Latest Updates
-
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು!
ಪೌಷ್ಟಿಕಾಂಶ ಸೇವನೆ ವಿಚಾರದಲ್ಲಿ ನಾವು ಮಾಡುವ ಎಡವಟ್ಟುಗಳು ಇದೇ ನೋಡಿ
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವ್ಯಾಯಾಮದಷ್ಟೇ ಪೌಷ್ಟಿಕಾಂಶವೂ ಮುಖ್ಯವಾಗುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಚಾರವೇ ಆದರೂ, ನಮ್ಮಲ್ಲಿ ಇದರ ಬಗ್ಗೆ ಹೆಚ್ಚಿನವರು ದಿವ್ಯ ನಿರ್ಲಕ್ಷವಹಿಸುತ್ತಾರೆ ಮತ್ತು ಅಗತ್ಯ ಸಲಹೆಯನ್ನು ನಿರ್ಲಕ್ಷಿಸುತ್ತಾರೆ.
ನಿಜ ಹೇಳಬೇಕೆಂದರೆ ಆರೋಗ್ಯಕರ ಆಹಾರ ಪದ್ಧತಿಯನ್ನು ಕಾಪಾಡಿಕೊಳ್ಳುವುದು ವ್ಯಾಯಾಮಕ್ಕಿಂತ ಕಠಿಣ. ಇದರಿಂದಾಗಿಯೇ ನಮ್ಮಲ್ಲಿ ಹಲವರು ತುಂಬಾ ನಿಧಾನವಾಗಿ ಅಥವಾ ಯಾವುದೇ ಫಲಿತಾಂಶಗಳನ್ನು ಕಾಣುವುದಿಲ್ಲ. ಅಲ್ಲದೆ ಈ ಆಹಾರ ಪದ್ಧತಿ ಪಾಲನೆ ಮಾಡುವ ಸಮಯದಲ್ಲಿ ಯಾರು ಏನು ಹೇಳಿದರೂ ಎಲ್ಲವನ್ನೂ ಪ್ರಯೋಗಿಸುವುದು, ವೈದ್ಯರ ಸಲಹೆ ಪಡೆಯದೇ ಇರುವುದು ಇದೆಲ್ಲಾ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಇಷ್ಟೇ ಅಲ್ಲದೆ ಆರೋಗ್ಯಕರ ಆಹಾರ ಪದ್ಧತಿ ಪಾಲನೆ ಸಮಯದಲ್ಲಿ ನಾವು ಮಾಡುವ ಎಡವಟ್ಟುಗಳು ಯಾವುವು ಇದು ಹೇಗೆ ಪರಿಣಾಮ ಬೀರುತ್ತದೆ ಮುಂದೆ ನೋಡೋಣ:

1. ನಿಮ್ಮ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸುವುದು
ನಿಮ್ಮ ಆಹಾರ ಪದ್ಧತಿಯು ನಿಮ್ಮ ಮಾನಸಿಕ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ. ಅದಕ್ಕಿಂತ ಹೆಚ್ಚಾಗಿ, ಮಾನಸಿಕ ಆರೋಗ್ಯ ಸರಿಯಾಗಿಲ್ಲದಿದ್ದರೆ ಅದು ನಿಮ್ಮ ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕವಾಗಿ ಪ್ರಕಟವಾಗುತ್ತದೆ, ಇದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ನಮ್ಮ ಆನಾರೋಗ್ಯಕರ ಆಹಾರ ಪದ್ಧತಿಯು ಅಥವಾ ಅತಿಯಾದ ಡಯಟ್ ಸಹ ಒತ್ತಡಕ್ಕೆ ಕಾರಣವಾಗುತ್ತದೆ ಅಲ್ಲದೆ ಅಗತ್ಯ ಪೌಷ್ಟಿಕಾಂಶ ದೇಹಕ್ಕೆ ಲಭಿಸದೇ ಇದ್ದರೆ ಇದು ಮಾನಸಿಕ ಆರೋಗ್ಯದೊಂದಿಗೆ ಸಂಪರ್ಕ ಹೊಂದಿದೆ.

2. ಆಹಾರದ ಗುಣಮಟ್ಟದ ಮೇಲೆ ಕೇಂದ್ರೀಕರಿಸದಿರುವುದು
ನೀವು ನಿತ್ಯ ಎಷ್ಟು ಕ್ಯಾಲೋರಿ ತೆಗೆದುಕೊಳ್ಳುತ್ತೀರಿ ಎಂಬುದು ಮುಖ್ಯವಾಗುತ್ತದೆ, ಒಂದು ದಿನಕ್ಕೆ ಎಷ್ಟು ಅಗತ್ಯವೋ ಅಷ್ಟು ಕ್ಯಾಲೊರಿ ನಿಮ್ಮ ದೇಹ ಸೇರಲೇಬೇಕು.
ಅಲ್ಲದೆ ನಿಮ್ಮ ಆಹಾರದ ಗುಣಮಟ್ಟದ ಬಗ್ಗೆ ಯೋಚಿಸುವುದು ಮುಖ್ಯ. ಆದಷ್ಟು ಸಂಸ್ಕರಿಸಿದ ಆಹಾರಗಳಿಗಿಂತ ತಾಜಾ ಆಹಾರ ಉತ್ತಮವಾಗಿವೆ. ಅವು ಪೌಷ್ಟಿಕಾಂಶ-ದಟ್ಟವಾದ ಆಹಾರಗಳಾಗಿವೆ ಮತ್ತು ನಿಮ್ಮ ದೇಹಕ್ಕೆ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.
ಸಸ್ಯ ಆಧಾರಿತ ಸಂಪೂರ್ಣ ಆಹಾರ ಮಲ್ಟಿವಿಟಮಿನ್ ಮೈಕ್ರೊನ್ಯೂಟ್ರಿಯೆಂಟ್‌ಗಳು, ಅಮೈನೋ ಆಮ್ಲಗಳು, ಸೂಪರ್‌ಫುಡ್ ಗ್ರೀನ್ಸ್, ಹಣ್ಣುಗಳು, ತರಕಾರಿಗಳು ಮತ್ತು ಇತರ ಪ್ರಮುಖ ಸಾರದಂಥ ಆಹಾರಗಳು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ಸ್ನಾಯುವಿನ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ.

3. ನಿರ್ಬಂಧಿತ ಆಹಾರಕ್ರಮದಲ್ಲಿ ಹೋಗುವುದು
ಕ್ರ್ಯಾಶ್ ಡಯಟ್‌ಗಳು ಅಥವಾ ನಿರ್ಬಂಧಿತ ಆಹಾರಕ್ರಮವನ್ನು ಅನುಸರಿಸುವುದು ಅತ್ಯಂತ ಜನಪ್ರಿಯವಾಗಿದೆ. ಅಂತಹ ಆಹಾರಗಳೊಂದಿಗಿನ ಏಕೈಕ ಸಮಸ್ಯೆಯೆಂದರೆ ಅವು ಸಮರ್ಥನೀಯವಲ್ಲ ಮತ್ತು ಇದು ಒಬ್ಬರ ಮಾನಸಿಕ ಆರೋಗ್ಯದ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು. ಇದು ನಿಮ್ಮ ಗುರಿಗಳನ್ನು ತ್ವರಿತವಾಗಿ ಸಾಧಿಸಲು ಸಹಾಯ ಮಾಡಬಹುದು, ಆದರೆ ಇದು ಅನಾರೋಗ್ಯಕರ ದೇಹದ ಚಿತ್ರಣಕ್ಕೆ ಕಾರಣವಾಗಬಹುದು.

4. ಕೆಲವು ಆಹಾರಗಳನ್ನು "ಅನಾರೋಗ್ಯಕರ" ಎಂದು ಲೇಬಲ್ ಮಾಡುವುದು
ಕೆಲವು ವಿನಾಯಿತಿಗಳೊಂದಿಗೆ, ಯಾವುದೇ ಆಹಾರವು ಸಂಪೂರ್ಣವಾಗಿ "ಅನಾರೋಗ್ಯಕರ" ಅಲ್ಲ. ಕಾರ್ಬೋಹೈಡ್ರೇಟ್ಗಳು, ಉದಾಹರಣೆಗೆ ಅನೇಕ ಜನರು "ಅನಾರೋಗ್ಯಕರ" ಎಂದು ಲೇಬಲ್ ಮಾಡಿದ್ದಾರೆ. ವಾಸ್ತವದಲ್ಲಿ ಇದು ಸತ್ಯವಿದ್ದರೂ ನಿಮ್ಮ ಆಹಾರದ ಉಳಿದ ಭಾಗವು ಹೇಗೆ ಕಾಣುತ್ತದೆ ಎಂಬುದರ ಜೊತೆಗೆ ನೀವು ತೆಗೆದುಕೊಳ್ಳುವ ಕಾರ್ಬೋಹೈಡ್ರೇಟ್‌ಗಳ ರೂಪ ಮತ್ತು ಪ್ರಕಾರವನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ.

5. ಸಾಕಷ್ಟು ಪ್ರೋಟೀನ್ ಸೇವಿಸದಿರುವುದು
ಪ್ರೋಟೀನ್ ಸೇವನೆಯ ಬಗ್ಗೆ ಸಾಮಾನ್ಯ ಮಿಥ್ಯೆ ಎಂದರೆ ಸ್ನಾಯುಗಳನ್ನು ನಿರ್ಮಿಸಲು ಬಯಸುವ ಜನರು ಮಾತ್ರ ಪ್ರೋಟೀನ್ ಮೇಲೆ ಕೇಂದ್ರೀಕರಿಸಬೇಕು. ಇದು ನಿಜವಲ್ಲ. ಪ್ರತಿ ಕಿಲೋಗ್ರಾಂ ದೇಹದ ತೂಕಕ್ಕೆ ಕನಿಷ್ಠ 0.8 ಗ್ರಾಂ ಪ್ರೋಟೀನ್ ಪಡೆಯುವತ್ತ ಪ್ರತಿಯೊಬ್ಬರೂ ಗಮನಹರಿಸಲೇಬೇಕು. ಪ್ರತಿಯೊಬ್ಬ ಮನುಷ್ಯನಿಗೂ ದಿನನಿತ್ಯ ಪ್ರೋಟೀನ್ ಅಗತ್ಯ ಖಂಡಿತ ಇದೆ.



Click it and Unblock the Notifications









