For Quick Alerts
ALLOW NOTIFICATIONS  
For Daily Alerts

ಚಳಿಗಾಲದ ಆಹಾರ: ಅವರೆಕಾಯಿಯಲ್ಲಿದೆ ಈ ಔಷಧೀಯ ಗುಣಗಳು

|

ಚಳಿಗಾಲದಲ್ಲಿ ಮಾರುಕಟ್ಟೆಯ ದರ್ಬಾರ್ ಕಿಂಗ್ ಆಗಿರುವ ಅವರೆಕಾಯಿ ತಿಂದ್ರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತೆ?

Winter Season Food

ಅವರೆಕಾಯಿ ಸಾರು, ಅವರೆಕಾಯಿ ಉಪ್ಪಿಟ್ಟು, ಅವರೆಕಾಯಿ ಬಜ್ಜಿ ಅಂತ ತರಾವರಿ ಅಡುಗೆ ಮಾಡಿ ಸವಿಯುವಾಗ ಬಾಯಿಗೆ ರುಚಿ ಮಾತ್ರವಲ್ಲ ಈ ಆರೋಗ್ಯಕರ ಪ್ರಯೋಜನಗಳು ದೊರೆಯುವುದು

ಕಬ್ಬಣದಂಶದ ಆಗರ
ನಿಮಗೆ ರಕ್ತಹೀನತೆ, ಕಬ್ಬಿಣದಂಶದ ಕೊರತೆಯಿದ್ದರೆ ಹಿಮೋಗ್ಲೋಬಿನ್ ಹೆಚ್ಚಿಸಲು ಇದು ತುಂಬಾನೇ ಸಹಕಾರಿ. ಇದರಲ್ಲಿ ಕಬ್ಬಣದಂಶ ಅಧಿಕವಿರುವುದರಿಂದ ನಿಮ್ಮ ರಕ್ತಕಣಗಳು ಹೆಚ್ಚಾಗುವುದು. ಇದರಿಂದಾಗಿ ಸುಸ್ತು, ಇತರ ದೈಹಿಕ ತೊಂದರೆಗಳು ದೂರಾಗುವುದು.

ದೇಹಕ್ಕೆ ಶಕ್ತಿ ತುಂಬುವುದು

ಅವರೆಕಾಯಿ ತಿಂದರೆ ದೇಹಕ್ಕೆ ಶಕ್ತಿ ದೊರೆಯುವುದು, ಇದರಿಂದ ಕಣ್ಣಿನ ಆರೋಗ್ಯ ಉತ್ತಮವಾಗುವುದು. ಕಣ್ಣಿನ ಪೊರೆ ಬಾರದಂತೆ ತಡೆಗಟ್ಟುತ್ತದೆ.

ಚಯಪಚಯ ಕ್ರಿಯೆ ಉತ್ತಮವಾಗುವುದು
ಇದರಲ್ಲಿ ನಾರಿನಂಶ ಇರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು, ಕೊಲೆಸ್ಟ್ರಾಲ್ ಕಡಿಮೆ ಇರುವುದರಿಂದ ಹೃದಯದ ಆರೊಗ್ಯಕ್ಕೆ ಒಳ್ಖೆಯದು ಹಾಗೂ ಪಾರ್ಶ್ವವಾಯು ಅಪಾಯವನ್ನುತಡೆಗಟ್ಟುತ್ತದೆ.

ಮಧುಮೇಹಿಗಳಿಗೆ ಒಳ್ಳೆಯದು

ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ರಕ್ತದಲ್ಲಿನ ಸಕ್ಕರೆಯಂಶ ನಿಯಂತ್ರಿಸಲು ಸಹಾಯಕವಾಗಿದೆ. ಅಷ್ಟೇ ಅಲ್ಲದೆ , ಬೀನ್ಸ್, ಜೋಳ ಈ ರೀತಿಯ ಹೆಚ್ಚು ಭಾರವಾದ ದ್ವಿದಳ ಧಾನ್ಯಗಳಿಗೆ ಹೋಲಿಸಿದರೆ ಬಟಾಣಿ ಕಡಿಮೆ ಕೊಬ್ಬನ್ನು ಹೊಂದಿದೆ. ಅವರೆಕಾಳಿನಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

English summary

Health Benefits of Hyacinth Beans or Avarekai in Kannada

Winter Season Food :Here are health benefits of avarekai,
Story first published: Thursday, December 15, 2022, 23:31 [IST]
X
Desktop Bottom Promotion