For Quick Alerts
ALLOW NOTIFICATIONS  
For Daily Alerts

ಕೊರೊನಾ ವೈರಸ್: ಪ್ರಯಾಣಿಕರು ಈ ಎಚ್ಚರಿಕೆಗಳನ್ನು ಪಾಲಿಸಲೇಬೇಕು

|

ಕೋವಿಡ್ 19 ಈ ಹೆಸರೇ ಜನರಲ್ಲಿ ಭಯ ಹುಟ್ಟಿಸುತ್ತಿದೆ. ಈ ವೈರಸ್ ತಡೆಗಟ್ಟಲು ಇಡೀ ವಿಶ್ವವೇ ಪ್ರಯತ್ನಿಸುತ್ತಿದೆ. ಚೀನಾದ ವುಹಾನ್‌ನಲ್ಲಿ ಶುರುವಾದ ಈ ಮಾರಕ ಕಾಯಿಲೆ ಭಾರತಕ್ಕೂ ತಲುಪಿದೆ. ಭಾರತದ ಕೇರಳದಲ್ಲಿ ಒಬ್ಬ ವಿದ್ಯಾರ್ಥಿನಿಗೆ ಕೊರೊನಾ ವೈರಸ್‌ ತಗಲಿದೆ. ಆಕೆ ಚೀನಾದಿಂದ ಬಂದಂತಹ ವಿದ್ಯಾರ್ಥಿನಿಯಾಗಿದ್ದು ಅಲ್ಲಿಂದ ಆ ಕಾಯಿಲೆ ಭಾರತಕ್ಕೆ ಬಂದಿದೆ.

Tips To Avoid And Prevent Covid 19 | Boldsky Kannada
 Coronavirus

ಚೀನಾದಲ್ಲಿ ಕೊರೊನೊ ವೈರಸ್‌ನಿಂದಾಗಿ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಈಗಾಗಲೇ ಸಾವಿನ ಸಂಖ್ಯೆ 170 ದಾಟಿದೆ, ಸುಮಾರು 7,711 ಜನರು ಗಂಭೀರ ಸ್ಥಿತಿಯಲ್ಲಿದ್ದಾರೆ. ಈ ರೋಗ ಏಕಿಷ್ಟು ಭಯಾನಕ ಎಂದರೆ ಕೊರೊನಾ ಸೋಂಕು ಇರುವ ವ್ಯಕ್ತಿಯನ್ನು ಮುಟ್ಟಿದಾಗ, ಆ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಅ ವ್ಯಕ್ತಿ ಮುಟ್ಟಿದಂಥ ವಸ್ತುಗಳನ್ನು ಮುಟ್ಟಿದಾಗ ರೋಗ ಹರುವುದರಿಂದ ಈ ರೋಗ ತಡೆಗಟ್ಟುವುದು ಹೇಗೆ ಎಂಬುವುದೇ ಸವಾಲಿನ ಸಂಗತಿಯಾಗಿದೆ.

ಈ ರೋಗ ತಡೆಗಟ್ಟಲು ರೋಗ ಇರುವ ವ್ಯಕ್ತಿ ಹರಡದಂತೆ ಎಚ್ಚರವಹಿಸಬೇಕು, ಆರೋಗ್ಯವಂತ ವ್ಯಕ್ತಿ ಕೂಡ ಇದು ಹರಡದಂತೆ ಮುನ್ನೆಚ್ಚರಿಕೆಯಿಂದ ಇರಬೇಕು. ಈ ರೋಗಕ್ಕೆ ಯಾವುದೇ ಮದ್ದು ಇದುವರೆಗೆ ಕಂಡು ಹಿಡಿಯದ ಕಾರಣ, ಮುನ್ನೆಚ್ಚರಿಕೆ ಕ್ರಮದಿಂದ ನಿಯಂತ್ರಣ ಮಾಡುವುದೇ ಸದ್ಯಕ್ಕಿರುವ ಪರಿಹಾರವಾಗಿದೆ. ಅದಕ್ಕಾಗಿಯೇ ಎಲ್ಲಾ ದೇಶಗಳು ತುಂಬಾ ಅಲರ್ಟ್ ಆಗಿವೆ.

ಕೊರೊನಾ ವೈರಸ್ ಎಂದರೇನು?

ಇದೀಗ 16 ದೇಶಗಳಲ್ಲಿ ಈ ರೋಗ ಪತ್ತೆಯಾಗಿದ್ದು, ಚೀನಾದಲ್ಲಿ ಹುಟ್ಟಿದ ಕಾಯಿಲೆ ಇತರ ದೇಶಗಳಿಗೆ ಪ್ರಯಾಣಿಕರ ಮೂಲಕ ಹರಡಿದೆ. ಇಲ್ಲಿ ನಾವು ಅಂತರಾಷ್ಟ್ರೀಯ ಪ್ರಯಾಣ ಮಾಡುತ್ತಿರುವ ಪ್ರಯಾಣಿಕರು ಒಂದು ದೇಶದಿಂದ ಹೊರಟು ಮತ್ತೊಂದು ದೇಶಕ್ಕೆ ಹೋಗುವಾಗ ಯಾವೆಲ್ಲಾ ಪರೀಕ್ಷೆಗೆ ಒಳಪಡಬೇಕು ಎಂಬುವುದನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ಕ್ರಮಗಳನ್ನು ಅನುಸರಿಸುವುದರಿಂದ ಕೊರೊನಾ ವೈರಸ್ ಅಪಾಯ ತಡೆಗಟ್ಟಬಹುದು:

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೊರಡುವಾಗ

ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಹೊರಡುವಾಗ

1. ವಿಮಾನ ನಿಲ್ದಾಣದಲ್ಲಿ ಪರೀಕ್ಷೆ ಮಾಡುತ್ತಾರೆ, ಆದರೆ ಏರ್‌ಪೋರ್ಟ್‌ಗೆ ಹೋಗುವ ಮುನ್ನ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಹೋದರೆ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳಪಡುವ ಜನರ ಗುಂಪು ಕಡಿಮೆಯಾಗುವುದು. ಇದರಿಂದ ಏರ್‌ಪೋರ್ಟ್ ನಿಯಮಗಳನ್ನು ಮುಗಿಸಿ ಹೊರಡಲು ಅನುಕೂಲಕರವಾಗಿರುತ್ತದೆ.

2. ವಿಮಾನ ನಿಲ್ದಾಣದಲ್ಲಿ ಈ ರೋಗವನ್ನು ಹರಡುವ ಮೊದಲೇ ಪತ್ತೆ ಹಚ್ಚುವ ದೃಷ್ಟಿಯಿಂದ ಪರೀಕ್ಷೆ ಮಾಡುತ್ತಿರುತ್ತಾರೆ. ಆದ್ದರಿಂದ ಸಹಕರಿಸಿ. ಕೊರೊನಾ ವೈರಸ್ ಪ್ರಾರಂಭಿದಲ್ಲಿಯೇ ಪತ್ತೆಯಾದರೆ ಆ ವ್ಯಕ್ತಿಗೆ ಚಿಕಿತ್ಸೆ ನೀಡಬಹುದು ಹಾಗೂ ಆ ರೋಗ ಹರಡದಂತೆ ತಡೆಯಲು ಸಹಕಾರಿಯಾಗಿದೆ.

3. ಜ್ವರವಿರುವ ವ್ಯಕ್ತಿ ಪ್ರಯಾಣ ಮಾಡುವುದಾದರೆ ಕೊರೊನಾ ವೈರಸ್ ಪರೀಕ್ಷೆಗೆ ಒಳಪಡಲೇಬೇಕು. ಇನ್ನು ಉಸಿರಾಟದ ತೊಂದರೆ, ಸೀನು, ಕೆಮ್ಮು ಮುಂತಾದ ಲಕ್ಷಣಗಳು ಕಂಡು ಬಂದರೆ ಕೊರೊನಾ ವೈರಸ್ ಲಕ್ಷಣವೇ ಎಂದು ಪರೀಕ್ಷಿಸಲಾಗುವುದು ಹಾಗೂ ಒಂದು ವೇಳೆ ರೋಗ ಪತ್ತೆಯಾದರೆ ಸೋಂಕುವಿರುವ ವ್ಯಕ್ತಿಗಳಿಂದ ಹರಡಿದೆಯೇ ಅಥವಾ ಪ್ರಾಣಿಗಳಿಂದ ಹರಡಿದೆಯೇ ಎಂದು ರೋಗ ಮೂಲವನ್ನು ತಿಳಿಯಲಾಗುವುದು.

ರೋಗ ಪತ್ತೆಯಾದಾಗ

ರೋಗ ಪತ್ತೆಯಾದಾಗ

4. ರೋಗ ಪತ್ತೆಯಾದ ವ್ಯಕ್ತಿಯನ್ನು ತಕ್ಷಣವೇ ಪ್ರತ್ಯೇಕವಾದ ಕೋಣೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುವುದು.

5. ರೋಗ ಪತ್ತೆಯಾದ ವ್ಯಕ್ತಿಯ ಜೊತೆಗೆ ಇರುವ ವ್ಯಕ್ತಿಯನ್ನು ಅಥವಾ ಆ ವ್ಯಕ್ತಿಯನ್ನು ಮುಟ್ಟಿದ, ಸೋಂಕಿರುವ ವ್ಯಕ್ತಿ ಮುಟ್ಟಿದ ವಸ್ತುವನ್ನು ಮುಟ್ಟಿದ ಅಥವಾ ಆರೈಕೆ ಮಾಡಿದ ವ್ಯಕ್ತಿಯ ಪ್ರಯಾಣವನ್ನು ತಡೆ ಹಿಡಿದು ಅವರನ್ನು ಪ್ರತ್ಯೇಕವಾಗಿ ಇರಿಸಿ 14 ದಿನಗಳವರೆಗೆ ಪರೀಕ್ಷಿಸಲಾಗುವುದು. ಆಗ ರೋಗ ಪತ್ತೆಯಾಗದಿದ್ದರೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗುವುದು.

6. ಜನರಿಗೆ ಕೊರೊನಾ ವೈರಸ್‌ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಈ ರೋಗದ ಲಕ್ಷಣಗಳೇನು, ಈ ರೋಗ ಪತ್ತೆಯಾದರೆ ಏನು ಮಾಡಬೇಕು ಎಂಬೆಲ್ಲಾ ಮಾಹಿತಿ ನೀಡಲಾಗುವುದು.

ಮತ್ತೊಂದು ದೇಶಕ್ಕೆ ತಲುಪಿದಾಗ

ಮತ್ತೊಂದು ದೇಶಕ್ಕೆ ತಲುಪಿದಾಗ

1. ಒಂದು ದೇಶಕ್ಕೆ ಪ್ರಯಾಣಿಕರು ತಲುಪಿದ ತಕ್ಷಣ ಪರೀಕ್ಷೆಗೆ ಒಳಪಡಿಸಲಾಗುವುದು. ಕೊರೊನಾ ವೈರಸ್‌ ಯಾವುದಾದರೂ ಲಕ್ಷಣ ಕಂಡು ಬಂದರೆ ಅವರನ್ನು ಪ್ರತ್ಯೇಕವಾಗಿಟ್ಟು 14 ದಿನಗಳವರೆಗೆ ತೀವ್ರ ನಿಗಾದಲ್ಲಿ ಇಡಲಾಗುವುದು.

2. ವ್ಯಕ್ತಿಯ ಮೈ ಉಷ್ಣತೆಯ ಪರೀಕ್ಷೆ ಮಾಡಲಾಗುವುದು. ಕೊರೊನಾ ರೋಗದ ಲಕ್ಷಣಗಳು ಹಾಗೂ ಅಪಾಯದ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಲಾಗುವುದು. ರೋಗದ ಲಕ್ಷಣಗಳು ಕಾಣಿಸಿದರೆ ಏನು ಮಾಡಬೇಕು? ಎಲ್ಲಿ ಚಿಕಿತ್ಸೆ ದೊರೆಯುತ್ತದೆ ಎಂಬೆಲ್ಲಾ ಮಾಹಿತಿ ನೀಡಲಾಗುವುದು.

3. ಪ್ರತಿಯೊಂದು ದೇಶದಲ್ಲಿ ಪ್ರಯಾಣಿಕರು ಮೈ ಉಷ್ಣತೆಯ ಸ್ಕ್ರೀನಿಂಗ್‌ ಪರೀಕ್ಷೆಗೆ ಒಳಪಡಿಸಲಾಯಿತು.

4. ಆರೋಗ್ಯ ಸಂಸ್ಥೆಯು ಏರ್‌ಲೈನ್ಸ್ ಆಪರೇಟರ್‌ಗಳ ಸಹಯೋಗದೊಂದಿಗೆ ಕೊರೊನಾ ವೈರಸ್‌ ತಡೆಗೆ ಮುಂದಾಗಿದೆ.

ಕೊರೊನಾ ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸಲಹೆಗಳು

ಕೊರೊನಾ ತಡೆಗಟ್ಟಲು ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸಲಹೆಗಳು

* ಕೈಯನ್ನು ಸೋಪ್‌ ಅಥವಾ ಆಲ್ಕೋಹಾಲ್ ಅಂಶವಿರುವ ಹ್ಯಾಂಡ್‌ವಾಶ್‌ನಲ್ಲಿ ಚೆನ್ನಾಗಿ ತೊಳೆಯಿರಿ. ಸೋಪ್‌ನಲ್ಲಿ ಆಲ್ಕೋಹಾಲ್ ಅಂಶವಿದ್ದರೆ ಒಳ್ಳೆಯದು.

* ರೋಗವಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಿ.

* ಕೆಮ್ಮುವಾಗ, ಸೀನುವಾಗ ಟಿಶ್ಯೂ ಬಳಸಿ, ನಂತರ ಅದನ್ನು ಕಸದ ಬುಟ್ಟಿಗೆ ಹಾಕಿ, ಕೈ ತೊಳೆಯಿರಿ.

* ಮೊಟ್ಟೆ, ಮೀನು, ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು.

* ಮಾಂಸದ ಮಾರುಕಟ್ಟೆಗೆ ಭೇಟಿಕೊಡಬೇಡಿ, ಅಲ್ಲಿಗೆ ಭೇಟಿ ಕೊಡುವುದಾದರೂ ಮಾಸ್ಕ್ ಧರಿಸಿ, ಕೈಯಿಂದ ಮಾಂಸವನ್ನು ಮುಟ್ಟಬೇಡಿ.

* ಸಾರ್ವಜನಿಕ ಸ್ಥಳದಲ್ಲಿ ಉಗುಳಬೇಡಿ.

* ಕೊರೊನಾ ವೈರಸ್ ಲಕ್ಷಣಗಳು ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿ. ಪರೀಕ್ಷೆಗೆ ಹೋಗುವಾಗ ಮತ್ತೊಬ್ಬರಿಗೆ ಹರದಂತೆ ಎಚ್ಚರವಹಿಸಿ.

* ಮಾಸ್ಕ್ ಧರಿಸಿ, ಆಗಾಗ ಮಾಸ್ಕ್ ಮುಟ್ಟಬೇಡಿ.

* ಹುಷಾರು ಇಲ್ಲದ ಪ್ರಾಣಿಗಳಿಂದ ದೂರವಿಡಿ.

English summary

WHO Advice For International Travelers To Avoid Coronavirus

WHO Advice For International Travelers To Avoid Coronavirus
X
Desktop Bottom Promotion