For Quick Alerts
ALLOW NOTIFICATIONS  
For Daily Alerts

ಕಣ್ಣು ಡ್ರೈ ಆಗದಿರಲು ಪರಿಣಾಮಕಾರಿ ಮನೆಮದ್ದುಗಳು

|

ನಮ್ಮ ದೇಹದ ಅತೀ ಅಮೂಲ್ಯವಾದ ಮತ್ತು ಸೂಕ್ಷ್ಮವಾದ ಅಂಗ ಕಣ್ಣು. ಆದ್ದರಿಂದಲೇ ಹಲವರು ಬಹುತೇಕ ಬಾರಿ ಅತ್ಯಂತ ಹತ್ತಿರವಾದ ವಸ್ತು ಅಥವಾ ವ್ಯಕ್ತಿಗೆ ಕಣ್ಣಿಗೆ ಹೋಲಿಸುತ್ತಾರೆ. ಅಲ್ಲದೇ ದಾನ ದಾನಗಳಲ್ಲೇ ಶ್ರೇಷ್ಠ ದಾನ ನೇತ್ರದಾನ ಎಂಬ ಮಾತು ಇದೆ.

ಹೀಗೆ ನಮ್ಮ ಬದುಕಿನ ದೃಷ್ಟಿಯನ್ನೇ ಬದಲಿಸುವ ಕಣ್ಣಿನ ಬಗ್ಗೆಯೇ ಇತ್ತೀಚಿನ ದಿನಗಳಲ್ಲಿ ಕಾಳಜಿ ಕಡಿಮೆಯಾಗುತ್ತಿದೆ. ನಮಗೇ ಗೊತ್ತಿಲ್ಲದೇ ಅಗತ್ಯಕ್ಕಿಂತ ಹೆಚ್ಚಿನ ಒತ್ತಡವನ್ನು ನಮ್ಮ ಅಕ್ಷಿಗೆ ನೀಡುವ ಮೂಲಕ ನೈಸರ್ಗಿಕವಾಗಿ ಬಂದಿರುವ ಕಣ್ಣನ್ನು ನಾವೇ ಕೃತಕವಾಗಿ ಹಾಳುಮಾಡಿಕೊಳ್ಳುತ್ತಿದ್ದೇವೆ.

ಇತ್ತಿಚಿನ ದಿನಗಳಲ್ಲಿ ಕಾಡುತ್ತಿರುವ ಹಲವು ಸಮಸ್ಯೆಗಳಲ್ಲಿ ಒಣ ಕಣ್ಣಿನ ಸಿಂಡ್ರೋಮ್‌ ಅತಿ ಹೆಚ್ಚು ಕಾಡುತ್ತಿರುವ ಸಮಸ್ಯೆಯಾಗಿದೆ. ಕಣ್ಣೀರಿನ ಗ್ರಂಥಿಗಳು ಸಾಕಷ್ಟು ಕಣ್ಣೀರನ್ನು ಉತ್ಪಾದಿಸದಿದ್ದಾಗ ಎದುರಾಗುವ ಸಮಸ್ಯೆ ಒಣ ಕಣ್ಣನ ಸಿಂಡ್ರೋಮ್‌. ಇದು ಕಣ್ಣುಗಳಲ್ಲಿ ಕಿರಿಕಿರಿ, ಕೆಂಪಾಗುವುದು ಮತ್ತು ಶುಷ್ಕತೆಯನ್ನು ಉಂಟುಮಾಡುತ್ತದೆ. ಕೆಲವು ಬಾರಿ ಕಣ್ಣಿಗೆ ಸಂಬಂಧಿಸಿದ ಇತರ ಕಾಯಿಲೆಗಳು ಅಥವಾ ಔಷಧಿಗಳು ಸಹ ಕಣ್ಣುಗಳನ್ನು ಒಣಗಿಸಲು ಕಾರಣವಾಗಬಹುದು.

ಕಣ್ಣು ಒಣಗಿದಾಗ ಅತಿಯಾದ ನವೆ ಉಂಟಾದರೆ, ಕೆಂಪಾದರೆ, ಕಿರಿಕಿರಿ ಎನಿಸಿದರೆ ಕೂಡಲೇ ವೈದ್ಯರನ್ನು ಬೇಟಿ ಮಾಡಿ. ಅತಿಯಾದ ಸಮಸ್ಯೆ ಇಲ್ಲವಾದಲ್ಲಿ, ಒಣ ಕಣ್ಣಿನ ಆರಂಭಿಕ ಮುನ್ಸೂಚನೆಗಳದ್ದಲ್ಲಿ ಕೆಳಗೆ ನೀಡಲಾಗಿರುವ ಕೆಲವು ನೈಸರ್ಗಿಕ ಮನೆಮದ್ದುಗಳನ್ನು ಪ್ರಯತ್ನಿಸಿ

ಒಣಕಣ್ಣಿಗೆ ನೈಸರ್ಗಿಕ ಮನೆಮದ್ದುಗಳು

1. ಬೆಚ್ಚಗಿನ ನೀರಿನ ಶಾಖ

1. ಬೆಚ್ಚಗಿನ ನೀರಿನ ಶಾಖ

ಕಣ್ಣಿನ ನೀರು ಲೋಳೆ, ನೀರು ಮತ್ತು ಎಣ್ಣೆಯಿಂದ ಮಾಡಲ್ಪಟ್ಟಿದೆ, ಇದು ನಿಮ್ಮ ಕಣ್ಣುಗಳನ್ನು ತೇವ ಮತ್ತು ಆರೋಗ್ಯಕರವಾಗಿಡಲು ಅತ್ಯಗತ್ಯವಾಗಿರುತ್ತದೆ. ಒಣ ಕಣ್ಣುಗಳಿಗೆ ಪ್ರಮುಖ ಕಾರಣವಾದ ಮೈಬೊಮಿಯಾನ್ ಗ್ರಂಥಿಯ ಅಪಸಾಮಾನ್ಯ ಕ್ರಿಯೆ (ಎಂಜಿಡಿ) ಎನ್ನಲಾಗುತ್ತದೆ.

 • ಸ್ವಚ್ಛವಾದ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಬೆಚ್ಚಗಿನ ನೀರಿನಲ್ಲಿ ನೆನೆಸಿ.
 • ಕೂಡಲೆ ಹೊರತೆಗೆದು ಹೆಚ್ಚುವರಿ ನೀರನ್ನು ಹಿಂಡಿ ಬಟ್ಟೆಯನ್ನು 5-10 ನಿಮಿಷಗಳ ಕಾಲ ನಿಮ್ಮ ಕಣ್ಣುಗಳ ಮೇಲೆ ಇರಿಸಿ.
2. ಹೆಚ್ಚು ನೀರು ಸೇವಿಸಿ

2. ಹೆಚ್ಚು ನೀರು ಸೇವಿಸಿ

ನಿಮ್ಮ ದೇಹವನ್ನು ಹೈಡ್ರೇಟ್ ಆಗಿ ಇಡಲು ಮಾಡಿ ಸಾಕಷ್ಟು ನೀರು ಕುಡಿಯುವುದು ಕಣ್ಣುಗಳಿಗೆ ಒಳ್ಳೆಯದು. ಇದು ನಿಮ್ಮ ಕಣ್ಣುಗಳನ್ನು ನಯಗೊಳಿಸಲು ಮತ್ತು ಅವುಗಳನ್ನು ತೇವವಾಗಿಡಲು ಸಹಾಯ ಮಾಡುತ್ತದೆ, ಇದರ ಪರಿಣಾಮವಾಗಿ ಹೆಚ್ಚು ಕಣ್ಣೀರಿನ ಉತ್ಪಾದನೆಗೆ ಸಹಾಯ ಮಾಡುತ್ತದೆ.

ಪ್ರತಿದಿನ 8 ರಿಂದ 10 ಲೋಟ ನೀರು ಕುಡಿಯಿರಿ.

3. ಹೆಚ್ಚಾಗಿ ಕಣ್ಣು ಮಿಟುಕಿಸಿ

3. ಹೆಚ್ಚಾಗಿ ಕಣ್ಣು ಮಿಟುಕಿಸಿ

ನೀವು ಲ್ಯಾಪ್‌ಟಾಪ್, ಮೊಬೈಲ್ ಅಥವಾ ಕಂಪ್ಯೂಟರ್ ಪರದೆಗಳನ್ನು ದೀರ್ಘಕಾಲ ನೋಡುವುದರಿಂದ ಕಣ್ಣುಗಳ ಶುಷ್ಕತೆ ಹೆಚ್ಚಾಗುತ್ತದೆ. ಆದ್ದರಿಂದ, ಕಣ್ಣಿನ ಆರೋಗ್ಯವನ್ನು ಕಾಪಾಡಲು ಮತ್ತು ತೇವಾಂಶದಿಂದ ಕೂಡಿರಲು ನಿಮ್ಮ ಕಣ್ಣುಗಳನ್ನು ಆಗಾಗ್ಗೆ ಪದೇ ಪದೇ ಹೆಚ್ಚಾಗಿ ಮಿಟುಕಿಸಿ. ಪ್ರತಿ 20 ನಿಮಿಷಗಳ ನಂತರ ಕನಿಷ್ಠ 20 ಸೆಕೆಂಡುಗಳ ಕಾಲ ಕಣ್ಣುಗಳನ್ನು ಮುಚ್ಚಿ.

4. ಹರಳೆಣ್ಣೆ

4. ಹರಳೆಣ್ಣೆ

ಅಧ್ಯಯನದ ಪ್ರಕಾರ ಒಣ ಕಣ್ಣುಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹರಳೆಣ್ಣೆ ಹೊಂದಿದೆ. ಪ್ರತಿದಿನ ಶೇಕಡಾ ಒಂದು ಹನಿಯಷ್ಟು ಹರಳೆಣ್ಣೆಯನ್ನು ಕಣ್ಣಿಗೆ ಹಾಕುವುದರಿಂದ ಕಣ್ಣೀರಿನ ಗ್ರಂಥಿಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಆದ್ದರಿಂದ ಹರಳೆಣ್ಣೆಯಿಂದ ಮಾಡಿದ ಕಣ್ಣಿನ ಡ್ರಾಪ್ಸ್‌ಗಳನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ಬಳಸಿ.

5. ಶುದ್ಧ ತೆಂಗಿನ ಎಣ್ಣೆ

5. ಶುದ್ಧ ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲ, ಕ್ಯಾಪ್ರಿಕ್ ಆಮ್ಲ, ಕ್ಯಾಪ್ರಿಲಿಕ್ ಆಮ್ಲ, ಆಂಟಿಮೈಕ್ರೊಬಿಯಲ್, ಶಿಲೀಂಧ್ರ ವಿರೋಧಿ, ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಕಣ್ಣುಗಳಿಗೆ ಹಿತ ನೀಡುವ ಗುಣಗಳಿವೆ. ಒಣ ಕಣ್ಣುಗಳ ಚಿಕಿತ್ಸೆಗೆ ತೆಂಗಿನ ಎಣ್ಣೆಯ ಹನಿಗಳ ಪರಿಣಾಮಕಾರಿತ್ವ ಎಂದು ಅಧ್ಯಯನವು ಸಾಕ್ಷೀಕರಿಸಿದೆ.

 • ನಿಮ್ಮ ಕಣ್ಣುಗಳಿಗೆ ಶುದ್ಧವಾದ ತೆಂಗಿನ ಎಣ್ಣೆಯನ್ನು ಹಾಕಿ.
 • ನಂತರ ಕಣ್ಣುಗಳನ್ನು ಮಿಟುಕಿಸಿ ಈ ವೇಳೆ ಕಣ್ಣುಗಳು ತೈಲವನ್ನು ಹೀರಿಕೊಳ್ಳುತ್ತದೆ.
 • ಇದನ್ನು ದಿನಕ್ಕೆ ಎರಡು ಬಾರಿ ಮಾಡಿ.
6. ಸೌತೆಕಾಯಿ

6. ಸೌತೆಕಾಯಿ

ಸೌತೆಕಾಯಿ ವಿಟಮಿನ್ ಎ ಯ ಅತ್ಯುತ್ತಮ ಮೂಲವಾಗಿದೆ ಮತ್ತು ಶೇಕಡಾ 96ರಷ್ಟು ನೀರನ್ನು ಹೊಂದಿರುತ್ತದೆ, ಇದು ಕಣ್ಣುಗಳನ್ನು ಹಿತಗೊಳಿಸುವ ಮತ್ತು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಒಣ ಕಣ್ಣುಗಳ ಚಿಕಿತ್ಸೆಯಲ್ಲಿ ವಿಟಮಿನ್ ಎ ಅತ್ಯಗತ್ಯವಾದ ವಿಟಮಿನ್ ಆಗಿದೆ.

 • ತಣ್ಣಗಾದ ಸೌತೆಕಾಯಿಯನ್ನು ಹೋಳುಗಳಾಗಿ ಕತ್ತರಿಸಿ.
 • ನಿಮ್ಮ ಕಣ್ಣುಗಳ ಮೇಲೆ ಒಂದು ಸ್ಲೈಸ್ ಅನ್ನು 15 ನಿಮಿಷಗಳ ಕಾಲ ಇರಿಸಿ.
 • ಇದನ್ನು ದಿನಕ್ಕೆ 2 ರಿಂದ 3 ಬಾರಿ ಮಾಡಿ.
7. ಮೊಸರು

7. ಮೊಸರು

ಮೊಸರು ವಿಟಮಿನ್ ಎ ಅನ್ನು ಹೊಂದಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಸಾಕಷ್ಟು ಪೂರಕವಾದ ಪೋಷಕಾಂಶವಾಗಿದೆ. ಮೊಸರನ್ನು ಹೆಚ್ಚಾಗಿ ಸೇವಿಸುವುದರಿಂದ ಕಣ್ಣುಗಳು ಒಣಗುವ ತೀವ್ರತೆಯನ್ನು ಕಡಿಮೆಯಾಗುತ್ತದೆ. ಪ್ರತಿದಿನ ಒಂದು ಬಟ್ಟಲು ಮೊಸರು ತಿನ್ನಿರಿ.

8. ಅಗಸೆಬೀಜದ ಎಣ್ಣೆ

8. ಅಗಸೆಬೀಜದ ಎಣ್ಣೆ

ಅಗಸೆಬೀಜದ ಎಣ್ಣೆ ಒಮೆಗಾ 3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ ಮತ್ತು ಈ ಕೊಬ್ಬಿನಾಮ್ಲಗಳು ಒಣ ಕಣ್ಣಿನ ಕಾಯಿಲೆಗೆ ಚಿಕಿತ್ಸೆ ನೀಡುತ್ತವೆ ಎಂದು ಕೆಲವು ಸಂಶೋಧನೆ ತಿಳಿಸುತ್ತದೆ.

 • ಅಗಸೆಬೀಜದ ಎಣ್ಣೆಯ ಹನಿಗಳನ್ನು ಕಣ್ಣುಗಳಿಗೆ ಹಾಕಿ ಕೆಲವು ನಿಮಿಷಗಳ ಕಾಲ ಮುಚ್ಚಿ
 • ದಿನಕ್ಕೆ ಎರಡು ಬಾರಿ ಇದನ್ನು ಪುನರಾವರ್ತಿಸಿ
 • ಎಚ್ಚರ: ಅಗಸೆಬೀಜಕ್ಕೆ ಕೆಲವು ಅಲರ್ಜಿಕಾರಕ ಅಂಶವನ್ನು ಹೊಂದಿರುವ ಕಾರಣ ಎಣ್ಣೆಯನ್ನು ಅನ್ವಯಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ.
9. ಹಸಿರು ಚಹಾ ಸಾರ

9. ಹಸಿರು ಚಹಾ ಸಾರ

ಹಸಿರು ಚಹಾವು ಉರಿಯೂತ, ಜೀವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಜರ್ನಲ್ ಆಫ್ ಕ್ಲಿನಿಕಲ್ ಮತ್ತು ಡಯಾಗ್ನೋಸ್ಟಿಕ್ ರಿಸರ್ಚ್ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಹಸಿರು ಚಹಾ ಸಾರವು ಒಣ ಕಣ್ಣಿನ ಚಿಕಿತ್ಸೆಗೆ ಅತ್ಯುತ್ತಮ ಮನೆಮದ್ದಾಗಿದೆ.

10. ಹೆಚ್ಚು ನಿದ್ರೆ

10. ಹೆಚ್ಚು ನಿದ್ರೆ

ನಿದ್ರಾಹೀನತೆಯಿಂದಾಗಿ ಕಣ್ಣುಗಳಲ್ಲಿ ನೀರು ಉತ್ಪತಿ ಕಡಿಮೆ ಆಗುತ್ತದೆ. ಇದು ಕಣ್ಣುಗಳು ಒಣಗಲು ಪ್ರಮುಖ ಕಾರಣವಾಗಬಹುದು. ಆದ್ದರಿಂದ, ಒಣಗಿದ ಕಣ್ಣುಗಳು ಬರದಂತೆ ದಿನಕ್ಕೆ ಕನಿಷ್ಠ ಎಂಟು ಗಂಟೆಗಳ ಕಾಲ ನಿದ್ದೆ ಮಾಡುವುದು ಅತ್ಯಗತ್ಯ.

English summary

Natural Home Remedies For Dry Eyes

Here we are discussing about effective natural remedies to treat dry eyes. There are a number of natural remedies that can be used in the treatment of dry eyes. Read more
Story first published: Monday, February 10, 2020, 18:00 [IST]
X