For Quick Alerts
ALLOW NOTIFICATIONS  
For Daily Alerts

ಆಲ್ಕೋಹಾಲ್ ಮತ್ತು ಆರೋಗ್ಯ ಸಮಸ್ಯೆಗಳು

By Deepak M
|

ಆಲ್ಕೋಹಾಲ್ ಮತ್ತು ಆರೋಗ್ಯ ಸಮಸ್ಯೆಗಳು

ಆಲ್ಕೋಹಾಲ್ ಸೇವಿಸುವುದರಿಂದಾಗಿ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಸತ್ಯ ಇಂದು ರಹಸ್ಯವಾಗೇನು ಉಳಿದಿಲ್ಲ. ಕುಡಿದು ಗಾಡಿ ಚಲಾಯಿಸುವುದರಿಂದಾಗಿ ನಿಮ್ಮ ವಾಹನ ಅಪಘಾತವಾಗುತ್ತದೆ. ಜೊತೆಗೆ ಕುಡಿಯುವುದರಿಂದ ನಿಮ್ಮ ಕರುಳು ಸಹ ಘಾಸಿಗೊಳ್ಳುತ್ತದೆ. ಕುಡಿದು ಬಂದರೆ ಮನೆಯಲ್ಲಿ ಸ್ವಲ್ಪ ರಾದ್ಧಾಂತವಾಗುತ್ತದೆ. ಒಂದು ನಿಮಿಷ ತಡೆಯಿರಿ. ಕುಡಿತದಿಂದ ಇವಷ್ಟೇ ಅಲ್ಲದೆ ಆರೋಗ್ಯದಲ್ಲಿ ಏರು ಪೇರಾಗುವ ಸಾಕಷ್ಟು ವಿಚಾರಗಳನ್ನು ಸಂಶೋಧಕರು ಇಂದು ಕಂಡು ಹಿಡಿದಿದ್ದಾರೆ. ಸ್ವಲ್ಪ ಗುಂಡಿಗೆ ಗಟ್ಟಿ ಮಾಡಿಕೊಳ್ಳಿ. ಇವರು ಲೆಕ್ಕ ಹಾಕಿದ ಪ್ರಕಾರ 60 ಮಿ.ಲಿ ಕುಡಿತದಿಂದ ನಿಮ್ಮ ಕಿಕ್ಕೇರಿಸುವ ನಶೆ ದೊರೆತಂತೆ, ಅದನ್ನು ಇಳಿಸುವಷ್ಟು ಅಂದರೆ 60 ರೋಗಗಳು ನಿಮಗೆ ಅಟಕಾಯಿಸಿಕೊಳ್ಳುತ್ತವಂತೆ.

ಇಲ್ಲಿ ನಾವು ನಿಮಗಾಗಿ ನೀಡಿರುವ ಸ್ಲೈಡ್ ಶೋನಲ್ಲಿ ಆಲ್ಕೋಹಾಲ್‍ನ ಸೇವನೆಯಿಂದ ಉಂಟಾಗುವ ಅಂತಹ 12 ಮಾರಾಣಾಂತಿಕ ಕಾಯಿಲೆಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

1. ಅನಿಮಿಯಾ

1. ಅನಿಮಿಯಾ

ಅತಿಯಾದ ಕುಡಿತದಿಂದ ನಿಮ್ಮ ರಕ್ತದಲ್ಲ್ಲಿ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತಕಣಗಳು ಕಡಿಮೆಯಾಗುತ್ತವೆ. ಈ ಪರಿಸ್ಥಿತಿಯಲ್ಲಿ ನಿಮಗೆ ಅನಿಮಿಯಾವು ಕಾಡಬಹುದು. ಇದರ ಲಕ್ಷಣಗಳು ಸುಸ್ತು, ಉಸಿರಾಟದ ತೊಂದರೆ ಮತ್ತು ತಲೆನೋವು ಆಗಿರುತ್ತದೆ. ಹುಷಾರು!!!

2. ಕ್ಯಾನ್ಸರ್

2. ಕ್ಯಾನ್ಸರ್

ಅತಿಯಾದ ಕುಡಿತವಿರಲಿ , ಆಗಾಗ್ಗೆ ಕುಡಿಯುವುದಿರಲಿ ಎಲ್ಲವು ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಇದನ್ನು ಟೊರಾಂಟೊ ವಿಶ್ವವಿದ್ಯಾನಿಲಯದ ಮಾಧಕ ವಸ್ತು ಸೇವನೆ ಬಿಡಿಸುವ ಮತ್ತು ಮಾನಸಿಕ ಆರೋಗ್ಯ ವಿಭಾಗದ ಅಧ್ಯಕ್ಷರು ಮತ್ತು ವಿಙ್ಞಾನಿಯಾದ ಜುರ್ಗೆನ್ ರೆಹ್ಮ್ ಪಿ ಎಚ್ ಡಿ ಯವರು ಸಹ ಧೃಡಪಡಿಸಿದ್ದಾರೆ. ಆಲ್ಕೋಹಾಲಿನಲ್ಲಿರುವ ಅಸಿಲ್ಡಿಹೈಡ್ ಎಂಬ ಪ್ರಬಲ ಕಾರ್ಸಿನೊಜೆನ್ ಕ್ಯಾನ್ಸರನ್ನು ಉಂಟು ಮಾಡುತ್ತದೆ. ಈ ಕ್ಯಾನ್ಸರ್ ಬಾಯಿಯಲ್ಲಿ, ಪ್ಯಾರಿನ್ಕ್ಸ್ ( ಗಂಟಲು), ದ್ಭನಿ ಪೆಟ್ಟಿಗೆ, ಎಸೊಫಾಗುಸ್, ಕರುಳು, ಎದೆ ಮತ್ತು ಕೊಲೊರೆಕ್ಟಾಲ್ ಭಾಗದಲ್ಲಿ ಕಂಡು ಬರುತ್ತದೆ. ಕ್ಯಾನ್ಸರ್ ಕುಡುಕರಲ್ಲಿ ಮತ್ತು ಧೂಮಪಾನಿಗಳಲ್ಲಿ ಹೆಚ್ಚಿಗೆ ಕಂಡುಬರುತ್ತದೆ.

3. ಹೃದ್ರೋಗ ಸಮಸ್ಯೆ

3. ಹೃದ್ರೋಗ ಸಮಸ್ಯೆ

ಅತಿಯಾದ ಕುಡಿತದಿಂದ ರಕ್ತದಲ್ಲಿರುವ ಕಿರುತಟ್ಟೆಗಳು ಘಾಸಿಗೊಳ್ಳುತ್ತವೆ. ಇದರಿಂದಾಗಿ ಪಾರ್ಶ್ವವಾಯು ಮತ್ತು ಹೃದಯಾಘಾತವುಂಟಾಗಬಹುದು.

4. ಸಿರ್ರೊಹೊಸಿಸ್

4. ಸಿರ್ರೊಹೊಸಿಸ್

ಆಲ್ಕೊಹಾಲ್ ಕರುಳಿನ ಕೋಶಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತವೆ. ಇದರಿಂದ ಸಿರ್ರೊಹೊಸಿಸ್ ಸಮಸ್ಯೆಯುಂಟಾಗುತ್ತದೆ. ಇದು ಒಮ್ಮೊಮ್ಮೆ ಮಾರಾಣಾಂತಿಕವಾಗಿ ಕಾಡಬಹುದು. ಇದು ಕರುಳಿನ ಕಾರ್ಯವನ್ನೆ ನಿಷ್ಕ್ರಿಯಗೊಳಿಸುತ್ತದೆ. ಇದು ಯಾರಿಗೆ ಬರುತ್ತದೆ ಎಂದು ಊಹಿಸುವುದು ಕಷ್ಟ. ಒಮ್ಮೊಮ್ಮೆ ಹೆಂಗಸರಲ್ಲು ಈ ಸಮಸ್ಯೆ ಕಾಡುತ್ತದೆ.

5. ಡಿಮೆನ್ಷಿಯಾ

5. ಡಿಮೆನ್ಷಿಯಾ

ಅತಿಯಾಗಿ ಕುಡಿಯುತ್ತಿದ್ದರೆ, ಮೆದುಳಿನ ಕಾರ್ಯಕ್ಷಮತೆಯು ಕುಂಠಿತವಾಗುತ್ತದೆ. ಅದು ಶೇ1.9% ರಷ್ಟು ಪ್ರತಿ ದಶಕಕ್ಕು ಕುಗ್ಗುತ್ತ ಸಾಗುತ್ತದೆ. ಇದರಿಂದ ನೆನಪಿನ ಶಕ್ತಿ ಹಾಳಾಗುವುದರ ಜೊತೆಗೆ ಡಿಮೆನ್ಷಿಯಾ ಕಾಡಬಹುದು.

6. ಖಿನ್ನತೆ

6. ಖಿನ್ನತೆ

ನ್ಯೂಜಿಲ್ಯಾಂಡ್‍ನಲ್ಲಿ 2010ರಲ್ಲಿ ನಡೆದ ಸಂಶೋಧನೆಯ ಪ್ರಕಾರ ಅತಿಯಾದ ಕುಡಿತವು ಖಿನ್ನತೆಯನ್ನು ಹೆಚ್ಚಿಸುತ್ತದೆ ಎಂಬ ಅಂಶವನ್ನು ಬಯಲಿಗೆಳೆಯಿತು. ಕುಡಿತ ಮತ್ತು ಖಿನ್ನತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

7. ಅಪಸ್ಮಾರ

7. ಅಪಸ್ಮಾರ

ಅತಿಯಾದ ಕುಡಿತವು ಕುಡುಕರಲ್ಲಿ ಅಪಸ್ಮಾರ ರೋಗವನ್ನುಂಟು ಮಾಡುತ್ತದೆ. ಇದರಿಂದ ಅವರ ಧಾರಣ ಸಾಮರ್ಥ್ಯ ನಾಶವಾಗುತ್ತದೆ. ಇದರಿಂದ ಔಷಧಗಳು ಸಹ ಇವರ ಮೇಲೆ ಪರಿಣಾಮ ಬೀರಲಾರವು.

8. ಸಂಧಿವಾತ

8. ಸಂಧಿವಾತ

ಕುಡಿತದಿಂದ ದೊರೆಯುವ ಮತ್ತೊಂದು ಬಳುವಳಿ ಸಂಧಿವಾತ. ಇದು ಸಂಧಿಗಳಲ್ಲಿ ಬೆಳೆಯುವ ಯೂರಿಕ್ -ಆಸಿಡ್ ಕ್ರಿಸ್ಟಲ್‍ಗಳಿಂದ ಉಂಟಾಗುತ್ತದೆ. ಇದು ಅನುವಂಶಿಕ ರೋಗವು ಸಹ ಹೌದು. ಆದರೆ ಕುಡುಕರಲ್ಲಿ ಹೆಚ್ಚು ಕಂಡು ಬರುತ್ತದೆ.

9. ಅಧಿಕ ರಕ್ತದೊತ್ತಡ

9. ಅಧಿಕ ರಕ್ತದೊತ್ತಡ

ಕುಡಿತದಿಂದ ರಕ್ತನಾಳಗಳ ವ್ಯವಸ್ಥೆಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗುತ್ತದೆ. ಇದರಿಂದಾಗಿ ಒತ್ತಡ, ಉಷ್ಣಾಂಶ ಮುಂತಾದ ವಿಷಯಗಳಿಗೆ ರಕ್ತ ನಾಳಗಳು ವಿಪರೀತವಾಗಿ ಪ್ರತಿಕ್ರಿಯಿಸುತ್ತವೆ. ಅಧಿಕ ಕುಡಿತದಿಂದಾಗಿ ರಕ್ತದೊತ್ತಡ ಅಧಿಕಗೊಳ್ಳುತ್ತದೆ. ಇದು ವಿಪರೀತಕ್ಕೆ ಹೋದಾಗ ಮೂತ್ರಪಿಂಡ, ಹೃದಯಾಘಾತ ಮತ್ತು ಪಾರ್ಶ್ವ ವಾಯು ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.

10. ಇನ್‍ಫೆಕ್ಷನ್‍ಕಾರಕ ಸಮಸ್ಯೆಗಳು

10. ಇನ್‍ಫೆಕ್ಷನ್‍ಕಾರಕ ಸಮಸ್ಯೆಗಳು

ಅತಿಯಾದ ಕುಡಿತದಿಂದಾಗಿ ನಮ್ಮ ರೋಗ ನಿರೋಧಕ ಶಕ್ತಿನಾಶಗೊಳ್ಳುತ್ತದೆ. ಇದರಿಂದಾಗಿ ಇನ್‍ಫೆಕ್ಷನ್ ಸಮಸ್ಯೆ ನಮ್ಮನ್ನು ಕಾಡುತ್ತದೆ. ಅದು ನ್ಯೂಮೋನಿಯಾ , ಏಡ್ಸ್ ಅಥವಾ ಇನ್ನಿತರ ಲೈಂಗಿಕ ರೋಗಗಳಿಗೆ ಎಡೆ ಮಾಡಿಕೊಡುತ್ತದೆ. ಜೊತೆಗೆ ಬಂಜೆತನ ಸಹ ಕಾಡುತ್ತದೆ. ಹಾಗಾಗಿ ಅತಿಯಾದ ಕುಡುಕರು ಲೈಂಗಿಕ ನಿಶ್ಶಕ್ತಿಯನ್ನು ಹೊಂದಿರುತ್ತಾರೆ. ಜೊತೆಗೆ ಲೈಂಗಿಕ ರೋಗಗಳ ವಾಹಕರಾಗಿ ಕೆಲಸ ಮಾಡುತ್ತಾರೆ.

11. ನರ ವ್ಯೂಹದ ವಿನಾಶ

11. ನರ ವ್ಯೂಹದ ವಿನಾಶ

ಅತಿಯಾದ ಕುಡಿತದಿಂದ ಅತಿಯಾಗಿ ಭಾದೆಗೆ ಒಳಗಾಗುವ ಅಂಗ ನಮ್ಮ ನರವ್ಯೂಹ. ಕುಡಿತ ನರಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ಸುಸ್ತು, ಅಸ್ಥಿರತೆ, ಮಲಬದ್ಧತೆ ಮುಂತಾದ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಜೊತೆಗೆ ಆಲ್ಕೋಹಾಲಿಕ್ ನ್ಯೂರೋಪತಿ ಸಹ ಉಂಟಾಗುತ್ತದೆ. ಇದು ನರ ಕೋಶಗಳ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ.

12.ಪ್ಯಾನ್‍ಕ್ರಿಯಾಟಿಸ್

12.ಪ್ಯಾನ್‍ಕ್ರಿಯಾಟಿಸ್

ಇದೆಲ್ಲದರ ಜೊತೆಗೆ ಕುಡಿತದಿಂದಾಗಿ ಗ್ಯಾಸ್‍ಟ್ರಿಕ್ಟ್ ಸಮಸ್ಯೆಯ ಜೊತೆಗೆ ಮೇದೊಜೀರಕ ಗ್ರಂಥಿಗಳ ಮೇಲು ಸಹ ಅಡ್ಡ ಪರಿಣಾಮವುಂಟಾಗುತ್ತದೆ. ಇದರಿಂದ ಜೀರ್ಣ ಸಮಸ್ಯೆ, ಅತಿಸಾರ ಭೇದಿ, ಅಬ್ಡೊಮಿನಲ್ ನೋವು ಉಂಟಾಗುತ್ತದೆ. ಕೆಲವೊಮ್ಮೆ ಇದು ವೈಪರಿತ್ಯಕ್ಕೆ ಹೋಗಿ ಗಲ್ಲ್ ಸ್ಟೋನ್ ಉಂಟಾಗುವಂತೆ ಮಾಡುತ್ತದೆ.

English summary

Alcohol and Health Risks

"It's no secret that alcohol consumption can cause major health problems, including cirrhosis of the liver and injuries sustained in automobile accidents.
Story first published: Saturday, December 14, 2013, 10:15 [IST]
X
Desktop Bottom Promotion