For Quick Alerts
ALLOW NOTIFICATIONS  
For Daily Alerts

ಹೀಲ್ಡ್ ಚಪ್ಪಲಿ ಧರಿಸುವವರಿಗೆ ಕಾಡುವ ಸಮಸ್ಯೆಗಳಿವು

|

ಹೈ ಹೀಲ್‌ ಧರಿಸಿ ಸ್ಟೈಲಾಗಿ ನಡೆದು ಬರುತ್ತಿರುವ ಮಹಿಳೆಯರನ್ನು ನೀಡುವಾಗ ಅಂಥ ಚಪ್ಪಲಿ ಧರಿಸದವರಿಗೆ, ಪುರುಷರಿಗೆ ಇಂಥ ಚಪ್ಪಲಿ ಧರಿಸಿ ಇವರು ಇಷ್ಟು ಸಲೀಸಾಗಿ ಹೇಗೆ ನಡೆಯುತ್ತಾರೆ ಎಂದು ಅನಿಸದೆ ಇರಲ್ಲ. ಕೆಲವರಂತೂ ಪ್ರತಿದಿನ ಹೀಲ್ಡ್‌ ಚಪ್ಪಲಿ ಧರಿಸುತ್ತಾರೆ. ಸ್ವಲ್ಪ ಕುಳ್ಳಗೆ ಇರುವವರು ಎತ್ತರ ಕಾಣಲಿ ಎಂದು ಈ ರೀತಿಯ ಚಪ್ಪಲಿ ಹೆಚ್ಚಾಗಿ ಧರಿಸುತ್ತಾರೆ.

Heel Slipper affects on health

ಆಫೀಸ್‌ ಡ್ರೆಸ್ಸಿಂಗ್‌ನಲ್ಲಿ, ಪಾರ್ಟಿ ಡ್ರೆಸ್ಸಿಂಗ್‌ನಲ್ಲಿ ಹೀಲ್ಡ್‌ ಚಪ್ಪಲಿ ಹಾಕಿ ನಡೆಯುತ್ತಿದ್ದರೆ ಅವರ ನಡಿಗೆ ನೋಡುವುದೇ ಚೆಂದ.. ಇನ್ನು ಕೆಲವರಂತೂ ತುದಿ ತುಂಬಾ ಚೂಪಾಗಿರುವ ಚಪ್ಪಲಿ ಅಂದ್ರೆ ಹೈ ಹೀಲ್ಡ್‌ ಚಪ್ಪಲಿ ಧರಿಸಿ ಡ್ಯಾನ್ಸ್‌ ಕೂಡ ಮಾಡುತ್ತಾರೆ, ಅಷ್ಟರ ಮಟ್ಟಿಗೆ ಆ ಪ್ಪಲಿ ಬಳಸುವುದು ಅವರಿಗೆ ಕರಗತವಾಗಿರುತ್ತದೆ.

ಹೈ ಹೀಲ್ಡ್‌ ಚಪ್ಪಲಿ ಧರಿಸುವುದರಿಂದ ನಾವು ಸ್ವಲ್ಪ ಎತ್ತರ ಕಾಣಬಹುದು, ಜೊತೆಗೆ ನಮಗೆ ಕಂಫರ್ಟ್‌ ಆಗಿಯೂ ಇರಬಹುದು, ಆದರೆ ಇದನ್ನು ಬಳಸುವುದರಿಂದ ಆರೋಗ್ಯಕ್ಕೆ ಯಾವೆಲ್ಲಾ ರೀತಿಯ ಅಪಾಯಗಳಿವೆ ಗೊತ್ತಾ? ಬನ್ನಿ ಆ ಕುರಿತು ತಿಳಿಯೋಣ...

 ಹಿಂಬದಿ ಹಾಗೂ ಬೆನ್ನು ಮೂಳೆಗೆ ಹಾನಿಯುಂಟಾಗುತ್ತದೆ

ಹಿಂಬದಿ ಹಾಗೂ ಬೆನ್ನು ಮೂಳೆಗೆ ಹಾನಿಯುಂಟಾಗುತ್ತದೆ

ಹೈ ಹೀಲ್ಡ್ ಧರಿಸಿದಾಗ ಎದೆ ಮುಂದೆ ಭಾಗಕ್ಕೆ ಬರುತ್ತದೆ, ಬೆನ್ನು ಹಾಗೂ ಹಿಂಬದಿ ಕೂಡ ಮುಂದೆಕ್ಕೆಭಾಗುವುದು, ಇದರಿಂದ ಪಾದಗಳ ಮೇಲೆ ಹೆಚ್ಚಿನ ಒತ್ತಡ ಬಿರುತ್ತದೆ. ಬೆನ್ನು ಮೂಳೆಯ ಮೇಲೆ ಒತ್ತಡ ಬೀರುವುದು. ಇದರಿಂದ ಪಾದಗಳಲ್ಲಿ ನೋವು, ಬೆನ್ನು ಮೂಳೆಯಲ್ಲಿ ನೋವು ಕಂಡು ಬರುವುದು.

 ಪಾದಗಳಲ್ಲಿ ಉರಿಯೂತದ ಸಮಸ್ಯೆ ಉಂಟಾಗುವುದು

ಪಾದಗಳಲ್ಲಿ ಉರಿಯೂತದ ಸಮಸ್ಯೆ ಉಂಟಾಗುವುದು

ಹೈ ಹೀಲ್ ಧರಿಸಿದಾಗ ದೇಹದ ಭಾರ ಕಾಲಿನ ಮುಂಬದಿ ಮೇಲೆ ಬೀಳುತ್ತದೆ. ಇದರಿಂದ ಪಾದಗಳಲ್ಲಿ ಉರಿಯೂತದ ಸಮಸ್ಯೆ ಉಂಟಾಗುವುದು. ಕೆಲವರಲ್ಲಿ ಈ ಸಮಸ್ಯೆ ಗಂಭೀರವಾಗಬಹುದು.

 ಕಾಲಿನ ಹೆಬ್ಬರಳಿಗೆ ಹಾನಿಯುಂಟಾಗುವುದು

ಕಾಲಿನ ಹೆಬ್ಬರಳಿಗೆ ಹಾನಿಯುಂಟಾಗುವುದು

ಹೀಲ್ಡ್‌ ಧರಿಸಿದಾಗ ಹೆಬ್ಬರಳಿನ ಉಗುರು ಹೆಬ್ಬರಳಿನ ಮೇಲೆ ಹೆಚ್ಚು ಒತ್ತಡ ಹಾಕುವುದು, ಇದರಿಂದ ಉಗುರು ಹೆಬ್ಬರಳಿನ ಒಳಗೆ ಬೆಳೆಯಲಾರಂಭಿಸುವುದು, ಅಂದ್ರೆ ಉಗುರು ಸ್ವಲ್ಪ ಒಳ ಹೋಗಿ ಅದರ ಸುತ್ತ ಮಾಂಸ ಹೆಚ್ಚು ಬೆಳೆಯುವುದು. ಇದರಿಂದ ಸೋಂಕು ಉಂಟಾಗಿ ಸೆಪ್ಟಿಕ್‌ ಕೂಡ ಆಗಬಹುದು.

ಸಂಧಿವಾತದ ಸಮಸ್ಯೆ ಉಂಟಾಗುವುದು

ಸಂಧಿವಾತದ ಸಮಸ್ಯೆ ಉಂಟಾಗುವುದು

ಹೈ ಹೀಲ್ಡ್‌ ಧರಿಸುವವರಲ್ಲಿ ಸಂಧಿವಾತದ ಸಮಸ್ಯೆ ಕಂಡು ಬರುವುದು, ಅಂದ್ರೆ ಪಾದಗಳಲ್ಲಿ, ಮಂಡಿಗಳಲ್ಲಿ ನೋವು ಉಂಟಾಗುವುದು, ಇದರ ಜೊತೆಗೆ ಬೆನ್ನು ನೋವು ಕೂಡ ಇರುತ್ತದೆ. ಪಾದ, ಮಂಡಿ, ಬೆನ್ನು ಮೂಳೆಗೆ ಹಾನಿಯುಂಟಾದರೆ ಅದನ್ನು ಸರಿಪಡಿಸುವುದು ಕಷ್ಟವಾಗಬಹುದು, ಇದರಿಂದಾಗಿ ಇನ್ನುಳಿದ ಸಮಯ ನೋವು ಅನುಭವಿಸುವಂತಾಗಬಹುದು.

ಸೊಂಟ, ಹಿಂಬದಿಯಲ್ಲಿ ನೋವು ಉಂಟಾಗುವುದು

ಸೊಂಟ, ಹಿಂಬದಿಯಲ್ಲಿ ನೋವು ಉಂಟಾಗುವುದು

ಹೈ ಹೀಲ್ಡ್‌ ಧರಿಸುವುದರಿಂದ ಕಂಡು ಬರುವ ಮತ್ತೊಂದು ಸಮಸ್ಯೆಯೆಂದರೆ ಸೊಂಟ ಹಾಗೂ ಹಿಂಬದಿಯಲ್ಲಿ ನೋವು. ಹಿಂಬದಿಯ ಸ್ನಾಯುಗಳಲ್ಲಿ ಒತ್ತಡ ಉಂಟು ಮಾಡುವುದರಿಂದ ಹಿಂಬದಿಗೆ ಹಾನಿಯುಂಟಾಗುವುದು.

 ಹೈ ಹೀಲ್ಡ್‌ ಧರಿಸುವವರಿಗೆ ಆರೋಗ್ಯ ಸಮಸ್ಯೆ ತಡೆಗಟ್ಟಲು ಕೆಲ ಟಿಪ್ಸ್

ಹೈ ಹೀಲ್ಡ್‌ ಧರಿಸುವವರಿಗೆ ಆರೋಗ್ಯ ಸಮಸ್ಯೆ ತಡೆಗಟ್ಟಲು ಕೆಲ ಟಿಪ್ಸ್

ಹೈ ಹೀಲ್ಡ್‌ ಧರಿಸುವುದರಿಂದ ಅಡ್ಡಪರಿಣಾಮಗಳು ಇದ್ದೇ ಇರುತ್ತದೆ, ಆದರೆ ಈ ರೀತಿ ಮಾಡಿದರೆ ಆರೋಗ್ಯ ಸಮಸ್ಯೆ ಹೆಚ್ಚಾಗುವುದನ್ನು ತಡೆಗಟ್ಟಬಹುದು.

* ತುಂಬಾ ಹೊತ್ತು ಹೈ ಹೀಲ್ಡ್‌ ಧರಿಸಬೇಡಿ, ಕೂರುವಾಗ ಬಿಚ್ಚಿಡಿ.

* ಅವುಗಳನ್ನು ಧರಿಸುವ ಮುನ್ನ ಹಾಗೂ ಬಿಚ್ಚಿದ ನಂತರ ಪಾದಗಳನ್ನು ಸ್ಟ್ರೆಚ್ ಮಾಡಿ.

* 2 ಇಂಚಿಗಿಂತ ಎತ್ತರದ ಹೀಲ್ಡ್ ಧರಿಸುವುದನ್ನು ಕಡಿಮೆ ಮಾಡಿ.

* ತುಂಬಾ ಪಾಯಿಂಟ್ ಇರುವ ಹೀಲ್ಡ್‌ ಬಳಸಬೇಡಿ.

* ಒಳಗಡೆ ಲೆದರ್‌ ಇರುವಂಥ ಚಪ್ಪಲಿ ಬಳಸಿ, ಇದರಿಂದ ನಡೆಯುವಾಗ ಸ್ಲಿಪ್ ಆಗುವುದಿಲ್ಲ.

* ಫ್ಲ್ಯಾಟ್ ಚಪ್ಪಲಿ, ಶೂಗಳನ್ನು ಬಳಸಿ.

English summary

Health Problem you could get by wearing the Heel Slipper

Health Problem you could get by wearing the Heel Slipper, read on...
Story first published: Tuesday, October 5, 2021, 19:29 [IST]
X
Desktop Bottom Promotion