For Quick Alerts
ALLOW NOTIFICATIONS  
For Daily Alerts

ಬೆಡ್‌ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ

|

ಕೆಗಲ್ ವ್ಯಾಯಾಮದ ಬಗ್ಗೆ ಕೇಳಿದ್ದೀರಾ? ಬಹುತೇಕರು ಈ ವ್ಯಾಯಾಮ ಮಹಿಳೆಯರಿಗೆ ಮಾತ್ರ ಪ್ರಯೋಜನಕಾರಿ ಎಂದು ತಿಳಿದಿರುತ್ತಾರೆ. ಇದನ್ನು ಬ್ಲೇಡರ್‌ ಸಮಸ್ಯೆ ಇರುವ ಮಹಿಳೆಗೆ ಗರ್ಭಧಾರಣೆಗೆ ಸಹಾಯ ಮಾಡುತ್ತೆ. ಆದರೆ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಇದು ತುಂಬಾ ಪ್ರಯೋಜನಕಾರಿಯಾಗಿದೆ.

How To Do Kegel Exercise

ಬೆಡ್‌ನಲ್ಲಿ ಬೇಗನೆ ಸೋಲುಪ್ಪುವುದು ಯಾವ ಪುರುಷನಿಗೆ ತಾನೆ ಇಷ್ಟವಾಗುತ್ತೆ. ಆದರೆ ಬಹುತೇಕ ಪುರುಷರು ಈ ಸಮಸ್ಯೆಯನ್ನು ಹೊಂದಿರುತ್ತಾರೆ. ಇದರಿಂದ ಕೀಳೆರಿಮೆ, ನಿರಾಸೆ ಎಲ್ಲವೂ ಅವರಲ್ಲಿ ಇರುತ್ತದೆ. ಆದರೆ ತಮ್ಮ ಸಮಸ್ಯೆ ವೈದ್ಯರ ಬಳಿ ಹೇಳಿಕೊಳ್ಳಲು ಎಷ್ಟೋ ಮಂದಿ ಮುಜುಗರ ಪಡುತ್ತಾರೆ. ಶೀಘ್ರ ಸ್ಖಲನ ಸಮಸ್ಯೆಯಿಂದ ಬಳಲುತ್ತಿರುವವರು ಕೆಗಲ್ ವ್ಯಾಯಾಮ ಮೂಲಕ ಪರಿಹಾರ ಕಂಡು ಹಿಡಿಯಬಹುದು.

ಈ ಲೇಖನದಲ್ಲಿ ಕೆಗಲ್ ವ್ಯಾಯಾಮ ಪುರುಷರ ಸಾಮರ್ಥ್ಯ ಹೆಚ್ಚಿಸುವಲ್ಲಿ ಹೇಗೆ ಸಹಕಾರಿ, ಇದನ್ನು ಮಾಡುವುದು ಹೇಗೆ ಎಂಬುವುದರ ಬಗ್ಗೆ ಹೇಳಿದ್ದೇವೆ ನೋಡಿ:

ಕೆಗೆಲ್ ವ್ಯಾಯಾಮ ಪುರುಷರಿಗೆ ಹೇಗೆ ಸಹಕಾರಿ?

ಕೆಗೆಲ್ ವ್ಯಾಯಾಮ ಪುರುಷರಿಗೆ ಹೇಗೆ ಸಹಕಾರಿ?

ಇದನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಪುರುಷರು ತಮ್ಮ ಲೈಂಗಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ. ಶೀಘ್ರ ಸ್ಖಲನ ಸಮಸ್ಯೆ ಶೇ. 82.5ರಷ್ಟು ಇಲ್ಲವಾಗುವುದು. ಕೆಗೆಲ್‌ ಪುರುಷರಿಗೆ ಸಹಕಾರಿಯಾಗಿದೆ ಎಂಬುವುದನ್ನು ಸಂಶೋಧನೆಗಳು ಕೂಡ ಹೇಳಿವೆ. ಈ ವ್ಯಾಯಾಮದ ಫಲಿತಾಂಶಕ್ಕೆ ನಿರಂತರ ಅಭ್ಯಾಸ, ತಾಳ್ಮೆ ಅಗ್ಯತ.

 ಕೆಗೆಲ್ ವ್ಯಾಯಾಮ ಎಂದರೇನು?

ಕೆಗೆಲ್ ವ್ಯಾಯಾಮ ಎಂದರೇನು?

ಇದು ಪೆಲ್ವಿಕ್ ಭಾಗದಲ್ಲಿ ಸ್ನಾಯುಗಳನ್ನು ನಿಯಂತ್ರಿಸುವ ಒಂದು ವ್ಯಾಯಾಮವಾಗಿದೆ. ಪೆಲ್ವಿಕ್‌ ವ್ಯಾಯಾಮ ನಿರಂತರವಾಗಿ ಮಾಡುತ್ತಾ ಹೋದರೆ ಆ ಸ್ನಾಯುವಿನ ಸಾಮರ್ಥ್ಯ ಹೆಚ್ಚಾಗುವುದು. ಇದರಿಂದ ಶೀಘ್ರ ಸ್ಖಲನ ಸಮಸ್ಯೆ ಯಾವುದೇ ಔಷಧಿಯಿಲ್ಲದೆ ಇಲ್ಲವಾಗುವುದು.

ವ್ಯಾಯಾಮ ಮಾಡುವುದು ಹೇಗೆ?

ವ್ಯಾಯಾಮ ಮಾಡುವುದು ಹೇಗೆ?

ನೀವು ಆರಾಮವಾಗಿ ಕುಳಿತುಕೊಳ್ಳಿ ಅಥವಾ ಶವಾಸನದಲ್ಲಿ ಮಲಗಿಕೊಳ್ಳಿ. ನಂತರ ಪೆಲ್ವಿಕ್ ಸ್ನಾಯುಗಳನ್ನು 5 ಸೆಕೆಂಡ್‌ ಬಿಗಿ ಹಿಡಿಯಿರಿ (ಮೂತ್ರ ಬರುವಾಗ ಈ ಪೆಲ್ವಿಕ್ ಸ್ನಾಯು ಗಮನಿಸಿ). ಈ ರೀತಿ 5 ಬಾರಿ ಮಾಡಿ.

ಇನ್ನು ಕೆಗೆಲ್ ವ್ಯಾಯಾಮದಲ್ಲಿ ನೀವು ಹೀಗೆ ಮಾಡಿದ ಬಳಿಕ ಗುದ ಭಾಗವನ್ನು ಬಿಗಿಯಾಗಿ 5 ಸೆಕೆಂಡ್ ಹಿಡಿದು ನಂತರ ಬಿಡಿ, ಈ ರೀತಿ 5 ಬಾರಿ ಮಾಡಿ. ಮೊದಲಿಗೆ ನಿಮಗೆ 5 ಸೆಕೆಂಡ್ ಮಾಡುವುದು ಕಷ್ಟವಾಗಬಹುದು. ಆದರೆ ಅಭ್ಯಾಸ ಮಾಡುತ್ತಿದ್ದರೆ ಈ ವ್ಯಾಯಾಮ 10 ಬಾರಿ ಮಾಡಲು ಸಾಧ್ಯವಾಗುತ್ತದೆ. ಇದನ್ನು ನೀವು ದಿನದಲ್ಲಿ ಯಾವಾಗ ಬೇಕಾದರೂ ಮಾಡಬಹುದು.

 ಕೆಗೆಲ್ ವ್ಯಾಯಾಮ ಎರಡು ರೀತಿ ಮಾಡಬಹುದು

ಕೆಗೆಲ್ ವ್ಯಾಯಾಮ ಎರಡು ರೀತಿ ಮಾಡಬಹುದು

1. ನಿಧಾನಕ್ಕೆ ಮಾಡುವ ಕೆಗೆಲ್ ವ್ಯಾಯಾಮ

2. ವೇಗವಾಗಿ ಮಾಡುವ ಕೆಗೆಲ್ ವ್ಯಾಯಾಮ

* ನಿಧಾನಕ್ಕೆ ಮಾಡುವ ಕೆಗೆಲ್‌ ವ್ಯಾಯಾಮ

ಇದರಲ್ಲಿ ಪೆಲ್ವಿಕ್ ಸ್ನಾಯುಗಳನ್ನು ನಿಧಾನಕ್ಕೆ ಬಿಗಿಯಾಗಿ ಹಿಡಿದು ನಿಧಾನಕ್ಕೆ ಬಿಡಬೇಕು. ಈ ಸಮಯದಲ್ಲಿ ಬಿಗಿ ಹಿಡಿಯುವಾಗ ನಿಧಾನಕ್ಕೆ ಉಸಿರು ತೆಗೆದು ಬಿಗಿ ಹಿಡಿಯಬೇಕು, ಸಡಿಲ ಮಾಡುವಾಗ ಉಸಿರನ್ನು ನಿಧಾನಕ್ಕೆ ಬಿಡಬೇಕು. ಉಸಿರು ತೆಗೆಯುವುದು, ಪೆಲ್ವಿಕ್ ಸ್ನಾಯು ಬಿಗಿ ಹಿಡಿಯುವುದು ಒಂದೇ ಸಮಯದಲ್ಲಿ ಆಗಿರಬೇಕು. ಉಸಿರು ಬಿಟ್ಟಾಗ ಸ್ನಾಯುಗಳನ್ನು ಸಡಿಲ ಮಾಡಬೇಕು. ನಿಮ್ಮ ಸ್ನಾಯುಗಳು ರಿಲ್ಯಾಕ್ಸ್ ಆದ ಬಳಿಕ ಪುನಃ ಬಿಗಿ ಹಿಡಿಯಬೇಕು.

ವೇಗವಾದ ಕೆಗೆಲ್ ವ್ಯಾಯಾಮ

ಇದರಲ್ಲಿ ಸ್ನಾಯುವನ್ನು ಒಂದು ಸೆಕೆಂಡ್ ಅಷ್ಟೆ ಬಿಗಿ ಹಿಡಿದು ಬಿಡಬೇಕು, ನಂತರ ಪುನಃ ಮಾಡಬೇಕು. ಈ ರೀತಿ 10 ಬಾರಿ ಮಾಡಿ. ಮೊದಲಿಗೆ 10 ಬಾರಿ ಮಾಡುವುದು ಕಷ್ಟವಾಗುತ್ತದೆ. ಆದರೆ ತಿಂಗಳುಗಳು ಕಳೆಯುತ್ತಿದ್ದಂತೆ ಅಭ್ಯಾಸವಾಗುವುದು.

ಈ ಸರಳವಾದ ವ್ಯಾಯಾಮ ಅಭ್ಯಾಸ ಮಾಡುವುದರಿಂದ ಬೆಡ್‌ನಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚುವುದು, ಅಲ್ಲದೆ ಇದನ್ನು ನೀವು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಅಭ್ಯಾಸ ಮಾಡಬಹುದು.

English summary

Kegel Exercises Help To Boost Men Power In Bed

Kegel Exercises Help To Boost Men Power In Bed, Read on...
Story first published: Thursday, March 4, 2021, 20:24 [IST]
X
Desktop Bottom Promotion