ಸಿರಿಧಾನ್ಯಗಳನ್ನು ಆಹಾರದಲ್ಲಿ ಬಳಸುತ್ತಿದ್ದೀರಾ..? ಈ ಸಂಗತಿಗಳನ್ನು ಎಂದಿಗೂ ಮರೆಯದಿರಿ

ಇತ್ತೀಚೆಗೆ ಆರೋಗ್ಯದ ಬಗ್ಗೆ ಜನರಲ್ಲಿ ಕಳಕಳಿ ಹೆಚ್ಚಾಗುತ್ತಿದೆ. ಜಂಕ್ ಫುಡ್‌ಗಳನ್ನು ಬಿಟ್ಟು ಆರೋಗ್ಯಕರ ಆಹಾರದತ್ತ ಜನರು ವಾಲುತ್ತಿದ್ದಾರೆ. ಅದರಲ್ಲೂ ಇತ್ತೀಚೆಗೆ ಜನಪ್ರಿಯವಾದ ಆಹಾರವೆಂದರೆ ಸಿರಿಧಾನ್ಯಗಳು. ಕಳೆದ ದಶಕದಿಂದೇಚೆಗೆ ಸಿರಿಧಾನ್ಯಗಳ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮಧುಮೇಹವಿರುವವರು ಸಿರಿಧಾನ್ಯ ಸೇವಿಸಿದರೆ ಶುಗರ್‌ ಕಂಟ್ರೋನಲ್ಲಿಡಬಹುದು ಎನ್ನುತ್ತಾರೆ. ಯಾವುದೇ ಆಹಾರವಾಗಲಿ ಅದರಿಂದ ಎಷ್ಟು ಪ್ರಯೋಜನವಿರುತ್ತದೋ, ಸಮಸ್ಯೆಗಳೂ ಕೂಡಾ ಕಂಡುಬರುತ್ತದೆ. ಇದರಲ್ಲಿ ಸಿರಿಧಾನ್ಯವೂ ಹೊರತಾಗಿಲ್ಲ.

1. ಸಿರಿಧಾನ್ಯವೆಂದರೆ?

1. ಸಿರಿಧಾನ್ಯವೆಂದರೆ?

ಗೋಧಿ, ಅಕ್ಕಿಯನ್ನು ಹೊರತುಪಡಿಸಿ ರಾಗಿ, ಸಜ್ಜೆ, ನವಣೆ, ಬರಗು, ಅರ್ಕ, ಸಾಮೆ, ಅಕ್ಕಡಿ, ಕೊರಲೆ, ಜೋಳ ಇವನ್ನು ಸಿರಿಧಾನ್ಯ ಅಥವಾ ಕಿರುಧಾನ್ಯಗಳೆಂದೂ ಕರೆಯುತ್ತಾರೆ. ಇವುಗಳ ಸೇವನೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ. ಹೆಚ್ಚು ಪೌಷ್ಟಿಕಾಂಶ ಹೊಂದಿರುವ ಇದರಲ್ಲಿ ಫೈಬರ್‌ ಅಂದರೆ ನಾರಿನಂಶ ಹೆಚ್ಚಾಗಿರುತ್ತದೆ. ಕಾರ್ಬೋಹೈಡ್ರೇಟ್‌ ಪ್ರಮಾಣ ಅಕ್ಕಿಯಲ್ಲಿರುವಷ್ಟೇ ಇರುತ್ತದೆ. ಆದರೆ ಹೆಚ್ಚು ನಾರಿನಂಶವಿರುವುದರಿಂದ ಜಾಸ್ತಿ ಹೊತ್ತು ಹೊಟ್ಟೆ ತುಂಬಿದಂತೆ ಅನಿಸುತ್ತದೆ. ಸಿರಿಧಾನ್ಯ ಹೆಚ್ಚು ಪ್ರೊಟೀನ್‌ ಅಂಶ ಹೊಂದಿದೆ. ಹಾಗಾಗಿ ಇದು ರಕ್ತದಲ್ಲಿನ ಗ್ಲುಗೋಸ್‌ ಮಟ್ಟವನ್ನು ನಿಯಂತ್ರಿಸುತ್ತದೆ. ಸಿರಿಧಾನ್ಯಗಳಿಂದ ಅನೇಕ ಪ್ರಯೋಜನಗಳಿದ್ದರೂ ಸಮಸ್ಯೆಗಳೂ ಇವೆ. ಇದರ ಸೇವನೆಯಿಂದ ಮಲಬದ್ಧತೆ, ಹೊಟ್ಟೆ ಉಬ್ಬರಿಸುವುದು ಕಂಡುಬರಬಹುದು.

2. ಸಿರಿಧಾನ್ಯಗಳಿಂದಾಗುವ ಸಮಸ್ಯೆಗಳು

2. ಸಿರಿಧಾನ್ಯಗಳಿಂದಾಗುವ ಸಮಸ್ಯೆಗಳು

ಆಯುರ್ವೇದ ತಜ್ಞರ ಪ್ರಕಾರ ಸಿರಿಧಾನ್ಯಗಳು ರೂಕ್ಷ ಗುಣ ಅಂದರೆ ಒಣಗುವಿಕೆ ಮತ್ತು ಲಘು ಸ್ವಭಾವವನ್ನು ಹೊಂದಿದೆ. ಇವುಗಳ ರೂಕ್ಷ ಗುಣಗಳು ದೇಹದಲ್ಲಿನ ಹೆಚ್ಚು ನೀರಿನಂಶವನ್ನು ಹೀರಿಕೊಳ್ಳುತ್ತದೆ. ಈ ಎರಡೂ ಗುಣಗಳಿ ವಾತವನ್ನು ಹೆಚ್ಚಿಸುತ್ತದೆ ಇದು ಮಲಬದ್ಧತೆ, ಹೊಟ್ಟೆ ಉಬ್ಬರಿಕೆಗೆ ಕಾರಣವಾಗುತ್ತದೆ. ಈಗಾಗಲೇ ಆಂತರಿಕ ಶುಷ್ಕತೆ, ವಾತ ಸಂಬಂಧಿ ಸಮಸ್ಯೆ ಇರುವವರಿಗೆ ಸಿರಿಧಾನ್ಯ ಸೇವನೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು.

3. ಸಿರಿಧಾನ್ಯ ಸೇವಿಸುವ ಮುನ್ನ ಹೀಗೆ ಮಾಡಿ

3. ಸಿರಿಧಾನ್ಯ ಸೇವಿಸುವ ಮುನ್ನ ಹೀಗೆ ಮಾಡಿ

ಸಿರಿಧಾನ್ಯಗಳಿಂದ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರವನ್ನು ತಡೆಗಟ್ಟಲು ಈ ಸರಳ ಸಲಹೆಗಳನ್ನು ಅನುಸರಿಸಿ

* ಸಿರಿಧಾನ್ಯಗಳನ್ನು ಅಡುಗೆಗೆ ಬಳಸುವ ಮುನ್ನ ಕನಿಷ್ಠ ಐದರಿಂದ ಆರುಗಂಟೆಗಳ ಕಾಲ ನೆನೆಸಿಡಿ, ನೆನೆಯುವುದರಿಂದ ಧಾನ್ಯದ ಪೌಷ್ಟಿಕಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಹಾಗೂ ಅಡುಗೆಯ ಸಮಯವನ್ನೂ ಕಡಿಮೆ ಮಾಡುತ್ತದೆ.

* ಅಡುಗೆ ಮಾಡುವಾಗ ತುಪ್ಪ, ಕಲ್ಲುಪ್ಪು ಮತ್ತು ಒಣಗಿದ ಶುಂಠಿಪುಡಿ ಹಾಕಿ

* ಸಿರಿಧಾನ್ಯದ ಆಹಾರ ಸೇವಿಸುವಾಗ ಹೆಚ್ಚು ಬೇಯಿಸಿದ ತರಕಾರಿಗಳನ್ನೂ ಸೇರಿಸಿ

* ಯಾವುದೇ ಸಿರಿಧಾನ್ಯವನ್ನೂ ಅಧಿಕವಾಗಿ ಸೇವಿಸಬೇಡಿ. ಸಾಕಷ್ಟು ಪ್ರಮಾಣದ ಪೋಷಕಾಂಶಗಳನ್ನು ಪಡೆಯಲು ನಿಮ್ಮ ಊಟದಲ್ಲಿ ಒಂದು ಬಾರಿ ಸೇರಿಸಿದರೆ ಸಾಕು. ಆ ಆಹಾರದ ಭಾಗದ ಮೇಲೂ ಗಮನವಿರಿಸಿ. ಯಾಕೆಂದರೆ ಹೆಚ್ಚಿನ ಸೇವನೆಯು ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು

* ಯಾವುದೇ ರೀತಿಯ ಸಂಸ್ಕರಿಸಿದ ಆಹಾರ ಅನಾರೋಗ್ಯಕರ. ಅದು ಸಿರಿಧಾನ್ಯವಾಗಿರಲಿ ಅಥವಾ ಅದರ ಹಿಟ್ಟೂ ಆಗಿರಲಿ. ಧಾನ್ಯವನ್ನು ಸಂಸ್ಕರಿಸುವುದರಿಂದ ಅದರ ಎಲ್ಲಾ ಪೋಷಕಾಂಶಗಳನ್ನು ತೆಗೆದುಹಾಕಲಾಗುತ್ತದೆ. ಸಂಸ್ಕರಿಸಿದ ಮಿಲ್ಲೆಟ್ಸ್‌ ತಿನ್ನುವುದರಿಂದ ಏನೂ ಪ್ರಯೋಜನವಾಗದು. ಆದಷ್ಟು ಧಾನ್ಯಗಳನ್ನೇ ಬಳಸಿ ಅಥವಾ ಮನೆಯಲ್ಲೇ ಹಿಟ್ಟು ಮಾಡಿ.

4. ಯಾವಾಗ ಯಾವ ಧಾನ್ಯ ಸೇವಿಸಬೇಕು?

4. ಯಾವಾಗ ಯಾವ ಧಾನ್ಯ ಸೇವಿಸಬೇಕು?

ಸಿರಿಧಾನ್ಯಗಳ ವಿಷಯಕ್ಕೆ ಬಂದರೆ, ನಿಮ್ಮ ಆಹಾರದಲ್ಲಿ ನೀವು ಸೇರಿಸಬಹುದಾದ ಹಲವಾರು ರೀತಿಯ ಧಾನ್ಯಗಳಿವೆ. ಅವು ಮಾರುಕಟ್ಟೆಯಲ್ಲಿ ವರ್ಷಪೂರ್ತಿ ಲಭ್ಯವಿವೆ. ಆದಾಗ್ಯೂ, ಸಿರಿಧಾನ್ಯ ಸೇವನೆಯ ವಿಷಯಕ್ಕೆ ಬಂದಾಗ ಅನುಸರಿಸಬೇಕಾದ ವಿಷಯವೆಂದರೆ ಋತುಮಾನವನ್ನು ಸೇರಿಸುವುದು. ಎಲ್ಲಾ ಋತುಗಳಲ್ಲಿ ನೀವು ಎಲ್ಲಾ ರೀತಿಯ ಧಾನ್ಯಗಳನ್ನು ತಿನ್ನಬಾರದು.

ಚಳಿಗಾಲ: ಬಾಜ್ರಾ ಮತ್ತು ಜೋಳವು ಚಳಿಗಾಲದಲ್ಲಿ ಸೂಕ್ತ ಆಯ್ಕೆಯಾಗಿದೆ. ಈ ಸಿರಿಧಾನ್ಯಗಳನ್ನು ಈ ಋತುವಿನಲ್ಲಿ ವಿಶೇಷವಾಗಿ ಬೆಳೆಸಲಾಗುತ್ತದೆ. ಆದ್ದರಿಂದ, ಅವುಗಳನ್ನು ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಇದು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತಾರೆ.

ಬೇಸಿಗೆ: ಬೇಸಿಗೆಯಲ್ಲಿ ಜೋಳ ಮತ್ತು ರಾಗಿಯನ್ನು ಆರಿಸಿಕೊಳ್ಳಿ. ಈ ಎರಡು ಧಾನ್ಯಗಳು ಬೇಸಿಗೆಯ ದಿನಗಳಲ್ಲಿ ನಿಮ್ಮನ್ನು ಹೈಡ್ರೀಕರಿಸುತ್ತದೆ ಮತ್ತು ನಿಮ್ಮ ಹೆಚ್ಚಾದ ದೇಹದ ತಾಪಮಾನವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉಪವಾಸ: ನೀವು ಉಪವಾಸ ಮಾಡುವಾಗ, ರಾಜಗಿರಾ ಮತ್ತು ಸಾಮೆಯನ್ನು ಸೇವಿಸಿ. ಈ ಎರಡು ಧಾನ್ಯಗಳು ನಿಮಗೆ ದಿನವಿಡೀ ಚಟುವಟಿಕೆಯಿಂದ ಇರಲು ಎಲ್ಲಾ ಪೋಷಕಾಂಶಗಳನ್ನು ಒದಗಿಸುತ್ತದೆ.

ನಿಮ್ಮ ಆಹಾರದಲ್ಲಿ ಸಿರಿಧಾನ್ಯಗಳನ್ನು ಸೇರಿಸಿದರೆ ಅಕ್ಕಿ ಸೇವಿಸುವುದನ್ನು ಬಿಡಬೇಡಿ. ನೀವು ಎರಡನ್ನೂ ವಿಭಿನ್ನ ಆಹಾರಗಳಲ್ಲಿ ಸೇವಿಸಬಹುದು. ಅಕ್ಕಿ ಆರೋಗ್ಯಕರವಾಗಿದೆ ಮತ್ತು ನಿಮ್ಮ ದೈನಂದಿನ ಆಹಾರದ ಭಾಗವಾಗಿರಬೇಕು.

English summary

Do you feel constipated after eating millets? Here's what to do in kannada

Here we are discussing about Do you feel constipated after eating millets? Here's what to do in kannada. Read more.
Story first published: Thursday, September 8, 2022, 16:30 [IST]
X
Desktop Bottom Promotion