For Quick Alerts
ALLOW NOTIFICATIONS  
For Daily Alerts

ಸಂಕ್ರಾಂತಿಗೆ ಎಳ್ಳು ಬೆಲ್ಲ ತಿನ್ನುವುದರ ಹಿಂದಿದೆ ಆರೋಗ್ಯ ರಹಸ್ಯ

|

ಸಂಕ್ರಾಂತಿ ಹಬ್ಬದ ಸ್ಪೆಷಲ್‌ ಅಂದರೆ ಎಳ್ಳು ಬೆಲ್ಲ. ವರ್ಷದ ಮೊದಲ ಸುಗ್ಗಿಯ ಹಬ್ಬವನ್ನು ಎಳ್ಳು-ಬೆಲ್ಲ ಹಂಚುವ ಮೂಲಕ ಆಚರಿಸುತ್ತೇವೆ. ಎಳ್ಳು ಬೆಲ್ಲದ ಸಿಹಿ ಸವಿದು ಹಾರೈಸಿ ಸಿಹಿ ಮಾತುಗಳನ್ನಾಡುವ ಮೂಲಕ ಈ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುವುದು.

ಈ ಹಬ್ಬಕ್ಕೆ ಎಳ್ಳು ಬೆಲ್ಲ ಏಕೆ ನೀಡುತ್ತಾರೆ ಎಂಬುವುದರ ಹಿಂದೆ ಆರೋಗ್ಯಕರ ಕಾಣಗಳಿವೆ. ಸಕಲ ಜೀವ ರಾಶಿಗಳ ಆರೋಗ್ಯಕ್ಕೆ ಸೂರ್ಯನ ಬೆಳಕು ಅವಶ್ಯಕ. ಸೂರ್ಯನು ತನ್ನ ಪಥವನ್ನು ಬದಲಾಯಿಸುವ ಕಾಲವೇ ಮಕರ ಸಂಕ್ರಮಣ. ಮಾಗಿಯ ಚಳಿಗೆ ನಡುಗಿದ್ದ ದೇಹಕ್ಕೆ ಉತ್ತರಾಯಣ ಕಾಲದಲ್ಲಿ ಬೀರುವ ಸೂರ್ಯನ ತೀಕ್ಷ್ಣವಾದ ಬೆಳಕು ಹೊಸ ಹುರುಪನ್ನು ತುಂಬಿ ನಮ್ಮಲ್ಲಿ ಮತ್ತಷ್ಟು ಲವಲವಿಕೆ ತುಂಬುವುದು ಹಾಗೂ ಆರೋಗ್ಯ ಕೂಡ ಉತ್ತಮವಾಗುವುದು.

Ellu Bella Health Benefits

ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಚಲಿಸುವ ಈ ಕಾಲದಲ್ಲಿ ಸೂರ್ಯನು ತೀಕ್ಷ್ಣವಾಗಿ ಉರಿಯುತ್ತಾನೆ. ಈ ಸಮಯದಲ್ಲಿ ಹಗಲಿನ ಸಮಯ ಹೆಚ್ಚಾಗಿದ್ದು, ಇರುಳಿನ ಸಮಯ ಕಡಿಮೆ ಇರುತ್ತದೆ. ಇದರ ಜೊತೆಗೆ ಕಾಲಕ್ಕೆ ತಕ್ಕಂತೆ ನಮ್ಮ ಆಹಾರಕ್ರಮವೂ ಬದಲಾದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದ್ದರಿಂದ ಎಳ್ಳು ಬೆಲ್ಲ ಈ ಸಮಯದಲ್ಲಿ ತಿಂದರೆ ತುಂಬಾ ಒಳ್ಳೆಯದು.

ದೇಹದ ಉಷ್ಣತೆ ಕಾಪಾಡುತ್ತದೆ

ದೇಹದ ಉಷ್ಣತೆ ಕಾಪಾಡುತ್ತದೆ

ಉತ್ತರಾಯಣ ಕಾಲದಲ್ಲಿ ಸೂರ್ಯನ ಕಿರಣಗಳು ತುಂಬಾ ತೀಕ್ಷ್ಣವಾಗಿರುತ್ತದೆ. ಎಳ್ಳು ಸೂರ್ಯನ ಕಿರಣಗಳ ತೀಕ್ಷ್ಣತೆಗೆ ಮೈ ಉಷ್ಣತೆ ಹೆಚ್ಚಾಗುತ್ತದೆ, ಈ ಸಮಯದಲ್ಲಿ ದೇಹದ ಉಷ್ಣತೆ ಕಾಪಾಡುವಲ್ಲಿ ಎಳ್ಳು ಸಹಕಾರಿ. ಬೆಲ್ಲದಲ್ಲಿ ಆ್ಯಂಟಿಆಕ್ಸಿಡೆಂಟ್‌ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಎಳ್ಳು ಬೆಲ್ಲ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಚಯಾಪಚಯ ಕ್ರಿಯೆ ವೃದ್ಧಿಗೆ

ಚಯಾಪಚಯ ಕ್ರಿಯೆ ವೃದ್ಧಿಗೆ

ಎಳ್ಳಿನಲ್ಲಿ ಇರುವಂತಹ ಪ್ರೋಟೀನ್ ಸ್ನಾಯುಗಳ ಕೋಶ ಬಲಪಡಿಸುವುದು ಮಾತ್ರವಲ್ಲದೆ ಅದನ್ನು ಸರಿಪಡಿಸುವುದು. ಇದು ಕೋಶಗಳ ಸಂಪೂರ್ಣ ಬೆಳವಣಿಗೆ, ಶಕ್ತಿಯ ಮಟ್ಟ, ಆರೋಗ್ಯವನ್ನು ಸುಧಾರಿಸುವುದು. ಬೆಲ್ಲ ಜೀರ್ಣಕ್ರಿಯೆಗೆ ಸಹಾಯ ಮಾಡುವುದು. ಮಲಬದ್ಧತೆ ಸಮಸ್ಯೆ ಹೋಗಲಾಡಿಸುವಲ್ಲಿ ಎಳ್ಳು-ಬೆಲ್ಲ ಸಹಕಾರಿ.

ದೇಹವನ್ನು ಶುದ್ಧೀಕರಿಸುತ್ತದೆ

ದೇಹವನ್ನು ಶುದ್ಧೀಕರಿಸುತ್ತದೆ

ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುವ ಗುಣ ಎಳ್ಳು ಬೆಲ್ಲದಲ್ಲಿದೆ. ಇದು ಲಿವರ್‌ನ ಕ್ಲೆನ್ಸ್ ಮಾಡಿ (ಲಿವರ್‌ನಲ್ಲಿರುವ ಬೇಡದ ರಾಸಾಯನಿಕಗಳನ್ನು ಹೊರಹಾಕುವುದು) ದೇಹದ ಆರೋಗ್ಯವನ್ನು ವೃದ್ಧಿಸುತ್ತದೆ. ಎಳ್ಳು, ಬೆಲ್ಲದಲ್ಲಿರುವ ಸತುವಿನಂಶ ಸ್ನಾಯುಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಕ್ತ ಸಂಚಾರ ಸರಾಗವಾಗಿ ನಡೆಯಲು ಈ ಎಳ್ಳು ಬೆಲ್ಲ ಸಹಕಾರಿ.

ದೇಹದ ಆರೈಕೆ

ದೇಹದ ಆರೈಕೆ

ಎಳ್ಳಿನಲ್ಲಿರುವ ಕೊಬ್ಬಿನಂಶ ಹಾಗೂ ಬೆಲ್ಲದಲ್ಲಿರುವ ಕ್ಯಾಲೋರಿಯಂಶ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಎಳ್ಳು ವಾತದೋಷಮ ಕಫ ದೋಷ ನಿವಾರಣೆಗೆ ಸಹಕಾರಿ. ತ್ವಚೆಯ ಹೊಳಪು ಹೆಚ್ಚಿಸುತ್ತದೆ ಹಾಗೂ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುತ್ತದೆ. ಎಳ್ಳು ದೇಹಕ್ಕೆ ಶಕ್ತಿಯನ್ನು ನೀಡಿದರೆ, ಎಳ್ಳನ್ನು ಶಕ್ತಿಯಾಗಿ ಪರಿವರ್ತಿಸುವ ಇಂಧನ ಬೆಲ್ಲ. ಇನ್ನು ಬೆಲ್ಲದಲ್ಲಿ ಆರೋಗ್ಯಕರ ಕಾರ್ಬೋಹೈಡ್ರರೇಟ್ಸ್ ಇದೆ. ಇನ್ನು ಎಳ್ಳು ಬೆಲ್ಲದಲ್ಲಿ ಕೊಬ್ಬರಿ ಬಳಸಲಾಗುವುದು. ಇದರಿಂದ ದೇಹಕ್ಕೆ ಅಗ್ಯತವಾದ ಕೊಬ್ಬಿನಂಶ ದೊರೆಯುತ್ತದೆ.

English summary

Ellu Bella Health Benefits

During makara Sankranti people will offer ellu bella to their friends and family. But there is scientific reason behind this ritual. Here we have explained the health benefits of ellu bella.
X
Desktop Bottom Promotion