ರಾತ್ರಿ 9ರ ನಂತರ ಊಟ ಸೇವಿಸುತ್ತೀರಾ? ಎಚ್ಚರ ಇದು ಪಾರ್ಶ್ವವಾಯುವಿಗೆ ದಾರಿ..!

ಇತ್ತೀಚಿನ ಒತ್ತಡದ ಜೀವನ ಶೈಲಿಯ ನಡುವೆ ಜನ ಊಟ, ತಿಂಡಿಗೂ ಸಮಯ ನೀಡುವುದು ಕಷ್ಟ. ಕೆಲವರಂತು ಊಟದ ಬದಲು ಆ ಸಮಯದಲ್ಲಿ ಹೊಟ್ಟೆ ಹಸಿವು ನೀಗಿಸಲು ಸಿಕ್ಕ ಸಿಕ್ಕ ಕಡೆಗಳಲ್ಲಿ ಕಣ್ಣಿಗೆ ಬಿದ್ದ ಪದಾರ್ಥ ಸೇವಿಸುತ್ತಾರೆ. ಇದು ತಕ್ಷಣಕ್ಕೆ ಅವರ ಆರೋಗ್ಯದ ಮೇಲೆ ಪರಿಣಾಮ ಬೀರದಿದ್ದರೂ ಕಾಲ ಕಳೆದಂತೆ ಅವರ ಅನಾರೋಗ್ಯಕ್ಕೆ ಇದೊಂದು ಸಣ್ಣ ಅಥವಾ ಗಂಭೀರ ಸಮಸ್ಯೆಯಾಗಿ ಮಾರ್ಪಡಬಹುದು.

ಆದರೆ ರಾತ್ರಿಯ ಊಟವನ್ನು ತಡವಾಗಿ ಅಂದರೆ 9 ಗಂಟೆ 10 ಅಷ್ಟೇ ಅಲ್ಲ ಕೆಲವರಂತು 12 ಗಂಟೆ ಬಳಿಕ ಸೇವಿಸುತ್ತಾರೆ. ಕೆಲವೊಮ್ಮೆ ಈ ರೀತಿ ಸೇವಿಸುವುದು ಸ್ವಾಗತರ್ಹವೇ ಆದರೆ ನಿರಂತರವಾಗಿ ಈ ಸಮಯದಲ್ಲೇ ಊಟ ಸೇವಿಸುವುದು ಅನಾರೋಗ್ಯಕ್ಕೆ ದಾರಿಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

food

ತಡವಾದ ಆಹಾರ ಸೇವನೆ ಪಾರ್ಶ್ವವಾಯುವಿಗೆ ದಾರಿ

ನಿಮ್ಮ ಊಟದ ಸಮಯವು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ನೀವು ಊಹಿಸಿರದ ರೀತಿಯಲ್ಲಿ ಪರಿಣಾಮ ಬೀರಬಹುದು. ತಡರಾತ್ರಿಯಲ್ಲಿ ತಿನ್ನುವುದು ತೂಕದ ತೊಂದರೆಗೆ ಕಾರಣವಾಗಬಹುದು. ನಿಮ್ಮ ಜೀರ್ಣಾಂಗ ವ್ಯವಸ್ಥೆಯು ಸಮತೋಲನ ಕಳೆದುಕೊಂಡು ನಿದ್ರೆ ಸೇರಿದಂತೆ ಹಲವು ಸಮಸ್ಯೆಗೆ ಕಾರಣವಾಗಬಹುದು. ಇದರ ಜೊತೆಗೆ ತಡವಾಗಿ ಆಹಾರ ಸೇವಿಸುವುದರಿಂದ ಪಾರ್ಶ್ವವಾಯು ಅಪಾಯವೂ ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ.

ರಾತ್ರಿ 9 ಗಂಟೆಯ ನಂತರ ಊಟ ಮಾಡುವುದರಿಂದ ಮೆದುಳಿನ ರಕ್ತನಾಳವು ಸಿಡಿದು ಮೆದುಳಿನಲ್ಲಿ ಮತ್ತು ಅದರ ಸುತ್ತಲೂ ರಕ್ತಸ್ರಾವವಾದಾಗ ಉಂಟಾಗುವ ಹೆಮರಾಜಿಕ್ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಅಧ್ಯಯನವು ತಿಳಿಸುತ್ತದೆ.

ಗುರುಗ್ರಾಮ್‌ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ನರವಿಜ್ಞಾನ ವಿಭಾಗದ ಪ್ರಧಾನ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಪ್ರವೀಣ್ ಗುಪ್ತಾ ಅವರು ತಡರಾತ್ರಿಯ ಊಟವು ಜನರಲ್ಲಿ ಪಾರ್ಶ್ವವಾಯು ಸಾಧ್ಯತೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದಕ್ಕೆ ಹಲವಾರು ಕಾರಣಗಳನ್ನು ಉಲ್ಲೇಖಿಸಿದ್ದಾರೆ.

ಅನಿಯಮಿತ ಊಟದ ಸಮಯವು ಅನಿಯಮಿತ ಹಾರ್ಮೋನ್ ಸ್ರವಿಸುವಿಕೆಗೆ ಕಾರಣವಾಗುತ್ತದೆ, ಇದು ರಕ್ತದಲ್ಲಿ ಸಕ್ಕರೆ ಮತ್ತು ರಕ್ತದೊತ್ತಡದ ಮಟ್ಟಗಳ ಮೇಲೆ ಪರಿಣಾಮ ಬೀರಬಹುದು. ಮತ್ತು ನಾವು ಸ್ಪಷ್ಟವಾಗಿ ತಿಳಿದಿರುವಂತೆ ರಕ್ತದೊತ್ತಡದ ಮಟ್ಟಗಳು ತೀವ್ರವಾದ ಹೆಮರಾಜಿಕ್ ಸ್ಟ್ರೋಕ್ಗಳಿಗೆ ಸಂಬಂಧಿಸಿವೆ. ರಾತ್ರಿಯ ಊಟದ ನಂತರ ರಕ್ತದೊತ್ತಡ ಹೆಚ್ಚಾಗಬಹುದು ಇದು ಭವಿಷ್ಯದಲ್ಲಿ ಪಾರ್ಶ್ವವಾಯುವಿಗೆ ದಾರಿಯಾಗಬಹುದು ಎಂದಿದ್ದಾರೆ.

ಊಟದ ನಡುವೆ ಸಮಯ ನೀಡಿ

ಇದರ ಜೊತೆ ಒಮ್ಮೆ ಊಟ ಮಾಡಿದ ಬಳಿಕ ಸೂಕ್ತ ಸಮಯ ನೀಡಿ ಬಳಿಕ ಬೇರೆ ಏನಾದರೂ ಸೇವಿಸಬೇಕು. ಎರಡು ಬಾರಿ ಮಾಡಿರುವ ಊಟದ ನಡುವೆ ನಿರ್ದಿಷ್ಟ ಕಾಲಾವಕಾಶ ನೀಡಿರಬೇಕು. ಇಲ್ಲದಿದ್ದರೆ ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣ ಸೇರುತ್ತದೆ. ಜೊತೆಗೆ ರಕ್ತ ನಾಳದಲ್ಲಿ ಕೊಬ್ಬಿನ ಪ್ರಮಾಣ ಏರಿಕೆಯಾಗಿ ಪಾರ್ಶ್ವವಾಯುವನ ಸಂಭವ ಹೆಚ್ಚಾಗುತ್ತದೆ. ಜೊತೆಗೆ ಊಟ ಮಾಡಿ ಮಲಗಿದ ಒಂದು ಗಂಟೆಯ ಒಳಗೆ ಪಾರ್ಶ್ವವಾಯುವಿಗೆ ತುತ್ತಾಗುವವರ ಸಂಖ್ಯೆ ಅಧಿಕ ಎಂದು ಈ ವಿಶ್ಲೇಷಣೆಯಲ್ಲಿ ತಿಳಿದುಬಂದಿದೆ.

ಊಟ ಮಾಡಿದ ತಕ್ಷಣ ಮಲಗಬೇಡಿ

ಊಟ ಮಾಡಿದ ನಂತರ ತಕ್ಷಣ ನಿದ್ರೆ ಮಾಡಲು ತೆರಳುವುದನ್ನು ಆದಷ್ಟು ಕಡಿಮೆ ಮಾಡಬೇಕು. ಈ ರೀತಿ ಯಾರಿಗೂ ಶಿಫಾರಸು ಸಹ ಮಾಡಬಾರದು. ಊಟವಾದ ಬಳಿಕ ಒಂದಷ್ಟು ಹೊತ್ತು ಲಘು ಓಡಾಟ ಮಾಡಬೇಕು. ಇದು ಹಾರ್ಮೋನ್ ಸ್ರವಿಸುವಿಕೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತದೆ ಮತ್ತು ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯ ಹೋಮಿಯೋಸ್ಟಾಸಿಸ್ ಮತ್ತು ನಿದ್ರೆಯನ್ನು ಕಾಪಾಡಿಕೊಳ್ಳುವಲ್ಲಿ ಮಹತ್ವದ ಪಾತ್ರವನ್ನು ಹೊಂದಿರುವ ನರ ಟ್ರಾನ್ಸ್ಮಿಟರ್ ಸಮತೋಲನವನ್ನು ಸಹಾಯ ಮಾಡುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Having Meals Post 9 Pm Can Increase The Risk Of Haemorrhagic Stroke

Your dinner time can impact your overall health in ways that you may not have imagined. Eating late at night can lead to weight trouble. And May Be reason for Stroke
Story first published: Saturday, December 16, 2023, 7:00 [IST]
X
Desktop Bottom Promotion