Latest Updates
-
ಮದುವೆ ಮನೆಯಲ್ಲಿ ನೋಟಿನ ಹಾರ: ಸಂಭ್ರಮದ ನಡುವೆ ಅನಿರೀಕ್ಷಿತವಾಗಿ ನುಗ್ಗಿ ಬಂತು ರಣರಂಗ! -
ಮಕ್ಕಳಲ್ಲಿ ಹೆಚ್ಚುತ್ತಿದೆ ಮಧುಮೇಹದ ಭೀತಿ: ಇಂದೇ ಬದಲಾಯಿಸಿ ನಿಮ್ಮ ಅಡುಗೆಮನೆಯ ಈ ಅಭ್ಯಾಸಗಳನ್ನು! -
ಮೆಟ್ ಗಾಲಾ 2026: ಜಾಗತಿಕ ವೇದಿಕೆಯಲ್ಲಿ ಅಬ್ಬರಿಸಿದ ಭಾರತೀಯ ಸಂಸ್ಕೃತಿ, ಫ್ಯಾನ್ಸ್ ಫಿದಾ! -
ಬೇಸಿಗೆಯ ಬಿಸಿಲಿಗೆ ಸುಸ್ತಾದ್ರಾ? ಕೇವಲ 1000 ರೂಪಾಯಿಯಲ್ಲಿ ನಿಮ್ಮ ಮನೆಯನ್ನು ತಂಪಾಗಿಸಿ! -
ದೆಹಲಿ ಮಂದೆದ್ದಿದೆ: ವರ್ಷದಲ್ಲೇ ಮೊದಲ ಬಾರಿಗೆ ಸಿಕ್ಕಿದೆ ಇಂತಹ ಅದ್ಭುತ ಅವಕಾಶ! -
ದೆಹಲಿ-ಎನ್ಸಿಆರ್ನಲ್ಲಿ ಯೆಲ್ಲೋ ಅಲರ್ಟ್: ಮಳೆಯ ಅಬ್ಬರದ ನಡುವೆಯೂ ದಂಪತಿಗಳು ತಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುವುದು ಹೇಗೆ? -
ದೆಹಲಿ-ಎನ್ಸಿಆರ್ ನಿವಾಸಿಗಳೇ ಎಚ್ಚರ: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವಾಗಿದೆಯೇ? -
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ!
ವಾಕಿಂಗ್ ಮಾಡಿದರೆ ಸಾಲದು, ಯೋಗ ಬೇಕೇಬೇಕು
ಪ್ರಶ್ನೆ: ಯೋಗದ ಮಹತ್ತರ ವಿಷಯಗಳನ್ನು ತಿಳಿಸಿದ್ದೀರಿ ಕೇವಲ ಯೋಗ ಮಾಡಿದರೆ ಸಾಕೆ ಅಥವ ಒಂದು ಗಂಟೆಯ ವಾಯುವಿಹಾರ ಮಾಡಿದರೆ ಸಾಕೆ? ಇದ್ಯಾವುದು ಇಲ್ಲದೆ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಹೇಗೆ? ಯೋಗವನ್ನೆ ಏಕೆ ಮಾಡಬೇಕು?
ಡಾ.ವಿವೇಕ : ನನ್ನ ಅನುಭವದ ಪ್ರಕಾರ, ಎಲ್ಲರು ನಾನು ಮಾತ್ರೆ ತೆಗೆದುಕೊಳ್ಳುತ್ತಿದ್ದೇನೆ ಯೋಗ ಏಕೆ ಮಾಡಬೇಕು? ನಾನು ಬೇರೆ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಅಳವಡಿಸಿಕೊಂಡಿದ್ದೇನೆ ಯೋಗಕ್ಕೆ ಏಕೆ ಗಮನಕೊಡಬೇಕು? ಯೋಗ ಮಾಡದೆ, ವ್ಯಾಯಮ ಮಾಡದೆ ವಾಕಿಂಗ್ ಮಾಡಿದರೆ ಸಾಕಲ್ಲವೆಂಬ ಅನೇಕ ಪ್ರಶ್ನೆಗಳನ್ನು ಎದುರಿಸುತ್ತಲೇ ಬಂದಿದ್ದೇನೆ. ಅದೇ ರೀತಿಯಲ್ಲಿ ಅವರವರಿಗೆ ಸಮಾಧಾನವಾಗುವಂತಹ ಉತ್ತರಗಳನ್ನು ಕೊಟ್ಟು ಆದ ಬದಲಾವಣೆಗಳನ್ನು ಕಂಡು ಸಂತೋಷಪಟ್ಟಿದ್ದೇನೆ ಕೂಡ.
ಇಲ್ಲಿ ಮುಖ್ಯವಾಗಿ ಹೇಳಬೇಕೆಂದರೆ, ಯೋಗ ದೇಹ-ಮನಸ್ಸಿನ ಸಮತೋಲನವನ್ನು ವೃದ್ದಿಪಡಿಸಿ, ಮನಸ್ಸಿನ ಭಾವನೆಗಳನ್ನು ಶುದ್ದಪಡಿಸಿ, ಒತ್ತಡವನ್ನು ನಿವಾರಿಸಿ, ಮನಸ್ಸಿನ ಅಭಿವೃದ್ದಿಗೆ ಯೋಗ ಖಂಡಿತವಾಗಿ ಸಹಾಯಕಾರಿ. ಆದರೆ ವ್ಯಾಯಾಮದಲ್ಲಿ ಉಸಿರಾಟವನ್ನು ಗಮನಿಸುವುದಿಲ್ಲ ದೇಹಕ್ಕೆ ಮಾತ್ರ ಗಮನಕೊಡುತ್ತೇವೆ. ಮನಸ್ಸು ಮಾತ್ರ ಎಲ್ಲೋ ಇರುತ್ತೆ. ವ್ಯಾಯಾಮದಿಂದ ದೇಹದ ಮಾಂಸಖಂಡಗಳು ಬಲಗೊಳ್ಳಬಹುದು. ಆದರೆ ಯೋಗದ ಅಭ್ಯಾಸದಿಂದ ಕಾಲಕ್ರಮೇಣ ಅದರ ಫಲಿತಾಂಶವನ್ನು ಮನಸ್ಸಿನಲ್ಲಿ, ಭಾವನೆಗಳಲ್ಲಿ, ಉಸಿರಾಟದಲ್ಲೂ ಗಮನಿಸುವುದರಿಂದ ಸಂಪೂರ್ಣ ಮನಸ್ಸು, ಉಸಿರು, ಭಾವನೆಗಳ ಸಮತೋಲನವನ್ನು ಯೋಗದಿಂದ ಮಾತ್ರ ಕಂಡುಕೊಳ್ಳಲು ಸಾದ್ಯ. ಅನೇಕ ವ್ಯಾಯಾಮಗಳಿಂದಾಗದ ಬದಲಾವಣೆಗಳು ಯೋಗಚಿಕಿತ್ಸೆಯಿಂದ ಪಡೆಯಬಹುದೆಂದು ನನ್ನ ಸಂಶೋಧನೆ ಮತ್ತು ಅನುಭವದಿಂದ ಗಮನಿಸಿರುತ್ತೇನೆ.
ಪ್ರಶ್ನೆ: ಇತ್ತೀಚಿಗೆ ಹಲವಾರು ರೀತಿಯ ಯೋಗ ಕಾರ್ಯಕ್ರಮಗಳು, ಶಿಬಿರಗಳು ಮತ್ತು ತರಗತಿಗಳು ದೊರಕುತ್ತವೆ, ಅವುಗಳಲ್ಲಿ ಯಾವುದನ್ನು ಆಯ್ಕೆಮಾಡಿಕೊಳ್ಳಬೇಕು?
ಡಾ.ವಿವೇಕ : ನಾವು ಆಯೋಜಿಸಿದ ಯೋಗ ಚಿಕಿತ್ಸೆಗಳಿಂದ ನಮಗೆ ನಾವು ಕೇಳಿಕೊಂಡ ಪ್ರಶ್ನೆ ಕೂಡ ಇದೇನೆ. ನಾನು ಗಮನಿಸಿದಂತೆ ಯೋಗದ ಬಗೆಗಿನ ಜಾಗೃತಿ ಬೆಳೆಯುತ್ತಿದೆ, ಪ್ರತಿಯೊಬ್ಬರು ಯೋಗದ ಮೊರೆ ಹೋಗುತ್ತಿದ್ದಾರೆ. ನಾನು ಗಮನಿಸಿದ ಒಂದು ತಪ್ಪು ಅಂದರೆ ಹೆಚ್ಚಿನ ಮನೆಗಳಲ್ಲಿ TV ನೋಡಿ ಕಲಿಯುವ ಕ್ರಮ, ಪುಸ್ತಕ ಓದಿ ಯೋಗಾಭ್ಯಾಸ ಆಡುವುದು ಅಥವ ಸರಿಯಾದ ಯೋಗಕ್ರಮವನ್ನು ಅನುಸರಿಸದೆ ಕಲಿಯುವುದು. ಕೆಲವರು ಅಭ್ಯಾಸವನ್ನು ಮಾಡಿದ ಸಮಯಕ್ಕೆ ಗಮನಕೊಡುತ್ತಾರೆಯೇ ಹೊರತು ಹೇಗೆ ಮಾಡಿದೆ ಎಂಬುವುದಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ. ಅಭ್ಯಾಸ ಮಾಡುವಾಗ ದೇಹ ಮತ್ತು ಉಸಿರಾಟದ ಮೇಲಿನ ನಿಯಂತ್ರಣವನ್ನು ಗಮನಿಸುವುದಿಲ್ಲ. ಕೆಲಸದ ಮದ್ಯದಲ್ಲಿ ಯೋಗ, ಯೋಗದ ಮಧ್ಯೆ ಕೆಲಸ ಸಲ್ಲದು. ಇದು ಯೋಗ ಚಿಕಿತ್ಸೆಯಾಗುವುದಿಲ್ಲ ಯೋಗ ವ್ಯಾಯಾಮವಾಗುತ್ತದೆ. ಸರಳ ಯೋಗಕ್ರಮವನ್ನು ಅನುಸರಿಸುವುದು ಬಹಳ ಮುಖ್ಯ ಮತ್ತು ಪ್ರತಿದಿನ 20 ನಿಮಿಷ ಯೋಗವನ್ನು ಮಾಡುವುದು ಬಹಳ ಉತ್ತಮವಾದದ್ದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications