Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತೂಕ ಇಳಿಸುವ ಟಿಪ್ಸ್-ಇದು ಪಕ್ಕಾ ಆಯುರ್ವೇದ ವಿಧಾನ
ಬೆಳಗ್ಗೆದ್ದು ಪ್ರಥಮ ಆಹಾರವಾಗಿ ಲಿಂಬೆರಸ ಮತ್ತು ಕೊಂಚ ಜೇನನ್ನು ಸೇರಿಸಿ ಕುಡಿಯುವ ಮೂಲಕ ತೂಕ ಇಳಿಕೆಗೆ ಸಹಕಾರಿಯಾಗಿರುವುದು ಎಲ್ಲರೂ ತಿಳಿದುಕೊಂಡಿರುವ ಸತ್ಯವಾಗಿದೆ. ಈ ನೀರನ್ನು ಇನ್ನಷ್ಟು ಪರಿಣಾಮಕಾರಿ ಹಾಗೂ ಫಲಕಾರಿಯಾಗಿಸಲು ಕೆಲವರು ಕೆಲವು ಮಸಾಲೆಗಳನ್ನು ಸೇರಿಸುತ್ತಾರೆ. ಅತ್ಯುತ್ತಮ ಗಿಡಮೂಲಿಕೆಗಳನ್ನು ಬಳಸಿ ತೂಕ ಇಳಿಸಿ
ದಾಲ್ಚಿನ್ನಿ ಪುಡಿ, ಕಾಳುಮೆಣಸಿನ ಪುಡಿ, ಗಿಡಮೂಲಿಕೆಗಳಾದ ತುಳಸಿ ಇತ್ಯಾದಿ. ಕೆಲವರು ಈ ಪೇಯವನ್ನು ಕೊಂಚ ಬಿಸಿಮಾಡಿ ಸೇವಿಸುತ್ತಾರೆ. ಆದರೆ ಇವುಗಳಲ್ಲಿ ಯಾವ ವಿಧಾನ ಶ್ರೇಷ್ಠ? ಇದನ್ನು ಹೇಳುವುದು ಕೊಂಚ ಕಷ್ಟಕರ. ಏಕೆಂದರೆ ಪ್ರತಿಯೊಂದರಲ್ಲೂ ತನ್ನದೇ ಆದ ಪ್ರಯೋಜನಗಳಿವೆ.

ತೂಕ ಇಳಿಸುವ ವಿಷಯ ಬಂದಾಗ ಏಲಕ್ಕಿ, ತುಳಸಿಗೆ ಇಲ್ಲಿ ಅಷ್ಟೇನು ಕೆಲಸವಿಲ್ಲ. ಏಕೆಂದರೆ ಇವುಗಳ ಕಾರ್ಯಕ್ಕೆ ಕೊಬ್ಬನ್ನು ದಹಿಸಬೇಕಾಗಿ ಬರುವುದಿಲ್ಲ. ಆದರೆ ಬದಲಿಗೆ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ಇವುಗಳಲ್ಲಿರುವ ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ನಿವಾರಕ ಗುಣಗಳನ್ನು ಈ ಪೇಯ ಹೊಂದಿದ್ದರೆ ಪರೋಕ್ಷವಾಗಿ ಉಪಕಾರವನ್ನೇ ಮಾಡುವ ಕಾರಣ ಇವುಗಳನ್ನು ತೂಕ ಇಳಿಸುವ ಪೇಯಗಳಲ್ಲಿ ಬಳಸುವುದೇ ಒಳ್ಳೆಯದು.
ಅಲ್ಲದೇ ಕೊಂಚ ಬಿಸಿನೀರಿನಲ್ಲಿ ಲಿಂಬೆ, ಜೇನು, ತುಳಸಿ ಎಳೆಗಳು, ಶುಂಠಿ, ದಾಲ್ಚಿನ್ನಿಪುಡಿ, ಏಲಕ್ಕಿ ಸೇರಿಸಿ ಕುಡಿಯುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವ ಜೊತೆಗೇ ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲೂ ನೆರವಾಗುತ್ತದೆ.
ಆದರೆ ತೂಕ ಇಳಿಸುವ ವಿಷಯ ಬಂದರೆ ಇದಕ್ಕೆ ಕೇವಲ ಬಿಸಿನೀರು ಮತ್ತು ಲಿಂಬೆ ಸಾಕು. ಲಿಂಬೆಯಲ್ಲಿರುವ ಪೆಕ್ಟಿನ್ ಎಂಬ ನಾರನ್ನು ಕರಗಿಸಲು ದೇಹ ಹೆಚ್ಚಿನ ಕೊಬ್ಬನ್ನು ಬಳಸಬೇಕಾಗಿ ಬರುತ್ತದೆ. ಅಲ್ಲದೇ ಇದು ಹಸಿವನ್ನು ಹತ್ತಿಕ್ಕುವ ಮೂಲಕ ಇನ್ನೂ ಹೆಚ್ಚು ಆಹಾರ ಸೇವನೆಗೆ ಕಡಿವಾಣ ಹಾಕುತ್ತದೆ. ಎಲೆಮರೆ ಕಾಯಿ ಲಿಂಬೆ: ಅದೇನು ಮಾಯೆ, ಅದೇನು ಜಾದೂ!
ಉತ್ತಮ ಪರಿಣಾಮ ಪಡೆಯಬೇಕೆಂದರೆ ಬಿಸಿನೀರಿನಲ್ಲಿ ಲಿಂಬೆರಸವನ್ನು ಸೇರಿಸಿ ಕೊಂಚಕೊಂಚವಾಗಿ ಇಡಿಯ ದಿನ ಸೇವಿಸುತ್ತಿರಬೇಕು. ಇದೊಂದು ಅದ್ಭುತ ದ್ರವವಾಗಿದ್ದು ತೂಕ ಇಳಿಸುವ ಜೊತೆಗೇ ಜೀರ್ಣಕ್ರಿಯೆ ಉತ್ತಮಗೊಳಿಸುವುದು, ಚರ್ಮದ ಕಾಂತಿ ಹೆಚ್ಚಿಸುವುದು, ಜಠರದಲ್ಲಿ ಕ್ಷಾರೀಯತೆ ಹೆಚ್ಚಿಸಿ ದೇಹದ ಪಿಎಚ್ ಮಟ್ಟವನ್ನು ಸಂತುಲಿತಗೊಳಿಸುವುದು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನೆರವನ್ನು ನೀಡುತ್ತದೆ.
ಆದರೆ ಈ ಗುಣಗಳನ್ನು ಪೂರ್ಣಪ್ರಮಾಣದಲ್ಲಿ ಪಡೆಯಬೇಕಾದರೆ ಈ ದ್ರವಕ್ಕೆ ಸಕ್ಕರೆ ಹಾಕಬಾರದು, ಹುಳಿಯಾಗಿಯೇ ಸೇವಿಸಬೇಕು. ಆದರೆ ಕೇವಲ ಬಿಸಿ ಲಿಂಬೆನೀರು ಸೇವಿಸುವುದು ಮಾತ್ರ ಸಾಕಾಗದು, ನಿಮ್ಮ ತೂಕ ಇಳಿಸುವ ಇತರ ಪ್ರಯತ್ನಗಳೂ, ಕೊಬ್ಬು ಹೆಚ್ಚಿರುವ ಆಹಾರ ಸೇವಿಸದಿರಲು ಮನಸ್ಸನ್ನು ನಿಗ್ರಹಿಸುವುದೂ ಮುಖ್ಯವಾಗಿ ಅನುಸರಿಸಬೇಕಾದ ಕ್ರಮಗಳಾಗಿವೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


