For Quick Alerts
ALLOW NOTIFICATIONS  
For Daily Alerts

ಮೂತ್ರನಾಳ ಸೋಂಕು ಹೋಗಲಾಡಿಸುವ ಮನೆಮದ್ದು

|

ಯುರಿನರಿ ಟ್ರ್ಯಾಕ್ಟ್ ಇನ್ಫ಼ೆಕ್ಷನ್ (ಯು.ಟಿ.ಐ) ಅಥವಾ ಕನ್ನಡದಲ್ಲಿ ಮೂತ್ರನಾಳಗಳ ಸೋಂಕು ಎಂದು ಕರೆಯಲ್ಪಡುವ ಈ ಆರೋಗ್ಯ ಸಮಸ್ಯೆಯು, ಅದರಿಂದ ಪೀಡಿತರಾಗುವ ಬಹುತೇಕ ಮಂದಿಯ ಜೀವನವನ್ನ (ಅದರಲ್ಲೂ ವಿಶೇಷವಾಗಿ ಮಹಿಳೆಯರ ಜೀವನವನ್ನ) ದು:ಸ್ವಪ್ನದಂತೆ ಕಾಡುತ್ತದೆ. ಈ ಸೋಂಕಿಗೆ ಒಳಗಾದವರು ಪ್ರತಿಬಾರಿಯೂ ಮೂತ್ರವಿಸರ್ಜನೆಗೆ ಮುಂದಾದಾಗ, ಅಸಹನೀಯವಾದ ಉರಿಯು ಅವರನ್ನು ಕಾಡುತ್ತದೆ.

Home Remedies for Mild Urinary Tract Infection in Kannada

ಬ್ಯಾಕ್ಟೀರಿಯಾದ ಇ.ಕೊಲೈ ಹಾಗೂ ಸ್ಟ್ಯಾಫಿಲೋಕಾಕ್ಕಸ್ ಸ್ಯಾಪ್ರೋಫೈಟಿಕಸ್ ಎಂದು ಕರೆಯಲ್ಪಡುವ ಎರಡು ವಂಶವಾಹಿ ಪ್ರಬೇಧಗಳು ಈ ಸೋಂಕಿಗೆ ಬಹುಮಟ್ಟಿಗೆ ಕಾರಣವಾಗಿರುತ್ತವೆ. ಈ ಸೋಂಕು, ಮೂತ್ರಪಿಂಡಗಳು, ಮೂತ್ರನಾಳಗಳು, ಮತ್ತು ಮೂತ್ರಕೋಶವನ್ನೊಳಗೊಂಡಂತೆ ಮೂತ್ರಜನಕಾಂಗ ವ್ಯೂಹದ ಯಾವುದೇ ಭಾಗಕ್ಕೂ ತಗಲಬಹುದು. ಮೂತ್ರವಿಸರ್ಜಿಸುವಾಗ ಉರಿಯ ಅನುಭವವನ್ನೂ ಹೊರತುಪಡಿಸಿ, ಈ ಸೋಂಕಿನಿಂದುಟಾಗುವ ಇನ್ನಿತರ ರೋಗಲಕ್ಷಣಗಳೆಂದರೆ ಮೂತ್ರವಿಸರ್ಜನೆಗೆಂದು ಪದೇ ಪದೇ ಚಡಪಡಿಸುವಂತಾಗುವುದು, ಮೂತ್ರಕೋಶವನ್ನು ಬರಿದಾಗಿಸಿದ ಬಳಿಕವೂ ಮೂತ್ರವಿಸರ್ಜನೆ ಸಂಪೂರ್ಣವಾಗಿಲ್ಲವೆಂದೆನಿಸುವುದು, ಕಿಬ್ಬೊಟ್ಟೆಯ ಕೆಳಭಾಗದಲ್ಲಿ ನೋವು, ಹಾಗೂ ಪ್ರಬಲ ವಾಸನೆಯೊಂದಿಗಿನ ದಟ್ಟ ವರ್ಣದ ಮೂತ್ರವಿಸರ್ಜನೆ.

ಈ ಯು.ಟಿ.ಐ. ಸೋಂಕು ಯಾರಿಗೆ ಬೇಕಾದರೂ ತಗಲುಬಹುದಾಗಿದ್ದರೂ ಕೂಡ, ಇದರಿಂದ ಬಾಧಿತರಾಗುವವರಲ್ಲಿ ಮಹಿಳೆಯರೇ ಹೆಚ್ಚು. ಮಹಿಳೆಯರ ಮೂತ್ರಕೋಶದೊಳಗೆ ಬ್ಯಾಕ್ಟೀರಿಯಾ ಸುಲಭವಾಗಿ ನುಸುಳಲು ಸಾಧ್ಯವಾಗುವಂತಿರುವುದೇ ಇದಕ್ಕೆ ಕಾರಣ. ಹೀಗೆ ಬ್ಯಾಕ್ಟೀರಿಯಾ ಸುಲಭವಾಗಿ ನುಸುಳಲು ಸಾಧ್ಯವಾಗಲು ಕಾರಣವೇನೆಂದರೆ, ಮಹಿಳೆಯರ ಯುರೇತ್ರಾ ಅಥವಾ ಮೂತ್ರವಿಸರ್ಜನಾ ನಾಳವು (ಮೂತ್ರವನ್ನು ಮೂತ್ರನಾಳದಿಂದ ಹೊರಸಾಗಿಸುವ ನಾಳ ಅಥವಾ ಕೊಳವೆ) ಪುರುಷರದ್ದಕ್ಕಿಂತ ಕಿರಿದಾಗಿರುತ್ತದೆ.

ಮೂತ್ರನಾಳಗಳ ಸೋಂಕಿಗೆ ಸಾಮಾನ್ಯ ಚಿಕಿತ್ಸೆಯು ಆ್ಯಂಟಿ-ಬಯಾಟಿಕ್ ಗಳ ಬಳಕೆಯಾಗಿದೆ. ಆದಾಗ್ಯೂ, ಸೋಂಕು ಅಷ್ಟೇನೂ ತೀವ್ರ ಸ್ವರೂಪದಲ್ಲಿರದೇ ಇದ್ದಲ್ಲಿ, ಯಾವುದೇ ಜೌಷಧದ ಅಗತ್ಯವಿಲ್ಲದೆಯೇ ಅದು ತನ್ನಿಂತಾನಾಗಿಯೇ ಗುಣಹೊಂದುವ ಸಾಧ್ಯತೆಯೂ ಇದೆ. ಕೆಲವು ಅಂದಾಜುಗಳ ಪ್ರಕಾರ, ಶೇ. 25 ರಿಂದ ಶೇ. 42 ರವರೆಗಿನ ತೀವ್ರಸ್ವರೂಪಕ್ಕೆ ತಿರುಗದೇ ಇರುವ ಯು.ಟಿ.ಐ. ಪ್ರಕರಣಗಳಿಗೆ ಯಾವುದೇ ಸಕ್ರಿಯ ಚಿಕಿತ್ಸೆಯ ಅಗತ್ಯವೇ ಇರುವುದಿಲ್ಲ. ಆದಾಗ್ಯೂ, ಕೆಲ ಮನೆಮದ್ದುಗಳ ತಂತ್ರವು ಈ ಸೋಂಕಿನಿಂದ ಶೀಘ್ರ ಗುಣಮುಖರಾಗುವುದಕ್ಕಂತೂ ಖಂಡಿತವಾಗಿಯೂ ನೆರವಾಗುತ್ತದೆ. ಅಂತಹುದೇ ಕೆಲವು ಮನೆಮದ್ದುಗಳ ಕುರಿತು ನಾವಿಲ್ಲಿ ಪ್ರಸ್ತಾವಿಸ ಹೊರಟಿದ್ದೇವೆ.

ದ್ರವಾಹಾರಗಳ ಸೇವನೆಯನ್ನು ಹೆಚ್ಚಿಸಿರಿ

ದ್ರವಾಹಾರಗಳ ಸೇವನೆಯನ್ನು ಹೆಚ್ಚಿಸಿರಿ

ಶಾರೀರಿಕ ಚಟುವಟಿಕೆಗಳು ಸಹಜವಾಗಿ ನಡೆಯುತ್ತಿರಬೇಕಾದರೆ ಶರೀರವನ್ನ ಜಲಪೂರಣವಾಗಿರಿಸಿಕೊಂಡಿರುವುದು ಅತೀ ಮುಖ್ಯ. ಅದರಲ್ಲೂ ವಿಶೇಷವಾಗಿ ಮೂತ್ರನಾಳಗಳ ಸೋಂಕಿನಿಂದ ಬಳಲುತ್ತಿರುವವರ ವಿಚಾರದಲ್ಲಂತೂ ಇದರ ಕುರಿತು ಎರಡನೆಯ ಮಾತೇ ಇಲ್ಲ!! ನೀವು ಅಧಿಕ ಪ್ರಮಾಣದಲ್ಲಿ ನೀರನ್ನು ಕುಡಿಯುತ್ತಿದ್ದಲ್ಲಿ, ಮೂತ್ರಜನಕಾಂಗ ವ್ಯೂಹಕ್ಕೆ ಸಂಬಂಧಿಸಿದ ನಿಮ್ಮ ಅಂಗಗಳು ಶರೀರದಿಂದ ಪರಿಣಾಮಕಾರಿಯಾಗಿ ತ್ಯಾಜ್ಯಗಳನ್ನ ಹೊರಹಾಕಬಲ್ಲವು ಹಾಗೂ ಅದೇ ವೇಳೆಗೆ, ಅತ್ಯವಶ್ಯಕ ಪೋಷಕಾಂಶಗಳು ಹಾಗೂ ಎಲೆಕ್ಟ್ರೋಲೈಟ್ ಗಳು ಶರೀರದಲ್ಲೇ ಸ್ಥಿರವಾಗಿ ಉಳಿದುಕೊಂಡಿರುವುದನ್ನು ಖಚಿತಗೊಳಿಸಬಲ್ಲವು.

ಇವೆಲ್ಲಕ್ಕಿಂತ ಹೆಚ್ಚಾಗಿ, ನೀರನ್ನೂ ಒಳಗೊಂಡಂತೆ ದ್ರವಾಹಾರಗಳು ನಿಮ್ಮ ಮೂತ್ರವನ್ನು ತಿಳಿಯಾಗಿಸುವುದರ ಮೂಲಕ ಮೂತ್ರಜನಕಾಂಗ ವ್ಯೂಹಕ್ಕೆ ಸಂಬಂಧಿಸಿದ ನಿಮ್ಮ ಅಂಗಗಳು ಅಷ್ಟು ಸುಲಭವಾಗಿ ಸೋಂಕಿಗೆ ಗುರಿಯಾಗದಂತೆ ನೋಡಿಕೊಳ್ಳುತ್ತವೆ. ಹಾಗಾಗಿ, ಪ್ರತಿದಿನವೂ 2 ಲೀಟರ್ ಗಳಷ್ಟು ನೀರನ್ನು ಕುಡಿಯಿರಿ. ಬಾಯಾರಿಕೆಯನ್ನು ನಿರ್ಲಕ್ಷಿಸುವುದು ಬೇಡ. ನಿಮ್ಮ ದೇಹವು ಒಳಭಾಗದಲ್ಲಿ ಒಣಕಲಾಗಿದೆ ಎಂದು ನಿಮಗೆ ಅನಿಸಿದಾಗಲೆಲ್ಲ ನೀರನ್ನು ಕುಡಿಯಿರಿ.

 ನಿಮ್ಮ ಆಹಾರಪದ್ಧತಿಯಲ್ಲಿ ವಿಟಮಿನ್ ಸಿ ಯನ್ನು ಯಥೇಚ್ಛವಾಗಿ ಸೇರಿಸಿಕೊಳ್ಳಿ

ನಿಮ್ಮ ಆಹಾರಪದ್ಧತಿಯಲ್ಲಿ ವಿಟಮಿನ್ ಸಿ ಯನ್ನು ಯಥೇಚ್ಛವಾಗಿ ಸೇರಿಸಿಕೊಳ್ಳಿ

ವಿಟಮಿನ್ ಸಿ, ಮೂತ್ರನಾಳಗಳ ಸೋಂಕಿನಿಂದ ನಿಮ್ಮನ್ನು ಸಂರಕ್ಷಿಸುತ್ತದೆ ಎಂದು ಅಧ್ಯಯನಗಳು ತೋರಿಸಿಕೊಟ್ಟಿವೆ. ನಿಮ್ಮ ಮೂತ್ರದ ಆಮ್ಲೀಯತೆಯನ್ನು ಹೆಚ್ಚಿಸುವ ಮೂಲಕ ವಿಟಮಿನ್ ಸಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಜೊತೆಗೆ ವಿಟಮಿನ್ ಸಿ ಯು ಮೂತ್ರದ ಪಿ.ಹೆಚ್. (pH) ಮಟ್ಟವನ್ನೂ ತಗ್ಗಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ಅಸಾಧ್ಯ. ವಿಟಮಿನ್ ಸಿ ಯ ನಿಮ್ಮ ದೈನಂದಿನ ಸೇವನೆಯನ್ನು ನೀವು ಹೆಚ್ಚಿಸಿಕೊಳ್ಳಬೇಕೆಂದು ಬಯಸುವಿರಾದಲ್ಲಿ, ಹಣ್ಣುಗಳು ಮತ್ತು ತರಕಾರಿಗಳು, ಮೆಣಸು, ಕಿತ್ತಳೆಗಳು, ಹಾಗೂ ದ್ರಾಕ್ಷಿ ಹಣ್ಣುಗಳು ಉತ್ತಮ ಆಯ್ಕೆಗಳಾಗಿವೆ.

ಲೈಂಗಿಕ ನೈರ್ಮಲ್ಯವನ್ನ ಉತ್ತಮ ರೀತಿಯಲ್ಲಿ ಕಾಪಿಟ್ಟುಕೊಳ್ಳುವುದು ತೀರಾ ಅಗತ್ಯ

ಲೈಂಗಿಕ ನೈರ್ಮಲ್ಯವನ್ನ ಉತ್ತಮ ರೀತಿಯಲ್ಲಿ ಕಾಪಿಟ್ಟುಕೊಳ್ಳುವುದು ತೀರಾ ಅಗತ್ಯ

ನಿಮ್ಮ ಮೂತ್ರನಾಳವನ್ನು ಬ್ಯಾಕ್ಟೀರಿಯಾವು ಪ್ರವೇಶಿಸಲು ಅನುವು ಮಾಡಿಕೊಡುವ ಇನ್ನೊಂದು ಕ್ರಿಯೆಯೆಂದರೆ ಅದು ಲೈಂಗಿಕ ಚಟುವಟಿಕೆ. ಹಾಗಾಗಿ, ಒಂದೊಮ್ಮೆ ನೀವು ಯು.ಟಿ.ಐ. ನಿಂದ ಬಳಲುತ್ತಿದ್ದಲ್ಲಿ, ಪ್ರವೇಶಾತ್ಮಕ ಲೈಂಗಿಕ ಚಟುವಟಿಕೆಯಿಂದ ನೀವು ದೂರವಿರುವುದು ಅತ್ಯುತ್ತಮ. ಆದಾಗ್ಯೂ, ಹಾಗೊಂದು ವೇಳೆ ಲೈಂಗಿಕ ಸಂಪರ್ಕವನ್ನು ನಡೆಸಲೇಬೇಕಾಗಿದ್ದಲ್ಲಿ, ಆರೋಗ್ಯಕರವಾದ ಲೈಂಗಿಕ ನೈರ್ಮಲ್ಯ ಹವ್ಯಾಸಗಳನ್ನು ನೀವು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಿ.

ಕಾಂಡೋಮ್ ನ ಬಳಕೆ, ಲೈಂಗಿಕ ಸಂಪರ್ಕಕ್ಕೆ ಮೊದಲು ಹಾಗೂ ಅನಂತರ, ಮೂತ್ರವಿಸರ್ಜನೆಯ ನಂತರ ಕೂಡಲೇ ನಿಮ್ಮ ಜನನಾಂಗವನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು, ಇವೇ ಮೊದಲಾದ ಕೆಲವು ಅಭ್ಯಾಸಗಳನ್ನು ನೀವು ಪಾಲಿಸಬೇಕು. ಇಂತಹ ಹವ್ಯಾಸಗಳು ಯು.ಟಿ.ಐ. ನ ಕಾರಣದಿಂದ ನಿಮ್ಮ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸದಂತೆ ನೋಡಿಕೊಳ್ಳುತ್ತವೆ. ಜೊತೆಗೆ, ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವಾಗ, ಗುದ ಮೈಥುನದಿಂದ ಯೋನಿ ಮೈಥುನಕ್ಕೆ ಬದಲಾಯಿಸುವ ಸಂದರ್ಭದಲ್ಲಿ ಕಾಂಡೋಮ್ ಗಳನ್ನು ಬದಲಾಯಿಸಿಕೊಳ್ಳುವುದು ಹಿತಕರ.

ಆರೋಗ್ಯಕರವಾದ ಸ್ವಚ್ಛತಾ ವಿಧಾನಗಳನ್ನು ರೂಢಿಸಿಕೊಳ್ಳಿರಿ

ಆರೋಗ್ಯಕರವಾದ ಸ್ವಚ್ಛತಾ ವಿಧಾನಗಳನ್ನು ರೂಢಿಸಿಕೊಳ್ಳಿರಿ

ಮೂತ್ರ ಅಥವಾ ಮಲವಿಸರ್ಜನೆಯಾದ ಬಳಿಕ, ನಿಮ್ಮ ಗುಪ್ತಾಂಗಗಳನ್ನು ಮುಂಭಾಗದಿಂದ ಆರಂಭಿಸಿ ಹಿಂಭಾಗದವರೆಗೂ ಯಾವಾಗಲೂ ಚೆನ್ನಾಗಿ ತೊಳೆದುಕೊಳ್ಳಿರಿ. ಹೀಗೆ ಮಾಡಿದಲ್ಲಿ, ನಿಮ್ಮ ಗುದದ್ವಾರದಲ್ಲಿರುವ ಬ್ಯಾಕ್ಟೀರಿಯಾವು ಮೂತ್ರವಿಸರ್ಜನಾ ನಾಳದತ್ತ ಚಲಿಸುವುದನ್ನು ತಡೆದಂತಾಗುತ್ತದೆ. ಜೊತೆಗೆ, ನಿಮ್ಮ ಶಿಶ್ನ/ಯೋನಿ ಹಾಗೂ ಗುದಭಾಗಗಳ ಸ್ವಚ್ಛತೆಗಾಗಿ ಪ್ರತ್ಯೇಕ-ಪ್ರತ್ಯೇಕವಾದ ಸ್ವಚ್ಛತಾ ಸಾಧನಗಳನ್ನ ಬಳಸಿಕೊಳ್ಳುವುದು ಅತ್ಯುತ್ತಮ ವಿಚಾರ.

ಪ್ರೊಬಯಾಟಿಕ್ ಗಳ ಸೇವನೆಯನ್ನು ಹೆಚ್ಚಿಸಿಕೊಳ್ಳಿರಿ

ಪ್ರೊಬಯಾಟಿಕ್ ಗಳ ಸೇವನೆಯನ್ನು ಹೆಚ್ಚಿಸಿಕೊಳ್ಳಿರಿ

ಪ್ರೊಬಯಾಟಿಕ್ ಗಳು ಎಂದು ಕರೆಯಲ್ಪಡುವ ಒಳ್ಳೆಯ ಬ್ಯಾಕ್ಟೀರಿಯಾಗಳ ಅತ್ಯುತ್ತಮ ಆಗರಗಳೆಂದರೆ ಅವು ಮೊಸರು, ಸಾಯರ್ಕ್ರಾಟ್ (ಕೋಸುಗೆಡ್ಡೆಯ ತಿನಿಸು), ಹಾಗೂ ಕೆಫಿರ್ (ಕಡಿಮೆ ಆಲ್ಕೋಹಾಲ್ ನ ಅಂಶವನ್ನೊಳಗೊಂಡಿರುವ ಮದ್ಯ) ಗಳು. ಸಂಶೋಧನೆಯು ತೋರಿಸಿಕೊಟ್ಟಿರುವ ಪ್ರಕಾರ, ಒಂದೊಮ್ಮೆ ನೀವು ಮೂತ್ರನಾಳಗಳ ಸೋಂಕಿನಿಂದ ಬಳಲುತ್ತಿದ್ದಲ್ಲಿ, ಅವು ನಿಮ್ಮ ಪರಿಸ್ಥಿತಿಯನ್ನು ಸುಧಾರಿಸುತ್ತವೆ ಹಾಗೂ ಸೋಂಕಿಗೀಡಾಗುವ ಅಪಾಯವನ್ನೂ ತಗ್ಗಿಸುತ್ತವೆ. ಮೂತ್ರದಲ್ಲಿ ಬ್ಯಾಕ್ಟೀರಿಯಾ ಪ್ರತಿಬಂಧಕವೊಂದನ್ನು (ಆ್ಯಂಟಿ-ಬ್ಯಾಕ್ಟೀರಿಯಲ್) ಉತ್ಪಾದಿಸುವ ಹಾಗೂ ಮೂತ್ರದ ಪಿ.ಹೆಚ್. (pH) ಮಟ್ಟವನ್ನು ತಗ್ಗಿಸುವ ಕೆಲಸಗಳನ್ನು ಪ್ರೋಬಯಾಟಿಕ್ ಗಳು ಮಾಡುತ್ತವೆ.

ಯು.ಟಿ.ಐ. ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಬದಕಲು ಕಷ್ಟವಾಗುವಂತಹ ಪರಿಸ್ಥಿತಿಯನ್ನು ಆ ಮೂಲಕ ಪ್ರೋಬಯಾಟಿಕ್ ಗಳು ಉಂಟು ಮಾಡುತ್ತವೆ. ಶಿಶುಗಳಿಗೆ ಸಂಬಂಧಿಸಿದ ಇರಾನ್ ದೇಶದ ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಅಧ್ಯಯನದ ಪ್ರಕಾರ, ಕೇವಲ ಆ್ಯಂಟಿ-ಬಯಾಟಿಕ್ ಗಳನ್ನಷ್ಟೇ ತೆಗೆದುಕೊಳ್ಳುವುದಕ್ಕಿಂತಲೂ, ಆ್ಯಂಟಿ-ಬಯಾಟಿಕ್ ಗಳೊಂದಿಗೆ ಪ್ರೋಬಯಾಟಿಕ್ ಗಳನ್ನೂ ಸೇವಿಸುವುದು ಯು.ಟಿ.ಐ. ಮರಳಿಬಾರದಂತೆ ತಡೆಗಟ್ಟುವಿಕೆಯಲ್ಲಿ ಹೆಚ್ಚು ಪರಿಣಾಮಕಾರಿಯಾದದ್ದಾಗಿದೆ.

English summary

Home Remedies for Mild Urinary Tract Infection in Kannada

Home remedies for mild urinary tract Infection, read on....
X
Desktop Bottom Promotion