ಮಳೆಗಾಲದಲ್ಲಿ ಕಣಲೆ ತಿಂದ್ರೆ ದೊರೆಯುವ 4 ಪ್ರಮುಖ ಪ್ರಯೋಜನಗಳಿವು

ಮಳೆಗಾಲದಲ್ಲಿ ಕೆಲವೊಂದು ಆಹಾರಗಳನ್ನು ತಿನ್ನಲೇಬೇಕು, ಅದರಲ್ಲೊಂದು ಕಣಲೆ....ಕಣಲೆ ಬಹುತೇಕ ಕಡೆಗಳಲ್ಲಿ ಸಿಗುತ್ತದೆ, ಕೊಡಗು, ಮಲ್ನಾಡು, ಕರಾವಳಿ ಮುಂತಾದ ಕಡೆ ಕಣಲೆಯಿಂದ ಅಡುಗೆ ಮಾಡಿ ತಿನ್ನಲಾಗುವುದು. ಮಳೆಗಾಲದಲ್ಲಿ ಮಾತ್ರ ಈ ಕಣಲೆ ಸವಿ ನೋಡಲು ಸಾಧ್ಯವಾಗುವುದು ಎಂದು ಸವಿಯುತ್ತಾರೆ, ಆದರೆ ಕಣಲೆ ಮಳೆಗಾಲದ ರುಚಿ ಮಾತ್ರವಲ್ಲ ಇದನ್ನು ಈ ಸಮಯದಲ್ಲಿ ತಿನ್ನುವುದರಿಂದ ಈ ಪ್ರಮುಖ ಗುಣಗಳು ಸಿಗಲಿದೆ ನೋಡಿ.....

ಆರೋಗ್ಯಕರ ಗುಣಗಳು

ಮಳೆಗಾಲದಲ್ಲಿ ಕಣಲೆ ತಿನ್ನುವುದರಿಂದ ಈ ಪ್ರಮುಖ ಪ್ರಯೋಜನಗಳು ಸಿಗಲಿದೆ ನೋಡಿ...

Health benefits Of Kanale Or Bamboo Shoot In Kannada

ಸೀಸನಲ್ ಫುಡ್‌:

ಮೊದಲನೆಯದಾಗಿ ಕಣಲೆ ಸೀಸನಲ್ ಫುಡ್‌. ಇದು ನಿಮಗೆ ಮಳೆಗಾಲದಲ್ಲಿ ಮಾತ್ರ ಸಿಗುವ ಆಹಾರ, ಬೇರೆ ಸಮಯದಲ್ಲಿ ಇದನ್ನು ತಿನ್ನುವುದು ಆರೋಗ್ಯಕರವಲ್ಲ. ಸೀಸನಲ್ ಆಹಾರ ತಿನ್ನುವುದರಿಂದ ಆ ಸೀಸನ್‌ಗೆ ಅಗ್ಯತವಿರುವ ಪೋಷಕಾಂಶಗಳು ಸಿಗಲಿದೆ. ಮಳೆಗಾಲದಲ್ಲಿ ಬೆಚ್ಚಗಿನ ಆಹಾರ ಸೇವಿಸಬೇಕು. ಕಣಲೆ ತಿನ್ನುವುದರಿಂದ ಮೈ ಬೆಚ್ಚಗೆ ಇರುತ್ತದೆ. ಅಲ್ಲದೆ ಮಳೆಗಾಲದಲ್ಲಿ ಕಾಯಿಲೆ ತಡೆಗಟ್ಟುವ ಪೋಷಕಾಂಶಗಳು ಇದರಲ್ಲಿದೆ.

ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ:

ಕಣಲೆ ತಿನ್ನುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಳೆಗಾಲದಲ್ಲಿ ದೈಹಿಕ ವ್ಯಾಯಾಮ ಕಡಿಮೆ ಇರುತ್ತದೆ, ಅಲ್ಲದೆ ಈ ಸಮಯದಲ್ಲಿ ನಾಲಗೆ ರುಚಿ ಬಯಸುವುದರಿಂದ ಬಜ್ಜಿ, ಬೋಂಡಾ ಅಂತ ತಿನ್ನಲು ಇಷ್ಟಪಡುತ್ತೇವೆ. ಮಳೆಗಾಲದ ಈ ಆಹಾರ ತಿನ್ನುವುದರಿಮದ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುವುದು, ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಜೀರ್ಣಕ್ರಿಯೆಗೆ ಒಳ್ಳೆಯದು

ಮಳೆಗಾಲದಲ್ಲಿ ಜೀರ್ಣಕ್ರಿಯೆ ನಿಧಾನವಾಗುವುದು, ಕಣಲೆ ಜೀರ್ಣಕ್ರಿಯೆ ಚೆನ್ನಾಗಿ ನಡೆಯಲು ಸಹಕಾರಿಯಾಗಿದೆ. ಇದನ್ನು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟಬಹುದು.

ಲೋ ಕಾರ್ಬ್ಸ್ ಡಯಟ್‌ಗೆ ಸೂಪರ್‌ ಆಹಾರ

ಮಧುಮೇಹ, ಅತ್ಯಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ಲೋ ಕಾರ್ಬ್ಸ್ ಡಯಟ್‌ ಪಾಲಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ನಿಮಗೆ ಕಣಲೆ ತಿನ್ನುವುದರಿಂದ ಹೆಚ್ಚಿನ ಕಾರ್ಬ್ಸ್ ದೇಹವನ್ನು ಸೇರುವುದಿಲ್ಲ ಅಲ್ಲದೆ ದೇಹಕ್ಕೆ ಅಗ್ಯತವಾದ ಪೋಷಕಾಂಶ ದೊರೆಯುತ್ತದೆ.

ಕಣಲೆಯಲ್ಲಿರುವ ಪೋಷಕಾಂಶಗಳು

ಪೊಟಾಷ್ಯಿಯಂ
ಕ್ಯಾಲ್ಸಿಯಂ
ಮ್ಯಾಂಗನೀಸ್
ಸತು
ಕ್ರೋಮಿಯಂ
ಕಬ್ಬಿಣದಂಶ
ಥೈಯಾಮಿನ್
ನಿಯಾಸಿನ್
ವಿಟಮಿನ್ ಎ
ವಿಟಮಿನ್ ಬಿ6
ವಿಟಮಿನ್ ಇ

ಕಣಲೆಯನ್ನು ತಿನ್ನುವಾಗ ಎಚ್ಚರವಹಿಸಬೇಕು
ಕಣಲೆಯನ್ನು ತಿನ್ನುವಾಗ ಎಚ್ಚರವಹಿಸಬೇಕು, ಇಲ್ಲಿದ್ದರೆ ವಾಂತಿ-ಬೇಧಿ, ಹೊಟ್ಟೆ ಉಬ್ಬುವಿಕೆ ಈ ರೀತಿಯ ಸಮಸ್ಯೆ ಕಂಡು ಬರುವುದು, ಆದ್ದರಿಂದ ಇದನ್ನು ಹೇಗೆ ಬಳಸಬೇಕು ಎಂದು ಗೊತ್ತಿರಬೇಕು. ನೀವು ಕಣಲೆಯನ್ನು ತಿನ್ನುವ ಮೊದಲು 3 ದಿನ ಅದನ್ನು ನೀರಿನಲ್ಲಿ ಹಾಕಿ ಹುಳಿ ಬರಿಸಬೇಕು, ಪ್ರತಿದಿನ ಕಣಲೆ ನೀರು ಬಿಸಾಡಬೇಕು. ನಂತರ ಮಾತ್ರ ಅಡುಗೆಗೆ ಬಳಸಬೇಕು.
* ಕಣಲೆಯಿಂದ ಸಾರು, ಪಲ್ಯ, ಉಪ್ಪಿನಕಾಯಿ ಮಾಡಿ ಸವಿಯಬಹುದು. ತಿನ್ನಲು ತುಂಬಾ ರುಚಿಯಾಗಿರುತ್ತೆ. ಇದನ್ನು ರೊಟ್ಟಿ, ಚಪಾತಿ, ಅನ್ನು ಇದರ ಜೊತೆ ಸವಿಯಲು ತುಂಬಾ ಚೆನ್ನಾಗಿರುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Health benefits Of Kanale Or Bamboo Shoot In Kannada

Here are health benefits of bamboo shoot or kanale In rainy season, read on.
X
Desktop Bottom Promotion