Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಪ್ರತಿದಿನ 30 ನಿಮಿಷ ಯೋಗಕ್ಕಾಗಿ ಮೀಸಲಿಡಿ
ಪ್ರಶ್ನೆ : ನೀವು ನಡೆಸುವ ಯೋಗ ಶ್ರೀ ರಕ್ಷ ಶಿಬಿರದಲ್ಲಿ ಯಾವ ರೀತಿಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದ್ದೀರಿ ಮತ್ತು ಯಾವ ರೀತಿಯ ಬದಲಾವಣೆಯನ್ನು ಕಂಡಿದ್ದೀರಿ?
ಡಾ.ವಿವೇಕ : 2 ವರ್ಷಗಳಿಂದ ಯೋಗ ಶ್ರೀ ರಕ್ಷ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗಿದೆ. ಮುಖ್ಯವಾಗಿ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಆರಂಭಗೊಂಡು, ತಾಲೂಕು ಮಟ್ಟಗಳನ್ನು ತಲುಪಿ ಈಗ 5 ತಿಂಗಳಿಂದ ಪ್ರತಿ ಗ್ರಾಮಗಳಲ್ಲಿಯೂ ಸಹ ಈ ಸರಳ ಯೋಗ ಕ್ರಮದ ಜಾಗೃತಿಯನ್ನು ಮೂಡಿಸಿ ಪ್ರತಿಯೊಬ್ಬರಲ್ಲಿಯೂ ಕೂಡ ಆರೋಗ್ಯದೆಡೆಗಿನ ಶಿಕ್ಷಣ ಮತ್ತು ರಕ್ಷಣೆಯನ್ನು ಮಾಡುತ್ತಿದ್ದೇವೆ. ಇಲ್ಲಿಯವರೆಗೆ ಸುಮಾರು 12 ಸಾವಿರ ರೋಗಿಗಳ ತಪಾಸಣೆಯನ್ನು ಉಚಿತವಾಗಿ ಕರ್ನಾಟಕದಾದ್ಯಂತ ಮಾಡುತ್ತಿದ್ದೇವೆ.
ಈ ಸಂದರ್ಭದಲ್ಲಿ ನಾವು ಅತಿ ಹೆಚ್ಚಾಗಿ ಗಮನಿಸಿದ ಕಾಯಿಲೆಗಳೆಂದರೆ ನೋವಿಗೆ ಸಂಬಂಧಪಟ್ಟಂತಹ ತಲೆನೋವು, ಸೊಂಟನೋವು, ಕಾಲುನೋವು, ಮಂಡಿನೋವು ಮುಖ್ಯವಾದುವು. ಇವುಗಳಲ್ಲದೆ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಹೃದಯಕ್ಕೆ ಸಂಬಂಧಪಟ್ಟಂತಹ ಸಮಸ್ಯೆ, ಅಧಿಕ ಬೊಜ್ಜು, ಮಾನಸಿಕ ಖಿನ್ನತೆ, ಅಧಿಕ ಒತ್ತಡ, ಉದ್ವೇಗ, ತಳಮಳ, ನಿದ್ದೆಯ ಸಮಸ್ಯೆಗಳು ಪ್ರಮುಖವಾದುವು. ಎಲ್ಲಾ ಕಾಯಿಲೆಗಳಿಗೂ ಕಾರಣವೆಂದರೆ ಆಹಾರದಲ್ಲಿನ ಏರು-ಪೇರು, ವಿಶ್ರಾಂತಿಯ ಕೊರತೆ, ಪೈಪೋಟಿ ಜೀವನ, ನಂಬಿಕೆಯ ಕೊರತೆ, ಆಲಸ್ಯ ಮತ್ತು ಉದ್ವೇಗ. ಯೋಗ ಶ್ರೀ ರಕ್ಷ ಸರಳಕ್ರಮದ ಮೂಲಕ ಆಹಾರ ಮತ್ತು ಯೋಗಕ್ರಮಗಳನ್ನು ತಿಳಿಸಿ ಯೋಗ ಮತ್ತು ಆಹಾರ ಶಿಕ್ಷಣದ ಮೂಲಕ ಆರೋಗ್ಯದ ಜಾಗೃತಿಯನ್ನು ಮಾಡಿ ತನ್ಮೂಲಕ ಜನ,ಮನೆ ಸಮಾಜದ ಮೂಲಕ ರಾಷ್ಟ್ರದ ಉದ್ದಾರವೆ ನಮ್ಮ ಮುಖ್ಯ ಗುರಿ ಮತ್ತು ನಮ್ಮಯ ಆದರ್ಶಸೂತ್ರ.
ಪ್ರಶ್ನೆ: ಸಿಂಗಪುರದಲ್ಲಿನ ಜೀವನಶೈಲಿ ನಿಮಗೆ ಈಗ ಸ್ವಲ್ಪ ಪರಿಚಯವಾಗಿರಬಹುದು, ಇಲ್ಲಿ ನಾವು ಯಾವ ರೀತಿಯ ಯೋಗಭ್ಯಾಸವನ್ನು ಮಾಡಬಹುದು? ದಿನಕ್ಕೆ ಎಷ್ಟು ಸಮಯ ಅಭ್ಯಾಸವನ್ನು ಮಾಡಬೇಕಾಗುತ್ತದೆ?
ಡಾ.ವಿವೇಕ : ಇದು ನನ್ನ ಪ್ರಥಮ ಸಿಂಗಪುರದ ಬೇಟಿ, ನಾನು ಗಮನಿಸಿದಂತೆ ಇಲ್ಲಿಯೂ ಕೂಡ ಪೈಪೋಟಿಯ, ಒತ್ತಡದ ಜೀವನವನ್ನು ನಡೆಸುತ್ತಿದ್ದಾರೆ. ನಾನು ಮಾಧ್ಯಮಗಳ ಮೂಲಕ ಮತ್ತು ಬಲ್ಲವರಿಂದ ಇಲ್ಲಿಯೂ ಕೂಡ ವಿಶ್ರಾಂತಿಯ ಅಭಾವ, ಸರಿಯಾದ ಆಹಾರ ಕ್ರಮದ ಅವಕಾಶದ ಅಭಾವ ಮತ್ತು ಸಮಯಕ್ಕೆ ಸರಿಯಾಗಿ ನಿದ್ದೆಯ ಕೊರತೆಯಿದೆ ಎಂದು ತಿಳಿದಿದ್ದೇನೆ. ಒಂದು ದೃಷ್ಟಿಯಲ್ಲಿ ಒಬ್ಬ ವೈದ್ಯನಾಗಿ, ಯೋಗ ಚಿಕಿತ್ಸಕನಾಗಿ ಹೇಳಬೇಕೆಂದರೆ ಇಲ್ಲಿಯೂ ಕೂಡ ಯೋಗಕ್ಕೆ ಗಮನಕೊಟ್ಟು ಪ್ರತಿದಿನ ಅಭ್ಯಾಸವನ್ನು ನಡೆಸಿದರೆ ನೆಮ್ಮದಿಯ ಆರೋಗ್ಯಕರ ಜೀವನವನ್ನು ನಡೆಸಬಹುದು. ಇಲ್ಲಿಯ ವೇಗಯುತವಾದ ಜೀವನದಲ್ಲಿ ಇಂತಿಷ್ಟೇ ಸಮಯವೆಂದು ಹೇಳಲಾಗುವುದಿಲ್ಲವಾದರೂ, ಕೊನೇಪಕ್ಷ ಪ್ರತಿದಿನ 20-30 ನಿಮಿಷಗಳ ಕಾಲವನ್ನು ಯೋಗಕ್ಕಾಗಿ ಮೀಸಲಿಡುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
