For Quick Alerts
ALLOW NOTIFICATIONS  
For Daily Alerts

ಮೂಳೆ ಸಮಸ್ಯೆಗಳ ಬಗ್ಗೆ ನಮ್ಮಲ್ಲಿರುವ ಅಪನಂಬಿಕೆಗಳು

|

ಹಿಂದೆಯೆಲ್ಲಾ ಮೂಳೆ ಸವೆಯುವುದು, ಬೆನನ್ಉ ನೋವು, ಸೊಂಟ ನೋವು ಈ ರೀತಿಯ ಸಮಸ್ಯೆಗಳು ಮಧ್ಯವಯಸ್ಸು ದಾಟಿದ ನಂತರ ಪ್ರಾರಂಭವಾಗುತ್ತಿತ್ತು. ಆದರೆ ಈಗ ಚಿಕ್ಕ ವಯಸ್ಸಿನಲ್ಲಿಯೇ ಬೆನ್ನು ನೋವು, ಸೊಂಟ ನೋವು ಕಂಡು ಬರುತ್ತಿದೆ. ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆಯಿಂದ ಈ ರೀತಿ ಕಂಡು ಬರುತ್ತಿದೆ.

ಮೂಳೆ ಬಲಹೀನವಾಗುವುದರ ಬಗ್ಗೆ ಅನೇಕ ಅಪನಂಬಿಕೆಗಳಿವೆ. ಅದನ್ನೇ ನಾವು ಸತ್ಯವೆಂದು ಭಾವಿಸುತ್ತೇವೆ. ಈ ಅಪನಂಬಿಕೆಗಳನ್ನು ನಂಬಿದರೆ ಮೂಳೆ ಸಮಸ್ಯೆಯನ್ನು ಗುಣ ಪಡಿಸಲು ಸಾಧ್ಯವಿಲ್ಲ. ಮೋಳೆ ಸಮಸ್ಯೆ ಬಗ್ಗೆ ನಮ್ಮಲ್ಲಿರುವ ಅಪನಂಬಿಕೆಗಳು ಯಾವುವು ಎಂದು ನೋಡೋಣ ಬನ್ನಿ:

 ಮಹಿಳೆಯರಿಗೆ ಮಾತ್ರ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ

ಮಹಿಳೆಯರಿಗೆ ಮಾತ್ರ ಕ್ಯಾಲ್ಸಿಯಂ ಕಡಿಮೆಯಾಗುತ್ತದೆ

ಮಹಿಳೆಯರಿಗೆ ಹೆರಿಗೆಯಿಂದ ಕ್ಯಾಲ್ಸಿಯಂ ಕಡಿಮೆಯಾಗುವುದು ನಿಜ. ಆದರೆ ಪುರುಷರಿಗೂ ವಯಸ್ಸಾದಂತೆ ಕ್ಯಾಲ್ಸಿಯಂ ಕಮ್ಮಿಯಾಗಿ ಸಂಧಿ ನೋವು ಕಾಣಿಸಿಕೊಳ್ಳುತ್ತದೆ.

ಕೂರುವ ಭಂಗಿ ಸರಿಯಿಲ್ಲದಿರೆ ಬೆನ್ನು ನೋವು ಬರುತ್ತದೆ

ಕೂರುವ ಭಂಗಿ ಸರಿಯಿಲ್ಲದಿರೆ ಬೆನ್ನು ನೋವು ಬರುತ್ತದೆ

ಬೆನ್ನು ಅಥವಾ ಸೊಂಟ ನೋವುಗೆ ಕೂರುವ ಭಂಗಿ ಮಾತ್ರವಲ್ಲ ಇತರ ಕಾರಣಗಳಿರುತ್ತವೆ. ಆದ್ದರಿಂದ ಅದೊಂದೇ ಕಾರಣವೆಂದು ಭಾವಿಸುವುದು ಸರಿಯಲ್ಲ.

ಸಂಧಿವಾತ ಮೆನೋಪಸ್ ನಂತರ ಮಾತ್ರ ಬರುವುದು

ಸಂಧಿವಾತ ಮೆನೋಪಸ್ ನಂತರ ಮಾತ್ರ ಬರುವುದು

ಈ ರೀತಿ ಭಾವಿಸುವುದು ತಪ್ಪು. ಕ್ಯಾಲ್ಸಿಯಂ ಕೊರತೆ ಉಂಟಾದರೆ ಚಿಕ್ಕ ಪ್ರಾಯದಲ್ಲೂ ಕಂಡು ಬರುತ್ತದೆ. ಆದ್ದರಿಂದ ಕ್ಯಾಲ್ಸಿಯಂ ಇರುವ ಆಹಾರವನ್ನು ಎಲ್ಲಾ ಪ್ರಾಯದವರು ತಮ್ಮ ಡಯಟ್ ನಲ್ಲಿ ಸೇರಿಸುವುದು ಒಳ್ಳೆಯದು.

 ಕ್ಯಾಲ್ಸಿಯಂ ಪಿಲ್ಸ್ ತಿಂದರೆ ಕಿಡ್ನಿ ಸ್ಟೋನ್ ಉಂಟಾಗುವುದು

ಕ್ಯಾಲ್ಸಿಯಂ ಪಿಲ್ಸ್ ತಿಂದರೆ ಕಿಡ್ನಿ ಸ್ಟೋನ್ ಉಂಟಾಗುವುದು

ಈ ನಂಬಿಕೆ ಕೂಡ ತಪ್ಪು. ಕ್ಯಾಲ್ಸಿಯಂ ದ್ರವರೂಪದಲ್ಲಿರುವ ಖನಿಜ. ಸಮುದ್ರಾಹಾರಗಳಲ್ಲಿ ಕ್ಯಾಲ್ಸಿಯಂಆಕ್ಸಲೇಟ್ ಇರುತ್ತದೆ. ಇದು ಕಿಡ್ನಿಯಲ್ಲಿ ಸಂಗ್ರಹವಾಗಿ ಕಲ್ಲು ಉಂಟಾಗುವುದೇ ಹೊರತು ಕ್ಯಾಲ್ಸಿಯಂನಿಂದಲ್ಲ.

ಪುರುಷರಿಗೆ ಮಹಿಳೆಯರಿಗಿಂತ ಕಮ್ಮಿ ಕ್ಯಾಲ್ಸಿಯಂ ಸಾಕು

ಪುರುಷರಿಗೆ ಮಹಿಳೆಯರಿಗಿಂತ ಕಮ್ಮಿ ಕ್ಯಾಲ್ಸಿಯಂ ಸಾಕು

ಪುರುಷರು ಮತ್ತು ಮಹಿಳೆಯರಿಗೆ ಸಮ ಪ್ರಮಾಣದಲ್ಲಿ ಕ್ಯಾಲ್ಸಿಯಂ ಅವಶ್ಯಕ. 70 ವರ್ಷದ ಮೇಲ್ಪಟ್ಟ ಪುರುಷರಿಗೆ ಅಧಿಕ ಕ್ಯಾಲ್ಸಿಯಂ ಅವಶ್ಯಕ.

ಕ್ಯಾಲ್ಸಿಯಂ ಕೊರತೆಯಿಂದ ಮಾತ್ರ ಮೂಳೆ ಸವೆಯುವುದು

ಕ್ಯಾಲ್ಸಿಯಂ ಕೊರತೆಯಿಂದ ಮಾತ್ರ ಮೂಳೆ ಸವೆಯುವುದು

ಮೂಳೆ ಬಲಹೀನವಾದರೆ ಅದಕ್ಕೆ ಕ್ಯಾಲ್ಸಿಯಂ ಕೊರತೆ ಅನ್ನುವುದು ಮಾತ್ರ ನಮ್ಮಲ್ಲಿ ಹೆಚ್ಚಿನವರಿಗೆ ಗೊತ್ತು. ಆದರೆ ವಿಟಮಿನ್ ಡಿ ಕೊರತೆಯಿಂದಲೂ ಮೂಳೆ ಬಲಹೀನವಾಗುತ್ತದೆ.

 ಬೆನ್ನುನೋವು ಒಂದು ಸಾಮಾನ್ಯ ಸಮಸ್ಯೆ

ಬೆನ್ನುನೋವು ಒಂದು ಸಾಮಾನ್ಯ ಸಮಸ್ಯೆ

ಬೆನ್ನು ನೋವು ಒಂದು ಸಾಧಾರಣ ಸಮಸ್ಯೆಯೆಂದು ಮುಲಾಮು ಹಚ್ಚಿ ಸುಮ್ಮೆನಿರುತ್ತೇವೆ. ಆದರೆ ಇದನ್ನು ಹಾಗೇ ಬಿಟ್ಟರೆ ಲಕ್ವ ಹೊಡೆಯಬಹುದು.

ಬೆನ್ನಿನ ಸರ್ಜರಿಯಿಂದ ಪ್ರಯೋಜನವಿಲ್ಲ

ಬೆನ್ನಿನ ಸರ್ಜರಿಯಿಂದ ಪ್ರಯೋಜನವಿಲ್ಲ

ಬೆನ್ನಿನ ಸರ್ಜರಿಯಿಂದ ನೋವು ಕಡಿಮೆ ಮಾಡಲು ಸಾಧ್ಯವೇ? ಬೆನ್ನು ನೋವು ಸ್ವಲ್ಪ ಸಮಯದಲ್ಲಿ ಮತ್ತೆ ಬರಬಹುದು ದಿನಾ ಬೆನ್ನುನೋವು ಕಾಣಿಸಿಕೊಂಡರೆ ಸರ್ಜರಿ ಮಾಡಿಸಿದರೆ ಗುಣಮುಖವಾಗಬಹುದು.

ರೆಸ್ಟ್ ತೆಗೆದರೆ ಮೂಳೆಯ ಆರೋಗ್ಯ ಹೆಚ್ಚುವುದು

ರೆಸ್ಟ್ ತೆಗೆದರೆ ಮೂಳೆಯ ಆರೋಗ್ಯ ಹೆಚ್ಚುವುದು

ಮೈ, ಬೆನ್ನು. ಸಂಧಿ ನೋವು ಕಾಣಿಸಿದರೆ ರೆಸ್ಟ್ ತೆಗೆದುಕೊಂಡರೆ ಗುಣಮುಖವಾಗುವುದು ಎಂದು ಭಾವಿಸುತ್ತೇವೆ. ಆದರೆ ವಿಟಮಿನ್ ಕೊರತೆಯಿಂದ ಬಂದ ಕಾಯಿಲೆಯನ್ನು ಬರೀ ವಿಶ್ರಾಂತಿ ತೆಗೆದುಕೊಂಡು ಗುಣ ಪಡಿಸಲು ಸಾಧ್ಯವಿಲ್ಲ.

English summary

9 Myths About Bone Health Busted | Tips For Health | ಮೂಳೆ ಸಂಬಂಧಿ ಕಾಯಿಲೆಗಳ ಬಗ್ಗೆ ಕೆಲ ಅಪನಂಬಿಕೆಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Most people do not know the actual causes of osteoporosis or the reasons for low calcium in the bones. The worst thing about these bone health myths are that even educated people are prone to them.
X
Desktop Bottom Promotion