Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮುಸ್ಲಿ ರೆಸಿಪಿ ಹೀಗೆ ಮಾಡಿದರೆ ತುಂಬಾನೇ ಟೇಸ್ಟಿ, ಮೈ ತೂಕವೂ ಕಡಿಮೆಯಾಗುವುದು
ಮೈ ತೂಕ ಕಡಿಮೆ ಮಾಡಲು ನೀವು ಅತ್ಯುತ್ತಮ ಡಯಟ್ ತಿಳಿಯ ಬಯಸುವುದಾದರೆ ಮುಸ್ಲಿ ಡಯಟ್ ಬೆಸ್ಟ್ ನೋಡಿ. ಹೌದು ಇದು ಆರೋಗ್ಯಕರವಾದ ಡಯಟ್ ಆಗಿದ್ದು, ಮೈ ತೂಕ ಕಡಿಮೆ ಮಾಡಲು ತುಂಬಾನೇ ಸಹಕಾರಿ. ಕೆಲವರು ಮುಸ್ಲಿಯನ್ನು ಸರಿಯಾಗಿ ಮಾಡದೆ ಮುಸ್ಲಿ ತಿನ್ನಲು ಇಷ್ಟಪಡಲ್ಲ, ಆದರೆ ನೀವು ಮುಸ್ಲಿಯನ್ನು ತುಂಬಾ ಟೇಸ್ಟಿಯಾಗಿ ಮಾಡಿದರೆ ತಿನ್ನಲೂ ಸೂಪರ್, ತೂಕ ಇಳಿಕೆಯ ಡಯಟ್ ಬೋರಾಗುವುದೂ ಇಲ್ಲ....

ಮುಸ್ಲಿ ಎಂದರೇನು?
ಓಟ್ಸ್, ಸೇಬು, ನಿಂಬೆರಸ, ಹಾಲು ಮಿಶ್ರಿತ ಕಾಂಬಿನೇಷನ್‌ನ ರೆಸಿಪಿಯಾಗಿದೆ. ಇದರಲ್ಲಿ ನೈಸರ್ಗಿಕವಾದ ಸ್ವೀಟ್ನರ್ ಇದ್ದು ಇದರಲ್ಲಿ ಡ್ರೈ ಫ್ರೂಟ್ಸ್ ಹಾಗೂ ಓಟ್ಸ್ ಅಂಶವಿರುವುದರಿಂದ ಓಟ್ಸ್‌ಗಿಂತ ತುಂಬ ರುಚಿಯಾಗಿರುತ್ತದೆ.
ಮುಸ್ಲಿಯಲ್ಲಿರುವ ಪೋಷಕಾಂಶಗಳು
ಕ್ಯಾಲೋರಿ: 375ಕ್ಯಾಲೋರಿ
ಪ್ರೊಟೀನ್:10.94ಗ್ರಾಂ
ಕಾರ್ಬ್ಸ್: 48.44 ಗ್ರಾಂ
ನಾರಿನಂಶ: 25ಗ್ರಾಂ
ಕೊಬ್ಬಿನಂಶ:12.5ಗ್ರಾಂ
ಕ್ಯಾಲ್ಸಿಯಂ:38 ಮಿಗ್ರಾಂ
ಕಬ್ಬಿಣದಂಶ:2.66ಮಿಗ್ರಾಂ
ಪೊಟಾಷ್ಯಿಯಂ: 330 ಮಿಗ್ರಾಂ
ಇದರ ಪ್ರಯೋಜನಗಳು
* ತೂಕ ಇಳಿಕೆಗೆ ತುಂಬಾನೇ ಸಹಕಾರಿ: ಮುಸ್ಲಿ ತೂಕ ಇಳಿಕೆಗೆ ತುಂಬಾನೇ ಸಹಕಾರಿ. ಮೈ ತೂಕ ನಿಯಂತ್ರಣದಲ್ಲಿಡಲು, ಅತ್ಯಧಿಕ ಮೈ ಬೊಜ್ಜು ಕರಗಿಸಲು ಆರೋಗ್ಯಕರವಾದ ಹಾಗೂ ರುಚಿಕರವಾದ ಆಹಾರವಾಗಿದೆ.
* ಮಧುಮೇಹ ನಿಯಂತ್ರಣದಲ್ಲಿಡುತ್ತದೆ: ಮುಸ್ಲಿ ಇನ್ಸುಲಿನ್ ಮಧುಮೇಹ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಮುಸ್ಲಿ ತಿನ್ನುವವರಲ್ಲಿ ಮಧುಮೇಹ ನಿಯಂತ್ರಣಕ್ಕೆ ಬಂದಿರುವುದು ಅಧ್ಯಯನದಿಂದ ಕೂಡ ತಿಳಿದು ಬಂದಿದೆ. ಅಲ್ಲದೆ ಮಧುಮೇಹ ಬರುವುದನ್ನು ತಡೆಗಟ್ಟಲು ಕೂಡ ಈ ಬಗೆಯ ಆಹಾರಕ್ರಮ ಸಹಕಾರಿಯಾಗಿದೆ.
ಆಹಾರ ತೃಪ್ತಿ ನೀಡುತ್ತದೆ: ಸಾಮಾನ್ಯವಾಗಿ ಡಯಟ್ ಆಹಾರ ಬಾಯಿಗೆ ರುಚಿ ನೀಡುವುದಿಲ್ಲ. ಆದರೆ ಮುಸ್ಲಿಯನ್ನು ನೀವು ರುಚಿಯಾಗಿ ಮಾಡಿ ತಿನ್ನುವುದರಿಂದ ತೃಪ್ತಿ ಸಿಗಲಿದೆ.
ಮುಸ್ಲಿ ರೆಸಿಪಿ
1 ಕಪ್ ಓಟ್ಸ್
1 ಚಮಚ ವಾಲ್ನಟ್
1 ಚಮಚ ಕತ್ತರಿಸಿದ ಬಾದಾಮಿ
1/4 ಚಮಚ ವೆನಿಲ್ಲಾ ಎಸೆನ್ಸ್
3-4 ದ್ರಾಕ್ಷಿ
ಸರ್ವ್ ಮಾಡಲು
3 ಕಪ್ ಲೋ ಫ್ಯಾಟ್ ಮಿಲ್ಕ್ (ಹಾಲು)
1 ಕಪ್ ಸೇಬು(ಸಿಪ್ಪೆ ಸಹಿತ)
1 ಕಪ್ ಬಾಳೆಹಣ್ಣು
3 ಚಮಚ ಸಕ್ಕರೆ
ಮಾಡುವ ವಿಧಾನ
* ಓಟ್ಸ್, ವಾಲ್ನಟ್, ಬಾದಾಮಿ ಇವುಗಳನ್ನು ಬಾಣಲೆಗೆ ಹಾಕಿ ಸ್ವಲ್ಪ ರೋಸ್ಟ್ ಮಾಡಿ.
* ಸಂಪೂರ್ಣ ತಣ್ಣಗಾದ ಮೇಲೆ ಅದಕ್ಕೆ ವೆನಿಲ್ಲಾ ಎಸೆನ್ಸ್, ಒಣದ್ರಾಕ್ಷಿ ಹಾಕಿ ಮಿಕ್ಸ್ ಮಾಡಿ ಅದನ್ನು ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
* ನೀವು ತಿನ್ನಬೇಕೆಂದು ಅನಿಸಿದಾಗ ಅದರಲ್ಲಿ ಸ್ವಲ್ಪ ತೆಗೆದು ಒಂದು ಬೌಲ್‌ಗೆ ಹಾಕಿ ಅದಕ್ಕೆ ಬಾಳೆಹಣ್ಣು, ದಾಳಿಂಬೆ, ಹಾಲು ಸೇರಿಸಿ ಮಿಕ್ಸ್ ಮಾಡಿ. ನಂತರ ಕೂಡಲೇ ಸೇವಿಸಿ. ಈ ರೆಸಿಪಿ ತೂಕ ಇಳಿಕೆಗೆ ಸಹಕಾರಿ, ರುಚಿಯೂ ಚೆನ್ನಾಗಿರುವುದರಿಂದ ನಿಮಗೆ ಇಷ್ಟವಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
