ಆರೋಗ್ಯ ಟಿಪ್ಸ್: ಸೆಕ್ಸ್‌ನಿಂದ ಸಂಧಿವಾತದ ನೋವು ಕಡಿಮೆಯಾಗುತ್ತದೆಯಂತೆ!

By Arshad
Subscribe to Boldsky

ಸಂಧಿವಾತಕ್ಕೆ ಕೆಲವಾರು ಮನೆಮದ್ದುಗಳು ಉತ್ತಮ ಪರಿಹಾರ ಒದಗಿಸುತ್ತವೆ. ಆದರೆ ಕಾಮಕೂಟದಲ್ಲಿ ಭಾಗವಹಿಸುವ ಮೂಲಕವೂ ಸಂಧಿವಾತ ಕಡಿಮೆಯಾಗುತ್ತದೆ ಎಂದು ನಿಮಗೆ ಇದಕ್ಕೂ ಮೊದಲು ಗೊತ್ತಿತ್ತೇ? ಗೋಕುಲಾಷ್ಟಮಿಗೂ ಇಮಾಂಸಾಬಿಗೂ ಏನು ಸಂಬಂಧ ಎಂಬಂತೆ ಸಂಧಿವಾತಕ್ಕೂ ಮಿಲನಕ್ಕೂ ಏನು ಸಂಬಂಧ?

ಸಂಧಿವಾತಕ್ಕೆ ಮನೆಮದ್ದು ಇರುವಾಗ, ವೈದ್ಯರ ಹಂಗೇಕೆ?

ತಜ್ಞರು ನೀಡುವ ವಿವರಣೆಯ ಪ್ರಕಾರ ಇದರಿಂದ ನೇರವಾಗಿ ಪ್ರಯೋಜನವಾಗದಿದ್ದರೂ ಪರೋಕ್ಷವಾಗಿ ನೋವು ಕಡಿಮೆಯಾಗಲು ನೆರವಾಗುತ್ತದೆ. ಮಿಲನದ ಸಮಯದಲ್ಲಿ ದೇಹದಲ್ಲಿ ಸ್ರವಿಸುವ ಕೆಲವು ಹಾರ್ಮೋನುಗಳು ಹಾಗೂ ರಾಸಾಯನಿಕಗಳ ಪ್ರಭಾವ ನೋವನ್ನು ಕಡಿಮೆಗೊಳಿಸಲು ನೆರವಾಗುತ್ತವೆ. ಹೇಗೆ? ಈ ಪ್ರಶ್ನೆಗೆ ಉತ್ತರವನ್ನು ಕೆಳಗಿನ ಮಾಹಿತಿ ನೀಡಲಿದೆ...

ಇದು ಹೇಗೆ ನೆರವಾಗುತ್ತದೆ?

ಇದು ಹೇಗೆ ನೆರವಾಗುತ್ತದೆ?

ದೇಹದಲ್ಲಿ ಕಾಮದ ಬಯಕೆ ಹೆಚ್ಚಿದಾಗ ಡೋಪಮೈನ್ ಎಂಬ ರಸದೂತವೂ ಬಿಡುಗಡೆಯಾಗುತ್ತದೆ. ಪರಿಣಾಮವಾಗಿ ಹೃದಯದ ಬಡಿತವೂ ಹೆಚ್ಚುತ್ತದೆ. ಈಗ ಹೃದಯ ಬಡಿತ ಹಾಗೂ ರಕ್ತಪರಿಚಲನೆಯಲ್ಲಿ ಕೆಲವಾರು ಬದಲಾವಣೆಯಾಗುತ್ತದೆ. ಈ ಅವಧಿಯಲ್ಲಿ ದೇಹದಲ್ಲಿ ಹರ್ಷೋತ್ಕರ್ಷದ ಅನುಭವವಾಗುತ್ತದೆ. ಈ ಉತ್ಕರ್ಷ ನೋವನ್ನು ಹೇಗೆ ಕಡಿಮೆ ಮಾಡುತ್ತದೆ? ಮುಂದೆ ಓದಿ...

ಡೋಪಮೈನ್ ಬಿಡುಗಡೆ

ಡೋಪಮೈನ್ ಬಿಡುಗಡೆ

ಕಾಮಕೂಟದ ಅವಧಿಯಲ್ಲಿ ದೇಹದಲ್ಲಿ ಡೋಪಮೈನ್ ರಸದೂತದ ಸ್ರವಿಕೆ ಗರಿಷ್ಟವಾಗುತ್ತದೆ. ಕಾಮಕೂಟ ಮುಗಿದ ಬಳಿಕ ಇದರ ಪ್ರಮಾಣವೂ ಕಡಿಮೆಯಾಗುತ್ತಾ ಹೋಗುತ್ತದೆ. ಈ ಅವಧಿಯಲ್ಲಿ ಪ್ರೊಲಾಕ್ಟಿನ್ ಎಂಬ ಇನ್ನೊಂದು ರಸದೂತ ಬಿಡುಗಡೆಯಾಗುತ್ತದೆ ಇದು ಮನೋಭಾವವನ್ನು ಸಾಮಾನ್ಯ ಸ್ಥಿತಿಗೆ ತರಲು ನೆರವಾಗುತ್ತದೆ. ಅಲ್ಲದೇ ಈ ಕ್ರಿಯೆಯನ್ನು ಅಗತ್ಯಕ್ಕಿಂತಲೂ ಹೆಚ್ಚಿಸದಿರುವಂತೆ ನಿಯಂತ್ರಿಸಲು ದೇಹದ ರಕ್ಷಣಾ ವ್ಯವಸ್ಥೆಯೂ ಆಗಿದೆ.

ಸಂಧಿವಾತ ವಿರುದ್ಧ ಹೋರಾಡಲು ಬಳಸಿ 'ಗರುಡಾಸನ' ಎಂಬ ಅಸ್ತ್ರ!

ಆಕ್ಸಿಟೋಸಿನ್ ಬಿಡುಗಡೆ

ಆಕ್ಸಿಟೋಸಿನ್ ಬಿಡುಗಡೆ

ಮನದನ್ನ-ಮನದನ್ನೆಯರ ಮಿಲನದಿಂದ ದೇಹಗಳ ಜೊತೆಗೇ ಮನಸ್ಸುಗಳೂ ಬೆರೆಯುವ ಕಾರಣ ಪಿಟ್ಯುಟರಿ ಗ್ರಂಥ ಆಕ್ಸಿಟೋಸಿನ್ ಎಂಬ ರಸದೂತವನ್ನು ಬಿಡುಗಡೆ ಮಾಡುತ್ತದೆ. ಈ ರಸದೂತದ ಸ್ರವಿಕೆಯಿಂದಲೇ ಪರಸ್ಪರ ಅನ್ಯೋನ್ಯತೆ ಬೆಳೆಯಲು ನೆರವಾಗುತ್ತದೆ.

ಎಂಡಾರ್ಫಿನ್ ಬಿಡುಗಡೆ

ಎಂಡಾರ್ಫಿನ್ ಬಿಡುಗಡೆ

ಆಕ್ಸಿಟೋಸಿನ್ ರಸದೂತ ಬಿಡುಗಡೆಯಾಗುತ್ತಿದ್ದಂತೆಯೇ ದೇಹದಲ್ಲಿ ಎಂಡಾರ್ಫಿನ್ ಎಂಬ ಇನ್ನೊಂದು ರಸದೂತವೂ ಬಿಡುಗಡೆಯಾಗುತ್ತದೆ. ಇದು ಮನಸ್ಸಿಗೆ ಸುಖದ ಭಾವನೆಯನ್ನು ನೀಡುವ ಇನ್ನೊಂದು ರಸದೂತವಾಗಿದ್ದು ಕಾಮೋತ್ಕರ್ಷ ಪಡೆಯಲು ನೆರವಾಗುತ್ತದೆ. ಈ ರಸದೂತದವನ್ನು ನೋವು ನಿವಾರಕವಾಗಿಯೂ ಬಳಸಲಾಗುತ್ತದೆ. ಸಂಧಿವಾತದಿಂದ ಬಳಲುತ್ತಿರುವ ವ್ಯಕ್ತಿಗಳು ಈ ರಸದೂತದ ಬಿಡುಗಡೆಯನ್ನು ನಿಯಂತ್ರಿಸುವ ಮೂಲಕ ಸಂಧಿವಾತದ ನೋವು ಸಹಾ ಕಡಿಮೆಗೊಳಿಸಬಹುದು.

ನೋವು ನಿವಾರಣೆಯಲ್ಲಿ ಆಕ್ಸಿಟೋಸಿನ್ ಹಾಗೂ ಎಂಡಾರ್ಫಿನ್ ಪಾತ್ರ

ನೋವು ನಿವಾರಣೆಯಲ್ಲಿ ಆಕ್ಸಿಟೋಸಿನ್ ಹಾಗೂ ಎಂಡಾರ್ಫಿನ್ ಪಾತ್ರ

ಇವೆರಡೂ ರಸದೂತಗಳು ದೇಹಕ್ಕೆ ನಿರಾಳತೆ ನೀಡುವ ಜೊತೆಗೇ ನೋವನ್ನೂ ಕಡಿಮೆಗೊಳಿಸುತ್ತವೆ. ಸಂಧಿವಾತಕ್ಕೂ ಇವು ಸಮರ್ಥವಾಗಿವೆ. ಆದ್ದರಿಂದ ಕಾಮಕೂಟದ ಸುಖವನ್ನು ಹೆಚ್ಚಿನ ಹೊತ್ತು ಸವಿಯುವಂತಹ ಕಾರ್ಯಗಳ ಮೂಲಕ ಹೆಚ್ಚು ಹೆಚ್ಚು ಆಕ್ಸಿಟೋಸಿನ್ ಸ್ರವಿಸುವಂತೆ ನೋಡಿಕೊಳ್ಳುವ ಮೂಲಕ ನೋವು ಆದಷ್ಟು ಬೇಗನೇ ಇಲ್ಲವಾಗುತ್ತದೆ. ಆದರೆ ಈ ರಸದೂತದ ಸ್ರವಿಕೆಗೆ ಆತ್ಮೀಯತೆಯೇ ಪ್ರಮುಖವಾದ ಅಗತ್ಯತೆಯಾದುದರಿಂದ ಕೇವಲ ದಂಪತಿಗಳ ನಡುವೆ ನಡೆಯುವ ಸಮಾಗಮ ಮಾತ್ರವೇ ನೆರವಾಗಬಲ್ಲದು. ಬಾಡಿಗೆಯ ಅಥವಾ ಅಪರಿಚಿತರಿಂದ ಪಡೆಯುವ ಸುಖದಿಂದ ಈ ನೆರವು ಪಡೆಯಲು ಸಾಧ್ಯವಿಲ್ಲ. ಕೇವಲ ನಿರ್ಮಲ ಪ್ರೇಮ ಮಾತ್ರವೇ ಹೆಚ್ಚಿನ ಆಕ್ಸಿಟೋಸಿನ್ ಒದಗಿಸುವ ಮೂಲಕ ಈ ನೆರವು ನೀಡಬಲ್ಲದು.

 ಸಂಧಿವಾತಕ್ಕೆ ನೆರವು

ಸಂಧಿವಾತಕ್ಕೆ ನೆರವು

ಈ ಹಾರ್ಮೋನುಗಳು ಮೆದುಳಿಗೆ ತಲುಪಿದ ಬಳಿಕ ಈ ನೋವಿಗೆ ಕಾರಣವಾದ ಸೂಚನೆಗಳನ್ನು ಕೊಲ್ಲುತ್ತವೆ. ಆದ್ದರಿಂದ ಈ ಹಾರ್ಮೋನು ಹೆಚ್ಚು ಹೆಚ್ಚು ಉತ್ಪಾದನೆಯಾಗಲು ಸಾಕಷ್ಟು ಮುನ್ನಲಿವಿನಲ್ಲಿ ತೊಡಗಿಕೊಂಡು ಸಾಧ್ಯವಾದಷ್ಟು ಹೆಚ್ಚು ಹೊತ್ತು ಕಳೆಯುವುದು ಅಗತ್ಯ.

For Quick Alerts
ALLOW NOTIFICATIONS
For Daily Alerts

    English summary

    Does Lovemaking Provide Gout Pain Relief?

    There are many home remedies for gout treatment but do you know the fact that sex can provide gout pain relief? But how can lovemaking help reduce pain or inflammation? Well, the act of lovemaking may not directly help but indirectly it surely helps on many levels. Firstly, many chemicals and hormones come into play during the process of lovemaking.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more