Latest Updates
-
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ!
ದಪ್ಪ ತೊಡೆಗಳನ್ನು ಸಣ್ಣಗಾಗಿಸುವ ವ್ಯಾಯಾಮ
ನಮ್ಮ ಪ್ರತಿಯೊಬ್ಬರ ದೇಹವೂ ಒಂದು ಅನನ್ಯ ರಚನೆಯಾಗಿದ್ದು, ಅದು ತನ್ನದೇ ಆದ ವಿವಿಧ ಪರ್ಯಾಯ ಚಲನೆಯನ್ನು ಹೊಂದಿರುತ್ತದೆ. ಕೆಲವರು ಅನಾರೋಗ್ಯಕರವಾದ ಮತ್ತು ಬಡ ದೇಹ ರಚನೆಯನ್ನು ಹೊಂದಿರುತ್ತಾರೆ. ಪ್ರತಿ ಚಲನೆಯೂ ಅನನ್ಯವಾಗಿದ್ದು ಪ್ರತಿಯೊಬ್ಬರ ದೈಹಿಕ ರಚನಾಸ್ಥಿತಿಯಿಂದ ಅದು ನಿಯಂತ್ರಿಸಲ್ಪಡುತ್ತದೆ .
ನಿಮ್ಮ ತೊಡೆಯಲ್ಲಿ ಶೇಕರಿಸಲ್ಪಟ್ಟಿರುವ ಕೊಬ್ಬಿನ ಮೇಲೆ ಮಾತ್ರ ಕೇಂದ್ರೀಕರಿಸುವ ವ್ಯಾಯಾಮಗಳು ಇಲ್ಲಿವೆ. ಆದರೆ ನೆನಪಿರಲಿ,ಇವು ಸಾಮಾನ್ಯವಾಗಿ ಒಬೆಸಿಟಿ ವ್ಯಕ್ತಿಗಳಿಗೆ ಸೂಕ್ತವಲ್ಲ.

* ನಿಮ್ಮ ಎರಡೂ ಪಾದಗಳು ಪರಸ್ಪರ 30 ಸೆ.ಮೀ ಅಂತರದಲ್ಲಿರುವಂತೆ ನೇರವಾಗಿ ನಿಲ್ಲಿ. ನಿಮ್ಮ ಕೈಗಳನ್ನು ಪ್ರುಷ್ಟದ ಮೇಲಿಡಿ ನಿಮ್ಮ ಎರಡೂ ಕಾಲಿನ ಹೆಬ್ಬೆರಳುಗಳು ಮುಂದಕ್ಕೆ ಮುಖಮಾಡಿರಲಿ.
* ನಿಮ್ಮ ಪೆಲ್ವೀಸ್ ಭಾಗವನ್ನು ಪ್ರದಕ್ಷಿಣಾಕಾರದಲ್ಲಿ ಮೂವತ್ತು ಸೆಕೆಂಡ್ಗಳ ಕಾಲ ನಂತರ ಅಪ್ರದಕ್ಷಿಣಾಕಾರದಲ್ಲಿ ಮೂವತ್ತು ಸೆಕೆಂಡುಗಳ ಕಾಲ ತಿರುಗಿಸಿರಿ.
* ಈ ವ್ಯಾಯಾಮವನ್ನು ಆರು ಬಾರಿ ಪುನರಾವರ್ತಿಸಿ. ಗಮನಿಸಿ: ಈ ವ್ಯಾಯಾಮವು ಸಂಪೂರ್ಣವಾಗುವವರೆಗೂ ನಿಮ್ಮ ಎರಡೂ ಪಾದಗಳೂ ನೆಲಕ್ಕೆ ಸಮಾನಾಂತರವಾಗಿರುವುದು ಅತೀ ಮುಖ್ಯ.
* ಅದೇ ಆರಂಭಿಕ ಸ್ಥಿತಿದೊಂದಿಗೆ ; ನಿಮ್ಮ ಬಲ ಪ್ರುಷ್ಟವನ್ನು ಸಾಧ್ಯವಾದಷ್ಟು ಮುಂದಕ್ಕೆ ಒತ್ತಿ ,ನಿಮ್ಮ ಪೆಲ್ವೀಸ್ ಭಾಗವನ್ನು ಮೂವತ್ತು ಸೆಕೆಂಡ್ಗಳ ಕಾಲ ಪ್ರದಕ್ಷಿಣಾಕಾರದಲ್ಲಿ ತಿರುಗಿಸಿರಿ. ಹಾಗು ಮುಂದಿನ ಮೂವತ್ತು ಸೆಕೆಂಡುಗಳ ಕಾಲ ಅಪ್ರದಕ್ಷಿಣಾಕಾರದಲ್ಲಿ ತಿರುಗಿಸಿ ನಂತರ ನಿಲ್ಲಿಸಿ. ಗಮನಿಸಿ : ವ್ಯಾಯಾಮವು ಪೂರ್ಣಗೊಂಡಾಗ ನಿಮ್ಮ ದೇಹವು ಮರಳಿ ಆರಂಭಿಕ ಸ್ಥಿತಿಗೆ ಬರಬೇಕು.
* ಈಗ ಎಡಪ್ರುಷ್ಟದ ಸರಧಿ. ಅದೇ ಆರಂಭಿಕ ಸ್ಥಿತಿದೊಂದಿಗೆ ; ನಿಮ್ಮ ಎಡ ಪ್ರುಷ್ಟವನ್ನು ಸಾಧ್ಯವಾದಷ್ಟು ಮುಂದಕ್ಕೆ ಒತ್ತಿ ,ನಿಮ್ಮ ಪೆಲ್ವೀಸ್ ಭಾಗವನ್ನು ಮೂವತ್ತು ಸೆಕೆಂಡ್ಗಳ ಕಾಲ ಪ್ರದಕ್ಷಿಣಾಕಾರದಲ್ಲಿ ತಿರುಗಿಸಿ. ಹಾಗು ಮುಂದಿನ ಮೂವತ್ತು ಸೆಕೆಂಡುಗಳ ಕಾಲ ಅಪ್ರದಕ್ಷಿಣಾಕಾರದಲ್ಲಿ ತಿರುಗಿಸಿ ನಂತರ ನಿಲ್ಲಿಸಿ. ಗಮನಿಸಿ : ವ್ಯಾಯಾಮವು ಪೂರ್ಣಗೊಂಡಾಗ ನಿಮ್ಮ ದೇಹವು ಮರಳಿ ಆರಂಭಿಕ ಸ್ಥಿತಿಗೆ ಬರಬೇಕು.
* ನಿಮ್ಮ ಪಾದದ ಸ್ಥಾನವನ್ನು ಬದಲಿಸದೇ ನಿಮ್ಮ ಪೆಲ್ವೀಸ್ ಅನ್ನು 15 ರಿಂದ 20 ಸೆ ಮಿ ಬಲಕ್ಕೆ ತಿರುಗಿಸಿ. ಗಮನಿಸಿ: ಈಗ ಇದೇ ನಿಮ್ಮ ಹೊಸ ಆರಂಭಿಕ ಸ್ಥಿತಿಯಾಗಿರುತ್ತದೆ.
* ನಿಮ್ಮ ದೇಹವನ್ನು ಮೂವತ್ತು ಸೆಕೆಂಡ್ಗಳ ಕಾಲ ಪ್ರದಕ್ಷಿಣಾಕಾರದಲ್ಲಿ ಸುತ್ತಿಸಿ.ಹೀಗೆ ತಿರುಗಿಸುವಾಗ ನಿಮ್ಮ ದೇಹವು ಸಮತೋಲನ ಕಳೆದುಕೊಳ್ಳದಂತೆ ಎಚ್ಚರಿಕೆವಹಿಸಬೇಕು.ಮುಂದಿನ ಮೂವತ್ತು ಸೆಕೆಂಡುಗಳು ಅಪ್ರದಕ್ಷಿಣಾವೃತ್ತದಲ್ಲಿ ವ್ಯಾಯಾಮವನ್ನು ಪುನರಾವರ್ತಿಸಿ; ನಂತರ ನಿಮ್ಮ ಪೆಲ್ವೀಸ್ ವನ್ನು ಅದರ ಕೇಂದ್ರ ಸ್ಥಾನಕ್ಕೆ ಹಿಂದಿರುಗಿಸಿ.
* ನಿಮ್ಮ ಪೆಲ್ವೀಸ್ ಅನ್ನು ಎಡಕ್ಕೆ ಸರಿಸಿ ಹಂತ 7ರಲ್ಲಿರುವ ಅಂಶಗಳನ್ನು ಅನುಸರಿಸಿರಿ.
* ಎರಡೂ ಬದಿ ಪೂರ್ಣವಾದಾಗ ನಿಮ್ಮ ವ್ಯಾಯಾಮ ಸಂಪೂರ್ಣವಾದಂತೆ.ಈಗ ನಿಮ್ಮ ಪೆಲ್ವೀಸ್ ವನ್ನು ಅದರ ಕೇಂದ್ರ ಸ್ಥಿತಿಗೆ ಮರಳಿಸಿ.
ಇತರ ಸಲಹೆಗಳು
ವ್ಯಾಯಾಮದ ಉತ್ತಮ ಫಲ ದೊರೆಯಬೇಕಾದರೆ ಅದನ್ನು ಯಾವುದೇ ತಡೆಯಿಲ್ಲದೇ ಪೂರ್ಣಗೊಳಿಸಬೇಕು.
ತಿರುಗುವಿಕೆಯ ಅಳತೆಯು ನಿಮ್ಮ ಪ್ರಸ್ತುತ ದೈಹಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ ಅದು ಸತತ ಅಭ್ಯಾಸದೊಂದಿಗೆ ಹೆಚ್ಚಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications