For Quick Alerts
ALLOW NOTIFICATIONS  
For Daily Alerts

ಮುಟ್ಟಿನ ನೋವಿಗೆ ಈ ಆಹಾರಗಳ ಸಂಯೋಜನೆ ಉತ್ತಮ ಮನೆಮದ್ದು

|

ಬಹುತೇಕ ಹೆಣ್ಣುಮಕ್ಕಳು ತಿಂಗಳಲ್ಲಿ ಋತುಚಕ್ರದ ಅವಧಿಯ ಮೂರು ದಿನ ನಮ್ಮದಲ್ಲ ಎಂದು ಭಾವಿಸಿ ನೋವು ಅನುಭವಿಸುತ್ತಾರೆ. ಎಷ್ಟೋ ಹೆಣ್ಣುಮಕ್ಕಳು ನೋವನ್ನು ತಾಳಲಾರದೆ ಈ ದಿನ ಕೆಲಸ, ಶಾಲೆ-ಕಾಲೇಜು ಎಲ್ಲಕ್ಕು ರಜೆ ಹಾಕಿ ಸಂಪೂರ್ಣ ವಿಶ್ರಾಂತಿ ಮಾಡುವವರು ಇದ್ದಾರೆ.

ಇದಕ್ಕೆ ಕಾರಣದ ಗರ್ಭಾಶಯದ ಸ್ನಾಯುಗಳು ಮುಟ್ಟಿನ ಅವಧಿಯಲ್ಲಿ ಸಂಕುಚಿತ ಮತ್ತು ವಿಕಸನಗೊಳ್ಳುತ್ತದೆ. ಅದು ನಿರ್ಮಿಸಿದ ಒಳಪದರವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ರೀತಿಯ ಸ್ನಾಯುಗಳ ಸೆಳೆತವು, ವಾಕರಿಕೆ, ವಾಂತಿ, ತಲೆನೋವು ಮತ್ತು ಅತಿಸಾರವನ್ನು ಉಂಟುಮಾಡುತ್ತದೆ.

ಋತುಚಕ್ರದ ಅವಧಿಯಲ್ಲಿ ನೋವಿನ ವಿರುದ್ಧ ಹೋರಾಡಲು ಸಹಾಯ ಮಾಡುವ ಕೆಲವು ಆಹಾರ ಸಂಯೋಜನೆಗಳನ್ನು ಆಹಾರ ತಜ್ಞರು ಸೂಚಿಸುತ್ತಾರೆ. ಯಾವೆಲ್ಲಾ ಆಹಾರಗಳು ಮುಂದೆ ನೋಡೋಣ:

1. ಬಾದಾಮಿ ಮತ್ತು ಬಾಳೆಹಣ್ಣುಗಳು ಸ್ಮೂಥಿ

1. ಬಾದಾಮಿ ಮತ್ತು ಬಾಳೆಹಣ್ಣುಗಳು ಸ್ಮೂಥಿ

ಈ ಸ್ಮೂಥಿಯು ಮುಟ್ಟಿನ ಅವಧಿಯ ಸೆಳೆತಕ್ಕೆ ಉತ್ತಮವಾಗಿದೆ, ಅಲ್ಲದೆ ಇದು ಉತ್ತಮ ರುಚಿಯನ್ನು ಸಹ ನೀಡುತ್ತದೆ.

ಪಾಕವಿಧಾನ

ಹಣ್ಣಾದ ಬಾಳೆಹಣ್ಣು, 350 ಮಿಲಿ ಹಾಲು, ಎರಡು ಚಮಚ ಮೊಸರು, ಒಂದು ಚಮಚ ಬಾದಾಮಿ ಬೆಣ್ಣೆ, ಎರಡು ಚಮಚ ಅಗಸೆ ಬೀಜಗಳು ಮತ್ತು ಒಂದು ಪಿಂಚ್ ದಾಲ್ಚಿನ್ನಿ ಪುಡಿಯನ್ನು ಮಿಕ್ಸಿ ಮಾಡಿ ತಕ್ಷಣ ಕುಡಿಯಿರಿ. ಮುಟ್ಟಿನ ಸೆಳೆತವನ್ನು ನಿವಾರಿಸಲು ಇದನ್ನು ಪ್ರತಿದಿನ ಸೇವಿಸಿ.

2. ಈ ಸಂಯೋಜನೆಯು ನಿಮ್ಮ ಋತುಚಕ್ರದ ಸಮಯದಲ್ಲಿ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಏಕೆಂದರೆ.

2. ಈ ಸಂಯೋಜನೆಯು ನಿಮ್ಮ ಋತುಚಕ್ರದ ಸಮಯದಲ್ಲಿ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ ಏಕೆಂದರೆ.

- ಬಾದಾಮಿಯು ವಿಟಮಿನ್ ಇ ಅನ್ನು ಹೊಂದಿರುತ್ತದೆ, ಇದು ಸ್ನಾಯು ಸೆಳೆತಕ್ಕೆ ಸಹಾಯ ಮಾಡುತ್ತದೆ.

- ಬಾಳೆಹಣ್ಣಿನಲ್ಲಿ ಮೆಗ್ನೀಶಿಯಂ ಅಧಿಕವಾಗಿದೆ, ಇದು ಅವಧಿಯ ಸೆಳೆತ ಮತ್ತು ಒಟ್ಟಾರೆ ಸ್ನಾಯುವಿನ ವಿಶ್ರಾಂತಿಗೆ ಸಹಾಯ ಮಾಡುತ್ತದೆ.

- ರಕ್ತದ ಸಕ್ಕರೆಯ ಸ್ಥಿರೀಕರಣದ ಮೇಲೆ ಗುಣಮಟ್ಟದ ದಾಲ್ಚಿನ್ನಿಯ ಪ್ರಬಲ ಪರಿಣಾಮಗಳನ್ನು ಹೆಚ್ಚು ಸಂಶೋಧಿಸಲಾಗಿದೆ.

- ಅಗಸೆ ಬೀಜಗಳು ಹಾರ್ಮೋನ್ ಸಮತೋಲನದಲ್ಲಿ ಸಹಾಯ ಮಾಡುತ್ತದೆ ಮತ್ತು ದೇಹದಿಂದ ಹೆಚ್ಚುವರಿ ಈಸ್ಟ್ರೊಜೆನ್ ಅನ್ನು ತೆಗೆದುಹಾಕುತ್ತದೆ, ಇದು ನೋವಿನ ಸೆಳೆತಕ್ಕೆ ಸಂಬಂಧಿಸಿರಬಹುದು.

3 . ರಾಸ್ಪೆಬರಿ ಎಲೆ ಮತ್ತು ಶುಂಠಿ ಚಹಾ

3 . ರಾಸ್ಪೆಬರಿ ಎಲೆ ಮತ್ತು ಶುಂಠಿ ಚಹಾ

ಚಹಾದಲ್ಲಿನ ಉರಿಯೂತದ ಗುಣಲಕ್ಷಣಗಳು ಸ್ನಾಯು ಸೆಳೆತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇದು ಸೆಳೆತಕ್ಕೆ ಕಾರಣವಾಗಬಹುದು.

ಬೋಗುಣಿಯಲ್ಲಿ ಅರ್ಧದಷ್ಟು ನೀರಿನ್ನು ತುಂಬಿಸಿ ರಾಸ್ಪೆಬರಿ ಎಲೆ ಮತ್ತು ಶುಂಠಿ ಬೇಕಿದ್ದರೆ ಬೆಲ್ಲ ಸೇರಿಸಿ ನೀರನ್ನು ಕುದಿಸಿ. ಕಡಿಮೆ ಶಾಖದಲ್ಲಿ ಸುಮಾರು ಮೂರರಿಂದ ಐದು ನಿಮಿಷ ಬೇಯಿಸಿ. ತಣ್ಣಗಾದ ನಂತರ ಸೋಸಿ ಚಹಾ ಸೇವಿಸಿ.

4. ಈ ಸಂಯೋಜನೆಯು ಸಹಾಯ ಮಾಡುತ್ತದೆ ಏಕೆಂದರೆ:

4. ಈ ಸಂಯೋಜನೆಯು ಸಹಾಯ ಮಾಡುತ್ತದೆ ಏಕೆಂದರೆ:

- ರಾಸ್ಪ್ಬೆರಿ ಎಲೆಯು ಮಹಿಳೆಯರ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಮೂಲಿಕೆಯಾಗಿದೆ.

- ಶುಂಠಿಯು ಉರಿಯೂತದ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿದೆ, ಇದು ಉಬ್ಬುವುದು ಮತ್ತು ನೋವಿಗೆ ಸಹಾಯ ಮಾಡುತ್ತದೆ

English summary

Food combinations that help fighting period pain in kannada

Here we are discussing about Food combinations that help fighting period pain in kannada. Read more.
X
Desktop Bottom Promotion