For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ಅಳವಡಿಸಿಕೊಳ್ಳಬೇಕಾದ 8 ಆರೋಗ್ಯಕರ ಹವ್ಯಾಸಗಳು

|

ದಿನವನ್ನು ಸರಿಯಾದ ರೀತಿಯಲ್ಲಿ ಪ್ರಾರಂಭಿಸಿಬಿಟ್ಟರೆ ತೂಕದ ಸಮತೋಲನ ಕಾಪಾಡಿಕೊಂಡು ಆರೋಗ್ಯಕರವಾಗಿರುವುದು ಕಷ್ಟದ ಕೆಲಸವೇನಲ್ಲ.ತೂಕ ಕಳೆದುಕೊಳ್ಳಲು ಈ ಕೆಳಗೆ ಕೆಲವು ಪರಿಣಾಮಕಾರಿ ಹವ್ಯಾಸಗಳನ್ನು ನೀಡಲಾಗಿದೆ ಓದಿ ನೋಡಿ....

 ಬಿಸಿ ನೀರನ್ನು ಕುಡಿಯಿರಿ

ಬಿಸಿ ನೀರನ್ನು ಕುಡಿಯಿರಿ

ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಕುಡಿದರೆ ಇದು ತೂಕ ಇಳಿಕೆ,ಮತ್ತು ದೇಹದಲ್ಲಿರುವ ಟಾಕ್ಸಿನ್ ಅನ್ನು ಹೊರಹಾಕಲು ಸಹಕರಿಸುತ್ತದೆ.ಜೊತೆಗೆ ದೇಹದ ಉಷ್ಣಾಂಶ ಹೆಚ್ಚಿಸಿ ಚಯಾ ಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆ ವೇಗವಾಗಿ ಆಗುವುದರಿಂದ ಹೆಚ್ಚು ಕ್ಯಾಲೋರಿ ಕಳೆದು ಕೊಳ್ಳ ಬಹುದು.ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಬಿಸಿನೀರಿಗೆ ಜೇನುತುಪ್ಪ ಅಥವಾ ನಿಂಬೆಹಣ್ಣಿನ ರಸವನ್ನು ಕೂಡ ಬೆರೆಸಿ ಸೇವಿಸಬಹುದು.

ಸ್ವಲ್ಪ ಸೂರ್ಯನ ಬೆಳಕು ಪಡೆಯಿರಿ

ಸ್ವಲ್ಪ ಸೂರ್ಯನ ಬೆಳಕು ಪಡೆಯಿರಿ

ಮುಂಜಾನೆಯ ಸೂರ್ಯನ ಬೆಳಕು ನೀಲಿ ಕಿರಣಗಳನ್ನು ಹೊಂದಿರುತ್ತದೆ.ಈ ನೀಲಿ ಕಿರಣ ನಿಮ್ಮ ಮನಸ್ಸಿನ ಆಂತರಿಕ ಗಡಿಯಾರವನ್ನು ಎಚ್ಚರಿಸಲು,ಹಾರ್ಮೋನ್ ಗೆ ಕೊಬ್ಬನ್ನು ಕರಗಿಸಲು, ಮತ್ತು ಮನಸ್ಸು ಹಸಿವಿನ ಮೇಲೆ ಹತೋಟಿ ಇಡಲು ಅನುಕೂಲವಾಗುತ್ತದೆ.ಆದ್ದರಿಂದ ಮುಂಜಾನೆ ಬೇಗ ಎದ್ದು ಈ ಸೂರ್ಯನ ಕಿರಣಕ್ಕೆ 20 ರಿಂದ 30 ನಿಮಿಷ ಮೈಯೊಡ್ಡಿ.

Most Read:ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಚಿಕ್ಕ ಚಮಚ 'ತುಪ್ಪ' ತಿಂದರೂ ದೇಹದ ತೂಕ ಇಳಿಸಬಹುದು!

ಗ್ರೀನ್ ಟೀ ಅಥವಾ ಬ್ಲಾಕ್ ಕಾಫಿ ಸೇವಿಸಿ

ಗ್ರೀನ್ ಟೀ ಅಥವಾ ಬ್ಲಾಕ್ ಕಾಫಿ ಸೇವಿಸಿ

ಇವೆರಡೂ ಕೂಡ ನೈಸರ್ಗಿಕ ಉತ್ಕರ್ಷಣ ನಿಯಂತ್ರಕ (ಆಂಟಿಆಕ್ಸಿಡೆಂಟ್) ಮತ್ತು ಜೀರ್ಣಕ್ರಿಯೆಗೆ ಸಹಾಯಕವಾಗಿದೆ. ಇದಕ್ಕೆ ಹಾಲು,ಸಕ್ಕರೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಲಾಭ ಕ್ಕಿಂತ ನಷ್ಟವೇ ಹೆಚ್ಚು.ಆದ್ದರಿಂದ ಮುಂಜಾನೆಯ ವೇಳೆ ಈ ರೀತಿಯ ಕಾಫಿ,ಟೀ ಕುಡಿಯುವುದನ್ನು ಬಿಟ್ಟು ಗ್ರೀನ್ ಟೀ ಅಥವಾ ಬ್ಲಾಕ್ ಕಾಫಿ ಸೇವಿಸಿ.

Most Read:ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಚಿಕ್ಕ ಚಮಚ 'ತುಪ್ಪ' ತಿಂದರೂ ದೇಹದ ತೂಕ ಇಳಿಸಬಹುದು!

ಬೆಳಗ್ಗಿನ ತಿಂಡಿಯನ್ನು ಬಿಡಬೇಡಿ

ಬೆಳಗ್ಗಿನ ತಿಂಡಿಯನ್ನು ಬಿಡಬೇಡಿ

ಬೆಳಗ್ಗಿನ ತಿಂಡಿ ದಿನದಲ್ಲಿ ಅತಿ ಮುಖ್ಯ ಆಹಾರ.ನೀವು ಇದನ್ನು ಸ್ಕಿಪ್ ಮಾಡಿದಲ್ಲಿ ಹಸಿವನ್ನು ತಡೆಯಲು ಅನಾರೋಗ್ಯಕರವಾದ ಏನನ್ನಾದರೂ ತಿನ್ನುತ್ತೀರಿ.ಆದ್ದರಿಂದ ಆರೋಗ್ಯಕರವಾದ ಬೆಳಗ್ಗಿನ ಉಪಹಾರವನ್ನು ತಿನ್ನಿ ಮತ್ತು ದಿನಪೂರ್ತಿ ಚಟುವಟಿಕೆಯಿಂದಿರಿ.

ಪ್ರೋಟೀನ್ ಯುಕ್ತ ಬ್ರೇಕ್ ಫಾಸ್ಟ್ ಸೇವಿಸಿ

ಪ್ರೋಟೀನ್ ಯುಕ್ತ ಬ್ರೇಕ್ ಫಾಸ್ಟ್ ಸೇವಿಸಿ

ಪ್ರೋಟೀನ್ ಹೇರಳವಾಗಿರುವ ತಿಂಡಿಯನ್ನು ಸೇವಿಸುವುದರಿಂದ ಸ್ನಾಯುಗಳು ಗಟ್ಟಿಯಾಗುತ್ತವೆ ಮತ್ತು ಹೆಚ್ಚಿನ ಸಮಯದವರೆಗೆ ಹಸಿವು ಕಾಣಿಸಿಕೊಳ್ಳುವುದಿಲ್ಲ.ಈ ರೀತಿಯ ತಿಂಡಿ ತಿನ್ನುವುದರಿಂದ ಜೀರ್ಣಕ್ರಿಯೆಗೆ ಸಮಯ ತೆಗೆದುಕೊಳ್ಳುತ್ತದೆ ಮತ್ತು ದಿನಪೂರ್ತಿ ಹೊಟ್ಟೆ ತುಂಬಿದ ಅನುಭವವೇ ಇರುತ್ತದೆ.ಆದ್ದರಿಂದ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸಲು ಪ್ರೋಟೀನ್ ಹೇರಳವಾಗಿರುವ ಆಹಾರವನ್ನು ಸೇವಿಸಿ.

ಚಟುವಟಿಕೆಯಿಂದಿರಿ

ಚಟುವಟಿಕೆಯಿಂದಿರಿ

ಬ್ರೇಕ್ ಫಾಸ್ಟ್ ಗಿಂತ ಮೊದಲು ಸ್ವಲ್ಪ ದೈಹಿಕ ಚಟುವಟಿಕೆ ಮಾಡಿ.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡುವ ವ್ಯಾಯಾಮ ಕಾರ್ಬೋಹೈಡ್ರೇಟ್ ಅನ್ನು ಜೀರ್ಣಿಸಿ ಕೊಬ್ಬನ್ನು ಕರಗಿಸುತ್ತದೆ. ಆದ್ದರಿಂದ ಬೆಳಗ್ಗೆ ಮುಂಜಾನೆ ಅರ್ಧ ಗಂಟೆ ಮಾಡುವ ವಾಕ್ ನಿಮ್ಮ ತೂಕವನ್ನು ಸುಲಭವಾಗಿ ಕಳೆದುಕೊಳ್ಳಲು ಸಹಕರಿಸುತ್ತದೆ.

Most Read:ಬರೋಬ್ಬರಿ 5 ಲೀಟರ್ ಬಿಯರ್ ಕುಡಿಸಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು!

ತಣ್ಣೀರಿನ ಸ್ನಾನ

ತಣ್ಣೀರಿನ ಸ್ನಾನ

ಮುಂಜಾನೆ ಬೆಚ್ಚಗಿನ ನೀರಿನ ಸ್ನಾನಕ್ಕೆ ಮನ ಬಯಸುವುದು ಸಾಮಾನ್ಯ ಆದರೆ ತಣ್ಣೀರು ಸ್ನಾನ ಚಯಾಪಚಯ ಕ್ರಿಯೆ ಹೆಚ್ಚಿಸಿ, ಹಾರ್ಮೋನಿನ ನಿಯಂತ್ರಣ ಮತ್ತು ಎನರ್ಜಿ ಮಟ್ಟವನ್ನು ಹೆಚ್ಚಿಸಿ ಲವಲವಿಕೆಯಿಂದಿರಲು ಸಹಕರಿಸುತ್ತದೆ.ತಣ್ಣನೆಯ ನೀರಿನಲ್ಲಿ ಸ್ನಾನ ಮಾಡುವುದರಿಂದ ಹಸಿವನ್ನು ಹತೋಟಿಯಲ್ಲಿಟ್ಟು ಬ್ರೇಕ್ ಫಾಸ್ಟ್ ಹೆಚ್ಚು ತಿನ್ನುವುದನ್ನು ಕೂಡ ತಡೆಯಲು ಅನುಕೂಲ ಕರವಾಗುತ್ತದೆ.

Most Read:ಬರೋಬ್ಬರಿ 5 ಲೀಟರ್ ಬಿಯರ್ ಕುಡಿಸಿ ವ್ಯಕ್ತಿಯ ಪ್ರಾಣ ಉಳಿಸಿದ ವೈದ್ಯರು!

ಸ್ನಾಕ್ಸ್ ಪ್ಯಾಕ್ ಮಾಡಿಕೊಳ್ಳಿ

ಸ್ನಾಕ್ಸ್ ಪ್ಯಾಕ್ ಮಾಡಿಕೊಳ್ಳಿ

ಪ್ರತಿಯೊಬ್ಬರೂ ಸ್ನಾಕ್ಸ್ ತಿನ್ನುವ ಬಯಕೆಯಾಗುವುದು ಸಹಜ.ಇಂತಹ ಬಯಕೆಗಳನ್ನು ನಿಗ್ರಹಿಸಲು ಸರಿಯಾದ ತಯಾರಿ ನಡೆಸಿ ಸ್ನಾಕ್ಸ್ ಪ್ಯಾಕ್ ಮಾಡಿಕೊಳ್ಳಿ.ಯಾವಾಗಲೂ ಆರೋಗ್ಯಕರವಾದ ಸ್ನಾಕ್ಸ್ ತಿನ್ನುವುದನ್ನು ರೂಡಿಸಿಕೊಳ್ಳಿ.ಪ್ರತಿದಿನ ಸ್ನಾಕ್ಸ್ ಮತ್ತು ಊಟದ ಡಬ್ಬಿಯಲ್ಲಿ ಆರೋಗ್ಯಕರವಾದ ಆಹಾರವನ್ನು ತೆಗೆದುಕೊಂಡು ಹೋಗಲು ಸ್ವಲ್ಪ ಸಮಯ ಮೀಸಲಿಡಿ.

English summary

Healthy Habits to Adopt at Morning for Effective Weight Loss

If you start your day right, then it is not a great issue to lose some weight or stay fit for that matter! Here in this post, let’s talk about some habits that you can follow for effective weight loss. If you want to know, then just keep on reading!
Story first published: Saturday, January 19, 2019, 16:20 [IST]
X
Desktop Bottom Promotion