For Quick Alerts
ALLOW NOTIFICATIONS  
For Daily Alerts

ನಾನ್‌ ಆಲ್ಕೋಹಾಲಿಕ್ ಫ್ಯಾಟಿ ಲಿವರ್‌ ಕಾಯಿಲೆ ನಿಯಂತ್ರಿಸುವುದು ಹೇಗೆ?

|

ಸಂಕ್ಷಿಪ್ತವಾಗಿ ಎನ್.ಎ.ಎಫ಼್.ಎಲ್.ಡಿ. ಎಂದು ಕರೆಯಲ್ಪಡುವ ನಾನ್-ಆಲ್ಕೋಹಾಲಿಕ್ ಫ಼್ಯಾಟಿ ಲಿವರ್ ಡಿಸೀಸ್ ಎಂಬ ಪಿತ್ತಕೋಶಕ್ಕೆ ಸಂಬಂಧಪಟ್ಟ ಖಾಯಿಲೆಯ ಬಗ್ಗೆ ಕೇಳಿದ್ದೀರಾ ? ಮದ್ಯಪಾನವನ್ನು ಮಾಡದೇ ಇರುವ ಅಥವಾ ಮಾಡಿದರೂ ಇತಿಮಿತಿಯಲ್ಲಿ ಮದ್ಯಪಾನ ಮಾಡುವವರನ್ನ ಬಾಧಿಸುವ ಯಕೃತ್ತಿನ ಕೆಟ್ಟ ಸ್ಥಿತಿಗತಿಗಳ ಒಂದು ಸಮೂಹವಿದು.

ಯಕೃತ್ ಅಥವಾ ಪಿತ್ತಕೋಶದಲ್ಲಿ ಹೆಚ್ಚುವರಿ ಕೊಬ್ಬಿನಾಂಶವು ಒಟ್ಟುಗೂಡುವುದರಿಂದ ಈ ಪರಿಸ್ಥಿತಿ ತಲೆದೋರುತ್ತದೆ. ಆದರೆ ಇದು ಮದ್ಯಪಾನದಿಂದ ಉಂಟಾಗುವ ಪರಿಸ್ಥಿತಿಯಲ್ಲ. ಸಿಕ್ಕಾಪಟ್ಟೆ ತೂಕವನ್ನ ಗಳಿಸಿಕೊಂಡಿರುವ ಅಥವಾ ಬೊಜ್ಜುಮೈ ಇರುವಂತಹ ಜನರಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುವ ಒಂದು ವಿಧದ ಆರೋಗ್ಯ ತೊಂದರೆ ಇದು.

ಈ ಪರಿಸ್ಥಿತಿಯನ್ನ ಅಥವಾ ಈ ಖಾಯಿಲೆಯನ್ನ ಸರಿಯಾದ ಸಮಯದಲ್ಲಿ ಸರಿಯಾದ ಚಿಕಿತ್ಸೆಗೆ ಒಳಪಡಿಸದಿದ್ದರೆ, ಇದು ಮುಂದೆ ಸಿರ್ರೋಸಿಸ್ (ಕೊಳೆತ ಪಿತ್ತಕೋಶ) ಅಥವಾ ಪಿತ್ತಕೋಶದ ಕ್ಯಾನ್ಸರ್ ನಂತಹ ಗಂಭೀರ ಸ್ವರೂಪದ ಖಾಯಿಲೆಗೆ ದಾರಿಯಾದೀತು!! ಪಿತ್ತಕೋಶದಲ್ಲಿ ಹೆಚ್ಚುವರಿ ಕೊಬ್ಬಿನಾಂಶವು ಸಂಗ್ರಹಗೊಂಡಲ್ಲಿ, ಅದು ಮಧುಮೇಹ, ಅಧಿಕ ರಕ್ತದೊತ್ತಡ, ಹಾಗೂ ಮೂತ್ರಪಿಂಡದ ಖಾಯಿಲೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿಮಾಡಿಕೊಡುತ್ತದೆ.

ಆರಂಭದ ಹಂತದಲ್ಲಿಯೇ ಖಾಯಿಲೆಯನ್ನು ಪತ್ತೆಹಚ್ಚಿ ಅದನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಿದರೆ, ಪಿತ್ತಕೋಶದಲ್ಲಿ ಸಂಗ್ರಹಗೊಳ್ಳುವ ಕೊಬ್ಬಿನಾಂಶದ ಪ್ರಮಾಣವನ್ನ ತಗ್ಗಿಸಿಕೊಳ್ಳಬಹುದು ಹಾಗೂ ಸಂಭಾವ್ಯ ಸಂಕೀರ್ಣ ಪರಿಸ್ಥಿತಿಗಳನ್ನ ತಡೆಗಟ್ಟಬಹುದು. ಅದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಫ್ಯಾಟಿ ಲಿವರ್‌ ನಿಯಂತ್ರಿಸಲು ಯಾವ ಆಹಾರ ಸೇವಿಸಬೇಕು?

ಫ್ಯಾಟಿ ಲಿವರ್‌ ನಿಯಂತ್ರಿಸಲು ಯಾವ ಆಹಾರ ಸೇವಿಸಬೇಕು?

ಈ ಖಾಯಿಲೆಗೆ ಸಂಬಂಧಿಸಿದ ಹಾಗೆ ಶುಭ ಸಮಾಚಾರವೊಂದು ಈಗ ಹೊರಬಿದ್ದಿದೆ. ಚಿರಪರಿಚಿತವಾಗಿರುವ ಹಾಗೂ ವ್ಯಾಪಕವಾಗಿ ಬಳಕೆಯಾಗುವ ಹಲವಾರು ತರಕಾರಿಗಳಲ್ಲಿ ಕಂಡುಬರುವ ಒಂದು ನೈಸರ್ಗಿಕ ಸಂಯುಕ್ತವಸ್ತುವು ಈ ನಾನ್-ಆಲ್ಕೋಹಾಲಿಕ್ ಫ಼್ಯಾಟಿ ಲಿವರ್ ಡಿಸೀಸ್ ನ ವಿರುದ್ಧ ಸೆಣೆಸಾಡಲು ದೇಹಕ್ಕೆ ನೆರವಾಗುತ್ತದೆ ಅಂತಾ ಹೊಸ ಅಧ್ಯಯನವೊಂದು ತೋರಿಸಿಕೊಟ್ಟಿದೆ. ಟೆಕ್ಸಾಸ್ ನ ಎ‍&ಎಮ್ ಅಗ್ರಿಲೈಫ಼್ ರಿಸರ್ಚ್ ನ ವಿಜ್ಞಾನಿಗಳಿಂದ ಕೈಗೊಳ್ಳಲ್ಪಟ್ಟ ಅಧ್ಯಯನವೊಂದರ ಪ್ರಕಾರ, ಜೀರ್ಣಾಂಗ ಪಥದಲ್ಲಿ ಕಂಡುಬರುವ ಬ್ಯಾಕ್ಟೀರಿಯಾದಲ್ಲಿ ಹಾಗೂ ಕ್ಯಾಬೇಜ್, ಕಾಲೆ, ಕಾಲಿಫ಼್ಲವರ್, ಮತ್ತು ಬ್ರುಸ್ಸೆಲ್ಸ್ ಗಳಂತಹ ತರಕಾರಿಗಳಲ್ಲಿ 'ಇನ್ಡೋಲ್' ಎಂಬ ಹೆಸರಿನ ಆ ನೈಸರ್ಗಿಕ ಸಂಯುಕ್ತ ವಸ್ತುವಿರುತ್ತದೆ.

ಎನ್.ಎ.ಎಫ಼್.ಎಲ್.ಡಿ. ಯ ವಿರುದ್ಧ ಇನ್ಡೋಲ್ ಹೇಗೆ ಕಾರ್ಯನಿರ್ವಹಿಸುತ್ತದೆ ?

ಎನ್.ಎ.ಎಫ಼್.ಎಲ್.ಡಿ. ಯ ವಿರುದ್ಧ ಇನ್ಡೋಲ್ ಹೇಗೆ ಕಾರ್ಯನಿರ್ವಹಿಸುತ್ತದೆ ?

ಜೀರ್ಣ ಪಥದಲ್ಲಿರುವ ಬ್ಯಾಕ್ಟೀರಿಯಾವು ಕೊಬ್ಬುಯುಕ್ತ ಪಿತ್ತಕೋಶ ಖಾಯಿಲೆಯ ಬೆಳವಣಿಗೆಯ ಮೇಲೆ ಧನಾತ್ಮಕ ಪರಿಣಾಮವನ್ನೋ ಇಲ್ಲವೇ ಋಣಾತ್ಮಕ ಪರಿಣಾಮವನ್ನೋ ಉಂಟು ಮಾಡುತ್ತದೆ. ಈ ಬ್ಯಾಕ್ಟೀರಿಯಾಗಳು ಇನ್ಡೋಲ್ ಎಂಬ ಹೆಸರಿನ ಸಂಯುಕ್ತ ವಸ್ತುವೊಂದನ್ನು ಉತ್ಪತ್ತಿ ಮಾಡುತ್ತವೆ. ಈ ವಸ್ತುವು ಎನ್.ಎ.ಎಫ಼್.ಎಲ್.ಡಿ. ಯಿಂದ ಬಳಲುತ್ತಿರುವ ರೋಗಿಗಳಿಗೆ ಪ್ರತಿಬಂಧಾತ್ಮಕ ಹಾಗೂ ಶುಶ್ರೂಷಾತ್ಮಕ ಪ್ರಯೋಜನಗಳನ್ನು ಕೊಡುತ್ತದೆ ಎಂದು ನಂಬಲಾಗಿದೆ.

ಮೇಲೆ ಹೆಸರಿಸಿದ ತರಕಾರಿಗಳಲ್ಲಿರುವ ಇನ್ಡೋಲ್-3-ಕಾರ್ಬಿನಾಲ್ ನಲ್ಲಿನ ಉರಿಶಾಮಕ ಹಾಗೂ ಕ್ಯಾನ್ಸರ್ ನ ವಿರುದ್ಧ ಹೋರಾಡುವ ಗುಣಲಕ್ಷಣಗಳನ್ನೂ ಒಳಗೊಂಡಂತಹ ಆರೋಗ್ಯ ಪ್ರಯೋಜನಗಳಿರುವುದನ್ನ ಸಂಶೋಧಕರೂ ಕೂಡ ಒಪ್ಪಿಕೊಂಡಿದ್ದಾರೆ. ಹೊಸ ಅಧ್ಯಯನವೊಂದು ತೋರಿಸಿಕೊಟ್ಟಿರುವ ಪ್ರಕಾರ, ಹೆಚ್ಚಿನ ಬಿ.ಎಮ್.ಐ. ಅನ್ನು ಹೊಂದಿರುವ ವ್ಯಕ್ತಿಗಳ ರಕ್ತದಲ್ಲಿ ಇನ್ಡೋಲ್ ನ ಮಟ್ಟವು ಕಡಿಮೆಯಿರುತ್ತದೆ. ಇಷ್ಟೇ ಅಲ್ಲದೇ, ಇನ್ಡೋಲ್ ನ ಮಟ್ಟವು ಕೃಶಕಾಯದ ವ್ಯಕ್ತಿಗಳ ರಕ್ತದಲ್ಲಿರುವುದಕ್ಕಿಂತ, ಬೊಜ್ಜುಮೈ ಹೊಂದಿರುವ ವ್ಯಕ್ತಿಗಳ ರಕ್ತದಲ್ಲಿ, ಗಣನೀಯ ಪ್ರಮಾಣದಲ್ಲಿ ಕಡಿಮೆಯಿರುವುದು ಕಂಡುಬಂದಿದೆ. ಯಾರ ರಕ್ತದಲ್ಲಿ ಇನ್ಡೋಲ್ ನ ಮಟ್ಟವು ಕಡಿಮೆಯಿತ್ತೋ ಅಂತಹವರ ಪಿತ್ತಕೋಶದಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬಿನಾಂಶವು ಶೇಖರವಾಗಿದ್ದುದು ಕಂಡುಬಂದಿದೆ.

ಪಿತ್ತಕೋಶದ ಮೇಲೆ ಇನ್ಡೋಲ್ ನ ಪ್ರಭಾವವನ್ನು ಇನ್ನಷ್ಟು ಅರಿಯುವ ದಿಶೆಯಲ್ಲಿ, ಸಂಶೋಧನಾ ತಂಡವು ಪ್ರಾಣಿಗಳನ್ನು ಇನ್ಡೋಲ್ ನ ಚಿಕಿತ್ಸೆಗೆ ಒಳಪಡಿಸಿದರು. ಆಗ ಕಂಡುಬಂದ ಅಚ್ಚರಿಯ ಸಂಗತಿಯೇನೆಂದರೆ, ಇನ್ಡೋಲ್ ಚಿಕಿತ್ಸೆಗೊಳಗಾದ ಪ್ರಾಣಿಗಳ ಪಿತ್ತಕೋಶದಲ್ಲಿ ಕೊಬ್ಬಿನಾಂಶದ ಸಂಗ್ರಹ ಹಾಗೂ ಉರಿಯ ಪ್ರಮಾಣವು ಗಣನೀಯವಾಗಿ ಕಡಿಮೆಯಿದ್ದಿತು. ಈ ಇನ್ಡೋಲ್ ಎಂಬ ಸಂಯುಕ್ತವಸ್ತುವು, ಪಿತ್ತಕೋಶದ ಜೀವಕೋಶಗಳಲ್ಲಿ ಕೊಬ್ಬಿನ ಸಂಚಯನವನ್ನ ಕಡಿಮೆ ಮಾಡುವುದರೊಂದಿಗೆ, ಕರುಳಿನ ಜೀವಕೋಶಗಳ ಮೇಲೂ ಕಾರ್ಯನಿರ್ವಹಿಸಿ, ಕರುಳಿನ ಉರಿಯನ್ನೂ ತಗ್ಗಿಸುವುದನ್ನ ಕಂಡುಕೊಳ್ಳಲಾಯಿತು.

ಇನ್ಡೋಲ್ ನಿಂದ ಸಮೃದ್ಧವಾಗಿರುವ ಆಹಾರವಸ್ತುಗಳು ಅಥವಾ ಇನ್ಡೋಲ್ ನ ಪರಿಣಾಮಗಳನ್ನ ಅನುಕರಿಸುವ ಜೌಷಧಗಳು ಎನ್.ಎ.ಎಫ಼್.ಎಲ್.ಡಿ. ಗೆ ವಿನೂತನ ಚಿಕಿತ್ಸೆಗಳಾಗುವ ಸಾಧ್ಯತೆಗಳಿವೆ ಎಂದು ತಾವು ಕಂಡುಕೊಂಡ ಫಲಿತಾಂಶಗಳ ಆಧಾರದ ಮೇಲೆ ಸಂಶೋಧಕರು ಸಲಹೆ ಮಾಡುತ್ತಾರೆ.

ಎನ್.ಎ.ಎಫ಼್.ಎಲ್.ಡಿ. ಯನ್ನು ನೈಸರ್ಗಿಕವಾಗಿ ನಿಯಂತ್ರಿಸುವ ಬಗೆ ಹೇಗೆ ?

ಎನ್.ಎ.ಎಫ಼್.ಎಲ್.ಡಿ. ಯನ್ನು ನೈಸರ್ಗಿಕವಾಗಿ ನಿಯಂತ್ರಿಸುವ ಬಗೆ ಹೇಗೆ ?

ಪರ್ಯಾಪ್ತ ಕೊಬ್ಬು ಪದಾರ್ಥಗಳ ಅತ್ಯಧಿಕ ಸೇವನೆಯಂತಹ ಅನಾರೋಗ್ಯಕರ ಪೋಷಣಾ ಕ್ರಮವು ನಾನ್-ಆಲ್ಕೋಹಾಲಿಕ್ ಫ಼್ಯಾಟಿ ಲಿವರ್ ಡಿಸೀಸ್ ಗೆ ಕಾರಣವಾಗಬಲ್ಲದು. ಎನ್.ಎ.ಎಫ಼್.ಎಲ್.ಡಿ. ಗೆ ಕಾರಣವಾಗುವ ಮತ್ತೊಂದು ಕಾರಕ ಬೊಜ್ಜುಮೈ. ಸಾಮಾನ್ಯ ಜನತೆಗಿಂತ ಬೊಜ್ಜುಮೈ ಇರೋ ವ್ಯಕ್ತಿಗಳಲ್ಲಿ ಕೊಬ್ಬುಯುಕ್ತ ಪಿತ್ತಕೋಶವಿರೋ ಸಾಧ್ಯತೆಯು 7 ರಿಂದ 10 ರಷ್ಟು ಹೆಚ್ಚಾಗಿರುತ್ತದೆ ಎಂದು ಮೇಲಿನ ಅಧ್ಯಯನವು ತೋರಿಸಿಕೊಟ್ಟಿದೆ. ಹಾಗಾಗಿ, ಆರೋಗ್ಯಕರವಾದ ಜೀವನಶೈಲಿಯನ್ನ ಅಳವಡಿಸಿಕೊಳ್ಳುವುದೇ ಕೊಬ್ಬುಯುಕ್ತ ಪಿತ್ತಕೋಶವನ್ನ ನಿಭಾಯಿಸುವುದಕ್ಕೆ ಅತ್ಯಂತ ಸೂಕ್ತ ಮಾರ್ಗೋಪಾಯ.

ಎನ್.ಎ.ಎಫ಼್.ಎಲ್.ಡಿ. ಯ ಬೆಳವಣಿಗೆಯನ್ನ ಹತ್ತಿಕ್ಕಬಲ್ಲ ಕೆಲವು ನೈಸರ್ಗಿಕ ಪರಿಹಾರೋಪಾಯಗಳನ್ನ ಇಲ್ಲಿ ಕೊಡಲಾಗಿದೆ.

ತೂಕವನ್ನ ಕಳೆದುಕೊಳ್ಳಿ -

ತೂಕವನ್ನ ಕಳೆದುಕೊಳ್ಳಿ -

ಒಂದು ವೇಳೆ ನಿಮ್ಮ ದೇಹತೂಕವು ಗಮನಾರ್ಹವಾಗಿ ಹೆಚ್ಚಾಗಿದ್ದಲ್ಲಿ, ನಿಮ್ಮ ಬಿ.ಎಮ್.ಐ. (ಬಾಡಿ ಮಾಸ್ ಇಂಡೆಕ್ಸ್ - ದೇಹ ತೂಕ ಸೂಚ್ಯಂಕ) ಅನ್ನು 18.5 ರಿಂದ 24.9 ರ ನಡುವೆ ತಂದಿರಿಸಿಕೊಳ್ಳಲು ಪ್ರಯತ್ನಿಸಿರಿ. ಇದು ಸಹಜ ತೂಕದ ಸೂಚಕವಾಗಿದೆ. ತೂಕವನ್ನ ಕಳೆದುಕೊಂಡಲ್ಲಿ ಅದು ನಿಮ್ಮ ಪಿತ್ತಕೋಶದಿಂದ ಒಂದಿಷ್ಟು ಕೊಬ್ಬಿನಾಂಶವನ್ನ ತೆಗೆದುಹಾಕುವುದಕ್ಕೆ ನೆರವಾಗುತ್ತದೆ ಹಾಗೂ ಒಂದೊಮ್ಮೆ ನಿಮಗೇನಾದರೂ ಎನ್.ಎ.ಎಫ಼್.ಎಲ್.ಡಿ. ಉಂಟಾಗಿದ್ದಲ್ಲಿ ಅದರ ಬೆಳವಣಿಗೆಯನ್ನ ತಗ್ಗಿಸುತ್ತದೆ.

ಆರೋಗ್ಯದಾಯಕ ಆಹಾರಪದ್ಧತಿಯನ್ನ ಅಳವಡಿಸಿಕೊಳ್ಳಿ

ಆರೋಗ್ಯದಾಯಕ ಆಹಾರಪದ್ಧತಿಯನ್ನ ಅಳವಡಿಸಿಕೊಳ್ಳಿ

- ಹಣ್ಣುಗಳು, ತರಕಾರಿಗಳು, ಪ್ರೋಟೀನ್, ಹಾಗೂ ಕಾರ್ಬೋಹೈಡ್ರೇಟ್ ಗಳನ್ನ ಅತ್ಯಧಿಕ ಪ್ರಮಾಣದಲ್ಲಿ ಒಳಗೊಂಡಿರುವ ಸಂತುಲಿತ ಆಹಾರಪದ್ಧತಿಯನ್ನ ಅಳವಡಿಸಿಕೊಳ್ಳಿ. ಆದರೆ ಅಂತಹ ಆಹಾರವು ಕೊಬ್ಬು, ಸಕ್ಕರೆ, ಹಾಗೂ ಉಪ್ಪಿನಾಂಶವನ್ನ ಕಡಿಮೆ ಪ್ರಮಾಣದಲ್ಲಿ ಒಳಗೊಂಡಿರಬೇಕು. ಕಡಿಮೆ ಪ್ರಮಾಣದಲ್ಲಿ ಆಹಾರಸೇವನೆಯೂ ಈ ದಿಶೆಯಲ್ಲಿ ಸಹಕಾರಿ.

ನಿಯಮಿತವಾಗಿ ವ್ಯಾಯಾಮ ಮಾಡಿರಿ -

ನಿಯಮಿತವಾಗಿ ವ್ಯಾಯಾಮ ಮಾಡಿರಿ -

ತಜ್ಞರು ಸಲಹೆ ಮಾಡುವ ಪ್ರಕಾರ, ಪ್ರತೀ ವಾರ ನಡಿಗೆ ಅಥವಾ ಸೈಕ್ಲಿಂಗ್ ನಂತಹ ಮಧ್ಯಮ ಸ್ವರೂಪದ ಚಟುವಟಿಕೆಯನ್ನ ಕನಿಷ್ಟ 150 ನಿಮಿಷಗಳವರೆಗಾದರೂ ಮಾಡಲೇಬೇಕು. ನೀವು ತೂಕವನ್ನ ಕಳೆದುಕೊಳ್ಳದೇ ಹೋದರೂ ಕೂಡ, ನಿಯಮಿತ ವ್ಯಾಯಾಮವು ಎನ್.ಎ.ಎಫ಼್.ಎಲ್.ಡಿ. ಯನ್ನು ಸುಧಾರಿಸುವಲ್ಲಿ ನೆರವಾಗುತ್ತದೆ.

ಧೂಮಪಾನವನ್ನ ನಿಲ್ಲಿಸಿ -

ಧೂಮಪಾನವನ್ನ ನಿಲ್ಲಿಸಿ -

ಕೆಲವು ಅಧ್ಯಯನಗಳು ಸಲಹೆ ಮಾಡುವ ಪ್ರಕಾರ, ಮದ್ಯಪಾನ ಮಾಡದೇ ಇರುವವರಿಗೆ ಧೂಮಪಾನದ ಚಟವಿದ್ದಲ್ಲಿ, ಅಂತಹವರಿಗೆ ಎನ್.ಎ.ಎಫ಼್.ಎಲ್.ಡಿ. ಶುರುವಾಗುವ ಅಪಾಯ ಹೆಚ್ಚಾಗಿರುತ್ತದೆ. ಹಾಗಾಗಿ, ಒಂದೊಮ್ಮೆ ನೀವು ಧೂಮಪಾನಿಯಾಗಿದ್ದಲ್ಲಿ, ಧೂಮಪಾನವನ್ನ ನಿಲ್ಲಿಸಿ. ಹೃದಯಾಘಾತ ಹಾಗೂ ಪಾರ್ಶ್ವವಾಯುವನ್ನೂ ಒಳಗೊಂಡಂತೆ, ಧೂಮಪಾನವನ್ನ ವರ್ಜಿಸುವುದರಿಂದ ಇನ್ನಿತರ ಅನೇಕ ಆರೋಗ್ಯ ತೊಂದರೆಗಳನ್ನ ತಗ್ಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಮದ್ಯಪಾನವಂತೂ ಬೇಡವೇ ಬೇಡ -

ಮದ್ಯಪಾನವಂತೂ ಬೇಡವೇ ಬೇಡ -

ಎನ್.ಎ.ಎಫ಼್.ಎಲ್.ಡಿ. ಗೆ ಕಾರಣವು ಮದ್ಯಪಾನವಲ್ಲವಾದರೂ ಕೂಡ, ಕುಡಿಯುವ ಚಟವು ಅದನ್ನ ಇನ್ನಷ್ಟು ಬಿಗಡಾಯಿಸುತ್ತದೆ. ಹಾಗಾಗಿ ಮದ್ಯಪಾನವನ್ನ ಇತಿಮಿತಿಯಲ್ಲಿ ಮಾಡುವುದು ಇಲ್ಲವೇ ಸಂಪೂರ್ಣವಾಗಿ ತ್ಯಜಿಸಿಬಿಡುವುದು ಒಳ್ಳೆಯದು.

English summary

How To Control Non-Alcoholic Fatty Liver Disease Naturally in Kannada

How to control non alcoholic fatty liver disease naturally, read on...
Story first published: Saturday, January 30, 2021, 12:13 [IST]
X
Desktop Bottom Promotion