕ್ತಿಗೂ ಒಳ್ಳೆಯದು

ನಮ್ಮ ಮಿದುಳಿನ ನರಕ್ಕೆ ಅವಶ್ಯಕವಾದ ಪೋಷಕಾಂಶಗಳು ಪಾಲಾಕ್ ನಲ್ಲಿ ಇರುವುದರಿಂದ ನೆನಪಿನ ಶಕ್ತಿ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ಸಂಧಿವಾತವನ್ನು ಕಡಿಮೆ ಮಾಡುತ್ತೆ

ಸಂಧಿವಾತವನ್ನು ಕಡಿಮೆ ಮಾಡುತ್ತೆ

ಸಂಧಿವಾತದ ಸಮಸ್ಯೆ ಇರುವವರು ಪಾಲಾಕ್ ತಿಂದರೆ ಆ ನೋವು ಕಡಿಮೆಯಾಗುವುದು.

ರಕ್ತ ಹೀನತೆ

ರಕ್ತ ಹೀನತೆ

ರಕ್ತ ಹೀನತೆ ಸಮಸ್ಯೆಯಿಂದ ಹೊರಬರಲು ದಿನಾ ಪಾಲಾಕ್ ಸೊಪ್ಪಿನ ಆಹಾರಗಳನ್ನು ತಿಂದರೆ ಸಾಕು. ಇದರಲ್ಲಿರುವ ಕಬ್ಬಿಣದಂಶ ದೇಹದಲ್ಲಿ ರಕ್ತ ಕಣಗಳನ್ನು ಹೆಚ್ಚುವಂತೆ ಮಾಡುತ್ತದೆ.

 ಕ್ಯಾನ್ಸರ್ ಕಣಗಳನ್ನು ತಡೆಗಟ್ಟುತ್ತದೆ

ಕ್ಯಾನ್ಸರ್ ಕಣಗಳನ್ನು ತಡೆಗಟ್ಟುತ್ತದೆ

ಪಾಲಾಕ್ ಸೊಪ್ಪು ತಿನ್ನುವುದರಿಂದ ಕ್ಯಾನ್ಸರ್ ಕಣಗಳನ್ನು ತಡೆಗಟ್ಟಬಹುದೆಮದು ವೈಜ್ಞಾನಿಕವಾಗಿ ಸಾಬೀತಾಗಿದೆ.

antioxidants

antioxidants

ಪಾಲಾಕ್ ನಲ್ಲಿ antioxidants ಅತ್ಯಧಿಕವಾಗಿದ್ದು ಇದನ್ನು ತಿಂದರೆ ರೋಗ ನಿರೋಧಕ ಸಾಮರ್ಥ್ಯ ಹೆಚ್ಚುವುದು.

English summary

Amazing Health Benefits Of Spinach

By including a small amount of spinach in your daily diet, you can reap huge health benefits.Check out these 13 amazing health benefits of spinach.
 
X
Desktop Bottom Promotion