Latest Updates
-
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ?
ರೋಗ ಬಂದ ನಂತರ ಯೋಗ ಮಾಡಿದರೇನು ಫಲ?
ಪ್ರಶ್ನೆ: ನೀವು Yoga and Rahabilation ನಲ್ಲಿ MD ಪಡೆದವರಲ್ಲಿ ಮೊದಲಿಗರು ಎಂಬುದು ಹೆಮ್ಮೆಯ ವಿಷಯ, ಓದುವಾಗಿನ ನಿಮ್ಮಯ ಅನುಭವಗಳನ್ನು ತಿಳಿಸುತ್ತೀರ?
ಡಾ.ವಿವೇಕ: ಮೊದಲಿನಿಂದಲೂ ಕೂಡ ಯೋಗ ಚಿಕಿತ್ಸೆಯನ್ನು ಓದಬೇಕೆಂಬುದು ನನ್ನಯ ಕನಸು ಮತ್ತು ಹಂಬಲವಾಗಿತ್ತು. ಯೋಗ ವಿಜ್ಞಾನದ ವಿಷಯದಲ್ಲಿ 5 ವರ್ಷಗಳ ತರಬೇತಿಯನ್ನು ಪಡೆದು ವೈದ್ಯನಾಗಿ ನಾನು ಚಿಕಿತ್ಸೆಯ ಸೇವೆಯನ್ನು ಪ್ರಾರಂಭಿಸಿದ ನಂತರ MD ಮಾಡುವುದಕ್ಕೂ ಅವಕಾಶ ಸಿಕ್ಕಿತು. ಅದರಿಂದ MD ಮಾಡುವ ಪ್ರಥಮ ಗುಂಪಿನ ವಿದ್ಯಾರ್ಥಿಯಾಗಿ ಸೇರಿಕೊಂಡೆ. ಹಲವು ರೀತಿಗಳಲ್ಲಿ ಯೋಗದ ವಿಚಾರವು ಹೊಸದಾಗಿತ್ತು. ಅಷ್ಟರವರೆಗೆ ಬೇರೆ ಎಲ್ಲಾ ವಿಭಾಗಗಳಲ್ಲಿ MD ಇತ್ತು ಆದರೆ ಯೋಗಶಾಸ್ತ್ರದಲ್ಲಿರಲಿಲ್ಲ. ಯೋಗ ಚಿಕಿತ್ಸೆ ಮತ್ತು ಶಾಸ್ತ್ರ ಕ್ರಮವನ್ನು ಯಾವರೀತಿಯಲ್ಲಿ ಅಳವಡಿಸಕೊಳ್ಲಬಹುದೆಂದು ಪ್ರತಿಯೊಂದು ಆಸ್ಪತ್ರೆಯ ವಿಭಾಗಗಳಲ್ಲಿ ನೋಡಿ ತಿಳಿದುಕೊಂಡೆ.
ಆದರೆ ಪ್ರತಿಯೊಂದು ಸಂದರ್ಭದಲ್ಲಿಯೂ ಕೂಡ ಆರೋಗ್ಯ ಕ್ಷೇತ್ರದಲ್ಲಿ ನಮ್ಮ ಎಲ್ಲಾ ಅಂಗಾಂಗಗಳ ಸಮತೋಲನವನ್ನು ಕಳೆದುಕೊಂಡನಂತರ, ಅನಾರೋಗ್ಯವನ್ನು ಹೊಂದಿದ ನಂತರ ನಾವು ಕಾಯಿಲೆಯಿಂದ ರಕ್ಷಿಸಿಕೊಳ್ಳಲಾಗುವುದಿಲ್ಲವೆಂಬುದನ್ನು ಸಹ ಸ್ಪಷ್ಟಪಡಿಸಿಕೊಂಡೆ. MD ಪಡೆದ ನಂತರ ಅತಿ ವಿಶೇಷ ಮತ್ತು ಶ್ರೇಷ್ಠವಾಗಿ ಆರೋಗ್ಯ ಕ್ರಮ, ಶಿಕ್ಷಣ ಮತ್ತು ರಕ್ಷಣೆಯ ಮಂತ್ರದ ಸೂತ್ರಗಳನ್ನು ಯೋಗ ಚಿಕಿತ್ಸೆಯ ಮೂಲಕ ಹಮ್ಮಿಕೊಳ್ಳಬೇಕೆಂಬ ಅಭಿಲಾಷೆಯನ್ನು ಹೊಂದಿದ್ದೆ. ಹಲವು ಕಡೆ ಅದ್ಭುತವಾದಂತಹ ಅವಕಾಶ ದೊರೆಯಿತು. ಎಲ್ಲಾ ಕಡೆಗಳಲ್ಲಿ ಶಿಬಿರಗಳನ್ನು ಆಯೋಜಿಸಿ 12 ಸಾವಿರ ರೋಗಿಗಳ ತಪಾಸಣೆ ಮಾಡಿದನಂತರ ಯೋಗ ಶಿಕ್ಷಣದ ಮೂಲಕ ಆರೋಗ್ಯದ ರಕ್ಷಣೆ, ಶಿಕ್ಷಣ ಮತ್ತು ಜಾಗೃತಿಯನ್ನು ಮೂಡಿಸುವುದರ ಮೂಲಕ ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸುವಂತೆ ಪ್ರೇರೆಪಿಸಲು ಸಹಾಯವಾಗುತ್ತದೆಂಬುದನ್ನು ನೋಡಿದಾಗ ನಿಜಕ್ಕೂ ತುಂಬ ಸಂತೋಷವಾಗುತ್ತದೆ.
ಪ್ರಶ್ನೆ : ಮುಂದಿನ ಪೀಳಿಗೆಯ ಸದೃಢ ಆರೋಗ್ಯಕ್ಕೆ ಯೋಗದ ಪಾತ್ರವೇನೆಂಬುದನ್ನು ವಿವರಿಸುತ್ತೀರಾ?
ಡಾ:ವಿವೇಕ : ಇಂದು ಮುಖ್ಯವಾಗಿ ಭಾರತದಲ್ಲದೆ ಅನೇಕ ಮುಂದುವರೆದ ದೇಶಗಳಲ್ಲಿನ ಯುವ ಪೀಳಿಗೆಯ ಆರೋಗ್ಯದ ಶೇಕಡವಾರು ಗಣನೀಯವಾಗಿ ಕಡಿಮೆಯಾಗುತ್ತಿದೆ. ಭಾರತದಲ್ಲಿನ ಮಹಾನಗರಗಳಲ್ಲಿ ನಡೆದಂತಹ ಸಂಶೋಧನೆಯ ಪ್ರಕಾರ ಜೀವನಶೈಲಿಗೆ ಸಂಬಂಧಪಟ್ಟಂತಹ ಕಾಯಿಲೆಗಳು ಜಾಸ್ತಿಯಾಗುತ್ತಿವೆ. ಉತ್ತಮವಾದಂತಹ ಜೀವನಕ್ರಮವನ್ನು ಹೆಚ್ಚಿನವರು ಅಳವಡಿಸಿಕೊಳ್ಳುತ್ತಿಲ್ಲ. ನಿದ್ದೆಯ ಕೊರತೆ, ಆಹಾರದಲ್ಲಿನ ಏರು-ಪೇರು, ವಿಶ್ರಾಂತಿಯ ಕೊರತೆ ಯುವಜನರಿಂದ ಹಿಡಿದು ಸಮಾಜದ ಎಲ್ಲ ವರ್ಗಗಳಲ್ಲಿ ಜಾಸ್ತಿಯಾಗುತ್ತ ಬಂದಿದೆ. ಈ ದೃಷ್ಟಿಯಲ್ಲಿ ಸರಳವಾಗಿ ಗಮನಿಸಿದ ಅಂಶವೆಂದರೆ ಆರೋಗ್ಯವನ್ನು ರಕ್ಷಿಸಿಕೊಳ್ಳಬೇಕಾದರೆ ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಆಧ್ಯಾತ್ಮಕವಾದಂತಹ ಆರೋಗ್ಯಕ್ಕೆ ಗಮನಕೊಡಬೇಕು.
ಒಂದು ಕುಟುಂಬಕ್ಕೆ ಆರೊಗ್ಯದ ಬುನಾದಿ ಎಂದರೆ ಸರಳವಾದ ಆಹಾರ, ನಿದ್ರೆ ಮತ್ತು ಒತ್ತಡರಹಿತವಾದಂತಹ ಜೀವನ. ನನ್ನಯ ಮುಖ್ಯ ಸಂದೇಶವೆಂದರೆ ಜಾಸ್ತಿ ನಿರೀಕ್ಷೆ ಮಾಡದೆ, ಎಲ್ಲರನ್ನೂ ಪ್ರೀತಿಸಿ, ಕ್ಷಮಿಸುವಂಥವರಾಗಿ ದ್ವೇಷರಹಿತರಾಗಿ "ನಾವೆಲ್ಲಾ ಒಂದು-ನಾವೆಲ್ಲ ಬಂಧು" ವೆಂಬ ತತ್ವಕ್ಕೆ ಶರಣಾಗಿ ಉತ್ತಮರಾಗಿ ಬದುಕಿ ಇನ್ನೊಬ್ಬರನ್ನು ಉತ್ತಮದ ಹಾದಿಯಲ್ಲಿ ಕರೆದುಕೊಂಡು ಹೋಗುತ್ತೇವೆಂಬ ಮಂತ್ರವನ್ನು ಪಾಲಿಸಬೇಕು. ನಾನು ನನ್ನವರು, ನನ್ನಯ ಸಮಾಜ, ನನ್ನಯ ಬಂಧು-ಬಾಂಧವರೆಂಬ ವಿಶಾಲ ಮನೋಭಾವದಲ್ಲಿ ಜೀವನ ನಡೆಸಿದರೆ ಖಂಡಿತ ನಮ್ಮ ಆರೋಗ್ಯವು ಸಮತೋಲನದಲ್ಲಿರುತ್ತದೆ. ಕೇವಲ ಪ್ರಾರ್ಥನೆಗಳಿಂದ ಕೂಡ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆಂದು ಸಹ ಸಂಶೋಧನೆಗಳಿಂದ ದೃಢೀಕರಿಸಲಾಗಿದೆ. ಎಲ್ಲರನ್ನು ಪ್ರೀತಿಸುವ ಗುಣವನ್ನು ಬೆಳೆಸಿಕೊಳ್ಳುವುದರಿಂದ ಮನಶಾಂತಿ ಸಿಗುತ್ತದೆ, ಮನೆ-ಮನದ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











