Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಕಿವಿಯಲ್ಲಿ ಶಬ್ದ ಬರುತ್ತಿದೆಯೇ? ಇದನ್ನು ನಿರ್ಲಕ್ಷ್ಯ ಮಾಡಲೇಬೇಡಿ ಎಂದು ಜನತೆಗೆ ಮನವಿ ಮಾಡಿದ ನಟ ಅಜಿತ್ ಕುಮಾರ್
ನಟ ಅಜಿತ್‌ಕುಮಾರ್ ಜನರಿಗೆ ತಮ್ಮ ಕಿವಿಗಳ ಬಗ್ಗೆ ಜಾಗೃತೆವಹಿಸಲು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಅಜಿತ್ ಅವರು ಹೇಳಿರುವುದು ಗಂಭೀರವಾದ ವಿಷಯವಾಗಿದೆ.

ಕೆಲವರು ನನ್ನ ಒಂದು ಕಿವಿ ಅಥವಾ ಎರಡು ಕಿವಿಯಲ್ಲಿ ಏನೋ ಒಂದು ರೀತಿ ಗುಂಯಿ-ಗುಂಯಿ ಎಂದು ಶಬ್ದ ಬರುತ್ತಿದೆ ಎಂದು ಹೇಳ್ತಾ ಇರುತ್ತಾರೆ. ಆದರೆ ಆ ಸಮಸ್ಯೆಯನ್ನು ಯಾರೂ ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಆದರೆ ಹೀಗೆ ಮಾಡಿದರೆ ಕಿವುಡುತನ ಬರಬಹುದು, ಈ ಕುರಿತೇ ಅಜಿತ್ ಅವರು ಎಚ್ಚರಿಕೆ ನೀಡಿದ್ದು.
ಕಿವಿಯಲ್ಲಿ ಗುಂಯಿ-ಗುಂಯಿ ಶಬ್ದ ಬರುವುದಕ್ಕೆ ವೈದ್ಯಕೀಯ ಭಾಷೆಯಲ್ಲಿ Tinnitus ಎಂದು ಕರೆಯುತ್ತಾರೆ.
ಪರಿಸರದಲ್ಲಿನ ಶಬ್ದ ಮಾಲಿನ್ಯದಿಂದಾಗಿ ನಮ್ಮ ಕಿವಿಯ ತಮಟೆಗೆ ತೊಂದರೆ ಉಂಟಾಗಿ ಈ ರೀತಿಯ ಸಮಸ್ಯೆ ಉಂಟಾಗುತ್ತದೆ. ಆದ್ದರಿಂದ ತುಂಬಾ ಶಬ್ದ ಮಾಲಿನ್ಯದ ಬಗ್ಗೆ ಎಚ್ಚರವಹಿಸುವುದು ಒಳ್ಳೆಯದು.
ಫಿಲ್ಮಂ ಸೆಟ್‌ಗಳಲ್ಲಿ ತುಂಬಾ ಲೌಡ್ ಸ್ಪೀಕರ್, ಸ್ಪೋಟ, ಮೈಕ್ರೋಫೋನ್ ಶಬ್ದ ಇಂಥವುಗಳನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು ಎಂದು ನಿರ್ದೇಶಕ ವಿಘ್ನೇಶ್ ಶಿವನ್ ಕೂಡ ಹೇಳಿದ್ದಾರೆ.
ಯಾರಲ್ಲಿ ಟಿನ್ನಿಟಸ್ ಸಮಸ್ಯೆ ಕಂಡು ಬರುತ್ತಿದೆ?
* ತುಂಬಾ ಶಬ್ದವನ್ನು ಕೇಳುವುದು
* ತಲೆಗೆ ಪೆಟ್ಟಾದಾಗ
* ಕಿವಿಗೆ ತುಂಬಾ ಇಯರ್ ವ್ಯಾಕ್ಸ್ ಬಳಸುವುದು
* ಕೆಲವೊಂದು ಔಷಧಿಗಳ ಅಡ್ಡಪರಿಣಾಮದಿಂದ ಕೂಡ ಈ ಸಮಸ್ಯೆ ಬರಬಹುದು.
ಟಿನ್ನಿಟಸ್ ಸಮಸ್ಯೆ ತಡೆಗಟ್ಟುವುದು ಹೇಗೆ?
* ಈ ಸಮಸ್ಯೆ ತಡೆಗಟ್ಟಲು ಶಬ್ದ ಮಾಲಿನ್ಯ ಕಡಿಮೆಯಾಗಬೇಕು. ಕಿವಿಯ ತಮಟೆಗೆ ಹೊಡೆತ ಬೀಳುವ ಶಬ್ದವನ್ನು ತಡೆಗಟ್ಟಬೇಕು.
* ಕಿವಿಗೆ ಆಗಾಗ ಇಯರ್‌ವ್ಯಾಕ್ಸ್ ಹಾಕಬೇಡಿ
* ಕಿವಿಯಲ್ಲಿ ಶಬ್ದ ಬರುವಾಗ ಕೂಡಲೇ ENTತಜ್ಞರಿಗೆ ತೋರಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

