Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪನ್ನೀರ್ ತಿಂದ್ರೆ ತೂಕ ಇಳಿಕೆಗೆ ಸಹಕಾರಿಯೇ? ಹೇಗೆ?
ದಪ್ಪಗಾಗಿದ್ದೇನೆ, ತೂಕ ಕಡಿಮೆ ಮಾಡಿಕೊಳ್ಳಬೇಕು ಎಂಬುವುದೇ ಬಹುತೇಕ ಜನರ ಸಮಸ್ಯೆಯಾಗಿದೆ. ಜೀವನಶೈಲಿ, ಆಹಾರಶೈಲಿ, ವ್ಯಾಯಾಮಕ್ಕೆ ಸಮಯವಿಲ್ಲದಿರುವುದು ಈ ಎಲ್ಲಾ ಕಾರಣಗಳಿಂದ ಮೈ ತೂಕ ತುಂಬಾನೇ ಹೆಚ್ಚಾಗುವುದು. ಯಾವಾಗ ನಮ್ಮ ಸೊಂಟದ ಸುತ್ತಳತೆ ಹೆಚ್ಚಾಗುವುದೋ ಆವಾಗ ಒಂದೊಂದೇ ಆರೋಗ್ಯ ಸಮಸ್ಯೆಗಳು ಕಾಣಿಸಲಾರಂಭಿಸುವುದು. ಆದ್ದರಿಂದ ಫಿಟ್ನೆಸ್ ಕಾಪಾಡುವುದು ಆರೋಗ್ಯದ ದೃಷ್ಟಿಯಿಂದ ತುಂಬಾನೇ ಅವಶ್ಯಕ.
ಮೈ ತೂಕ ಕಡಿಮೆ ಮಾಡಬೇಕೆಂದರೆ ಆಹಾರಕ್ರಮದ ಕಡೆಗೆ ತುಂಬಾನೇ ಕೊಡಬೇಕು, ಡಯಟ್ ಆಹಾರ ಎಂದರೆ ಆ ಆಹಾರಕ್ರಮ ಪಾಲಿಸಲು ಸ್ವಲ್ಪ ಕಷ್ಟ ಅನಿಸುವುದು, ಏಕೆಂದರೆ ಬಾಯಿಗೆ ರುಚಿಯಾದ ಆಹಾರ ತಿನ್ನಲು ಸಾಧ್ಯವಿರಲ್ಲ, ಈ ಕಾರಣಕ್ಕೆ ತುಂಬಾ ಜನರಿಗೆ ಫಿಟ್ನೆಸ್ ಕಡೆ ಗಮನ ಕೊಡಲು ಕಷ್ಟವಾಗುವುದು. ನಿಮಗೆ ಪನ್ನೀರ್ ಇಷ್ಟವೆಂದರೆ ನಾವಿಲ್ಲಿ ಪನ್ನೀರ್ ಡಯಟ್ ಪಾಲಿಸಿ ಮೈ ತೂಕ ಕಡಿಮೆ ಮಾಡುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:

ಪನ್ನೀರ್ ತೂಕ ಇಳಿಕೆಗೆ ಆರೋಗ್ಯಕರವಾದ ಆಹಾರ
ಪನ್ನೀರ್ ಪೋಷಕಾಂಶಗಳನ್ನು ಹೊಂದಿರುವ ಆಹಾರವಾಗಿದೆ. ಪನ್ನೀರ್‌ನಲ್ಲಿ ಕಾರ್ಬ್ಸ್, ಪ್ರೊಟೀನ್, ಕ್ಯಾಲ್ಸಿಯಂ, ವಿಟಮಿನ್ ಬಿ12, ಸೆಲೆನಿಯಮ್, ರಂಜಕ ಹಾಗೂ ಫೋಲೆಟ್ ಅಂಶವಿದೆ. ಪನ್ನೀರ್‌ನಲ್ಲಿರುವ ಈ ಎಲ್ಲಾ ಪೋಷಕಾಂಶಗಳು ಮೈ ತೂಕ ಕಡಿಮೆ ಮಾಡಲು ತುಂಬಾನೇ ಸಹಕಾರಿಯಾಗಿದೆ.
ಪನ್ನೀರ್ ತೂಕ ಇಳಿಕೆಗೆ ಏಕೆ ಒಳ್ಳೆಯದು ಎಂದು ನೋಡುವುದಾದರೆ...
ನಾವು ಮೈ ತೂಕ ಕಡಿಮೆ ಮಾಡಲು ಪ್ರಯತ್ನಿಸಿದಾಗ ಆರೋಗ್ಯಕರ ವಿಧಾನದಿಂದ ಮೈ ತೂಕ ಕಡಿಮೆ ಮಾಡಬೇಕು. ಕೆಲವರು ಊಟ ಬಿಡುವುದು ಅದರಲ್ಲೂ ಪೋಷಾಂಶವಿರುವ ಆಹಾರವನ್ನು ಸೇವಿಸಿದೆ ಇರುವುದು ಈ ಎಲ್ಲಾ ತಪ್ಪುಗಳನ್ನು ಮಾಡುವುದರ ಮೈ ತೂಕ ಕಡಿಮೆ ಮಾಡುತ್ತಾರೆ. ಹೀಗೆ ಮಾಡಿ ಮೈ ತೂಕ ಕಡಿಮೆಯಾದರೆ ಅದು ಶಾಶ್ವತವಲ್ಲ, ಅಲ್ಲದೆ ಹೀಗೆ ಮಾಡುವುದರಿಂದ ನಮ್ಮ ದೇಹಕ್ಕೆ ಪೋಷಕಾಂಶಗಳ ಕೊರತೆ ಉಂಟಾಗಿ ಕಾಯಿಲೆ ಬೀಳುವಂತಾಗುವುದು. ಆದ್ದರಿಂದ ಯಾವತ್ತೂ ನಾವು ತೂಕ ಇಳಿಕೆಗೆ ಡಯಟ್ ಮಾಡುವಾಗ ನಾವು ಪೋಷಕಾಂಶವಿರುವ ಆಹಾರ ನಮ್ಮ ಆಹಾರಕ್ರಮದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಆದ್ದರಿಂದ ಪನ್ನೀರ್ ತೂಕ ಇಳಿಕೆಗೆ ಅತ್ಯುತ್ತಮವಾದ ಆಯ್ಕೆಯಾಗಿದೆ.
ಪನ್ನೀರ್‌ನಲ್ಲಿ ಪ್ರೊಟೀನ್ ಅಧಿಕವಿರುತ್ತದೆ
ಪನ್ನೀರ್‌ನಲ್ಲಿ ಪ್ರೊಟೀನ್ ಅಧಿಕವಿರುತ್ತದೆ. ಇತರ ಎಲ್ಲಾ ಹಾಲಿನ ಉತ್ಪನ್ನಗಳಿಗಿಂತ ಪನ್ನೀರ್‌ನಲ್ಲಿ ಪ್ರೊಟೀನ್ ಅಂಶ ಅಧಿಕವಿರುತ್ತದೆ. ಅತ್ಯಧಿಕ ಪ್ರೊಟೀನ್ ಇರುವ ಆಹಾರ ಸೇವಿಸಿದರೆ ತೂಕ ಇಳಿಕೆಗೆ ಸಹಕಾರಿಯಾಗಿದೆ. ಕಾಟೇಜ್ ಚೀಸ್ ಕ್ಯಾಲೋರಿ ಕರಗಸಲು ಸಹಕಾರಿ. ಅಲ್ಲದೆ ಪನ್ನೀರ್ ತಿಂದಾಗ ಬೇಗನೆ ಹಸಿವು ಉಂಟಾಗುವುದಿಲ್ಲ. ಇದರಿಂದ ಅತಿಯಾಗಿ ತಿನ್ನುವುದಕ್ಕೆ ಕಡಿವಾಣ ಹಾಕಬಹುದು.
ಪನ್ನೀರ್‌ನಲ್ಲಿ ಕ್ಯಾಲೋರಿ ಕಡಿಮೆ ಇದೆ
ತೂಕ ಇಳಿಕೆಗೆ ಪ್ರಯತ್ನಿಸುವಾಗ ಕಡಿಮೆ ಕ್ಯಾಲೋರಿಯ ಆಹಾರ ಸೇವಿಸಬೇಕು. ಪನ್ನೀರ್‌ನಲ್ಲಿ ಕ್ಯಾಲೋರಿ ಅಂಶ ಕಡಿಮೆ ಇದೆ. ಅಲ್ಲದೆ ಇದರಲ್ಲಿ ಕಾರ್ಬ್ಸ್ ಕೂಡ ಕಡಿಮೆ ಇದೆ. ಇದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಟಗಟ್ಟುವಲ್ಲಿ ಕೂಡ ಸಹಕಾರಿ.
ಪನ್ನೀರ್‌ನಲ್ಲಿ ಕ್ಯಾಲ್ಸಿಯಂ ಅಂಶವಿದೆ
ಮೂಳೆ ಮತ್ತು ಹಲ್ಲಿನ ಆರೋಗ್ಯಕ್ಕೆ ಕ್ಯಾಲ್ಸಿಯಂ ಅವಶ್ಯಕ, ಅಲ್ಲದೆ ಆರೋಗ್ಯಕರ ಮೈ ತೂಕ ಕಾಪಾಡಲು ಕೂಡ ಕ್ಯಾಲ್ಸಿಯಂ ಅವಶ್ಯಕ. ಪನ್ನೀರ್‌ನಲ್ಲಿ ಕ್ಯಾಲ್ಸಿಯಂ ಅಧಿಕವಿದೆ. ಆದ್ದರಿಂದ ದೇಹಕ್ಕೆ ಅವಶ್ಯಕವಾದ ಪನ್ನೀರ್ ಸಿಗುವುದು.
ಫಿಟ್ನೆಸ್ ಕಾಪಾಡಲು ಪನ್ನೀರ್ ಹೇಗೆ ಸೇವಿಸಬೇಕು ಎಂಬುವುದು ಮುಖ್ಯವಾಗುತ್ತೆ?
* ಪನ್ನೀರ್ ತಿಂದು ಮೈ ತೂಕ ಕಡಿಮೆ ಮಾಡಬಹುದೆಂದು ಮಟರ್ ಪನ್ನೀರ್, ಕಡಾಯಿ ಪನ್ನೀರ್ ಮಾಡಿ ತಿಂದರೆ ಮೈ ತೂಕ ಹೆಚ್ಚಾಗುವುದು. ನೀವು ಪನ್ನೀರ್ ಅನ್ನು ಗ್ರಿಲ್ಡ್ ಮಾಡಿ ತಿನ್ನಿ. ಅದನ್ನು ಫ್ರೈ ಮಾಡುವುದು ಮಾಡಬೇಡಿ. ಎಣ್ಣೆ ಯಲ್ಲಿ ಫ್ರೈ ಮಾಡದೆ ಹಾಗೆ ಸಿಂಪಲ್ ಸಾರಿನಲ್ಲಿ ಹಾಕಿ ಬೇಕಾದರೆ ಬಳಸಬಹುದು.
* ರೊಟ್ಟಿ, ಚಪಾತಿಗೆ ಸೂಪರ್ ಕಾಂಬಿನೇಷನ್ ಪನ್ನೀರ್. ಬಾಯಿಗೆ ರುಚಿ ಅನಿಸುವುದು, ಡಯಟ್ ಪಾಲಿಸುವುದು ಕಷ್ಟವಾಗಲ್ಲ, ಬಾಯಿಗೆ ರುಚಿ, ಮೈ ಬೊಜ್ಜು ಕರಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
