For Quick Alerts
ALLOW NOTIFICATIONS  
For Daily Alerts

ಏನಿದು ಇಲಿಜ್ವರ, ಇದಕ್ಕೆ ಚಿಕಿತ್ಸೆ ಹೇಗೆ?

By * ರೋಹಿಣಿ, ಬಳ್ಳಾರಿ
|
Leptospirosis disease treatment
ಇಲಿಜ್ವರ 'ಲೆಪ್ಟೋಸ್ಪಿರೊಸಿಸ್' ಎನ್ನುವ ವೈರಸ್‌ನಿಂದ ಬರುತ್ತದೆ. ಇದು ಅಪರೂಪದ ಮತ್ತು ವೈದ್ಯ ಲೋಕವೇ ಆಶ್ಚರ್ಯಪಡುವ ರೀತಿಯಲ್ಲಿ ಕಾಣಿಸಿಕೊಳ್ಳುವ ವೈರಸ್. ಕರ್ನಾಟಕದಲ್ಲಿ ಈ ವೈರಸ್ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು.

ಇಲಿ ವಿಸರ್ಜಿಸುವ ಮೂತ್ರದಿಂದ ಈ ವೈರಸ್ ಹರಡುತ್ತದೆ. ಇಲಿಯ ಮೂತ್ರ ಕುಡಿಯುವ ನೀರಿನಲ್ಲಿ ಸೇರಿದ ಕಾರಣ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಭುವನಹಳ್ಳಿ - ಗಾದಿಗನೂರು ಗ್ರಾಮ ಹಾಗೂ ಸಂಡೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಾಮೂಹಿಕ ಅನಾರೋಗ್ಯ ಕಾಣಿಸಿಕೊಂಡಿದೆ. ಕೇವಲ 12 ಜನರ ರಕ್ತ ತಪಾಸಣೆಯಲ್ಲಿ 9 ಜನರಿಗೆ 'ಲೆಪ್ಟೋಸ್ಪಿರೊಸಿಸ್' ವೈರಸ್ ಕಾಣಿಸಿದೆ. ಇನ್ನು ಉಳಿದವರ ರಕ್ತ ತಪಾಸಣೆ ಜಾರಿಯಲ್ಲಿದೆ.

ರೋಗ ಲಕ್ಷಣ:
ಲೆಪ್ಟೋಸ್ಪಿರಲ್ ಸೋಂಕು ಹೊಂದಿರುವ ವ್ಯಕ್ತಿಗೆ ಹಲವು ರೀತಿಯ ದೈಹಿಕ ತೊಂದರೆಗಳು ಕಂಡು ಬರುತ್ತವೆ. ಮೊದಲಿಗೆ ಸಾಮಾನ್ಯ ಜ್ವರ, ಚಳಿಜ್ವರ, ತೀವ್ರ ತಲೆನೋವು ಇತ್ಯಾದಿಗಳ ಮೂಲಕ ಕಾನಿಸಿಕೊಂಡು ಎರಡನೇ ಹಂತದಲ್ಲಿ ಸ್ನಾಯು ಸೆಳೆತ, ವಾಂತಿ, ಕಣ್ಣುಬೇನೆ, ಕಿಬ್ಬೊಟ್ಟೆ ನೋವು, ಆಮಶಂಕೆ, ಜಾಂಡೀಸ್, ಕರಳು ಬೇನೆಗೆ ತಿರುಗಬಹುದು. ಪ್ರಾಥಮಿಕ ಹಂತದಲ್ಲಿ ಈ ರೋಗದ ಲಕ್ಷಣಗಳನ್ನು ಕಂಡು ಹಿಡಿಯಲು ಕಷ್ಟವಾದ್ದರಿಂದ, ರೋಗಿಗೆ ಬೇರೆ ರೋಗಕ್ಕೆ ನೀಡುವ ಚಿಕಿತ್ಸೆ ನೀಡುವ ಸಾಧ್ಯತೆಗಳೇ ಹೆಚ್ಚು.

ವೈದ್ಯ ತಜ್ಞರ ಪ್ರಕಾರ 'ಲೆಪ್ಟೋಸ್ಪಿರೊಸಿಸ್' ವೈರಸ್ ಕಾಣಿಸಿಕೊಂಡವರು ಬದುಕುಳಿಯುವುದು ತೀರ ವಿರಳ. ಈ ವೈರಸ್ ಪೀಡಿತರು ಶಾಶ್ವತವಾಗಿ ಅನಾರೋಗ್ಯಕ್ಕೆ ಈಡಾಗುತ್ತಾರೆ. ಅಥವಾ ಮರಣ ಹೊಂದುತ್ತಾರೆ. ಈ ವೈರಸ್‌ಗೆ ನಿಖರವಾದ ಚಿಕಿತ್ಸೆ ಇಲ್ಲ. ಮುಂಜಾಗ್ರತಾ ಕ್ರಮವಾಗಿ ಆಂಟಿಬಯೋಟಿಕ್‌ಗಳನ್ನು ನೀಡಲಾಗುತ್ತದೆ.

cefotaxime, doxycycline, penicillin, ampicillin, and amoxicillin ಮುಂತಾದ ಆಂಟಿಬಯೋಟಿಕ್ ಗಳನ್ನು ವಿವಿಧ ಸಮಯದಲ್ಲಿ ನೀಡಲಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ಡಾಕ್ಸಿಸೈಕ್ಲಿನ್ - 100 ಎಂಜಿ ಅನ್ನು ಪ್ರತಿ 12 ಗಂಟೆಗಳಿಗೊಮ್ಮೆ ಒಂದು ವಾರದ ಮಟ್ಟಿಗೆ ನೀಡಬಹುದು. ಅಥವಾ ಪೆನ್ಸಿಲಿನ್ 1-1.5 MU ಪ್ರತಿ 4 ಗಂಟೆಗೊಮ್ಮೆ ಒಂದು ವಾರಗಳ ಕಾಲ ನೀಡಬಹುದು.

ಹಲವಾರು ರೀತಿಯ ಚಿಕಿತ್ಸಾ ಕ್ರಮಗಳನ್ನು ಅನುಸರಿಸಲಾಗುತ್ತದೆ. ಡೆಂಗ್ಯೂ, ಹೆಪಟೈಟಸ್, ಮಲೇರಿಯಾ, ಟೈಫಾಯ್ಡ್ ಸೇರಿದಂತೆ ವೈರಾಣುಗಳಿಂದ ಬರುವ ಜ್ವರಕ್ಕೆ ನೀಡುವ ಎಲ್ಲಾ ಚಿಕಿತ್ಸೆಯನ್ನು ಹಂತ ಹಂತವಾಗಿ ನೀಡಲಾಗುತ್ತದೆ.

ಗ್ರಾಮ ನೈರ್ಮಲ್ಯ ಮುಖ್ಯ: ನಿಂತ ನೀರ ಮೇಲೆ ಔಷಧಿ ಸಿಂಪಡಿಸಿ, ಕೀಟಾಣು ಮುಕ್ತಗೊಳಿಸಬೇಕು. ಸೋಂಕು ತಗುಲಿದ ನೀರನ್ನು ಗುರುತಿಸಿ, ಅದರ ಸಂಪರ್ಕವನ್ನು ತಪ್ಪಿಸಬೇಕು. ಗ್ರಾಮದಲ್ಲಿ ಹೆಚ್ಚುತ್ತಿರುವ ಇಲಿಗಳ ಸಂಖ್ಯೆಯನ್ನು ನಿಯಂತ್ರಿಸಬೇಕು. ಇಲಿಗಳ ಓಡಾಟಕ್ಕೆ ಕಡಿವಾಣ ಹಾಕಬೇಕು. ನೈರ್ಮಲ್ಯ - ಸ್ವಚ್ಚತೆ ಕಾಪಾಡಬೇಕು. ಆಹಾರ ಪದಾರ್ಥಗಳನ್ನು ಮುಚ್ಚಿಟ್ಟು ಅಥವಾ ಸಂಸ್ಕರಿಸದ್ದನ್ನೇ ಸೇವಿಸಬೇಕು. ಅಪರೂಪಕ್ಕೊಮ್ಮೆ ಮೂತ್ರ ವಿಸರ್ಜಿಸುವ ಇಲಿಗಳನ್ನು ಹಿಡಿದು ಹೆಚ್ಚಿನ ಸಂಶೋಧನೆ ನಡೆಸಬೇಕಿದೆ.

X
Desktop Bottom Promotion