For Quick Alerts
ALLOW NOTIFICATIONS  
For Daily Alerts

ನಮಗೆ ಸೂಕ್ತವಾದ ಮೆನ್‌ಸ್ಟ್ರಲ್‌ ಕಪ್‌ ಸೈಜ್ ಯಾವುದೆಂದು ತಿಳಿಯುವುದು ಹೇಗೆ?

|

ಮೆನ್‌ಸ್ಟ್ರಲ್‌ ಕಪ್‌ ಮಹಿಳೆಯರಿಗೆ ವರದಾನವಾಗಿದೆ. ಮುಟ್ಟಿನ ದಿನಗಳಲ್ಲಿ ಬಟ್ಟೆ ಬದಲಿಗೆ ಪ್ಯಾಡ್‌ ಬಳಸಲಾರಂಭಿಸಿದ ಮೇಲೆ ಆ ದಿನಗಳು ಹೆಣ್ಮಕ್ಕಳಿಗೆ ಸ್ವಲ್ಪ ಕಂಪರ್ಟ್‌ ಆಯ್ತು, ಈಗ ಮೆನ್‌ಸ್ಟ್ರಲ್‌ ಕಪ್‌ ಬಂದಿರುವುದರಿಂದ ಆ ದಿನಗಳಲ್ಲಿ ತುಂಬಾನೇ ಕಂಫರ್ಟ್ ಅನಿಸಲಾರಂಭಿಸಿದೆ.

ಎಷ್ಟೋ ಮಹಿಳೆಯರು ಪ್ಯಾಡ್‌ಗೆ ಗುಡ್‌ ಬೈ ಹೇಳಿ, ಮೆನ್‌ಸ್ಟ್ರಲ್‌ ಕಪ್ ಬಳಸಲಾರಂಭಿಸಿದೆ. ಈ ಕಪ್‌ ಬಳಸುವುದರ ಪ್ರಮುಖ ಪ್ರಯೋಜನವೆಂದರೆ ಪ್ಯಾಡ್‌ನಂತೆ ಆಗಾಗ ಬದಲಾಯಿಸಬೇಕಾಗಿಲ್ಲ, ಅಲ್ಲದೆ ಮರುಬಳಿಕೆ ಮಾಡಬಹುದು.

ಪ್ಯಾಡ್‌ ಬಳಸಿದಾಗ ಅದನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ಪರಿಸರ ಮಾಲಿನ್ಯ ಕೂಡ ಹೆಚ್ಚಾಗುವುದು. ಆದರೆ ಮೆನ್‌ಸ್ಟ್ರಲ್‌ ಕಪ್‌ ಬಳಸಿದರೆ ಮುಟ್ಟಿನ ದಿನಗಳು ಕಳೆದ ಮೇಲೆ ಶುಚಿ ಮಾಡಿಟ್ಟರೆ ಮತ್ತೆ ಮುಂದಿನ ತಿಂಗಳು ಬಳಸಬಹುದು. ಆದ್ದರಿಂದ ಹಣದ ಉಳಿತಾಯ ಕೂಡ ಆಗುವದು.

ಆದರೆಕೆಲವರಿಗೆ ಮೆನ್‌ಸ್ಟ್ರಲ್ ಕಪ್‌ ಸೈಜ್‌ ಬಗ್ಗೆ ಅನೇಕ ಗೊಂದಲಗಳಿರುತ್ತದೆ? ಮೆನ್‌ಸ್ಟ್ರಲ್‌ ಕಪ್‌ಸೈಜ್‌ ಯಾವ ರೀತಿ ಆಯ್ಕೆ ಮಾಡಬೇಕು ಎಂಬ ಸಂಶಯ ನಿಮ್ಮಲ್ಲಿದೆಯೇ? ಇನ್‌ಸ್ಟಾಗ್ರಾಮದಲ್ಲಿ Dr Cuterus ಎಂದು ಫೇಮಸ್‌ ಆಗಿರುವ ಡಾ. ತಾನಿಯಾ ನರೇಂದ್ರ ಅವರು ಇದರ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ, ಅದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಮೆನ್‌ಸ್ಟ್ರಲ್ ಕಪ್‌ ಸೈಜ್‌ ಆಯ್ಕೆ ಮಾಡುವುದು ಹೇಗೆ?

1. ನಾರ್ಮಲ್ ಡೆಲಿವರಿಯಾಗಿದ್ದರೆ

1. ನಾರ್ಮಲ್ ಡೆಲಿವರಿಯಾಗಿದ್ದರೆ

ನಿಮಗೆ ಸಹಜ ಹೆರಿಗೆ ಅಥವಾ ನಾರ್ಮಲ್ ಡೆಲಿವರಿಯಾಗಿದ್ದರೆ ಲಾರ್ಜ್‌ ಸೈಜ್‌ನ ಮೆನ್‌ಸ್ಟ್ರಲ್ ಕಪ್ ಬಳಸಿ.

2. ಸಿ ಸೆಕ್ಷನ್‌ ಡೆಲಿವರಿಯಾಗಿದ್ದರೆ

2. ಸಿ ಸೆಕ್ಷನ್‌ ಡೆಲಿವರಿಯಾಗಿದ್ದರೆ

ಸಿ ಸೆಕ್ಷನ್‌ ಹೆರಿಗೆಯಾಗಿದ್ದರೆ ಮೀಡಿಯಂ ಅಥವಾ ಸ್ಮಾಲ್‌ ಸೈಜ್‌ನ ಮೆನ್‌ಸ್ಟ್ರಲ್‌ ಕಪ್‌ ಬಳಸಿ

3. ಮಗುವಾಗಿಲ್ಲ ಎಂದಾದರೆ

3. ಮಗುವಾಗಿಲ್ಲ ಎಂದಾದರೆ

ಇನ್ನೂ ಮಗುವಾಗಿಲ್ಲ ಎಂದರೆ ನಿಮಗೆ ಮೀಡಿಯಂ ಅಥವ ಸ್ಮಾಲ್ ಸೈಜ್‌ನ ಮೆನ್‌ಸ್ಟ್ರಲ್‌ ಕಪ್ ಬಳಸಿ.

4. ಹದಿ ಹರೆಯದವರಾಗಿದ್ದರೆ

4. ಹದಿ ಹರೆಯದವರಾಗಿದ್ದರೆ

ಹದಿ ಹರೆಯದ ಪ್ರಾಯದವರು ಅಥವಾ ಇನ್ನೂ ವೈವಾಹಿಕ ಜೀವನ ಪ್ರಾರಂಭಿಸಿಲ್ಲ ಎಂದಾದರೆ ಎಕ್ಟ್ರಾ ಸ್ಮಾಲ್‌ ಸೈಜ್ ಮೆನ್‌ಸ್ಟ್ರಲ್‌ ಕಪ್‌ ಬಳಸುವುದು ಸೂಕ್ತ.

ಎಲ್ಲಾ ಬ್ರ್ಯಾಂಡ್‌ನಲ್ಲೂ ನಿಮಗೆ ಈ ಎಲ್ಲಾ ಸೈಜ್‌ಗಳು ಲಭ್ಯವಾಗುತ್ತವೆ. ನೀವು ಲಾರ್ಜ್‌ ಸೈಜ್‌ ಬಳಸುವುದಾದರೆ 35 ವರ್ಷದ ನಂತರ ಅಥವಾ ಅಧಿಕ ಫ್ಲೋ ಇದ್ದರೆ ಮಾತ್ರ ಬಳಸಿ, ಇಲ್ಲದಿದ್ದರೆ ಮೀಡಿಯಂ ಅಥವಾ ಸ್ಮಾಲ್‌ ಸೈಜ್ ಬಳಸಿ.

ಮೆನ್‌ಸ್ಟ್ರಲ್‌ ಕಪ್‌ ತುಂಬಿದರೆ ಅದನ್ನು ಸ್ವಚ್ಛ ಮಾಡಿ ಬಳಬಹುದು, ಸಾಮಾನ್ಯವಾಗಿ ದಿನದಲ್ಲಿ ಎರಡು ಬಾರಿ ಸ್ವಚ್ಛಗೊಳಿಸಬೇಕಾಗುತ್ತದೆ.

English summary

How to Choose Menstrual Cup Size? An Expert Dr Cuterus Shares tips in Kannada

How to choose menstrual cup size? An expert Dr Cuterus shares tips in Kannada, Read on....
X
Desktop Bottom Promotion