Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
PCOS ಸಮಸ್ಯೆ ಇರುವವರು ಸಿಹಿಕುಂಬಳಕಾಯಿ ಬೀಜ ಒಳ್ಳೆಯದು, ಹೇಗೆ?
ಪಿಸಿಒಎಸ್ ( Polycystic Ovarian Syndrome) ಎನ್ನುವುದು ಮಹಿಳೆಯರಲ್ಲಿ ಹಾರ್ಮೋನ್‌ಗೆ ಸಂಬಂಧಿಸಿದ ಸಮಸ್ಯೆಯಾಗಿದ್ದು ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತಿದೆ. ಬದಲಾಗುತ್ತಿರುವ ಜೀವನಶೈಲಿ ಇಂಥ ಸಮಸ್ಯೆ ಹೆಚ್ಚಲು ಪ್ರಮುಖ ಕಾರಣವಾಗಿದೆ.

ಪಿಸಿಒಎಸ್ ಸಮಸ್ಯೆ ಇರುವವರಲ್ಲಿ ಅನಿಯಮಿತ ಮುಟ್ಟಿನ ಸಮಸ್ಯೆ, ಮೊಡವೆ ಸಮಸ್ಯೆ,ತೂಕ ಹೆಚ್ಚುವುದು, ಮುಖ, ಕೈ-ಕಾಲುಗಳಲ್ಲಿ ಕೂದಲು ಬೆಳೆಯುವುದು ಈ ರೀತಿಯ ಸಮಸ್ಯೆಗಳು ಕಂಡು ಬರುವುದು. ಪಿಸಿಒಎಸ್ ಸಮಸ್ಯೆಯಿದ್ದರೆ ಮಕ್ಕಳಾಗಲು ತೊಂದರೆಯಾಗುವುದು. ಜೀವನ ಶೈಲಿಯಲ್ಲಿ ಬದಲಾವಣೆ ಮಾಡುವ ಮೂಲಕ ಈ ಸಮಸ್ಯೆ ಇಲ್ಲವಾಗಿಸಬಹುದಾಗಿದೆ.
ಅದರಲ್ಲೂ ಸಿಹಿಕುಂಬಳಕಾಯಿ ಬೀಜವನ್ನು ದಿನನಿತ್ಯ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಈ ಸಮಸ್ಯೆ ಕಡಿಮೆಯಾಗಿಸಬಹುದು, ಹೇಗೆ ಎಂದು ನೋಡೋಣ ಬನ್ನಿ:

ಒಂದು 1/4 ಕಪ್ ಸಿಹಿ ಕುಂಬಳಕಾಯಿ ಬೀಜ ಸವಿದರೆ ಸಿಗುವ ಪೋಷಕಾಂಶಗಳು
ಕ್ಯಾಲೋರಿ:180
ಪ್ರೊಟೀನ್:10ಗ್ರಾಂ
ಕೊಬ್ಬು:16ಗ್ರಾಂ
ಕಾರ್ಬೋಹೈಡ್ರೇಟ್ಸ್: 3 ಗ್ರಾಂ
ನಾರಿನಂಶ: 2 ಗ್ರಾಂ
ಸಕ್ಕರೆ :0 ಗ್ರಾಂ
ಫೋಲೆಟ್: 2.5 mcg
ಕ್ಯಾಲ್ಸಿಯಂ:15.4 ಮಿಗ್ರಾಂ
ಕಬ್ಬಿಣದಂಶ:0.9ಮಿಗ್ರಾಂ
ಮಗ್ನಿಷ್ಯಿಯಂ:73.4ಮಿಗ್ರಾಂ
ರಂಜಕ: 25.8ಮಿಗ್ರಾಂ
ಸೋಡಿಯಂ :5 ಮಿಗ್ರಾಂ
ಸತು:2.9 ಮಿಗ್ರಾಂ
ತಾಮ್ರದಂಶ:0.2ಮಿಗ್ರಾಂ
ಮ್ಯಾಂಗನೀಸ್:0.1 ಮಿಗ್ರಾಂ

ಸಿಹಿಕುಂಬಳಕಾಯಿ ಬೀಜ ಮತ್ತು ಪಿಸಿಒಎಸ್
ಮಹಿಳೆಯರಿಗೆ ಇದೊಂದು ಸೂಪರ್‌ಫುಡ್ ಆಗಿದೆ ಅದರಲ್ಲೂ ಪಿಸಿಒಎಸ್ ಸಮಸ್ಯೆ ಇರುವವರು ಇದನ್ನು ಪ್ರತಿದಿನ ತಿನ್ನುವುದು ಒಳ್ಳೆಯದು. ಸಿಹಿಕುಂಬಳಕಾಯಿ ಬೀಜ ತಿನ್ನುವುದರಿಂದ ಅಸಮತೋಲನದಲ್ಲಿರುವ ಹಾರ್ಮೋನ್‌ಗಳು ಸರಿಯಾದ ರೀತಿಯಲ್ಲಿ ಉತ್ಪತ್ತಿಯಾಗಲು ಸಹಕಾರಿಯಾಗುವುದು.

ಪಿಸಿಒಎಸ್ ಇರುವವರು ಸಿಹಿಕುಂಬಳಕಾಯಿ ಬೀಜ ತಿಂದ್ರೆ ಸಿಗುವ ಪ್ರಯೋಜನಗಳು:
* ಕೂದಲು ಉದುರುವುದನ್ನು ತಡೆಗಟ್ಟುತ್ತೆ
* ಅಗ್ಯತ ಕೊಬ್ಬಿನಂಶಗಳನ್ನು ದೇಹಕ್ಕೆ ಒದಗಿಸುತ್ತೆ
* ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುವುದು
* ಮೆಗ್ನಿಷ್ಯಿಯಂ ದೊರೆಯುವುದು
* ಮೆನೋಪಾಸ್ ಸಮಯದಲ್ಲಿ ಸಂಧಿವಾತದ ಸಮಸ್ಯೆ ತಡೆಗಟ್ಟುತ್ತೆ
ಇದರಲ್ಲಿ ಮೆಗ್ನಿಷ್ಯಿಯಂ ಇರುವುದರಿಂದ ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರ ಜೊತೆಗೆ ಇದರಲ್ಲಿ (ಟ್ರಿಪ್ಟೊಫಾನ್) tryptophan, ಅಮೈನೋ ಆಮ್ಲ ಇರುವುದರಿಂದ ಒಳ್ಳೆ ನಿದ್ದೆ ಕೂಡ ಬರುತ್ತದೆ.

ಸಿಹಿಕುಂಬಳಕಾಯಿ ಬೀಜವನ್ನು ಹೇಗೆ ಸೇವಿಸಬಹುದು, ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?
ಸಿಹಿ ಕುಂಬಳಕಾಯಿ ಹಲವು ರೀತಿಯಲ್ಲಿ ನಿಮ್ಮ ಆಹಾರಕ್ರಮದಲ್ಲಿ ಸೇರಿಸಬಹುದು. ಮಿಲ್ಕ್ ಶೇಕ್ ಜೊತೆ ಸವಿಯಬಹುದು, ಹಾಗೆಯೂ ತಿನ್ನಬಹುದು ಅಥವಾ ಹುರಿದು ಕೂಡ ತಿನ್ನಬಹುದು.
ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು?
ದಿನದಲ್ಲಿ ಒಂದು ಚಮಚ ಸೇವಿಸಿದರೆ ಸಾಕು.

ಸಿಹಿ ಕುಂಬಳಕಾಯಿ ಬೀಜ ದಿನಾ ತಿನ್ನುವುದರಿಂದ ಮಹಿಳೆಯರಿಗೆ ದೊರೆಯುವ ಪ್ರಯೋಜನಗಳು:
*ಸಿಹಿಕುಂಬಳಕಾಯಿ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
* ಸೌಂದರ್ಯ ವೃದ್ಧಿಯಾಗುವುದು
* ತೂಕ ನಿಯಂತ್ರಣಕ್ಕೆ ಸಹಕಾರಿ
* ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವುದು
* ಅನೇಕ ಬಗೆಯ ಕ್ಯಾನ್ಸರ್ ತಡೆಗಟ್ಟುತ್ತೆ
* ಹೃದಯದ ಆರೋಗ್ಯಕ್ಕೆ ಒಳ್ಳೆಯದು
* ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು
* ಮೂತ್ರದ ಸೋಂಕು ತಡೆಗಟ್ಟುತ್ತೆ
* ಒಳ್ಳೆಯ ನಿದ್ದೆ ಕೂಡ ಸಿಗುವುದು
ಸಿಹಿಕುಂಬಳಕಾಯಿ ಬೀಜದಲ್ಲಿ ನಾರಿನಂಶ ಅಧಿಕವಿರುತ್ತದೆ. ಇದನ್ನು ತುಂಬಾ ತಿಂದರೆ ಹೊಟ್ಟೆ ಉಬ್ಬುವುದು, ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಬಹುದು. ಅಲ್ಲದೆ ಮಲಬದ್ಧತೆ ಸಮಸ್ಯೆ ಕೂಡ ಬರಬಹುದು. ಆದ್ದರಿಂದ ದಿನಾ ಒಂದು ಚಮಚಕ್ಕಿಂತ ಅಧಿಕ ತಿನ್ನಬೇಡಿ.
ಸಿಹಿಕುಂಬಳಕಾಯಿ ತಿಂದಾಗ ಅಲರ್ಜಿ ಉಂಟಾದರೆ ತಿನ್ನಬೇಡಿ. ಲಿಥಿಯಂ ಔಷಧ ಸೇವಿಸುತ್ತಿರುವವರು ಇದನ್ನು ತಿನ್ನಬಾರದು. ಅಲ್ಲದೆ ಜಂಕ್ ಫುಡ್ಸ್‌ನಲ್ಲಿ ಹಾಕಿರುವ ಸಿಹಿಕುಂಬಳಕಾಯಿ ಬೀಜದಲ್ಲಿ ಸಾಕಷ್ಟು ಕೃತಕ ಸಿಹಿ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ.
ಸಿಹಿಕುಂಬಳಕಾಯಿ ಬೀಜವನ್ನು ಯಾವಾಗ ಬೇಕಾದರೂ ತಿನ್ನಬಹುದು. ಮಲಗುವ ಮುಂಚೆ ತಿಂದರೆ ಒಳ್ಳೆಯದು.



Click it and Unblock the Notifications











