For Quick Alerts
ALLOW NOTIFICATIONS  
For Daily Alerts

ಬಿಟ್ಟರೂ ಬಿಡದ ಕಾಫಿ ಚಟ ಬಿಡಿಸಲು ಸಲಹೆ

|
Coffed
ಕಾಫಿ ಚಟ ಒತ್ತಡದ ಬದುಕಿನ ಇನ್ನೊಂದು ರೂಪ ಅಂತಲೇ ಹೇಳಬಹುದು. ತುಂಬಾ ಸುಸ್ತಾದಾಗ ತಾತ್ಕಾಲಿಕ ರಿಲಾಕ್ಸ್ ಗಾಗಿ ಆರಂಭಿಸಿದ ಕಾಫಿ ಸೇವನೆ ನಂತರ ಚಟವಾಗಿ ಅಂಟಿಕೊಳ್ಳುತ್ತೆ. ಆದರೆ ಇದರ ಅಪಾಯಕಾರಿ ಪರಿಣಾಮ ದೊಡ್ಡ ಸಮಸ್ಯೆ ತಂದೊಡ್ಡುವ ಮುನ್ನ ಕಾಫಿ ಸೇವನೆ ಕಡಿಮೆಗೊಳಿಸಬೇಕು, ಸಾಧ್ಯವಾದರೆ ತ್ಯಜಿಸಿಬಿಡಬೇಕು. ತ್ಯಜಿಸಿದ ನಂತರವೂ ಕೆಲವು ದಿನ ಕಷ್ಟವೆನಿಸಬಹುದು. ಆದರೆ ಅದಕ್ಕೆ ಹೆದರಿ ಕಾಫಿ ಚಟಕ್ಕೆ ಮತ್ತೆ ಅಂಟಿಕೊಂಡರೆ ತೊಂದರೆ ಖಚಿತ.

ಕಾಫಿ ಚಟದ ಪರಿಣಾಮಗಳು: ನಿದ್ದೆ ಬರದಿರುವುದು, ಚರ್ಮದ ತೊಂದರೆ, ನರಗಳ ಸೆಳೆತ, ತಲೆನೋವು ಆರಂಭಗೊಳ್ಳುತ್ತವೆ.

ನೀವು ಕಾಫಿಯನ್ನು ಬಿಡಬೇಕು ಎಂದು ನಿಶ್ಚಯ ಮಾಡಿಕೊಂಡಿದ್ದೀರಿ ಎಂದಾದರೆ ಅದರಿಂದ ಹೊರಬರಲು ತಯಾರಾಗಿರಿ. ಇಲ್ಲಿವೆ ಒಂದಿಷ್ಟು ಸುಲಭೋಪಾಯ:

1. ಕಾಫಿಯನ್ನು ತಕ್ಷಣ ಬಿಟ್ಟುಬಿಡಬಾರದು, ಇದರಿಂದ ಶೀತ ಕಾಣಿಸಿಕೊಳ್ಳಬಹುದು. ಸೇವನೆಯಲ್ಲಿ ಕ್ರಮೇಣ ಕಡಿಮೆ ಮಾಡಿಕೊಂಡು ನಂತರ ಬಿಡಲು ಪ್ರಯತ್ನಿಸಬೇಕು.

2. ಕಾಫಿಗೆ ಬದಲಾಗಿ ಟೀ ಕುಡಿಯಲು ಆರಂಭಿಸಿ. ಕಾಫಿಯಷ್ಟು ಅಪಾಯಕಾರಿಯಲ್ಲದ ಟೀ ಉತ್ತಮ. ಅದರಲ್ಲೂ ಹರ್ಬಲ್ ಅಥವಾ ಗ್ರೀನ್ ಟೀ ಆದರೆ ಆರೋಗ್ಯಕ್ಕೆ ಇನ್ನೂ ಒಳ್ಳೆಯದು.

3. ನಿಮ್ಮ ಸ್ನೇಹಿತರಿಗೆ ನೀವು ಕಾಫಿಯನ್ನು ತ್ಯಜಿಸುತ್ತಿರುವ ವಿಷಯವನ್ನು ಪದೇ ಪದೇ ಹೇಳುತ್ತಿರಿ. ಇಲ್ಲವೆಂದರೆ ಜೊತೆ ಸೇರಿದಾಗ ಇದರ ಸೇವನೆ ಹೆಚ್ಚಾಗಿ ಚಟಕ್ಕೆ ಇನ್ನಷ್ಟು ಕುಮ್ಮಕ್ಕು ನೀಡಿದಂತಾಗುತ್ತದೆ.

4. ತಲೆಸುತ್ತು ಅಥವಾ ತಲೆ ನೋವು ಕಾಣಿಸಿಕೊಂಡರೆ ಅಥವಾ ಸುಸ್ತಾದರೆ ಕಾಫಿ ಬದಲು ಬಿಸಿ ನೀರನ್ನು ಸೇವಿಸಿ ನೋಡಿ, ಇದು ಹೆಚ್ಚು ಸಹಾಯ ಮಾಡುತ್ತದೆ.

5. ವ್ಯಾಯಾಮ ಮಾಡುವುದು ದೇಹವನ್ನೂ ಮನಸ್ಸನ್ನು ಪ್ರಸನ್ನಗೊಳಿಸುತ್ತದೆ. ವ್ಯಾಯಾಮ ಚಟಗಳನ್ನು ಬಿಡಲು ಪರೋಕ್ಷವಾಗಿ ಸಹಾಯ ಮಾಡುತ್ತದೆ.

6. ನಿಶ್ಚಿತ ಸಮಯದಲ್ಲಿ ನಿದ್ದೆ ಮಾಡಿ, ಆದಷ್ಟು ತುಂಬಾ ತಡವಾಗು ಮಲಗುವುದನ್ನು ಕಡಿಮೆ ಮಾಡಿ, 7 ಗಂಟೆ ಅವಧಿಯ ನಿದ್ದೆಗೆ ನಿಮ್ಮ ಸಮಯವನ್ನು ಹೊಂದಿಸಿಕೊಳ್ಳಿ.

ಇದರ ಹೊರತಾಗಿಯೂ ನಿಮಗೆ ಕಾಫಿಚಟದಿಂದ ಹೊರಬರುವುದು ಕಷ್ಟವೆನಿಸಬಹುದು. ಆದರೆ ಅಂತಃ ಶಕ್ತಿಯೊಂದಿದ್ದರೆ ಏನು ಬೇಕಾದರೂ ಸಾಧ್ಯವಿದೆ. ಒಮ್ಮೆ ಇದನ್ನು ಬಿಡಲು ಗಟ್ಟಿ ಮನಸ್ಸು ಮಾಡಿ ಪ್ರಯತ್ನಪಟ್ಟು ನೋಡಿ.

English summary

Caffeine addiction | Caffeine addiction and health | How to come out from caffeine addiction | ಕಾಫಿ ಸೇವನೆ ಮತ್ತು ಚಟ | ಕಾಫಿ ಸೇವನೆಯ ದುಷ್ಪರಿಣಾಮ | ಕಾಫಿ ಚಟದಿಂದ ಹೊರಬರಲು ಸಲಹೆ

Caffeine addiction is a by-product of our stressful lifestyle. However, the side effects of caffeine addiction are so serious that it is apt to label it as an 'addiction' like any other like smoking or alcoholism. If you have made up your mind about quitting caffeine then here is some easy tips to help you.
Story first published: Saturday, August 6, 2011, 15:27 [IST]
X
Desktop Bottom Promotion