Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
ಉತ್ತಮ ಆರೋಗ್ಯ ಮತ್ತು ನೆಮ್ಮದಿಯ ಜೀವನ

ಹಿತಾನುಭವ
ನಮ್ಮ ಆರೋಗ್ಯದ ಅತಿದೊಡ್ಡ ಶಕ್ತಿ ಎಂದರೆ ನಮ್ಮಲ್ಲೇ ಹಿತಾನುಭವವನ್ನು ಕಂಡುಕೊಳ್ಳುವುದು, ಆನಂದ ಸಾಗರದಲ್ಲಿ ತೇಲಾಡುವುದು. ಅಂದವಾಗಿ ಕಾಣುವುದೇ ದೈಹಿಕ ಆರೋಗ್ಯದ ಗುಟ್ಟು ಎಂದು ಕೆಲವರು ತಿಳಿದಿರುತ್ತಾರೆ. ಆದರೆ, ಬಾಹ್ಯ ಸೌಂದರ್ಯ ಕಾಣುವಲ್ಲಿ ಆಂತರಿಕ ಸೌಂದರ್ಯ ಅಥವಾ ಆನಂದವನ್ನು ಮರೆತಿರುತ್ತಾರೆ.
ಸಮತೋಲಿತ ಆಹಾರ
ಡಯಟ್ ಅಥವಾ ಪಥ್ಯ ಮಾಡುವ ನೆಪದಲ್ಲಿ ನಿಮಗಿಷ್ಟವಾದ ಆಹಾರವನ್ನು ತ್ಯಜಿಸುವುದು ತಪ್ಪು. ಆದರೆ, ಅತಿಯಾದ ಸೇವನೆಯಿಂದ ಆಗುವ ದುಷ್ಪರಿಣಾಮಗಳನ್ನು ಬದಿಗೊತ್ತಿ ಅಂತಹ ತಿನಿಸುಗಳನ್ನೇ ಅತಿಯಾಗಿ ಸೇವಿಸುವುದು ಇನ್ನೂ ದೊಡ್ಡ ತಪ್ಪು. ನಮ್ಮ ದೇಹಕ್ಕೆ ಯಾವುದು ಸರಿ, ಯಾವುದು ತಪ್ಪು ಎಂಬ ವಿವೇಚನೆ ನಮ್ಮಲ್ಲಿಯೇ ಇರಬೇಕು. ಆಹಾರಗಳ ಕುರಿತಂತೆ ನಮ್ಮ ಧೋರಣೆ ಸರಿಯಾಗಿರಬೇಕು. ತಲತಲಾಂತರದಿಂದ ಅನ್ನವನ್ನು ದೇವರೆಂದು ಪೂಜಿಸುವ ನಾವು ಅವನ್ನು ಸೇವಿಸುವಾಗಲೂ ಕೂಡ ಅದೇ ಪೂಜ್ಯ ಭಾವನೆ ಹೊಂದಿರಬೇಕು.
ವ್ಯಾಯಾಮ
ದೈಹಿಕ ಸಕ್ಷಮತೆ ಕಾಯ್ದುಕೊಳ್ಳಲು ಒಬ್ಬೊಬ್ಬರು ಒಂದೊಂದು ರೀತಿ ವ್ಯಾಯಾಮ ಮಾಡುವ ವಿಧಾನವನ್ನು ಕಂಡುಕೊಂಡಿರುತ್ತಾರೆ. ಸಾಧ್ಯವಾದ ಮಟ್ಟಿಗೆ ಗುರುಗಳಿಂದ ಸೂಕ್ತವಾಗಿ ತರಬೇತಿ ಪಡೆದು ನಮ್ಮ ಪ್ರಕೃತಿಗೆ ತಕ್ಕಂತೆ ವ್ಯಾಯಾಮ ಮಾಡುವುದು ಒಳಿತು. ಯೋಗವನ್ನು ಪ್ರತಿನಿತ್ಯ ತಪ್ಪದೆ ಮಾಡುವುದು ಇನ್ನೂ ಉತ್ತಮ. ಯೋಗದಿಂದ ದೇಹ ಮಾತ್ರವಲ್ಲ ಮನಸ್ಸು ಕೂಡ ಶುದ್ಧಿಯಾಗುತ್ತದೆ ಮತ್ತು ಯಾವುದೇ ಸೈಡ್ ಎಫೆಕ್ಟ್ಸ್ ಕೂಡ ಇರುವುದಿಲ್ಲ.
ಸಕಾರಾತ್ಮಕ ಧೋರಣೆ
ನಮ್ಮಲ್ಲಿ ಉತ್ತಮವಾದ ವ್ಯಕ್ತಿತ್ವ ರೂಪಿಸಿಕೊಳ್ಳಲು ಒಳ್ಳೆಯ ಜನರ ಸಹವಾಸ ಹೊಂದುವುದರಿಂದ ವಿಶಿಷ್ಟಬಗೆಯ ಹಿತಾನುಭವ ತುಂಬಿಕೊಳ್ಳುತ್ತದೆ. ಸಣ್ಣಸಣ್ಣ ತಪ್ಪುಗಳಿಗೆ ರೇಗಾಡುವುದು, ಅಸಮಾಧಾನಗೊಳ್ಳುವುದು, ಅತೃಪ್ತಿ ವ್ಯಕ್ತಪಡಿಸುವುದು ತಮ್ಮಲ್ಲಿಯೇ ಅಸಂತೋಷ ತುಂಬಿಕೊಂಡವರ ಲಕ್ಷಣ. ಜೀವನದಲ್ಲಿ ಇದೆಲ್ಲ ಇದ್ದದ್ದೇ. ಆದರೆ, ಇಂತಹ ಕೊರತೆಗಳಿಂದ ಹೊರಬಂದವನೇ ಪರಿಪೂರ್ಣ ಆನಂದ ಹೊಂದಲು ಸಾಧ್ಯ. ನಮ್ಮ ದೇಹದ ಅಗತ್ಯಗಳನ್ನು ನಿಖರವಾಗಿ ತಿಳಿದುಕೊಂಡವನು ಮಾತ್ರ ಸರಿಯಾದ ರೀತಿಯಲ್ಲಿ ನಿಭಾಯಿಸಬಲ್ಲ. ಬೆಳಿಗ್ಗೆ ವಾಕಿಂಗ್ ಮಾಡುವುದು, ಉಸಿರಾಟದ ವ್ಯಾಯಾಮ ಮಾಡುವುದರಿಂದ ಮಾನಸಿಕ ಸಮತೋಲನ ಕಾಯ್ದುಕೊಳ್ಳಲು ಸಾಧ್ಯ.
ಯೋಗದಿಂದ ಆರೋಗ್ಯ ಮತ್ತು ನೆಮ್ಮದಿಯ ಜೀವನ
ಭೂಮಿಯ ಮೇಲೆ, ಗ್ರಹಗಳ ಮೇಲೆ, ಗಿಡಮರಗಳ ಮೇಲೆ, ಮನುಷ್ಯರ ಮೇಲೆ ಆಕಾಶದಿಂದ ಒಂದು ವಿಶಿಷ್ಟಬಗೆಯ ಶಕ್ತಿ ಯಾವಾಗಲೂ ಪ್ರವಹಿಸುತ್ತಿರುತ್ತದೆ. ಜಾತಕದ ಮುಖಾಂತರ ಎಂಥ ಗ್ರಹಗಳ ಪ್ರಭಾವ ನಮ್ಮ ಆರೋಗ್ಯದ ಮೇಲೆ ಯಾವ ರೀತಿ ಆಗುತ್ತಿದೆ ಎಂದು ತಿಳಿಯಲು ಸಾಧ್ಯ.
ಸಮತೋಲಿತ ಆಹಾರ, ಸೂಕ್ತವಾದ ವ್ಯಾಯಾಮ, ಸರಿಯಾದ ಜೀವನಕ್ರಮ, ಉತ್ತಮ ಸಂಬಂಧ ಮತ್ತು ಆಧ್ಯಾತ್ಮಕ ಆಚರಣೆಗಳ ಮುಖಾಂತರ ಆ ಶಕ್ತಿಯ ಪ್ರಭಾವವನ್ನು ಬಳಸಿಕೊಂಡು ಉತ್ತಮ ಆರೋಗ್ಯ ಹೊಂದಬಹುದು.
ಉದಾಹರಣೆಗೆ, ರೆಡ್ ಪ್ಲಾನೆಟ್ ಎಂದು ಕರೆಯಲಾಗುವ ಮಂಗಳ ಗ್ರಹದ ಪ್ರಭಾವ ಅತಿಯಾದಾಗ ಜ್ವರ, ಹೊಟ್ಟೆಯಲ್ಲಿ ಉರಿ, ಸೋಂಕು ಉಂಟಾಗಬಹುದು. ದೇಹವನ್ನು ತಂಪಾಗಿಸುವ ಆಹಾರವನ್ನು ಸೇವಿಸುವುದರಿಂದ ಇವುಗಳ ಉಪಶಮನ ಸಾಧ್ಯ. ಆಯಾ ಗ್ರಹಗಳಿಗೆ ತಕ್ಕಂತೆ ಕೆಲ ಮಂತ್ರ ಪಠಿಸಲು ಮತ್ತು ಆಯಾ ರಾಶಿಗಳಿಗೆ ತಕ್ಕಂತೆ ಹರಳುಗಳನ್ನು ಧರಿಸಲು ಕೂಡ ಜ್ಯೋತಿಷಿಗಳು ಹೇಳುತ್ತಾರೆ.
ಜನ್ಮ ಕುಂಡಲಿಯನ್ನು ವಿಶ್ಲೇಷಿಸಿ ಕೆಲ ಸೂತ್ರಗಳನ್ನು ಪಾಲಿಸುವುದರಿಂದ ಕೂಡ ಅನಾರೋಗ್ಯದಿಂದ ದೂರವಿರಲು ಸಾಧ್ಯ. ಕುಂಡಲಿಯ ಅಧ್ಯಯನ ಮತ್ತು ತಜ್ಞ ಜ್ಯೋತಿಷಿಗಳ ಸೂಕ್ತ ಮಾರ್ಗದರ್ಶನದಿಂದ ದಿವಿನಾದ ಆರೋಗ್ಯ ನಿಮ್ಮದಾಗಲಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications