Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ಏನೇ ಮಾಡಿದರೂ ಮೈ ತೂಕ ಕಡಿಮೆಯಾಗುತ್ತಿಲ್ಲವೇ? ಈ 3 ಹಾರ್ಮೋನ್ ಪರೀಕ್ಷೆ ಮಾಡಿಸಿ
ಕೆಲವರು ತೂಕ ಇಳಿಕೆಗೆ ತುಂಬಾನೇ ಪ್ರಯತ್ನ ಪಡುತ್ತಾರೆ, ಆದರೆ ಏನು ಮಾಡಿದರೂ ತೂಕ ಕಡಿಮೆಯಾಗಲ್ಲ. ಡಯಟ್, ವ್ಯಾಯಾಮ ಎಲ್ಲಾ ಮಾಡಿದರೂ ಮೈ ತೂಕ ಕರಗಿಸಲು ತುಂಬಾನೇ ಕಷ್ವವಾಗುವುದು.
'ನಾನು ಎಷ್ಟೆಲ್ಲಾ ಕಷ್ಟಪಡುತ್ತೇನೆ, ಏನು ಮಾಡಿದರೂ ಮೈ ತೂಕ ಮಾತ್ರ ಒಂದಿಷ್ಟೂ ಕಡಿಮೆಯಾಗುತ್ತಿಲ್ಲ, ಏನು ಮಾಡಬೇಕೆಂದೇ ಗೊತ್ತಾಗ್ತಾ ಇಲ್ಲ' ಎಂದು ತುಂಬಾ ಜನ ಹೇಳುತ್ತಿರುತ್ತಾರೆ. ನೀವು ತೂಕ ಇಳಿಕೆಗಾಗಿ ಕಷ್ಟ ಪಟ್ಟರೂ ಅದು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದಾದರೆ ನೀವು ಕೆಲವೊಂದು ಹಾರ್ಮೋನ್ ಟೆಸ್ಟ್ ಮಾಡಿಸಿ ಎಂದು ನ್ಯೂಟ್ರಿಷಿಯನಿಸ್ಟ್ ರಾಶಿಚೌಧರಿ ಸಲಹೆ ನೀಡುತ್ತಾರೆ.
ನಮ್ಮ ಶರೀರದಲ್ಲಿ ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾದರೆ ಡಯಟ್, ವ್ಯಾಯಾಮ ಏನೂ ಮಾಡಿದರೂ ಮೈ ತೂಕ ಕಡಿಮೆಯಾಗಲ್ಲ, ಹಾರ್ಮೋನ್‌ಗಳನ್ನು ಸಮತೋಲನಕ್ಕೆ ತಂದ ಮೇಲಷ್ಟೇ ನೀವು ಬಯಸಿದಂತೆ ತೆಳ್ಳಗಾಗಲು ಸಾಧ್ಯ. ಹಾಗಾದರೆ ಮೈ ತೂಕ ಕಡಿಮೆಯಾಗುತ್ತಿಲ್ಲ ಎಂದಾದರೆ ಅದಕ್ಕೆ ಕಾರಣವೇನು ಎಂದು ತಿಳಿಯಲು ಈ ಹಾರ್ಮೋನ್ ಟೆಸ್ಟ್‌ಗಳನ್ನು ಮಾಡಿಸಿ:

1. ಇನ್ಸುಲಿನ್
ದೇಹದಲ್ಲಿ ಇನ್ಸುಲಿನ್ ಅಸಮತೋಲನವಿದ್ದರೂ ಮೈ ತೂಕ ಹೆಚ್ಚಾಗುವುದು. ಸೊಂಟದ ಸುತ್ತಳತೆ ಪುರುಷರಲ್ಲಿ 40 ಇಂಚು, ಮಹಿಳೆಯರಲ್ಲಿ 35 ಇಂಚಿಗಿಂತ ಅಧಿಕವಿದ್ದರೆ ಅಧಿಕ ಮೈ ತೂಕ ಹೊಂದಿದ್ದಾರೆ ಎಂದರ್ಥ. ನಿಮ್ಮ ಮೈ ತೂಕ ತುಂಬಾ ಅಧಿಕವಿದ್ದರೆ ಇನ್ಸುಲಿನ್ ಪರೀಕ್ಷೆ ಮಾಡಿಸಿ.
ಪರೀಕ್ಷೆ: ಇನ್ಸುಲಿನ್ ಪರೀಕ್ಷೆಯನ್ನು ಖಾಲಿ ಹೊಟ್ಟೆಯಲ್ಲಿ ಹಾಗೂ ಊಟವಾಗಿ 2 ಗಂಟೆಯ ಬಳಿಕ ಮಾಡಿಸಬೇಕು.

2. ಥೈರಾಯ್ಡ್
ಥೈರಾಯ್ಡ್ ಹಾರ್ಮೋನ್‌ಗಳ ಅಸಮತೋಲನ ಉಂಟಾದಾಗ ಅದರಲ್ಲೂ ಹೈಪೋಥೈರಾಯ್ಡ್ ಉಂಟಾದಾಗ ಮೈ ತೂಕ ತುಂಬಾನೇ ಹೆಚ್ಚುವುದು. ಹೈಪೋಥೈರಾಯ್ಡ್ ಇದ್ದರೆ ಮೈ ತೂಕ ತುಂಬಾ ಹೆಚ್ಚಾಗುವುದರ ಜೊತೆಗೆ ಸುಸ್ತು, ಮಲಬದ್ಧತೆ ಈ ಬಗೆಯ ಸಮಸ್ಯೆ ಕಾಣಿಸಿಕೊಳ್ಳುವುದು.
ಥೈರಾಯ್ಡ್ ಪರೀಕ್ಷೆ: ಥೈರಾಯ್ಡ್ ಹಾರ್ಮೋನ್‌ಗಳ ಬಗ್ಗೆ ತಿಳಿಯಲು SH, Free T3 ಮತ್ತು Free T4 ಮಾಡಿಸಿ.

3. ಪ್ರೊಲ್ಯಾಕ್ಟಿನ್ ಪರೀಕ್ಷೆ
ಗರ್ಭಿಣಿಯರು ಹಾಗೂ ಎದೆ ಹಾಲುಣಿಸುವ ತಾಯಂದಿರಲ್ಲಿ ಪ್ರೊಲ್ಯಾಕ್ಟಿನ್ ಪ್ರಮಾಣ ಅಧಿಕವಿರುವುದು ಸಹಜ. ಇನ್ನು ಅತಿಯಾದ ಮಾನಸಿಕ ಒತ್ತಡ ಹಾಗೂ ಕೆಲವೊಂದು ಔಷಧಗಳಿಂದ ಕೂಡ ಪ್ರೊಲ್ಯಾಕ್ಟಿನ್ ಹೆಚ್ಚಾಗುವುದು. ಯಾರಲ್ಲಿ ಪ್ರೊಲ್ಯಾಕ್ಟಿನ್ ಪ್ರಮಾಣ ಅಧಿಕವಿರುತ್ತದೋ ಅವರ ಮೈ ತೂಕ ಹೆಚ್ಚಾಗುವುದು.
ಪ್ರೊಲ್ಯಾಕ್ಟಿನ್ ಪರೀಕ್ಷೆ ಮಾಡಿದರೆ ತಿಳಿಯುವುದು.



Click it and Unblock the Notifications
