Latest Updates
-
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ?
ಜಿಮ್ ವರ್ಕೌಟ್ ಮಾಡುವಾಗ ಹೃದಯಾಘಾತ: ಜಿಮ್‌ನಲ್ಲಿ ಈ ತಪ್ಪುಗಳನ್ನು ಮಾಡಲೇಬೇಡಿ
ಹಿಂದಿಯ ಖ್ಯಾತ ಟೆಲಿವಿಷನ್ ನಟ ಸಿದ್ದಾಂತ್ ಸೂರ್ಯವಂಶಿ ವಯಸ್ಸು 46, ನೋಡಲು ತುಂಬಾ ಕಟ್ಟುಮಸ್ತು ದೇಹ ಜಿಮ್‌ನಲ್ಲಿ ವರ್ಕೌಟ್ ಮಾಡಿದ ಬಳಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇತ್ತೀಚೆಗೆ ಖ್ಯಾತ ಕಾಮಿಡಿಯನ್ ರಾಜು ಶ್ರೀವತ್ಸವ್ ಕೂಡ ವರ್ಕೌಟ್ ಮಾಡುವಾಗಲೇ ಎದೆನೋವು ಕಾಣಿಸಿಕೊಂಡಿತ್ತು, ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿಲ್ಲ. ವರ್ಷದ ಹಿಂದೆ ಕನ್ನಡಿಗರ ಕಣ್ಮಣಿಯಾಗಿರುವ ಅಪ್ಪುವಿಗೂ ಕೂಡ ವರ್ಕೌಟ್ ಬಳಿಕ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದಾಗಿ ಸಾವನ್ನಪ್ಪಿದರು.

ಜಿಮ್ ವರ್ಕೌಟ್ ಮಾಡುವಾಗ ಎದೆನೋವು ಕಾಣಿಸಿಕೊಂಡು ಸಾವನ್ನಪ್ಪಿರು ಸುದ್ದಿಯನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ದೈಹಿಕವಾಗಿ ಫಿಟ್ ಆಗಿರಬೇಕು, ಆಗ ಆರೋಗ್ಯ ಹೆಚ್ಚುವುದು, ಆದರೆ ದೈಹಿಕ ಫಿಟ್ನೆಸ್‌ಗಾಗಿ ಮಾಡುವ ಜಿಮ್ ವರ್ಕೌಟ್ ಬಳಿಕ ಕೆಲವರಿಗೆ ಎದೆನೋವು ಕಾಣಿಸಿಕೊಳ್ಳಲು ಕಾರಣವೇನು?
ಜಿಮ್ ವರ್ಕೌಟ್ ಆರೋಗ್ಯಕ್ಕೆ ಒಳ್ಳೆಯದು, ಆದರೆ ಅತಿಯಾದರೆ ಯಾವುದೂ ಒಳ್ಳೆಯದಲ್ಲ ವರ್ಕೌಟ್ ಕೂಡ, ತಜ್ಞರ ಪ್ರಕಾರ ವರ್ಕೌಟ್ ಮಾಡುವರು ಮಾಡುವ ಕೆಲವೊಂದು ತಪ್ಪಿನಿಂದಾಗಿ ಎದೆನೋವು, ಹೃದಯಾಘಾತದ ಅಪಾಯ ಉಂಟಾಗಬಹುದು.
ಆದ್ದರಿಂದ ಜಿಮ್ ಮಾಡುವಾಗ ಈ ತಪ್ಪುಗಳಾಗದಂತೆ ಎಚ್ಚರವಹಿಸಿ:

ವಯಸ್ಸು 40 ದಾಟಿದೆಯೇ, ಹೃದ್ರೋಗ ತಜ್ಞರ ಸಲಹೆ ಪಡೆಯಿರಿ
ವಯಸ್ಸು ಅಧಿಕವಾಗುತ್ತಿದ್ದಂತೆ ನಮ್ಮ ದೇಹದಲ್ಲಿ ವಯೋಸಹಜ ನೈಸರ್ಗಿಕ ಬದಲಾವಣೆಗಳಾಗುವುದು, ಅದು ಪ್ರಕೃತಿ ನಿಯಮ ಕೂಡ, ಹಾಗಾಗಿ ಯಸ್ಸು 440 ದಾಟಿದ ಮೇಲೆ ಹೃದ್ರೋಗ ತಜ್ಞರ ಭೇಟಿಯಾಗಿ ತಪಾಸಣೆ ಮಾಡಿಸಿ, ಅವರು ನಿಮಗೆ ಸೂಕ್ತ ಸಲಹೆ ನೀಡುತ್ತಾರೆ.

ಅತಿಯಾದ ವ್ಯಾಯಾಮ ಮಾಡಬೇಡಿ
ಯಾವಾಗ ವ್ಯಾಯಾಮ ಮಾಡುವುದನ್ನು ನಿಲ್ಲಿಸಬೇಕು ಎಂಬುವುದು ಗೊತ್ತಿರಬೇಕು. ಕೆಲವರು ಜಿಮ್‌ನಲ್ಲಿ ಗಂಟೆ-ಗಟ್ಟಲೆ ಕಳೆಯುತ್ತಾರೆ ಅದು ತಪ್ಪು. ದಿನದಲ್ಲಿ 30 ನಿಮಿಷ ವ್ಯಾಯಾಮ ಮಾಡಿ, ಅದಕ್ಕಿಂತ ಹೆಚ್ಚು ಮಾಡುವುದಾದರೆ ಪರಿಣಿತರಿಂದ ಸಲಹೆ ಪಡೆದು ಮಾಡಿ.
ವರ್ಕೌಟ್ ಮಾಡುವಾಗ ಎದೆನೋವು ಬಂದರೆ, ಉಸಿರಾಟಕ್ಕೆ ಕಷ್ಟವಾದರೆ, ತಲೆಸುತ್ತು ಈ ರೀತಿಯೆಲ್ಲಾ ಆದರೆ ಕೂಡಲೆ ವರ್ಕೌಟ್ ನಿಲ್ಲಿಸಿ, ಸಮೀಪದ ಆಸ್ಪತ್ರೆಗೆ ಹೋಗಿ.

ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ
ಕೆಲಸ ಮಾಡಿ ಮೈ ಬೆವರಬೇಕು, ದೈಹಿಕ ಕೆಲಸ ಮಾಡದೇ ಇರುವವರು ವರ್ಕೌಟ್ ಮಾಡಬೇಕು. ದೈಹಿಕ ಕೆಲಸ ಅಥವಾ ವರ್ಕೌಟ್ ಮಾಡುವಾಗ ಬೆವರು ಬಂದು ದೇಹದಲ್ಲಿರುವ ನೀರಿನಂಶ ಕಡಿಮೆಯಾಗುತ್ತೆ, ಆದ್ದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಿ.

ತಿಂದ ತಕ್ಷಣ ಜಿಮ್‌ಗೆ ಹೋಗಬೇಡಿ
ನೀವು ಯೋಗ ಅಥವಾ ವರ್ಕೌಟ್ ಮಾಡುವ ಎರಡು ಗಂಟೆ ಮೊದಲು ತಿನ್ನಿ. ತಿಂದ ತಕ್ಷಣ ವರ್ಕೌಟ್ ಮಾಡಬೇಡಿ. ಇದಲ್ಲದೆ ಜಿಮ್ ಅಥವಾ ಇತರ ವರ್ಕೌಟ್ ಮಾಡುವ ಮುನ್ನ ವಾರ್ಮ್‌ಅಪ್ ಮಾಡಬೇಕು, ಸೀದಾ ಹೋಗಿ ಟ್ರೆಡ್‌ಮಿಲ್‌ನಲ್ಲಿ ವರ್ಕೌಟ್ ಮಾಡಬೇಡಿ.

ಸ್ಟಿರಾಯ್ಡ್ ತೆಗೆದುಕೊಳ್ಳಬಾರದು?
ಕೆಲವರು ಬಾಡಿ ಬಿಲ್ಡ್‌ಗಾಗಿ ಸ್ಟಿರಾಯ್ಡ್ ತೆಗೆದುಕೊಳ್ಳುತ್ತಾರೆ. ಆದರೆ ಸ್ಟಿರಾಯ್ಡ್ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುವುದು, ಇದರಿಂದ ದೇಹದ ಅಂಗಾಂಗಗಳಿಗೆ ಹಾನಿಯುಂಟಾಗುವುದು, ಆದ್ದರಿಂದ ಸ್ಟಿರಾಯ್ಡ್ ತೆಗೆದುಕೊಳ್ಳಬೇಡಿ.

ಯಾರು ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳಬೇಕು?
ಹೈಪರ್‌ಟೆನ್ಷನ್, ಅತ್ಯಧಿಕ ಕೊಲೆಸ್ಟ್ರಾಲ್, ಮಧುಮೇಹ, ಹೃದ್ರೋಗಕ್ಕೆ ಸಂಬಂಧ ಪಟ್ಟ ಸಮಸ್ಯೆ ಇರುವವರು ತುಂಬಾನೇ ಜಾಗ್ರತೆವಹಿಸಬೇಕು, ಕೆಲವೊಂದು ವ್ಯಾಯಾಮ ಮಾಡುವಂತಿಲ್ಲ, ಆದ್ದರಿಂದ ಪರಿಣಿತರ ಬಳಿ ಸಲಹೆ ಪಡೆದು ವರ್ಕೌಟ್ ಮಾಡಿ.



Click it and Unblock the Notifications
