Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ತೂಕ ಇಳಿಸಿಕೊಳ್ಳಲು ಕೆಲವು ಆರೋಗ್ಯಕಾರಿ ತಿಂಡಿಗಳು
ತೂಕ ಏರಿಸಿಕೊಂಡ ಬಳಿಕ ಅದನ್ನು ಇಳಿಸಿಕೊಳ್ಳಲು ತುಂಬಾ ಶ್ರಮ ವಹಿಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಬೊಜ್ಜು ದೇಹ ಹೊಂದಿರುವಂತಹ ಜನರು ಆಹಾರ ಪಥ್ಯ ಮತ್ತು ಕಠಿಣ ವ್ಯಾಯಾಮದ ಮೂಲಕ ತೂಕ ಇಳಿಸಿಕೊಳ್ಳಬೇಕಾಗುತ್ತದೆ. ಕೆಲವು ಆಹಾರ ಕ್ರಮದಲ್ಲಿ ಸಂಪೂರ್ಣ ಬದಲಾವಣೆ ಮಾಡಿದರೆ, ಇನ್ನು ಕೆಲವು ಜನರು ಜಿಮ್ ಗೆ ಹೋಗಿ ತೂಕ ಇಳಿಸಿಕೊಳ್ಳುವರು. ಉಪವಾಸ ಮಾಡಿಯೂ ತೂಕ ಕಳೆದುಕೊಳ್ಳಲು ಪ್ರಯತ್ನಿಸುವವರು ಇದ್ದಾರೆ. ಆದರೆ ಇದು ಹೆಚ್ಚು ಪರಿಣಾಮ ಬೀರದು.

ಸಣ್ಣ ತಪ್ಪುಗಳು ತುಂಬಾ ಪರಿಣಾಮಕಾರಿಯಾಗಿ ತೂಕ ಇಳಿಸಿಕೊಳ್ಳಲು ಕಷ್ಟವಾಗಬಹುದು. ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಗ ನೀವು ಸರಿಯಾದ ಆಯ್ಕೆ ಮಾಡಿಕೊಂಡು ತೂಕ ಇಳಿಸಿ. ತಿಂಡಿ ಎನ್ನುವುದು ತೂಕ ಇಳಿಸಿಕೊಳ್ಳಲು ನಿಮಗೆ ಅಡ್ಡಿ ಉಂಟು ಮಾಡಬಹುದು. ನೀವು ತೂಕ ಇಳಿಕೆಗೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು. ಆರೋಗ್ಯಕಾರಿ ತಿಂಡಿಗಳನ್ನು ಸೇವಿಸುವ ಮೂಲಕ ತೂಕ ಇಳಿಸಬಹುದು. ತೂಕ ಇಳಿಸಿಕೊಳ್ಳು ಇರುವ ಆರೋಗ್ಯಕಾರಿ ತಿಂಡಿಗಳನ್ನು ಇಲ್ಲಿ ನೀಡಲಾಗಿದೆ. ಇದು ಊಟದ ಮಧ್ಯೆ ಇರುವ ಸಮಯದಲ್ಲಿ ತಿಂಡಿ ಬಯಕೆಯನ್ನು ಕಡಿಮೆ ಮಾಡಲಿದೆ.

ಮೊಳಕೆ ಬಂದ ಧಾನ್ಯಗಳು
ಮೊಳಕೆ ಬಂದಿರುವ ಧಾನ್ಯಗಳಲ್ಲಿ ಬೇರೆ ತಿಂಡಿಗಳಿಗಿಂತ ಉನ್ನತ ಮಟ್ಟದ ಪೋಷಕಾಂಶಗಳು ಕಡಿಮೆ ಕ್ಯಾಲರಿ ಇದೆ. ಮೊಳಕೆಯೊಡೆದ ಕಾಳುಗಳನ್ನು ಸೇವಿಸಲು ಬಯಸುವಿರಾದರೆ ಆಗ ನೀವು ಹೆಸರು ಬೇಳೆ ತೆಗೆದುಕೊಳ್ಳಿ. ಹೆಸರು ಬೇಳೆಯನ್ನು ನೀರಿನಲ್ಲಿ ನೆನೆಯಲು ಹಾಕಿದ ಬಳಿಕ ಮೊಳಕೆ ಬರುವುದು. ಮೊಳಕೆ ಬಂದ ಕಾಳುಗಳು ನಿಮ್ಮ ದೇಹಕ್ಕೆ ಶಕ್ತಿ ನೀಡುವುದು ಮತ್ತು ಯಾವುದೇ ಕೊಬ್ಬು ದೇಹದಲ್ಲಿ ಹೆಚ್ಚಾಗದು. ಇದರಿಂದಾಗಿ ಆರೋಗ್ಯಕಾರಿ ತೂಕ ಕಾಪಾಡಲು ನೆರವಾಗುವುದು. ಮೊಳಕೆ ಕಾಲುಗಳಲ್ಲಿ ಉನ್ನತ ಮಟ್ಟದ ನಾರಿನಾಂಶವಿದೆ ಮತ್ತು ಇದು ಜೀರ್ಣಕ್ರಿಯೆಗೆ ತುಂಬಾ ಪರಿಣಾಮಕಾರಿ ಮತ್ತು ಹೊಟ್ಟೆಯ ಆರೋಗ್ಯ ಕಾಪಾಡುವುದು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿರುವುದು.

ಮೊಸರು
ಮೊಸರು ಮತ್ತೊಂದು ಆರೋಗ್ಯಕಾರಿ ಆಯ್ಕೆಯಾಗಿದೆ. ಮೊಸರಿಗೆ ಅತ್ಯುತ್ತಮ ರುಚಿಯನ್ನು ನೀವು ದಿನದ ಯಾವುದ ಸಮಯದಲ್ಲೂ ಆನಂದಿಸಬಹುದು. ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ ಮತ್ತು ದೇಹಕ್ಕೆ ಬೇಕಿರುವ ಶಕ್ತಿ ನೀಡುವುದು. ಬೇಸಿಗೆ ಕಾಲದಲ್ಲಿ ಮೊಸರು ಸೇವಿಸುವುದು ದೇಹಕ್ಕೆ ತಾಜಾತನ ಹಾಗೂ ಉಲ್ಲಾಸ ನೀಡುವುದು. ಇದು ತಕ್ಷಣ ಶಕ್ತಿ ನೀಡುವುದು. ಇದು ದೇಹದ ತೂಕ ಸಮತೋಲನದಲ್ಲಿ ಇಡುವುದು.

ಮೊಟ್ಟೆ
ಮೊಟ್ಟೆ ಕೆಲವೇ ನಿಮಿಷಗಳಲ್ಲಿ ತಯಾರಿಸಲ್ಪಡುವಂತಹ ತುಂಬಾ ಆರೋಗ್ಯಕಾರಿ ಆಯ್ಕೆ. ಇದರಲ್ಲಿ ಪ್ರೋಟೀನ್, ಎಲ್ಲಾ 9 ಪ್ರಮುಖ ಅಮಿನೊ ಆಮ್ಲಗಳು, ವಿಟಮಿನ್ ಡಿ ಮತ್ತು ಬಿ12 ಜತೆಗೆ ಇತರ ಪೋಷಕಾಂಶಗಳು ಇದೆ. ಮೊಟ್ಟೆಯಲ್ಲಿ ಕೊಬ್ಬಿನಾಂಶವು ಗಣನೀಯ ಪ್ರಮಾಣದಲ್ಲಿ ಕಡಿಮೆ ಇದೆ. ಬೊಜ್ಜು ದೇಹವನ್ನು ಪಡೆಯುವ ಅಪಾಯವಿಲ್ಲದೆ ದೇಹಕ್ಕೆ ಶಕ್ತಿ ಸಿಗುವ ಮೊಟ್ಟೆ ಸೇವಿಸಬಹುದು.

ಪಾಪ್ ಕಾರ್ನ್
ಆಹಾರ ಕ್ರಮದಲ್ಲಿ ನೀವು ಆನಂದಿಸಬಹುದಾದ ತುಂಬಾ ರುಚಿಕರ ತಿಂಡಿ ಎಂದರೆ ಅದು ಪಾಪ್ ಕಾರ್ನ್. ಇದು ತುಂಬಾ ಅದ್ಭುತವಾದ ಆಹಾರವಾಗಿದ್ದು, ಹಲವಾರು ರೀತಿಯ ಪೋಷಕಾಂಶಗಳು ಮತ್ತು ನಾರಿನಾಂಶವಿದೆ. ಒಂದು ಪಿಂಗಾಣಿ ಪಾಪ್ ಕಾರ್ನ್ ಸೇವಿಸಿದರೆ ಆಗ ಪ್ರೋಟೀನ್ ಜತೆಗೆ ಆ್ಯಂಟಿಆಕ್ಸಿಡೆಂಟ್ ಕೂಡ ಸಿಗುವುದು. ಒಂದು ಕಪ್ ಪಾಪ್ ಕಾರ್ನ್ ನಲ್ಲಿ ಕೇವಲ 20 ಕ್ಯಾಲರಿ ಮಾತ್ರ ಇದೆ. ತೂಕದ ಬಗ್ಗೆ ಚಿಂತೆ ಮಾಡದೆ ನೀವು ಪಾಪ್ ಕಾರ್ನ್ ಸೇವಿಸಬಹುದು. ಆದರೆ ಇದಕ್ಕೆ ಬೆಣ್ಣೆ ಅಥವಾ ಉಪ್ಪು ಸೇರಿಸಬಾರದು.

ಫಾಕ್ಸ್ ನಟ್
ಫಾಕ್ಸ್ ನಟ್ ನ ಜನಪ್ರಿಯ ಹೆಸರು ಮಖಾನ ಮತ್ತು ಇದು ತುಂಬಾ ಆರೋಗ್ಯಕಾರಿ ತಿಂಡಿ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳಿದ್ದು, ಕ್ಯಾಲರಿ ತುಂಬಾ ಕಡಿಮೆ ಇದೆ. ತೂಕ ಕಳೆದುಕೊಳ್ಳಬೇಕಾದರೆ ನೀವು ಉಪಾಹಾರಕ್ಕೆ ಫಾಕ್ಸ್ ನಟ್ಸ್ ನ್ನು ಸೇವಿಸಬೇಕು. ಫಾಕ್ಸ್ ನಟ್ ತೆಗೆದುಕೊಂಡು ಅದನ್ನು ಹುರಿದುಕೊಳ್ಳಬೇಕು. ಇದು ತುಂಬಾ ರುಚಿಕರವಾಗಿಯೂ ಇರುವುದು. ಫಾಕ್ಸ್ ನಟ್ಸ್ ನಲ್ಲಿ ಕಡಿಮೆ ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಸೋಡಿಯಂ ಇದೆ. ಜೀರ್ಣಕ್ರಿಯೆಗೆ ಇದು ಸಹಕಾರಿ ಮತ್ತು ಹೃದಯದ ಆರೋಗ್ಯವನ್ನು ಕಾಪಾಡುವುದು.



Click it and Unblock the Notifications
